ಕೃಷಿ ಉತ್ಪನ್ನಗಳ ಉಚಿತ ಗುಣವಿಶ್ಲೇಷಣಾ ಸೇವೆಗಳು ಏಕೀಕೃತ ಮಾರುಕಟ್ಟೆಯಲ್ಲಿ ಲಭ್ಯ

– ಮುಂದುವರಿದಿದೆ
ಕೃಷಿ ಉತ್ಪನ್ನಗಳ ಉಚಿತ ಗುಣವಿಶ್ಲೇಷಣಾ ಸೇವೆಗಳು ಏಕೀಕೃತ ಮಾರುಕಟ್ಟೆಯಲ್ಲಿ ಲಭ್ಯ

ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆ ಕಾರ್ಯವನ್ನು ಪರಿಣಿತಿ ಹೊಂದಿರುವ ಎನ್‍ಸಿಎಂಎಲ್ ಮತ್ತು ಸ್ಟಾರ್ -ಅಗ್ರಿ ಸಂಸ್ಥೆಗಳಿಗೆ ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್ ಸಂಸ್ಥೆ ವಹಿಸಿದೆ, ಮೇಲ್ಕಂಡ ಸಂಸ್ಥೆಗಳು ನುರಿತ ಗುಣವಿಶ್ಲೇಷಣ ತಜ್ಞರು ರೈತರ ಕೋರಿಕೆ ಮೇರೆಗೆ ಅವರು ಮಾರಾಟಕ್ಕೆ ತಂದ ಉತ್ಪನ್ನಗಳ ಲಾಟ್‍ಗಳಿಂದ ಮಾದರಿಗಳನ್ನು ತೆಗೆದು ಉತ್ಪನ್ನದ ಗುಣಧರ್ಮಗಳನ್ನು ಪರೀಕ್ಷಿಸುತ್ತಾರೆ. ಬಳಿಕ ನಿಗದಿತ ನಮೂನೆಯಲ್ಲಿ ಗುಣವಿಶ್ಲೇಷಣೆಯಿಂದ ಬಂದ ಉತ್ಪನ್ನದಲ್ಲಿನ ದತ್ತಾಂಶಗಳನ್ನು ದಾಖಲು ಮಾಡಿ, ರೈತರಿಗೆ ಗುಣವಿಶ್ಲೇಷಣೆಯ ಗಣಕೀಕೃತ ಪ್ರಮಾಣ ಪತ್ರವನ್ನು ನೀಡುತ್ತಾರೆ. ಈ ಪ್ರಮಾಣ ಪತ್ರವನ್ನು ರೈತರು ತಮ್ಮ ಉತ್ಪನ್ನದ ಲಾಟ್ ಮುಂದೆ ಪ್ರದರ್ಶಿಸಬಹುದು. ಜೊತೆಗೆ ಇದೇ ಮಾಹಿತಿಯನ್ನು ಏಕೀಕೃತ ಮಾರುಕಟ್ಟೆ ವೇದಿಕೆಯ ಆನ್‍ಲೈನ್‍ನಲ್ಲಿ ಕೂಡ ಪ್ರಸಾರ ಮಾಡಲಾಗುವುದು.

• ರೈತರ ಹೆಸರು
• ಮಾರುಕಟ್ಟೆ ಅವಕ ಮತ್ತು ಮಾರುಕಟ್ಟೆ ಹೆಸರು

• ಉತ್ಪನ್ನದ ಹೆಸರು ಮತ್ತು ಲಾಟ್ ನಂಬರ್
• ಮಾದರಿ ತೆಗೆದ ದಿನಾಂಕ
• ಮೇಲ್ವಿಚಾರಕರ ಹೆಸರು
• ಉತ್ಪನ್ನದ ಗುಣವಿಶ್ಲೇಷಣೆಯ ವಿವರಗಳು ಆನ್‍ಲೈನ್‍ನಲ್ಲಿ ಖರೀದಿದಾರರಿಗೆ ಲಭ್ಯವಿರುತ್ತದೆ.

ಏಕೀಕೃತ ಲೈಸೆನ್ಸ್ ಪಡೆದ ವರ್ತಕರು ಮತ್ತು ದಲ್ಲಾಲರಿಗೆ ನೀಡಿರುವ User ID ಮತ್ತು Password ಮೂಲಕ ಏಕೀಕೃತ ಮಾರುಕಟ್ಟೆ ವೇದಿಕೆಯ ವೆಬ್‍ಸೈಟ್‍ನ್ನು ಸಂಪರ್ಕಿಸಬಹುದು. ಒಮ್ಮೆ ವೆಬ್‍ಸೈಟ್ ಪ್ರವೇಶಿಸಿದ ಬಳಿಕ ವಿವಿಧ ಉತ್ಪನ್ನಗಳ ಗುಣಮಟ್ಟ, ಗುಣಧರ್ಮ ಮತ್ತು ಗುಣವಿಶ್ಲೇಷಣೆಯ ವಿವರಗಳನ್ನು ಪರಿಶೀಲಿಸಬಹುದು. ಈ ವ್ಯವಸ್ಥೆಯಿಂದ ಸ್ಥಳೀಯ ಮಾರುಕಟ್ಟೆ, ರಾಜ್ಯದ ಹೊರ ಮಾರುಕಟ್ಟೆ ಮತ್ತು ಹೊರರಾಜ್ಯಗಳ ವರ್ತಕರು ಅಗತ್ಯ ಉತ್ಪನ್ನಗಳ ಖರೀದಿಗೂ ಮುನ್ನಾ ಅವುಗಳ ಗುಣಧರ್ಮ ಮತ್ತು ಗುಣವಿಶ್ಲೇಷಣೆಯ ಮಾಹಿತಿಯನ್ನು ಪರಿಶೀಲಿಸಿ ಆನ್‍ಲೈನ್ ಟೆಂಡರ್ ನಲ್ಲಿ ಭಾಗವಹಿಸುತ್ತಾರೆ. ಇದೊಂದು ಪಾರದರ್ಶಕ ವ್ಯವಸ್ಥೆಯಾಗಿದ್ದು, ಇ-ಟೆಂಡರ್ ನಲ್ಲಿ ಉತ್ಪನ್ನಗಳ ಖರೀದಿಗೆ ಖರೀದಿದಾರರಿಂದ ಸ್ಪರ್ಧೆ ಹೆಚ್ಚಾಗಿ, ಈ ರೀತಿಯ ನೂತನ ಕ್ರಮಗಳಿಂದಾಗಿ ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ಲಭ್ಯವಾಗುವಂತಾಗಿದೆ.

ಮಾರುಕಟ್ಟೆಯಲ್ಲಿ ಉತ್ಪನ್ನದ ಗುಣಧರ್ಮ ಮತ್ತು ಗುಣವಿಶ್ಲೇಷಣೆ ಮಾಡಿಸಿ ಮಾರಾಟ ಮಾಡುವದರಿಂದ ಕೃಷಿ ಉತ್ಪನ್ನಗಳ ಖರೀದಿಯಲ್ಲಿ ಸ್ಪರ್ಧೆ ಹೆಚ್ಚಾಗಿ, ರೈತರು ನಿರೀಕ್ಷಿಸಿದ ಬೆಲೆ ಅವರ ಉತ್ಪನ್ನಗಳಿಗೆ ದೊರೆಯುತ್ತದೆ. ಇದು ರೈತ ಭಾಂದವರಿಗೆ ಅತ್ಯಂತ ಉಪಯುಕ್ತ ಹಾಗೂ ಲಾಭದಾಯಕ ವ್ಯವಸ್ಥೆಯಾಗಿ ಹೊರಹೊಮ್ಮಿದೆ.

ವರ್ತಕರಿಗೆ ಆಗುವ ಅನುಕೂಲಗಳು

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವಿವಿಧ ಕೃಷಿ ಉತ್ಪನ್ನಗಳ ಲಾಟ್‍ಗಳನ್ನು ಸ್ಥಳೀಯ ಖರೀದಾರರು ಖುದ್ದು ಪರಿಶೀಲಿಸಲು ಅವಕಾಶವಿದೆ. ಆದರೆ ಉತ್ಪನ್ನದ ವೈಜ್ಞಾನಿಕ ಗುಣವಿಶ್ಲೇಷಣೆ ಮಾಹಿತಿಯನ್ನು ಸಂಪೂರ್ಣವಾಗಿ ಗ್ರಹಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಬೇಕಾದ ಉತ್ಪನ್ನಗಳ ಲಾಟ್‍ಗಳಿಗೆ ಭೇಟಿ ನೀಡಿ ಪರೀಕ್ಷಿಸುವುದರಿಂದ ಸಮಯ ವ್ಯರ್ಥವಾಗಲಿದೆ. ವರ್ತಕರು ಆನ್‍ಲೈನ್‍ನಲ್ಲೇ ಉತ್ಪನ್ನಗಳ ಆವಕದ ಪ್ರಮಾಣ ಮತ್ತು ಗುಣವಿಶ್ಲೇಷಣೆ ಮಾಹಿತಿಯನ್ನು ಪರಿಶೀಲಿಸಿ ಇ-ಟೆಂಡರ್ ನಲ್ಲಿ ಭಾಗವಹಿಸಲು ಅನುಕೂಲವಾಗಿದೆ. ಖರೀದಿದಾರರು ಮತ್ತು ದಲ್ಲಾಲರು, ಸ್ಥಳೀಯರು, ಹೊರ ರಾಜ್ಯಗಳ ವರ್ತಕರು ಅಥವಾ ಏಕೀಕೃತ ಲೈಸೆನ್ಸ್ ಪಡೆದ ಖರೀದಿದಾರರು ರಾಜ್ಯದ ಯಾವುದೇ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿನ ಉತ್ಪನ್ನಗಳ ಖರೀದಿಸಲು ಇದೊಂದು ವಿಶ್ವಾಸಾರ್ಹ ವರ್ತಕ  ಸ್ನೇಹಿ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯಿಂದಾಗಿ ವರ್ತಕರು ಉತ್ಪನ್ನಗಳ ಖರೀದಿಗಾಗಿ ಒಂದು ಮಾರುಕಟ್ಟೆಯಿಂದ ಮತ್ತೊಂದು ಮಾರುಕಟ್ಟೆಗೆ ಸಂಚಾರ ಮಾಡುವ ಅಗತ್ಯವಿಲ್ಲ. ಅವರು ಇದ್ದ ಸ್ಥಳದಿಂದಲೇ ಅಗತ್ಯ ಉತ್ಪನ್ನಗಳಿಗೆ ಆನ್‍ಲೈನ್ ಟೆಂಡರ್ ನಲ್ಲಿ ಬಿಡ್ ಮಾಡಬಹುದಾಗಿದೆ.

ಉತ್ಪನ್ನದ ಗುಣವಿಶ್ಲೇಷಣೆಯಲ್ಲಿ ನೂನ್ಯತೆ ಕಂಡುಬಂದರೆ ಅದನ್ನು ಇತ್ಯರ್ಥಪಡಿಸಲು ಅನುಸರಿಸಬೇಕಾದ ವಿಧಾನ: 
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಉತ್ಪನ್ನದ ಗುಣವಿಶ್ಲೇಷಣೆ ಪ್ರಯೋಗಾಲಯದಲ್ಲಿ ಗುಣವಿಶ್ಲೇಷಣೆ ಮಾಡಿಸಿದ ಉತ್ಪನ್ನಗಳಲ್ಲಿ ಅಸಮರ್ಪಕ ಮಾಹಿತಿ ಅಥವಾ ನೂನ್ಯತೆ ಕಂಡುಬಂದರೆ ಅದನ್ನು ಇತ್ಯರ್ಥ ಪಡಿಸಲು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ & ಅಭಿವೃದ್ಧಿ)ನಿಯಮಗಳು 1968ರ ನಿಯಮ 91-ಒ ಹಾಗೂ 91-P ರನ್ವಯ ಕ್ರಮ ವಹಿಸುವುದು.

ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಉತ್ಪನ್ನಗಳ ಗುಣವಿಶ್ಲೇಷಣೆಗಾಗಿ ಮಾದರಿ ತೆಗೆಯುವಿಕೆಯಲ್ಲಿ ಅಥವಾ ಪರೀಕ್ಷೆಯ ದತ್ತಾಂಶ ವಿವರದಲ್ಲಿ ನ್ಯೂನ್ನತೆಯಾಗಿದ್ದರೆ, ಕೂಡಲೇ ರೈತರು ಅಥವಾ ಖರೀದಿದಾರರು ಸಂಬಂಧಪಟ್ಟ ಮಾರುಕಟ್ಟೆಯ ಕಾರ್ಯದರ್ಶಿ ಅವರ ಗಮನಕ್ಕೆ ತರುವುದು.

ಮಾರುಕಟ್ಟೆ ಕಾರ್ಯದರ್ಶಿ ಅವರು ದೂರುದಾರರ ಲಾಟ್‍ಗೆ ಭೇಟಿ ನೀಡಿ, ಉತ್ಪನ್ನದ ಮರು ಮಾದರಿಯನ್ನು ಸಂಗ್ರಹಿಸಿ ಮತ್ತೊಮ್ಮೆ ಗುಣವಿಶ್ಲೇಷಣೆ ಮಾಡಿಸುವ ಕ್ರಮಗಳನ್ನು ಜರುಗಿಸಲಿದ್ದಾರೆ.

ಮಾರುಕಟ್ಟೆಯಲ್ಲಿ ಗುಣವಿಶ್ಲೇಷಣೆ ಮಾಡಿದ ಉತ್ಪನ್ನ ಮಾರಾಟವಾದ ಬಳಿಕ ಅದೇ ಉತ್ಪನ್ನದ ಗುಣಮಟ್ಟ ಮತ್ತು ಗುಣವಿಶ್ಲೇಷಣೆ ಬಗ್ಗೆ ಅನುಮಾನವಿದ್ದಲ್ಲಿ ಟೆಂಡರ್ ಡಿಕ್ಲೇರ್ ಮಾಡಿದ ಎರಡು ಗಂಟೆಯೊಳಗೆ ಟೆಂಡರ್ ವಿಜೇತರು ಮಾರುಕಟ್ಟೆಯ ಕಾರ್ಯದರ್ಶಿ ಅವರ ಗಮನಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ. ಈ ರೀತಿಯ ಸಮಸ್ಯೆಗಳನ್ನು ಕೂಡಲೇ ಇತ್ಯರ್ಥ ಪಡಿಸುವ ಅಧಿಕಾರವನ್ನು ಕಾರ್ಯದರ್ಶಿ ಅವರು ಹೊಂದಿರುತ್ತಾರೆ.

ಒಂದು ವೇಳೆ ಕಾರ್ಯದರ್ಶಿ ಅವರು ಸಮಸ್ಯೆಗಳನ್ನು ಇತ್ಯರ್ಥ ಪಡಿಸಿದ ಕ್ರಮಗಳಿಗೆ ರೈತರು ಅಥವಾ ಖರೀದಿದಾರರಿಂದ ಒಪ್ಪಿಗೆ ಇಲ್ಲಾವಾದಲ್ಲಿ, ವಿವಾದ ಇತ್ಯರ್ಥ ಮಾಡಿಕೊಳ್ಳಲು ಮಾರುಕಟ್ಟೆ ಸಮಿತಿಯಲ್ಲಿನ “ಡಿಸ್ಪ್ಯೂಟ್ ರೆಸಲ್ಯೂಷನ್ ಕಮಿಟಿ”  (ವಿವಾದ ಇತ್ಯರ್ಥ ಸಮಿತಿ) ಗಮನಕ್ಕೆ ತರಲು ಅವಕಾಶ ನೀಡಲಾಗಿದೆ.

ರೈತ ಭಾಂದವರಿಗೆ ಮಾರ್ಗಸೂಚಿ :
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಲಭ್ಯವಿರುವ ಕೃಷಿಕಾರರ ಉತ್ಪನ್ನಗಳಿಗೆ ಉಚಿತ ಗುಣವಿಶ್ಲೇಷಣೆ ಸೇವೆ ಸೌಲಭ್ಯ ಪಡೆಯಲು ರೈತರು ಬೆಳೆಯನ್ನು ಸರಿಯಾದ ಸಮಯದಲ್ಲಿ ಕೊಯ್ಲು ಮಾಡಿ, ಒಣಗಿಸಿ, ಕಸಕಡ್ಡಿಯನ್ನು ಬೇರ್ಪಡಿಸಿ, ಗಾತ್ರ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ವರ್ಗೀಕರಿಸಿ ಮಾರುಕಟ್ಟೆಗೆ ತರುವುದು. ಮಾರುಕಟ್ಟೆಗೆ ತಂದ ಉತ್ಪನ್ನವನ್ನು ತಪ್ಪದೇ ಗುಣವಿಶ್ಲೇಷಣೆ ಮಾಡಿಸಿ, ತಮ್ಮ ಬೆಳೆಗೆ ನೈಜ ಬೆಲೆ ಪಡೆಯಬೇಕು ಎಂಬುದೇ ರೆಮ್ಸ್ ಸಂಸ್ಥೆಯ ಆಶಯ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s