ನಾನು ತೊಗರಿ

 

ಭಾರತ ದೇಶದಲ್ಲಿನ ಪ್ರಮುಖ ದ್ವಿದಳ ಧಾನ್ಯಗಳ ಬೆಳೆಯಲ್ಲಿ ನಾನು ಅಗ್ರಸ್ಥಾನದಲ್ಲಿದ್ದೇನೆ. ಜಾಗತಿಕ ಹವಾಮಾನ ಬದಲಾವಣೆ ಎದುರಿಸುತ್ತಿರವ ಪ್ರಸ್ತುತ ಪರಿಸ್ಥಿತಿಯಲ್ಲಿಯೂ ಆಹಾರ ಭದ್ರತೆಗೆ ನನ್ನ ಕೊಡುಗೆ ಪ್ರಮುಖವಾಗಿದೆ ಎಂಬುದು ಹೆಮ್ಮೆ ತಂದಿದೆ. ಜನ ಸಾಮಾನ್ಯರು ಸಂಪ್ರದಾಯಕವಾಗಿ ನನ್ನನ್ನು ತೊಗರಿ ಅಥವಾ ತೊಗರಿಬೇಳೆ ಎಂದು ಕರೆಯುತ್ತಾರೆ. ಇನ್ನೂ ಕೆಲವು ಭಾಗಗಳಲ್ಲಿ ಪಾರಿವಾಳ ಬಟಾಣಿ ಎಂದು ನನಗೆ ನಾಮಕರಣ ಮಾಡಿದ್ದಾರೆ. ಆದರೆ ನನ್ನ ವೈಜ್ಞಾನಿಕ ಹೆಸರು ಕಜಾನಸ್ ಕಜಾನ, ವಿಜ್ಞಾನ ಆಧಾರಿತವಾಗಿ ನಾನು ಫಾಬೇಶನ್ ಕುಟುಂಬಕ್ಕೆ ಸೇರಿದ್ದೇನೆ. ನಾನು ಆಹಾರ ಭದ್ರತೆಯ ಬೆಳೆಯಾಗಿ, ವಾಣಿಜ್ಯ ರಪ್ತಿನ ಬೆಳೆಯಾಗಿ ಮತ್ತು ಆದಾಯ ಉತ್ಪದಿಸುವ ಮಹತ್ವದಿಂದಾಗಿ ಪ್ರಖ್ಯಾತಿ ಹೊಂದಿದ್ದೇನೆ.

ನಿಮ್ಮ ಆಹಾರ ಪದ್ದತಿಯ ಖಾದ್ಯಗಳಲ್ಲಿ ನನ್ನ ಬಳಕೆ ಪರಿಚಿತವಾಗಿದೆ . ನಾನು ತಮ್ಮ ಪ್ರತಿನಿತ್ಯದ ಆಹಾರ ಪದ್ದತಿಯಲ್ಲಿ ವಿವಿಧ ರೀತಿಯ ರುಚಿಕರ ಖಾದ್ಯಗಳಲ್ಲಿ ಬಳಕೆಯಾಗಿ ನಿಮ್ಮ ಊಟದ ತಟ್ಟೆಯಲ್ಲಿ ಲಭ್ಯವಾಗಿ ಪ್ರತಿಯೊಂದು ಮನೆಯಲ್ಲಿ ಜನಪ್ರಿಯ ಭಕ್ಷವಾಗಿರುತ್ತೇನೆ. ಭಾರತ ದೇಶದಲ್ಲಿನ ರಾಜ್ಯಗಳಲ್ಲಿ ನನ್ನನ್ನು ವಿವಿಧ ರೀತಿಯಲ್ಲಿ ಸಂಭೋಧಿಸುತ್ತಾರೆ. ಕನ್ನಡದಲ್ಲಿ ತೊಗರಿ ಅಥವಾ ತೊಗರಿಬೇಳೆ, ತಮಿಳು ಭಾಷೆಯಲ್ಲಿ ತುರವಂ ಪರುಪ್ಪು, ಹಿಂದಿಯಲ್ಲಿ ತೂರ್, ಬಂಗಾಳಿಯಲ್ಲಿ ದಾಲ್ ಎಂದು ಪ್ರಾಂತ್ಯವಾರುಗಳಲ್ಲಿ ನನ್ನ ಹೆಸರನ್ನು ಸಂಭೋಧಿಸುವುದು ವಾಡಿಕೆಯಾಗಿದೆ.

 

ನಾನು ಕೃಷಿ ಮೌಲ್ಯದ ಕಡಿಮೆ ಫಲವತ್ತಾದ ಭೂಮಿಯ ವ್ಯಾಪ್ತಿಯಾದ ಅರೆ ಶುಷ್ಕ ವಾತಾವರಣದಲ್ಲಿನ ಏಷ್ಯಾ ಮತ್ತು ಆಫ್ರಿಕಾ ಪ್ರದೇಶಗಳಲ್ಲಿ ಬೆಳೆಯುತ್ತೇನೆ. ಆದರೆ ಸಾಕಷ್ಟು ಮಂದಿಗೆ ಕೆಲವೊಂದು ಸತ್ಯಗಳ ಬಗ್ಗೆ ತಿಳುವಳಿಕೆ ಇಲ್ಲವಾಗಿದೆ. ಅಮೇರಿಕ ದೇಶದ ಅರೆ ಶುಷ್ಕ ಪ್ರದೇಶದಲ್ಲಿ ವಾರ್ಷಿಕ 1.1 ಬಿಲಿಯನ್ ನನ್ನ ನಷ್ಟ ಸಂಭವಿಸುತ್ತದೆ. ಇದಕ್ಕೆ ಪ್ರಮುಖ ಕಾರಣ ಕೆಲವೊಮ್ಮೆ ಕೀಟ ಮತ್ತು ರೋಗ ತೊಂದರೆಯಿಂದ ಪ್ರಮುಖ ಪೌಷ್ಟಿಕಾಂಶಗಳು ಅಥವಾ ಆರೋಗ್ಯ ವಿಫಲತೆ ಉಂಟಾಗುತ್ತದೆ. ಈ ಸಮಯದಲ್ಲಿ ನಾನು ಫ್ಯಸಾರಿಯಮ್ ಮತ್ತು ಸ್ಟೆರಿಲಿಟಿ ಮೊಸಾಯಿಕ್ ರೋಗಗಳಿಗೆ ತುತ್ತಾಗಿ ಬಳಲುತ್ತೇನೆ ಜೊತೆಗೆ ಹೆಲಿಕಾವರ್ಪ, ಮುರುಕಾ ಮತ್ತು ಪಾಡ್ ಫೈ ಕೀಟಗಳು ಕೂಡ ಸಾಕಷ್ಟು ತೊಂದರೆಯನ್ನು ಕೊಡುತ್ತದೆ.

ನಾನು 1000ಕ್ರಿ.ಪೂ. ಮೂಲದ ಸರಣಿ, ಬಳಿಕ ಇತಿಹಾಸ ಪೂರ್ವ ಅವಧಿಯಲ್ಲಿನ ಶಿಲಾಯುಗದಿಂದ ದೀರ್ಘಕಾಲಿಕ ಪುರತತ್ವ ಸಂಶೋಧನೆಗಳಿಂದ ದಕ್ಷಿಣ ಭಾರತದಲ್ಲಿ ಕಾಲಕ್ರಮೇಣ ಗುರುತಿಸಲ್ಪಟ್ಟಿದ್ದೇನೆ. ಆಫ್ರಿಕಾ ದೇಶದಲ್ಲಿ ನನ್ನ ದಾರಿಯನ್ನು ಗುರುತಿಸಲ್ಪಟ್ಟು, ನನಗೆ ಕಾಗೋಫಿ (ಕಾಗೋ ಬಟಾಣಿ) ಎಂದು ಹೊಸ ಹೆಸರಿನಿಂದ ಕರೆಯಲಾಯಿತು. ನಂತರ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಸ್ಥಳೀಯ ಅಮೇರಿಕನ್ನರ ನಡುವೆ ಗುಲಾಮಗಿರಿ ಜೀತ ಪದ್ಧತಿ ಪ್ರಗತಿ ಅವಧಿಯಲ್ಲಿ ಅಲ್ಲಿಗೆ ತೆರಳಿದೆ.

ನಾನು ದೀರ್ಘಕಾಲಿಕ ಸಸ್ಯ ಎಂಬುದು ಜನ ಸಾಮಾನ್ಯರಿಗೆ ತಿಳಿಯದ ಸಾಧ್ಯತೆಯಿದೆ. ನಾನು ಪ್ರಮುಖ ದ್ವಿದಳ ಧಾನ್ಯ ಬೆಳೆಯಾಗಿ ಮಳೆ ನೀರು ಅವಲಂಬಿತ ಅರೆಶುಷ್ಕ ವಾತಾವರಣದ ಉಷ್ಣವಲಯದಲ್ಲಿ ಬೆಳೆಯುತ್ತೇನೆ. ವಿಶ್ವದ ಭಾರತೀಯ ಉಪಖಂಡ, ಪೂರ್ವ ಆಫ್ರಿಕಾ ಮತ್ತು ಮಧ್ಯ ಅಮೇರಿಕಾದ ಭೌಗೋಳಿಕ ವಲಯಗಳಲ್ಲಿ ಸಾಗುವಳಿಯಾಗುತ್ತೇನೆ.

 

ಭಾರತದಲ್ಲಿ ಮುಂಗಾರು ಹಂಗಾಮಿನಲ್ಲಿ ನನ್ನ ಬಿತ್ತನೆ ಕಾರ್ಯ, ಅದು ಜೂನ್ ಮತ್ತು ಜುಲೈ ಮಾಸಗಳಲ್ಲಿ ನನ್ನ ಕೃಷಿ ಬಿತ್ತನೆ ಕಾರ್ಯ ವಿಶೇಷವಾಗಿ ನಡೆಯುತ್ತದೆ. ಉಷ್ಣ ವಲಯದ ಹವಾಮಾನ ನನಗೆ ಅತ್ಯಂತ ಅನುಕೂಲಕರವಾಗಿರುತ್ತದೆ. ನಾನು ಬರ ಸಹಿಷ್ಣುತೆ ಬೆಳೆಯಾಗಿ ಮಣ್ಣಿನಲ್ಲಿ ಮೊನಚಾದ ಬೇರುಗಳನ್ನು ಹೊಂದಲು ಆರ್ಶಿವಾದಿತನಾಗಿದ್ದೇನೆ.

ನಾನು ಗ್ರೀಸ್ ದೇಶದ ಭೂಪ್ರದೇಶಕ್ಕಿಂತ ಕಡಿಮೆಯಿಲ್ಲದಷ್ಟು ಅಂದರೆ 46 ಲಕ್ಷ ಹೆಕ್ಟೇರ್ ಭೂಪ್ರದೇಶದಲ್ಲಿ ನನ್ನ ಉತ್ಪಾದನೆ ಮಾಡಲಾಗುತ್ತದೆ. ನನ್ನ ಉತ್ಪದಾನೆ ವಿಶ್ವದಲ್ಲಿ ಸರಿಸುಮಾರು 4.98ಮಿಲಿಯನ್ ಟನ್‍ಗಳಷ್ಟು ಎಂದು ಅಂದಾಜಿಸಲಾಗಿದೆ. ಈ ಪೈಕಿ ಸುಮಾರು ಶೇಕಡ 80% ನನ್ನ ಉತ್ಪಾದನೆ ಭಾರತದಲ್ಲಿರುವುದನ್ನು ಅಂದಾಜು ಮಾಡಲಾಗಿದೆ. ಅಂದರೆ 1.05 ಮಿಲಿಯನ್ ಟನ್ ಉತ್ಪಾದನೆಯ ಮಟ್ಟವಾಗಿದೆ.

ಆಫ್ರಿಕಾ ದೇಶ ನನ್ನ ಉತ್ಪದಾನೆಯ ದ್ವಿತೀಯ ಕೇಂದ್ರ. ವಿಶ್ವದ ಒಟ್ಟಾರೇ ಉತ್ಪದಾನೆಯ ಪೈಕಿ ಶೇಕಡ 21% ರಷ್ಟು ನನ್ನ ಕೊಡುಗೆ ಈ ದೇಶದಿಂದಲ್ಲೇ ಲಭ್ಯವಾಗುತ್ತದೆ. ವಿಶ್ವದ 25 ರಷ್ಟು ಉಷ್ಣವಲಯ ಮತ್ತು ಉಪ ಉಷ್ಣವಲಯದಲ್ಲಿ ನಾನು ಏಕ ಬೆಳೆಯಾಗಿ ಮತ್ತು ಇಂಟರ್ ಮಿಕ್ಸ್ ಬೆಳೆಯಾಗಿ ಬೆಳೆಯುತ್ತೇನೆ. ಉದಾಹರಣೆಗೆ ಹುಲ್ಲು ಜೋಳ (ದೊಡ್ಡ ರಾಗಿ), ಬಾಜ್ರ ಅಥವಾ ಮೆಕ್ಕೆ ಜೋಳ (ಜಿಯಾಮೇಜ್) ಅಥವಾ ಇತರೆ ದ್ವಿದಳ ಧಾನ್ಯಗಳಾದ ಕಡಲೆಕಾಯಿ ಬೆಳೆಗಳ ಜೊತೆಯಲ್ಲಿ ನನ್ನನು ಬೆಳೆಯಲಾಗುತ್ತದೆ. ವಿಶೇಷವಾಗಿ ನನ್ನ ಬಳಿ ಸಹಜೀವನದ ಸಾಮರ್ಥ್ಯವಿದ್ದು ಪರಸ್ಪರ ಸಂಪರ್ಕದ ಜೊತೆಯಾಗಿ ರೈಜೋಬಿಯಾ ಬ್ಯಾಕ್ಟೀರಿಯ ಉತ್ಕ್ರಷ್ಟಗೊಳಿಸಲು ಸಹಜೀವನದ ಸಾರಜನಕ ಸ್ಥಿರೀಕರಣದ ಮೂಲಕ ಮಣ್ಣಿನಲ್ಲಿ ಬೇರುಗಳನ್ನು ಸೇರುತ್ತೇನೆ. ಆದ್ದರಿಂದ ಬೆಲೆಬಾಳುವ ಸಾವಯವ ಮತ್ತು ಸೂಕ್ಮ ಪೋಷಕಾಂಶಗಳು ಮಣ್ಣಿನಲ್ಲಿ ಲಭ್ಯವಾಗುತ್ತವೆ. ಒಂದು ಹೆಕ್ಟೇರ್‍ಗೆ 90ಕೆಜಿ ಸಾರಜನಕವನ್ನು ನಾನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದೇನೆ. ನಾನು ಮೇವು ಬೆಳೆಗಳ ಪಾತ್ರದ ವ್ಯಾಪ್ತಿಯನ್ನು ನಿರ್ವಹಿಸುತ್ತೇನೆ. ಸಾಮಾನ್ಯವಾಗಿ ಸುಗ್ಗಿ ಕಾಲದಲ್ಲಿ ನನ್ನ ಕೊಯ್ಲನ್ನು ರೈತರು ಕೈಯಿಂದಲೇ ಮಾಡುತ್ತಾರೆ. ತದನಂತರ ನನ್ನನ್ನು ಅಗತ್ಯಕ್ಕೆ ಅನುಗುಣವಾಗಿ ಸೂರ್ಯನ ಶಾಖದಲ್ಲಿ ಒಣಗಿಸುತ್ತಾರೆ ಬಳಿಕ ಕಣದಲ್ಲಿ ತೂರಿ,ಧಾನ್ಯ ಹೊಟ್ಟು ಮತ್ತು ಕಡ್ಡಿಕಸವನ್ನು ಬೇರ್ಪಡಿಸುತ್ತಾರೆ.

ಭಾರತೀಯ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ನನ್ನ ಆಗಮನ ಅಕ್ಟೋಬರ್ ತಿಂಗಳಲ್ಲಿ ಆರಂಭವಾಗುತ್ತದೆ. ನನ್ನ ಹೊಸ ತಳಿ4ರಿಂದ 6 ತಿಂಗಳಲ್ಲಿ ಕೊಯ್ಲುಗೆ ಬರುವುದರಿಂದ ರೈತರಿಗೆ ವಾಣಿಜ್ಯ ಬೆಳೆಯಾಗಿ ಬೆಳೆಯಲು ಉಪಕರವಾಗಿದೆ. ನನ್ನ ಎರಡು ಹೈಬ್ರಿಡ್ ಮೂಲಕ ತಳಿಗಳಾದ ICPH 2671 ಮತ್ತು ICPH 2740 ಬೀಜಗಳು ಸಾಮಾನ್ಯ ಕೃಷಿ ಪದ್ಧತಿಯಲ್ಲಿ ರೈತರಿಗಾಗಿ ಭಾರತದಲ್ಲಿ ಬಿಡುಗಡೆಯಾಗಿದೆ.
ಭಾರತ ದೇಶದ ರಾಜ್ಯಗಳಾದ ಮಹಾರಾಷ್ಟ್ರ, ಉತ್ತರಪ್ರದೇಶ,ಕರ್ನಾಟಕ, ಮಧ್ಯಪ್ರದೇಶ, ಗುಜರಾತ್ ರಾಜಸ್ತಾನ್ ಮತ್ತು ಆಂಧ್ರ ಪ್ರದೇಶಗಳಲ್ಲಿ ನನ್ನನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ದ್ವಿದಳ ಧಾನ್ಯಗಳ ಮೇಲೆ ನಮ್ಮ ದೇಶದ ಸಾಮಾನ್ಯ ಕುಟುಂಬಗಳು ಬಹುಹಿಂದಿನಿಂದಲೂ ಅವಲಂಬಿತವಾಗಿದೆ. ಭಾರತ ನನ್ನ ಉತ್ಪಾದನೆ, ಬಳಕೆ ಮತ್ತು ಆಮದು ಕ್ಷೇತ್ರದಲ್ಲಿ ಮೊದಲನೇ ಸ್ಥಾನ ಪಡೆದಿದೆ. ನಾನು ಬಟಾಣಿ ಬಳಿಕ ಎರಡನೇ ಪ್ರಮುಖ ಬೆಳೆಯಾಗಿದ್ದೇನೆ. ವಿಶ್ವದ 25ಕ್ಕು ಹೆಚ್ಚು ದೇಶಗಳಲ್ಲಿ ನನ್ನನು ಬೆಳೆಯಾಲಾಗುತ್ತದೆ ಎಂದು ಹೇಳಲು ಹೆಮ್ಮೆಯಾಗುತ್ತದೆ.
ಭಾರತೀಯರ ಆಹಾರ ಪದ್ಧತಿಯಲ್ಲಿ ಅತೀ ಹೆಚ್ಚು ಬಳಕೆಯಾಗುತ್ತೇನೆ. ನನ್ನ ಬೇಡಿಕೆ ಹೆಚ್ಚಿರುವುದರಿಂದ ಮಯನ್ಮಾರ್, ತಾನ್ ಜೇನಿಯಾ ಗಣರಾಜ್ಯ, ಮಲಾವಿ, ಉಗಾಂಡ, ಮೊಝಾಂಭಿಕ್ ಸೇರಿದಂತೆ ಇತರೆ ರಾಷ್ಟ್ರಗಳಿಂದಲೂ ಭಾರತಕ್ಕೆ ಅಮದು ಮಾಡಿಕೊಳುತ್ತಾರೆ. ಜೊತೆಗೆ ಯು.ಎ.ಇ, ಯುಎಸ್ ಎ, ಸಿಂಗಪೂರ್ ಮತ್ತು ಸೌದಿ ಅರೇಬಿಯ ರಾಷ್ಟ್ರಗಳಿಗೆ ಭಾರತದಿಂದ ನನ್ನನ್ನು ಸಣ್ಣ ಪ್ರಮಾಣದಲ್ಲಿ ರಪ್ತು ಮಾಡುತ್ತಾರೆ.
ಭಾರತದಲ್ಲಿ ಮುಂಗಾರು ಮತ್ತು ಹಿಂಗಾರು ಬೆಳೆಗಳು ನವೆಂಬರ್ ಮಾಸದಿಂದ ಮಾರುಕಟ್ಟೆಗೆ ಬರುವ ಅವಕವಾಗುವ ಸಮಯ. ನನ್ನ ಉತ್ಪಾದನೆ ಮುಂಗಾರು ಋತುವಿನಲ್ಲಿ ಮಾತ್ರ, ಈ ಕಾರಣದಿಂದಲ್ಲೇ ದ್ವಿದಳ ಧಾನ್ಯಗಳ ಪೈಕಿ ನನ್ನ ಬೆಲೆ ಮಾತ್ರವೇ ಅತಿ ಹೆಚ್ಚಾಗಿ ಉಲ್ಬಣಿಸುತ್ತದೆ. ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ ದ್ವಿದಳ ಧಾನ್ಯಗಳ ಉತ್ಪಾದನೆ ಶೇಕಡ 70% ರಷ್ಟು. ನನ್ನ ಬೇಡಿಕೆಯು ಹಬ್ಬದ ರುತುಮಾಸಗಳಲ್ಲಿ ಹೆಚ್ಚಾಗಿರುತ್ತದೆ. ಕೃಷ್ಣ ಜನ್ಮಾಷ್ಠಮಿಯಿಂದ ದೀಪಾವಳಿ (ಆಗಸ್ಟ್ ನಿಂದ ನವೆಂಬರ್)ವರೆಗೆ ಹೆಚ್ಚು ಬೇಡಿಕೆ ಇದೆ. ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯನ್ನು ಗ್ರಾಹಕರು ಒಪ್ಪಲೇಬೇಕಾಗಿದೆ. ಆದ್ದರಿಂದ ವರ್ತಕರು ಇಂತಹ ಅವಕಾಶವನ್ನು ಬಳಸಿಕೊಳ್ಳುತ್ತಾರೆ.
ಈ ಸಮಯದ ನಡುವೆ ಮುಂಗಾರು ಬೆಳೆ ಬಗ್ಗೆ ಹುರುಳಿಲ್ಲದ ಮಾಹಿತಿ ಮತ್ತು ಧಾರಣೆಯಲ್ಲಿ ಏರಿಕೆಗಳು ಕೂಡ ಮಾರುಕಟ್ಟೆಯನ್ನು ಪ್ರವೇಶಿಸುತ್ತವವೆ. ಇದರಿಂದ ನನ್ನ ಬೆಲೆ ಹೆಚ್ಚಾಗುತ್ತದೆ. ಇತರೆ ಕಾರಣಗಳು ಒಳಗೊಂಡಂತೆ ಅನಿರ್ದಿಷ್ಟವಾದ ಮುಂಗಾರು ವೈಫಲ್ಯ, ಗ್ವೌಪ್ಯ ಸಂಗ್ರಹಣೆ ಇದಕ್ಕೆ ಕಾರಣವಾಗಿದೆ.
ನಾನು ಭಾರತದಲ್ಲಿ ಪ್ರಮುಖವಾಗಿ ವ್ಯಾಪಾರವಾಗುವ ರಾಜ್ಯಗಳೆಂದರೆ ಇಂಡೋರ್, ಭೂಪಾಲ್,ಒಡಿಶಾ, ಜಲಗಾಂವ್, ಲಾತೂರ್, ಮುಂಬೈ, ಅಕೋಲಾ ಇತ್ಯಾದಿ, ನಾನು ಕರ್ನಾಟಕದ ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ವ್ಯಾಪಾರವಾಗುತ್ತೇನೆ. ಕರ್ನಾಟಕದಲ್ಲಿ ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್‍ನ ಏಕೀಕೃತ ಮಾರುಕಟ್ಟೆ ವೇದಿಕೆಯ ಆನ್‍ಲೈನ್‍ನಲ್ಲಿ ನಾನು ವ್ಯಾಪಾರವಾಗುತ್ತೇನೆ. ರಾಷ್ಟ್ರೀಯ ಸರಕು ಮತ್ತು ಉತ್ಪನ್ನಗಳ ವಿನಿಮಯ ಲಿಮಿಟೆಡ್ ಮತ್ತು ರಾಷ್ಟ್ರೀಯ ಬಹು ಸರಕು ವಿನಿಮಯ ಇಂಡಿಯಾ ಲಿಮಿಟೆಡ್ ನಲ್ಲಿ ಕೂಡ ನಾನು ವ್ಯಾಪಾರವಾಗುತ್ತೇನೆ.
ಕೆಳಗಿನ ರೇಖಾ ಚಿತ್ರವನ್ನು ತಾವು ಗಮನಿಸಿ, ನನ್ನನು ಸಂಗ್ರಹಿಸಲು ಸರ್ಕಾರ ನೀಡಿದ ಬೆಂಬಲ ಬೆಲೆಯನ್ನು ನೋಡಬಹುದು. ಹೌದು, ನನ್ನ ರೈತರು ಈ ರೀತಿಯಲ್ಲಿ ಒಂದು ಖಾತ್ರಿ ಪಡೆಯುತ್ತಾರೆ. ಇದನ್ನು ನೋಡಿದರೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಲೆ ಲಭ್ಯವಾಗುತ್ತಿರುದನ್ನು ನೋಡಿ ಸಂತೋಷವಾಗಿದೆ.

ಸರ್ಕಾರ ಘೋಷಿಸಿದ ಬೆಂಬಲ ಬೆಲೆಗಿಂತಲೂ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ 2014 ರಿಂದ ಹೆಚ್ಚಿನ ಬೆಲೆ ದೊರೆಯುತ್ತಿರುವುದುನ್ನು ನಾನು ನೋಡುತಿದ್ದೇನೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s