ಏಕೀಕೃತ ಮಾರುಕಟ್ಟೆ ವೇದಿಕೆ ಪ್ರಭಾವದಿಂದ ಮಾರುಕಟ್ಟೆಗಳಲ್ಲಿ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಕುರಿತು ಸಂಕ್ಷಿಪ್ತ ವಿವರ

ಏಕೀಕೃತ ಮಾರುಕಟ್ಟೆ ವೇದಿಕೆ ಪ್ರಭಾವದಿಂದ ಮಾರುಕಟ್ಟೆಗಳಲ್ಲಿ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಕುರಿತು ಸಂಕ್ಷಿಪ್ತ ವಿವರ :
ಶ್ರೀ. ಮನೋಜ್ ರಾಜನ್
ವ್ಯವಸ್ಥಾಪಕ ನಿರ್ದೇಶಕರು & ಸಿಇಒ,
ರೆಮ್ಸ್, ಬೆಂಗಳೂರು.

ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಸ್ಥಾಪನೆ ಬಳಿಕ ರೈತರ ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ಲಭ್ಯವಾಗುತ್ತದೆ.ರಾಜ್ಯದ ಸಮಸ್ತ ರೈತ ಬಾಂಧವರಿಗೆ, ವರ್ತಕರಿಗೆ ಹಾಗೂ ಮಾರುಕಟ್ಟೆಯಲ್ಲಿನ ವ್ಯಾಪಾರ ವಹಿವಾಟುಗಳಲ್ಲಿನ ಭಾಗೀದಾರರಿಗೆ ಉಪಯುಕ್ತವಾಗಲಿ ಎಂದು ಕರ್ನಾಟಕ ಸರ್ಕಾರದ “ಕೃಷಿ ಮಾರಾಟ ನೀತಿ “ಯನ್ನು ಅನುಷ್ಠಾನಗೊಳಿಸಿದೆ . ನೂತನ ನೀತಿ ಅನ್ವಯ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಸ್ಥಾಪಿಸಲಾಗಿದೆ. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟುಗಳು ಪಾರದರ್ಶಕತೆ, ದಕ್ಷತೆ ಮತ್ತು ಸರಳತೆಯಿಂದ ಕಾರ್ಯಸಾಧನೆಗೊಳಿಸಲು ಈ-ಟೆಂಡರ್ ಪದ್ದತಿಯನ್ನು ಜಾರಿಗೊಳಿಸಲಾಗಿದೆ.
ಆಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಮಾರುಕಟ್ಟೆಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಸ್ಥಾಪಿಸಲು ರಾಷ್ಟೀಯ ಈ – ಮಾರ್ಕೆಟ್ ಸರ್ವಿಸಸ್, ಕೃಷಿ ಮಾರಾಟ ಇಲಾಖೆ ಮತ್ತು ರಾಜ್ಯ ಕೃಷಿ ಮಾರಾಟ ಮಂಡಳಿ ಅವಿರತಃ ಸೇವೆಯನ್ನು ಸಲ್ಲಿಸಿವೆ. ಈ ಸಂಸ್ಥೆಗಳ ಪರಿಶ್ರಮದ ಫಲವಾಗಿ ರಾಜ್ಯದಲ್ಲಿನ ೧೬೨ ಕೃಷಿ ಉತ್ಪನ್ನ ಮಾರುಕಟ್ಟೆಗಳು ಇ-ಮಾರುಕಟ್ಟೆಗಳಾಗಿ ಕಾರ್ಯ ನಿರ್ವಹಿಸುತ್ತಿವೆ.

 

ಮಾದರಿ ಬೆಲೆ ವಿಶ್ಲೇಷಣೆ :

ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಸ್ಥಾಪನೆಯಾದ ಮೇಲೆ ಉತ್ಪನ್ನಗಳ ವಹಿವಾಟಿನಲ್ಲಿ ಮಾದರಿ ಧಾರಣೆಯಲ್ಲಿ ಗಮನಾರ್ಹ ಏರಿಕೆ ಬಗ್ಗೆ ಸಂಕ್ಷೀಪ್ತ ವರದಿಯನ್ನು ಗಮನಿಸಿ.

ತೊಗರಿ

ಪ್ರಮುಖ ಮಾರುಕಟ್ಟೆಗಳಲ್ಲಿ 2014-15ರಲ್ಲಿ ತೊಗರಿ ಉತ್ಪನ್ನದ ಸರಾಸರಿ ಮಾದರಿ ಬೆಲೆ ರೂ.4907/-. ಏಕೀಕೃತ ಮಾರುಕಟ್ಟೆ ವೇದಿಕೆ ಅಸ್ಥಿತ್ವಕ್ಕೆ ಬಂದ 2016-17ರ ಅವಧಿಯಿಂದ ರೂ. 8576/- ರಷ್ಟು ಮಾದರಿ ಬೆಲೆ ಲಭ್ಯವಾಗಿದೆ.

ಕಡಲೆ :

ಕಡಲೆ ಉತ್ಪನ್ನಕ್ಕೆ 2014-15ರಲ್ಲಿ ಸರಾಸರಿ ಮಾದರಿ ಬೆಲೆ ರೂ. 3017/-, ಅದರೆ 2016-17ಕ್ಕೆ ಮಾದರಿ ಬೆಲೆಯಲ್ಲಿ ಬಾರಿ ಬದಲಾಣೆಯಾಗಿ ರೂ.5973/-ಕ್ಕೆ ಏರಿಕೆಯಾಗಿತ್ತು.

ಉದ್ದು :

ಉದ್ದು ಉತ್ಪನ್ನದ ಮಾದರಿ ಬೆಲೆ 2014-15ರ ಅವಧಿಯಲ್ಲಿ ರೂ.5535/- ರಿಂದ 2016-17ರ ಅವಧಿಗೆ ರೂ.8090/-ಏರಿಕೆಯಾಗಿರುವುದು ಗಮನಾರ್ಹವಾಗಿದೆ. ಇ-ಟೆಂಡರ್ ಪ್ರಭಾವದಿಂದಾಗಿ ಶೇಕಡ 46%ರಷ್ಟು ಬೆಲೆಯಲ್ಲಿ ಏರಿಕೆ ಕಂಡಿದೆ.

ಕಡಲೆಕಾಯಿ/ಶೇಂಗಾ :

ಕೃಷಿ ಉತ್ಪನ್ನ ಮಾರಕಟ್ಟೆಗಳಲ್ಲಿ ಕಡಲೆಕಾಯಿ ಉತ್ಪನ್ನದ ಮಾದರಿ ಬೆಲೆಯಲ್ಲಿ ಹಲವು ಏರಿಳಿತವಾಗಿದೆ. 2014-15ರಲ್ಲಿ ಕ್ವಿಂಟಾಲ್ ಉತ್ಪನ್ನಕ್ಕೆ ರೂ.3607/- ಮಾದರಿ ಬೆಲೆಯಾಗಿತ್ತು. ಅದೇ 2016-17ರ ವೇಳೆಗೆ ಉತ್ಪನ್ನದ ಮಾದರಿ ಬೆಲೆ ರೂ.4762/-ಕ್ಕೆ ತಲುಪಿತ್ತು. ಇದು ಕಳೆದ ವರ್ಷಗಳಿಗಿಂತ ಶೇಕಡ 32%ರಷ್ಟು ಹೆಚ್ಚಾಗಿದೆ.

 

ಒಣಮೆಣಸಿನಕಾಯಿ:

ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ಒಣಮೆಣಸಿನಕಾಯಿ ವ್ಯಾಪಾರಕ್ಕೆ ಜನಪ್ರಿಯ. 2014-15 ರಿಂದ 2016-17ವರೆಗಿನ ಮಾದರಿ ಬೆಲೆ ರೂ.7027/- ರಿಂದ ರೂ.8558/- ಕ್ಕೆ ಏರಿಕೆಯಾಗಿದೆ. ಶೇಕಡ 22% ರಷ್ಟು ಮಾದರಿ ಬೆಲೆ ಏರಿಕೆಯಾಗಿದೆ.

ಹುಣಸೇಹಣ್ಣು :

ಪ್ರಮುಖ ಮಾರುಕಟ್ಟೆಗಳಲ್ಲಿ ಹುಣೆಸೇಹಣ್ಣು ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.5681, ಏಕೀಕೃತ ಮಾರುಕಟ್ಟೆ ವೇದಿಕೆಯ ಇ-ಟೆಂಡರ್ ನಿಂದಾಗಿ 2016-17ರಲ್ಲಿ ರೂ.7421 ಕ್ಕೆ ಮಾದರಿ ಬೆಲೆ ದಾಖಲಾಗಿದೆ. ಹಿಂದಿನ ವರ್ಷಗಳಿಗಿಂತ ಶೇಕಡ 31%ರಷ್ಟು ಮಾದರಿ ಬೆಲೆಯಲ್ಲಿ ಏರಿಕೆಯಾಗಿದೆ.

ಮೆಕ್ಕೆ ಜೋಳ :

ಮೆಕ್ಕೆ ಜೋಳ ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.1151/- ರಿಂದ 2016-17ಕ್ಕೆ ರೂ.1550/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 35% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ.

ಇದಲ್ಲದೆ ಹುರಳಿಕಾಳು ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.2839/- ರಿಂದ 2016-17ಕ್ಕೆ ರೂ.3123/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 10% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ ಮತ್ತು ಸಜ್ಜೆ ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.1267/- ರಿಂದ 2016-17ಕ್ಕೆ ರೂ.1657/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 31% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ.ಜೋಳದ ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.1595/- ರಿಂದ 2016-17ಕ್ಕೆ ರೂ.2280/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 43% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ. ರಾಗಿ ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.1529/- ರಿಂದ 2016-17ಕ್ಕೆ ರೂ.2036/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 33% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ ಹಾಗು ಸೂರ್ಯಕಾಂತಿ ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.3119/-ರಿಂದ 2016-17ಕ್ಕೆ ರೂ.3237/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 4% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ.

ಈ ಎಲ್ಲಾ ಸಂಖ್ಯಾ ವಿಶ್ಲೇಷಣೆ, ಮಾರುಕಟ್ಟೆಗಳಲ್ಲಿ ಆನ್‍ಲೈನ್ ಟೆಂಡರ್ ವ್ಯಾಪಾರ ವಹಿವಾಟು ಅನುಷ್ಠಾನದಿಂದಾಗಿ ರೈತರು ನೈಜ ಬೆಲೆ ಪಡೆಯುತ್ತಿರುವ ಸಾಕ್ಷಾತ್ಕಾರವನ್ನು ಸೂಚಿಸುತ್ತಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s