ರೆಮ್ಸ್ ಸಂಸ್ಥೆಗೆ ಸಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗೌರವಗಳು

ರೆಮ್ಸ್ ನ ಕೃಷಿ ಸುಧಾರಣೆ ಮಾದರಿಗೆ ಸಾರ್ವಜನಿಕ ಸೇವೆಗಳ ನಿರ್ವಹಣೆಯಲ್ಲಿ ಆವಿಷ್ಕಾರ ಎಂಬ ಶೀರ್ಷಿಕೆ ಅಡಿಯಲ್ಲಿ 2018ನೇ ಸಾಲಿನಲ್ಲಿ ಪ್ರತಿಷ್ಟಿತ ಅಂತರಾಷ್ಟ್ರೀಯ ಸಂಸ್ಥೆ ಕಾಮನ್ ವೆಲ್ತ ಅಸೋಸಿಯೇಷನ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ (CAPAM) ನಿಂದ ವಿಶೇಷ ಪುರಸ್ಕಾರ ಪ್ರಮಾಣಪತ್ರಕ್ಕೆ ಭಾಜನವಾಗಿದೆ ಹಾಗೂ ಅಂತಿಮ ಸುತ್ತಿನಲ್ಲಿ ಅಂತರರಾಷ್ಟ್ರೀಯ ಆವಿಷ್ಕಾರ ಎಂಬ ಪ್ರಶಸ್ತಿಯನ್ನು ಕೂಡ ರೆಮ್ಸ್ ಸಂಸ್ಥೆ ಗಳಿಸಿದೆ.

CAPAM ಸಂಸ್ಥೆಯು, ಕಾಮನ್ ವೆಲ್ತ್ ಸಂಘಟನೆಯ ಅಂಗವಾಗಿರುತ್ತದೆ. ಕಾಮನ್ ವೆಲ್ತ್ ಪ್ರಶಸ್ತಿಯನ್ನು ದ್ವೈವಾರ್ಷಿಕವಾಗಿ ನಡೆಸಲಾಗುತ್ತದೆ. ಸಂಸ್ಥೆಯು ಸಾಮಾಜಿಕ ಆಡಳಿತ ಕ್ಷೇತ್ರ ವನ್ನು ಉತ್ತಮ ಗೊಳಿಸುವ ಆವಿಷ್ಕಾರಗಳನ್ನು ಪ್ರೋತ್ಸಹಿಸಲು, ಆ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದು, ನಾಗರಿಕರಿಗೆ ಅನುಕೂಲ ಗೊಳಿಸಿರುವಂಥಹ ಸಂಸ್ಥೆಗಳನ್ನು ಗುರುತಿಸಿ ಗೌರವಿಸುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಒಳ್ಳೆಯ ಮಾದರಿ ತೋರಿಸುವಂತಹ ಕೆಲಸಗಳು ನಡಯುವುದನ್ನು ಪ್ರೋತ್ಸಹಿಸುವ ಉದ್ದೇಶದೊಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಕರ್ನಾಟಕದ “ಏಕೀಕೃತ ಮಾರುಕಟ್ಟೆ ವೇದಿಕೆ” ಯೋಜನೆಯು 8 ಕಾಮನ್ ವೆಲ್ತ್ ದೇಶಗಳಿಂದ ಬಂದಂತಹ 40 ಯೋಜನೆಗಳೊಂದಿಗೆ ಸ್ಪರ್ಧಿಸಿ ಸೆಮಿ- ಫೈನಲ್ಸ್ ಗೆ ಆಯ್ಕೆಯಾಯಿತು. ಕರ್ನಾಟಕದ ನಮ್ಮ ಈ ಯೋಜನೆಗೆ ಫೈನಲ್ಸ್ ನಲ್ಲಿದ್ದ 12 ಯೋಜನೆಗಳಲ್ಲಿ ಉತ್ತಮವೆಂದು, ರಾಜ್ಯದ ಕೃಷಿ ಮಾರುಕಟ್ಟೆಯಲ್ಲಿ ಸುಧಾರಣೆಗಳನ್ನು ತಂದು ರೈತರ ಆದಾಯ ಹೆಚ್ಚಿಸುವಲ್ಲಿ ಫಲಕಾರಿಯಾಗಿದ್ದುಕ್ಕಾಗಿ “ಗೋಲ್ಡ್ ಪ್ರಶಸ್ತಿ -2018″ ನ್ನು 24th ಅಕ್ಟೋಬರ್ 2018 ರಂದು ಜಾರ್ಜ್ ಟೌನ್, ಗಯಾನಾ ದಲ್ಲಿ ನೆಡೆದಂತಹ CAPAM ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ನೀಡಲಾಯಿತು.

ಈ ಪ್ರಶಸ್ತಿಯ ಜೊತೆಗೆ ಶ್ರೀ. ಮನೋಜ್ ರಾಜನ್ (MD &CEO) ರೆಮ್ಸ್ ರವರಿಗೆ ಪ್ರತಿಷ್ಠಿತ “ಇಂಡಿಯಾ ಅಗ್ರಿ ಬಿಸ್ ನೆಸ್ ಅವಾರ್ಡ್ -2018 “ನ್ನು ಭಾರತದ ಕೃಷಿ ಸಂಶೋಧನಾ ಸಂಸ್ಥೆ ನವದೆಹಲಿ ವತಿಯಿಂದ ಆಯೋಜಿಸಲಾಗಿದ್ದ “ಆಗ್ರೋ ವರ್ಲ್ಡ್-2018” ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶ್ರೀಯುತ. ಜಿ. ಖುರ್ಷಿದ್ ಆ ಗಣೈ (ಸಲಹೆಗಾರರು, ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರು) ರವರು ನೀಡಿದರು.
ಶ್ರೀ. ಸಲೀಲ್ ಸೆಹಗಲ್, ಒಆ, PI ಇಂಡಸ್ಟ್ರಿ, ಡಾ. ಎಂ. ಎಸ. ಸ್ವಾಮಿನಾಥನ್ – (ಎಂ. ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ ಸಂಸ್ಥೆಯ ಸ್ಥಾಪಕರು ಮತ್ತು ಛೇರ್ಮನ್) ಮತ್ತು ಇತರೆ 26 ಪ್ರಮುಖರ ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿಯು ಈ ಪ್ರಶಸ್ತಿಯನ್ನು ನಮ್ಮ ಸಂಸ್ಥೆಗೆ ಶಿಫಾರಸ್ಸು ಮಾಡಿತು.

ಆಗ್ರೋ ವರ್ಲ್ಡ್-2018

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s