ಏಕೀಕೃತ ಮಾರುಕಟ್ಟೆ ವೇದಿಕೆ ಕಾರ್ಯವಿಧಾನ

ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಅನ್ನದಾತರ ಕೃಷಿ ಉತ್ಪನ್ನಗಳಿಗೆ ಅತ್ಯುತ್ತಮ ಬೆಲೆ ಪಡೆಯಲು ಸಹಕಾರಿಯಾಗುವಂತೆ ತೊಂದರೆ ಮುಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.  ಪ್ರಮುಖ 162 ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ (ವಿದ್ಯುನ್ಮಾನ ವೇದಿಕೆ)ಯನ್ನು ಸ್ಥಾಪಿಸಲಾಗಿದೆ.

ಈ ಮಾರುಕಟ್ಟೆ ವೇದಿಕೆಯಲ್ಲಿನ ಕಾರ್ಯವಿಧಾನದ ಕ್ರಮಗಳು ಏನು? ಈ ವ್ಯವಸ್ಥೆಯಿಂದ ರೈತರಿಗೆ, ಸ್ಥಳೀಯ ಮತ್ತು ಪ್ರಾದೇಶಿಕ ಹಾಗೂ ಹೊರರಾಜ್ಯದ ಖರೀದಿದಾರರಿಗೆ ಯಾವ ರೀತಿ ಅನುಕೂಲವಾಗುತ್ತದೆ ಎಂಬ ಎಲ್ಲಾ ಪ್ರಶ್ನೆಗಳಿಗೆ ಸಮಗ್ರ ವರದಿ ಇಲ್ಲಿದೆ.

                              ಮಾರಾಟಕ್ಕಾಗಿ ಉತ್ಪನ್ನದ ತಯಾರಿ ಹೇಗೆ ಇರಬೇಕು ?
ರೈತರು ಸಕಾಲದಲ್ಲಿ ಬೆಳೆ ಕೊಯ್ಲು ಮಾಡುವುದು ಬಹು ಮುಖ್ಯವಾದ ಅಂಶ,ಈ ವಿಧಾನದಿಂದ ಉತ್ಪನ್ನದ ಗುಣಮಟ್ಟ ಕಾಪಡಲು ಅನುಕೂಲವಾಗಲಿದೆ.

ಕೊಯ್ಲು ಮಾಡಿದ ಬೆಳೆಯನ್ನು ಅಗತ್ಯಕ್ಕೆ ಅನುಗುಣವಾಗಿ ಒಣಗಿಸುವುದು ಬಹಳ ಮುಖ್ಯ, ಸರಿಯಾಗಿ ಒಣಗಿಸಿದ ಉತ್ಪನ್ನದಲ್ಲಿನ ಕಸಕಡ್ಡಿಯನ್ನು ಸ್ವಚ್ಚ ಮಾಡಿ, ಗುಣಪ್ರಮಾಣಕ್ಕೆ ಅನುಗುಣವಾಗಿ ವಿಂಗಡಣೆ ಮಾಡಬೇಕು. ಈ ರೀತಿಯಲ್ಲಿ ಉತ್ಪನ್ನವನ್ನು ಉಸ್ತುವಾರಿ ಮಾಡುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯಬಹುದಾಗಿದೆ.

ಉತ್ಪನ್ನವನ್ನು ಸ್ವಚ್ಚ ಮಾಡಿ, ವಿಂಗಡಿಸಿ, ಗುಣ ಮಟ್ಟದ ಚೀಲಗಳಲ್ಲಿ ತುಂಬಿ(ಪ್ಯಾಕ್) ಮಾಡುವುದು. ಬೆಳೆಯನ್ನು ಮಾರಾಟಕ್ಕಾಗಿ ಮಾರುಕಟ್ಟೆಗೆ ತೆರಳಲು ರೈತರು ಸಿದ್ದ ಪಡಿಸಬೇಕಾದ ಕ್ರಮಗಳ ಬಗ್ಗೆ ಈ ಚಿತ್ರದಲ್ಲಿ ಗಮನಿಸಬಹುದು.
                                     ಮಾರುಕಟ್ಟೆಯಲ್ಲಿ ರೈತರು ಏನು ಮಾಡಬೇಕು ?
ರೈತರು ಪ್ಯಾಕ್ ಮಾಡಿದ ಉತ್ಪನ್ನವನ್ನು ಮಾರುಕಟ್ಟೆಗೆ ತಂದ ವೇಳೆ ಮಾರುಕಟ್ಟೆ ಪ್ರಾಂಗಣದ ಮುಖ್ಯ ದ್ವಾರದಲ್ಲಿ ಉತ್ಪನ್ನದ ಮಾಹಿತಿ ನೀಡಿ (ಗೇಟ್ ಎಂಟ್ರಿ) ದಾಖಲಾತಿಯೊಂದಿಗೆ, ಪ್ರವೇಶ ಪಡೆಯಬೇಕು.
ಉತ್ಪನ್ನಕ್ಕೆ ಪ್ರತ್ಯೇಕ ಲಾಟ್ ಸಂಖ್ಯೆ
ಗೇಟ್ ಎಂಟ್ರಿ ಬಳಿಕ ಮಾರುಕಟ್ಟೆ ಪ್ರಾಂಗಣದಲ್ಲಿ ಮಾರಾಟಕ್ಕೆ ಉತ್ಪನ್ನ ಸಿದ್ದಪಡಿಸಬಹುದು ಅಥವಾ ದಲ್ಲಾಲರ ಅಥವಾ ವರ್ತಕರ ಅಂಗಡಿಗಳ ಮುಂದೆ ಲಾಟ್ ಮಾಡಬಹುದು. ಒಂದು ವೇಳೆ ಗೇಟ್ ಎಂಟ್ರಿ ಮಾಡಿಸಲು ಸಾಧ್ಯವಾಗದೆ ಹೋದರೆ, ಇಲ್ಲಿ ತಮ್ಮ ಉತ್ಪನ್ನಗಳ ಲಾಟ್ ಎಂಟ್ರಿ ಮಾಡಿಸುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆಯ ಬಳಿಕ ಉತ್ಪನ್ನಗಳ ಗುಣವಿಶ್ಲೇಷಣೆ ಮಾಡಿಸಲು ಏಕೀಕೃತ ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರಯೋಗಾಲಯದ ವ್ಯವಸ್ಥೆಯೂ ಇದೆ. ಇದರ ಲಾಭವನ್ನು ರೈತರು ತಪ್ಪದೇ ಪಡೆಯಬೇಕು. ಈ ಸೇವೆ ರೈತರಿಗೆ ಉಚಿತವಾಗಿರುತ್ತದೆ. ಉತ್ಪನ್ನಗಳ ಗುಣ ವಿಶ್ಲೇಷಣೆ ಪ್ರಮಾಣ ಪತ್ರವನ್ನು ಆನ್‍ಲೈನ್‍ನಲ್ಲಿ ಪ್ರಸಾರ ಮಾಡಲಾಗುವುದು.
                                                      ಉತ್ಪನ್ನದ ಗುಣವಿಶ್ಲೇಷಣೆ
ಮಾರುಕಟ್ಟೆ ಪ್ರಾಂಗಣದಲ್ಲಿ ಮಾರಾಟಕ್ಕೆ ಸಿದ್ದಪಡಿಸಿರುವ ಉತ್ಪನ್ನಗಳನ್ನು ಸ್ಥಳೀಯ ಖರೀದಿದಾರರು ಪರಿಶೀಲಿಸುತ್ತಾರೆ. ಗುಣವಿಶ್ಲೇಷಣೆ ಮಾಡಿಸಿದ ಉತ್ಪನ್ನಕ್ಕೆ ಬೇಡಿಕೆ ಸಹಜವಾಗಿ ಹೆಚ್ಚಿರುತ್ತದೆ, ಜೊತೆಗೆ ಆನ್‍ಲೈನ್ ಉತ್ಪನ್ನಗಳ ಮಾಹಿತಿ ಸಂಗ್ರಹಿಸುವ ಹೊರಗಿನ ಖರೀದಿದಾರಿಂದಲ್ಲೂ ಬೇಡಿಕೆ ಹೆಚ್ಚಾಗಿರುತ್ತದೆ. ಉತ್ಪನ್ನಗಳ ಗುಣವಿಶ್ಲೇಷಣೆ ಮಾಡಿದ ಗಣಕೀಕೃತ ಮಾಹಿತಿಯನ್ನು ರೈತರ ಲಾಟ್‍ಗಳ ಮುಂದೆ ಪ್ರದರ್ಶನ ಮಾಡಲಾಗುವುದು. ಇದರಿಂದ ಆನ್‍ಲೈನ್ ಟೆಂಡರ್  ನಲ್ಲಿ ಗುಣವಿಶ್ಲೇಷಣೆ ಮಾಡಿದ ಉತ್ಪನ್ನಕ್ಕೆ ಸ್ಪರ್ಧೆ ಹೆಚ್ಚಾಗಿ, ಸ್ಪರ್ಧಾತ್ಮಕ ಬೆಲೆ ಪಡೆಯಲು ಸಾಧ್ಯವಾಗಿದೆ.

                                                                ಇ-ಮಾರ್ಕೆಟ್

ಮಾರುಕಟ್ಟೆಯ ಸ್ಥಳೀಯ ಖರೀದಿದಾರರು ಉತ್ಪನ್ನಗಳನ್ನು ಖುದ್ದು ಪರಿಶೀಲಿಸಿ ಆನ್‍ಲೈನ್‍ನಲ್ಲಿ ಬಿಡ್ ಮಾಡುತ್ತಾರೆ. ಹೊರ ಮಾರುಕಟ್ಟೆ ಮತ್ತು ಹೊರ ರಾಜ್ಯಗಳ ಖರೀದಿದಾರರು ಉತ್ಪನ್ನಗಳ ಗುಣಧರ್ಮಗಳನ್ನು ಆನ್‍ಲೈನ್‍ನಲ್ಲಿ ಪ್ರಸಾರ ಮಾಡಿದ ಗಣಕೀಕೃತ ಪ್ರಮಾಣ ಪತ್ರವನ್ನು ಪರಿಶೀಲಿಸಿ, ಅಗತ್ಯ ಉತ್ಪನ್ನಗಳಿಗೆ ಖರೀದಿದಾರರು ಇದ್ದ ಸ್ಥಳದಿಂದಲೇ ಆನ್‍ಲೈನ್‍ನಲ್ಲಿ ಬಿಡ್ಡಿಂಗ್ ಮಾಡುತ್ತಾರೆ.ಈ ವ್ಯವಸ್ಥೆಯಿಂದಾಗಿ ಖರೀದಿಯಲ್ಲಿ ಸ್ಪರ್ಧೆ ಹೆಚ್ಚಲಿದೆ.

                                                   ಟೆಂಡರ್ ಡಿಕ್ಲರೇಷನ್
ಏಕೀಕೃತ ಮಾರುಕಟ್ಟೆಗಳಲ್ಲಿ ಆನ್‍ಲೈನ್ ಬಿಡ್ಡಿಂಗ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮಧ್ಯಾಹ್ನ 3 ಗಂಟೆಗೆ ನಂತರ ಮಾರುಕಟ್ಟೆ ಪ್ರಾಂಗಣದ ಕಛೇರಿ ಮುಂಭಾಗದಲ್ಲಿನ ಟಿ.ವಿ. ಪರದೆಗಳಲ್ಲಿ ಬಿಡ್ ವಿಜೇತರ ಪಟ್ಟಿ ಪ್ರಕಟಿಸಿ ಅವರವರ ಉತ್ಪನ್ನಕ್ಕೆ ದೊರೆತ ಧಾರಣೆ ಮಾಹಿತಿಯನ್ನು ರೈತರ ಮೊಬೈಲ್‍ಗೆ ಎಸ್‍ಎಂಎಸ್ ಮೂಲಕ ಸಂದೇಶ ಕಳಿಸಲಾಗುತ್ತಿದೆ.ನಿಗದಿತ ಸಮಯದಲ್ಲಿ ರೈತರು ಧಾರಣೆಗೆ ಸಮ್ಮತಿ ಸೂಚಿಸಿದರೆ ಮುಂದಿನ ಪ್ರಕ್ರಿಯೆ ನಡೆಸಲಾಗುವುದು.
ರೈತರ ಉತ್ಪನ್ನಗಳ ತೂಕದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಎದುರಾಗದಂತೆ ಎಲ್ಲಾ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಎಲೆಕ್ಟ್ರಾನಿಕ್ ತೂಕ ಯಂತ್ರಗಳನ್ನು ಅಳವಡಿಸಲಾಗಿದೆ.
ಪಾರದರ್ಶಕತೆ:
ಉತ್ಪನ್ನದ ತೂಕದ ಬಳಿಕ ಗಣಕೀಕೃತ ವಿಕ್ರೀಪಟ್ಟಿಯನ್ನು ರೈತರಿಗೆ ನೀಡಲಾಗುತ್ತದೆ. ಈ ವ್ಯವಸ್ಥೆಯಿಂದಾಗಿ ಮಾರುಕಟ್ಟೆಯಲ್ಲಿ ಪಾರದರ್ಶಕತೆ ಹೆಚ್ಚಾಗಿದೆ.
ಇ-ಪರ್ಮಿಟ್:
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಪೂರ್ಣಗೊಂಡು ಉತ್ಪನ್ನಗಳ ಮೊತ್ತವನ್ನು ಸಂದಾಯ ಮಾಡಿದ ಕೂಡಲೇ ಖರೀದಿದಾರರು ಖರೀದಿಸಿದ ಉತ್ಪನ್ನವನ್ನು ಸಾಗಾಟ ಮಾಡಲು ಯಾವುದೇ ಸಮಯದಲ್ಲಿಯಾದರು, ಎಲ್ಲಿಂದಲಾದರು ಇ-ಪರ್ಮಿಟ್ ಪಡೆಯುವ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ 160 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ವ್ಯಾಪ್ತಿಯಲ್ಲಿ ಖರೀದಿಯಲ್ಲಿ ಭಾಗಿಯಾಗುವ ಖರೀದಿದಾರರು ಅವರು ಇದ್ದ ಸ್ಥಳದಿಂದಲೇ ಇ-ಪರ್ಮಿಟ್ ಪಡೆಯಬಹುದು.

ಮನೋಜ್ ರಾಜನ್, ಐಎಫ್‍ಎಸ್.,
ಅಪರ ಕಾರ್ಯದರ್ಶಿ (ಮಾರುಕಟ್ಟೆ ಸುಧಾರಣೆ),ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ
& ವ್ಯವಸ್ಥಾಪಕ ನಿರ್ದೇಶಕರು/ ಮುಖ್ಯಕಾರ್ಯನಿರ್ವಹಣಾಧಿಕಾರಿ, ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್, ಬೆಂಗಳೂರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s