ಶ್ರೀ. ಮನೋಜ್ ರಾಜನ್
ವ್ಯವಸ್ಥಾಪಕ ನಿರ್ದೇಶಕರು & ಸಿಇಒ,
ರೆಮ್ಸ್, ಬೆಂಗಳೂರು.
ಕೃಷಿ ಮಾರಾಟ ಸುಧಾರಣೆ ಜಾರಿಯಾದ ಬಳಿಕ ಮಾರುಕಟ್ಟೆಗಳಲ್ಲಿ ಉತ್ಪನ್ನಗಳ ಅವಕದಲ್ಲಿ ಸ್ಥಿರ ಏರಿಕೆ ಕಂಡುಬಂದಿದೆ. 2015-16ರಲ್ಲಿ ರಾಜ್ಯದಲ್ಲಿ ಒಣಮೆಣಸಿನಕಾಯಿ ಉತ್ಪಾದನೆ 2014-15ಕ್ಕೆ ಹೋಲಿಸಿದರೆ ಶೇಕಡ 13% ರಷ್ಟು ಕಡಿಮೆ ಉತ್ಪಾದನೆಯಾಗಿದೆ. ಆದರೆ 2015-16ರಲ್ಲಿ ಮಾರುಕಟ್ಟೆಯ ಅವಕ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಅಂದರೆ ಸುಮಾರು ಶೇಕಡ 122%ರಷ್ಟು ಅವಕ ಹೆಚ್ಚಾಗಿರುತ್ತದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇಕಡ 98%ರಷ್ಟು ಉತ್ಪನ್ನ ಮಾರುಕಟ್ಟೆ ಪ್ರವೇಶಿಸಿರುವುದು ಅಂಕಿಅಂಶಗಳಿಂದ ಕಂಡುಬಂದಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಸ್ಥಾಪನೆಯಾದ ಬಳಿಕ ವ್ಯಾಪಾರ ವಹಿವಾಟಿನಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಸರಳತೆಯಿಂದಾಗಿ ನೆರೆ ರಾಜ್ಯಗಳ ರೈತರು ಒಣಮೆಣಸಿನಕಾಯಿ ಉತ್ಪನ್ನವನ್ನು ಕರ್ನಾಟಕ ರಾಜ್ಯದ ಮಾರುಕಟ್ಟೆಗಳಿಗೆ ತಂದು ಮಾರಾಟ ಮಾಡುತ್ತಿದ್ದಾರೆ.
ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಒಣಮೆಣಸಿನಕಾಯಿ ಅವಕ 2014-15 ರಿಂದ 2016-17ರ ಅವದಿಯಲ್ಲಿ 8.62 ಲಕ್ಷ ಕ್ವಿಂಟಾಲ್ಗಳಿಂದ 11.88 ಲಕ್ಷ ಕ್ವಿಂಟಾಲ್ಗೆ ಏರಿಕೆಯಾಗಿದೆ. ಕೃಷಿ ಮಾರಾಟ ಸುಧಾರಣೆ ಅನುಷ್ಠಾನದ ಫಲವಾಗಿ ಮಾರುಕಟ್ಟೆಯಲ್ಲಿನ ಅವಕ ಶೇಕಡ 38%ರಷ್ಟು ಏರಿಕೆಯಾಗಿದೆ.
ರಾಯಚೂರು ಮಾರುಕಟ್ಟೆಯಲ್ಲಿ ಭತ್ತದ ಅವಕ 2014-15 ರಿಂದ 2016-17ರ ಅವಧಿಯಲ್ಲಿ 8.15 ಲಕ್ಷ ಕ್ವಿಂಟಾಲ್ಗಳಿಂದ 10.30 ಲಕ್ಷ ಕ್ವಿಂಟಾಲ್ಗಳಿಗೆ ಏರಿಕೆಯಾಗಿದೆ. ಇದು ಏಕೀಕೃತ ಮಾರುಕಟ್ಟೆ ವೇದಿಕೆ ಪ್ರಭಾವದಿಂದಾದ ಬದಲಾವಣೆ ಎಂಬುವುದು ಗಮನಾರ್ಹ.
ಧಾರವಾಡ ಮಾರುಕಟ್ಟೆಯಲ್ಲಿ ಹೆಸರುಕಾಳು ಉತ್ಪನ್ನದ ಅವಕ 2014-15ರಲ್ಲಿ 0.28 ಲಕ್ಷ ಕ್ವಿಂಟಾಲ್ ನಿಂದ 2016-17ರ ಅವದಿಯಲ್ಲಿ 0.55 ಲಕ್ಷ ಕ್ವಿಂಟಾಲ್ಗೆ ಏರಿಕೆಯಾಗಿದೆ. ಇದು ಶೇಕಡ 92%ರಷ್ಟು ಅವಕದಲ್ಲಿ ಹೆಚ್ಚಾಗಿದೆ.
ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೊಗರಿ ಉತ್ಪನ್ನ 2014-15ರಲ್ಲಿ 3.60 ಲಕ್ಷ ಕ್ವಿಂಟಾಲ್ಗಳಷ್ಟಿತ್ತು . ಆದರೆ 2016-17ರ ಅವದಿಗೆ 7.34 ಲಕ್ಷ ಕ್ಷಿಂಟಾಲ್ ತೊಗರಿ ಉತ್ಪನ್ನ ಅವಕವಾಗಿದೆ. ಶೇಕಡ 104% ಹೆಚ್ಚಳವಾಗಿದೆ.
ಧಾರವಾಡ ಮಾರುಕಟ್ಟೆಯಲ್ಲಿ ಉದ್ದು 2014-15ರಲ್ಲಿ 1776 ಕ್ವಿಂಟಾಲ್ಗಳಷ್ಟಿತ್ತು. ಏಕೀಕೃತ ಮಾರುಕಟ್ಟೆ ಸ್ಥಾಪನೆಯಾದ ಬಳಿಕ ಅಂದರೆ, 2016-17ರ ಅವದಿಯಲ್ಲಿ ಉದ್ದು ಉತ್ಪನ್ನದ ಅವಕ 10,254 ಕ್ವಿಂಟಾಲ್ಗಳಿಗೆ ಏರಿಕೆಯಾಗಿತ್ತು. ಆನ್ಲೈನ್ ಇ-ಟೆಂಡರ್ ವ್ಯವಸ್ಥೆಯಿಂದಾಗಿ ಅವಕದಲ್ಲಿ ಶೇಕಡ 477%ರಷ್ಟು ಏರಿಕೆಯಾಗಿರುವುದು ಗಮನರ್ಹ.
ನಾಗಮಂಗಲ ಮಾರುಕಟ್ಟೆಯಲ್ಲಿ ರಾಗಿ ಅವಕ 2014-15ರಲ್ಲಿ 93,441 ಕ್ವಿಂಟಾಲ್ ಗಳಷ್ಟಿತ್ತು. ಇ-ಟೆಂಡರ್ ಜಾರಿ ಬಳಿಕ ಅಂದರೆ, 2016-17ರ ಅವದಿಯಲ್ಲಿ 2.48 ಲಕ್ಷ ಕ್ವಿಂಟಾಲ್ ಅವಕ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ. ಅವಕದ ಪ್ರಮಾಣ ಶೇಕಡ 166%ರಷ್ಟು ಏರಿಕೆಯಾಗಿತ್ತು.
ರಾಣೆಬೆನ್ನೂರು ಮಾರುಕಟ್ಟೆಯಲ್ಲಿ ಮೆಕ್ಕೆಜೋಳ 2014-15ರಲ್ಲಿ 1,71,6101 ಕ್ವಿಂಟಾಲ್ಗಳಷ್ಟು ಅವಕವಾಗಿತ್ತು. ಆನ್ಲೈನ್ ಟೆಂಡರ್ ಆರಂಭದ ಬಳಿಕ 2016-17ರಲ್ಲಿ 2,26,6198 ಕ್ವಿಂಟಾಲ್ ಮೆಕ್ಕೆ ಜೋಳ ಅವಕವಾಗಿದೆ. ಶೇಕಡ 32%ರಷ್ಟು ಅವಕವಾಗಿರುವುದು ಗಮನಿಸಬಹುದು.