ಶೇಂಗಾ ಉತ್ಪನ್ನದ ಭೌತಿಕ ಗುಣವಿಶ್ಲೇಷಣೆಯ ಮಹತ್ವ

ಶೇಂಗಾ ಬೆಳೆಒಂದು ವಾಣಿಜ್ಯ ಬೆಳೆಯಾಗಿದೆ. ಶೇಂಗಾ ಬೆಳೆಯುವ ಪ್ರಮುಖ ಜಿಲ್ಲೆಗಳು ತುಮಕೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ, ಧಾರವಾಡ, ರಾಯಚೂರು, ಯಾದಗಿರಿ, ಕೊಪ್ಪಳ ಹಾಗೂ ಬಾಗಲಕೋಟೆ. ಶೇಂಗಾ ಬೆಳೆಯನ್ನು ಮುಂಗಾರು, ಹಿಂಗಾರು ಮತ್ತು ಬೇಸಿಗೆಯಲ್ಲಿ ಬೆಳೆಯಲಾಗುತ್ತದೆ. ಶೇಂಗಾ ಕೃಷಿ ಉತ್ಪನ್ನವು ಒಂದು ಅಧಿಸೂಚಿತ ಉತ್ಪನ್ನವಾಗಿದೆ, ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಶೇಂಗಾ ಉತ್ಪನ್ನವನ್ನು ಮಾರಾಟ ಮಾಡಲು ಗುಣವಿಶ್ಲೇಷಣೆಯು ಪ್ರಮುಖ ಪಾತ್ರವಹಿಸುತ್ತದೆ.
ಶೇಂಗಾ ಉತ್ಪನ್ನವನ್ನು ರೈತರು ಮಾರುಕಟ್ಟೆಗೆ ತಂದಾಗ ರಾಶಿ/ಚೀಲಗಳಲ್ಲಿ ತರುತ್ತಾರೆ, ಇಂತಹ ಲಾಟ್‍ಗಳನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್(BIS) ಪ್ರಕಾರ ಮಾದರಿ ಸಂಗ್ರಹಣೆಯನ್ನು ಈ ಕೆಳಗಿನಂತೆ ನಡೆಸಲಾಗುವುದು.
ಮಾದರಿ ತೆಗೆಯುವ ವಿಧಾನ:
• ರೈತರು ಮಾರಾಟಕ್ಕಾಗಿ ಮಾರುಕಟ್ಟೆಗೆ ತರುವ ಶೇಂಗಾ(ನೆಲಗಡಲೆ ಕಾಯಿ ಮತ್ತು ಬೀಜ)ವನ್ನು ಪ್ಯಾಕ್ ಮಾಡಿ ತಂದ ಉತ್ಪನ್ನದಿಂದ ಮಾದರಿ ತೆಗೆಯುವುದಕ್ಕಾಗಿ(ಸ್ಯಾಂಪಲ್) ಪ್ರತಿ ಲಾಟನ್ನು ಚೀಲ ಅಥವಾ ರಾಶಿ ರೂಪದಲ್ಲಿ ಪ್ರತ್ಯೇಕವಾಗಿ ಇಡುವುದು.
• ಪ್ಯಾಕ್ ಮಾಡಿದ ರೂಪದಲ್ಲಿ ಲಾಟನ್ನು ತಂದಾಗ ಲಾಟ್‍ನಲ್ಲಿನ ಪ್ರತಿ ಚೀಲದ ಮೇಲ್ಭಾಗ, ಮಧ್ಯಭಾಗ ಮತ್ತು ಕೆಳಭಾಗದಿಂದ ಸಣ್ಣ ಪ್ರಮಾಣದಲ್ಲಿ ಉತ್ಪನ್ನ ತೆಗೆದು ಸ್ಯಾಂಪಲ್ ಸಿದ್ದಪಡಿಸಲಾಗುತ್ತದೆ. ಬಳಿಕ ಶೇಂಗಾ ಉತ್ಪನ್ನವನ್ನು ಸರಿಯಾಗಿ ಮಿಶ್ರಣ ಮಾಡಿ, ಅದನ್ನು ಬಲ್ಕ್ ಸ್ಯಾಂಪಲ್ ಎಂದು ಕೆರೆಯಲಾಗುತ್ತದೆ.
• ಒಂದು ವೇಳೆ ಲಾಟನ್ನು ರಾಶಿ ರೂಪದಲ್ಲಿ ತಂದಾಗ ಮಾದರಿಯನ್ನು ಕನಿಷ್ಠ ಪಕ್ಷ 7 ಭಾಗಗಳಿಂದ ಅಂದರೆ ಮುಂಭಾಗ, ಹಿಂಭಾಗ, ಎಡಭಾಗ, ಬಲಭಾಗ, ರಾಶಿಯ ತುದಿ, ಮಧ್ಯ ಹಾಗೂ ತಳಭಾಗಗಳಿಂದ ಸ್ಯಾಂಪಲ್ ಸಂಗ್ರಹಿಸಿದ ನಂತರ ಮಾದರಿಯನ್ನು ಸರಿಯಾಗಿ ಮಿಶ್ರಣ ಮಾಡಿ ಬಲ್ಕ್ ಮಾದರಿಯನ್ನು ಸಂಗ್ರಹಿಸಲಾಗುತ್ತದೆ.
• ಕಾಂಪೋಸಿಟ್ ಸ್ಯಾಂಪಲ್ ಸಿದ್ದಪಡಿಸಲು ಬಲ್ಕ್ ಸ್ಯಾಂಪಲ್‍ನಿಂದ 1/2 ಕೆ.ಜಿ. ಶೇಂಗಾ ಉತ್ಪನ್ನವನ್ನು ತೆಗೆಯಲಾಗುವುದು.
• ಸ್ಯಾಂಪಲ್ ಡಿವೈಡರ್ ನಿಂದ ತಲಾ 100 ಗ್ರಾಂ ನಂತೆ 5 ಸಮಭಾಗಗಳಾಗಿ ವಿಂಗಡಿಸಲಾಗುವುದು.
• ಪ್ರತಿ ಭಾಗವನ್ನು ಪ್ರತ್ಯೇಕವಾಗಿ ಪಾರದರ್ಶಕ ಪ್ಲಾಸ್ಟಿಕ್ ಬ್ಯಾಗ್‍ಗಳಲ್ಲಿ ಪ್ಯಾಕ್ ಮಾಡಲಾಗುವುದು. ಪ್ರತಿಯೊಂದು ಪ್ಲಾಸ್ಟಿಕ್ ಚೀಲಕ್ಕೆ ಗುರುತಿನ ಚೀಟಿಯನ್ನು ಲಗತ್ತಿಸಿ ಮುದ್ರೆ ಹಾಕಲಾಗುತ್ತದೆ. ಈ ರೀತಿ ಸಂಗ್ರಹಿಸಿದ ಉತ್ಪನ್ನದ ಒಂದು ಮಾದರಿಯನ್ನು ರೈತರಿಗೆ, ಒಂದು ಪ್ಯಾಕೆಟ್ ಎಪಿಎಂಸಿಯಲ್ಲಿ ವರ್ತಕರ ಪರಿಶೀಲನೆಗಾಗಿ, ಒಂದು ಮಾದರಿಯನ್ನು ಎಪಿಎಂಸಿಯಲ್ಲಿ ವಿವಾದ ನಿರ್ಣಯಕ್ಕಾಗಿ ಕಾಯ್ದಿರಿಸುವುದು, ಮತ್ತೊಂದು ಮಾದರಿಯನ್ನು ಗುಣ ವಿಶ್ಲೇಷಣೆಗಾಗಿ ನೀಡುವುದು, ಒಂದು ಮಾದರಿಯನ್ನು ಗುಣ ವಿಶ್ಲೇಷಣೆ ಸಂಸ್ಥೆಯ ದಾಖಲೆಗಾಗಿ ಸಂಗ್ರಹಿಸಲಾಗುತ್ತದೆ.
ಪರೀಕ್ಷೆ ವಿಧಾನ :
ಪ್ರಥಮವಾಗಿ ಮಾದರಿಯನ್ನು ಪರೀಕ್ಷಿಸಿದಾಗ ಯಾವುದೇ ಜೀವವಿರುವ ಕ್ರಿಮಿಕೀಟಗಳ ಉತ್ಪನ್ನದಲ್ಲಿ ಲಭ್ಯತೆ ಬಗ್ಗೆ ಪರೀಕ್ಷೆ ವೇಳೆ ಖಾತ್ರಿ ಒಳಪಡಿಸಲಾಗುತ್ತದೆ. ಒಂದು ವೇಳೆ ಜೀವವಿರುವ ಕ್ರಿಮಿಕೀಟಗಳು ಉತ್ಪನ್ನದಲ್ಲಿ ಪತ್ತೆಯಾದಲ್ಲಿ ಅಂತಹ ಲಾಟ್‍ನ್ನು ಗುಣವಿಶ್ಲೇಷಣೆ ಪ್ರಕ್ರಿಯೆಯಿಂದ ತಿರಸ್ಕರಿಸಲಾಗುತ್ತದೆ. ಕೃಷಿ ಉತ್ಪನ್ನದಲ್ಲಿ ಯಾವುದೇ ಕೃತಕ ರಾಸಾಯನಿಕ ಬಣ್ಣ ಅಥವಾ ಬೂಸ್ಟ್ ಹಿಡಿದ ಬಗ್ಗೆ ಪರೀಕ್ಷಿಸಿ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಯನ್ನು ಏಕೀಕೃತ ಮಾರುಕಟ್ಟೆ ವೇದಿಕೆಯ ಪ್ರಯೋಗಾಲಯಗಳಲ್ಲಿ ಕಲ್ಪಿಸಲಾಗಿದೆ. ಗುಣವಿಶ್ಲೇಷಣೆ ಸಂಸ್ಥೆಯು ಉತ್ಪನ್ನಗಳ ಗುಣಧರ್ಮಗಳ ವಿವರಗಳನ್ನು ನಮೂದಿಸಿರಿದ ಬಳಿಕ ರೈತರಿಗೆ ಉತ್ಪನ್ನದ ಗುಣ ಪ್ರಮಾಣ ಪತ್ರವನ್ನು ನೀಡುವ ವ್ಯವಸ್ಥೆಯನ್ನು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಒದಗಿಸಲಾಗಿದೆ. ಉತ್ಪನ್ನದ ಗುಣವಿಶ್ಲೇಷಣೆಗೆ ಸಂಬಂಧಿಸಿದಂತೆ ಪ್ರಮಾಣ ಪತ್ರದಲ್ಲಿ ಊರ್ಜಿತವಿರುವ ಅವದಿಯನ್ನು ನಮೂದಿಸಲಾಗುವುದು.
ಮಾದರಿ ಸಂಗ್ರಹ ಮತ್ತು ಪರೀಕ್ಷೆಯನ್ನು ಮೂರನೇ ವ್ಯಕ್ತಿ / ಸ್ವತಂತ್ರ್ಯವಾದ ಸಂಸ್ಥೆಯು ನಿರ್ವಹಿಸುತ್ತದೆ, ಮಾದರಿ ಸಂಗ್ರಹಣ ಮತ್ತು ಪರೀಕ್ಷೆಯನ್ನು BIS ವಿಧಾನದ ಪ್ರಕಾರ ನುರಿತ ಅಸ್ಸೆಯರ್ಸ್‍ನಿಂದ ಕೈಗೊಳ್ಳಲಾಗುತ್ತದೆ, ಪರೀಕ್ಷೆ ವರದಿಯ ನ್ಯೂನತೆ ಮತ್ತು ಇತರೆ ತೊಂದರೆಗಳಿದ್ದರೆ ಸದರಿ ಸಂಸ್ಥೆಯನ್ನು ಜವಬ್ದಾರಿಯುತರನ್ನಾಗಿ ಮಾಡಲಾಗಿದೆ.
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡುವ ವಿಧಾನ:
ಉತ್ಪನ್ನದ ಗುಣಧರ್ಮಗಳ ಪರೀಕ್ಷಾ ಫಲಿತಾಂಶದ ವಿವರಗಳನ್ನು ಏಕೀಕೃತ ಮಾರುಕಟ್ಟೆ ವೇದಿಕೆ (ಇ-ಮಾರುಕಟ್ಟೆ)ಯಲ್ಲಿನ ಆನ್‍ಲೈನ್‍ನಲ್ಲಿ ಖರೀದಿದಾರರ ಪರೀಶಿಲನೆಗಾಗಿ ನಮೂದಿಸಲಾಗುತ್ತಿದೆ.
ಗುಣವಿಶ್ಲೇಷಣಾ ವಿವಾದಗಳು, ಇನ್ನಿತರೆ ವಿಷಯಗಳು ಮತ್ತು ತೊಂದರೆಗಳ ನಿವಾರಣೆ :
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳು, 1968ರ ನಿಯಮ 91-ಪಿ(1)ರನ್ವಯ ರಚಿಸಲಾಗಿರುವ ವಿವಾದ ಪರಿಶೀಲನಾ ಸಮಿತಿಯು ನಿಯಮ 91-ಪಿ(7)ರನ್ವಯ ಕೃಷಿ ಮಾರಾಟ ನಿದೇಶಕರು ನೀಡಿರುವಂತಹ ಮಾರ್ಗದರ್ಶಿ ಸೂಚನೆಗಳನ್ವಯ ವಿವಾದಗಳನ್ನು ತೀರ್ಮಾನಿಸಲಾಗುತ್ತದೆ.
ಇದಕ್ಕಾಗಿ ಉತ್ಪನ್ನಗಳ ಮಾರಾಟಗಾರರು ಆಹಾರ ಮತ್ತು ಸುರಕ್ಷತಾ ಪ್ರಮಾಣಗಳ ಕಾಯ್ದೆ 2006 ಹಾಗೂ ಸಂಭಂಧಿಸಿದ ಇತರೆ ಕಾನೂನಿನಲ್ಲಿ ನಿಗದಿ ಪಡಿಸಿದ ನಿಯಮಗಳನ್ನು ಪಾಲಿಸುವುದು ಕಡಾಯವಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಯಾವುದೇ ಆದೇಶಗಳನ್ನು ಜಾರಿಗೊಳಿಸುವಲ್ಲಿ ಉದ್ಬವಿಸಬಹುದಾದ ಯಾವುದೇ ತೊಂದರೆಗಳನ್ನು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರ ಗಮನಕ್ಕೆ ತರತಕ್ಕದ್ದು ಹಾಗೂ ಅವರು ಸೂಕ್ತವೆನಿಸುವ ಸ್ಪಷ್ಠೀಕರಣವನ್ನು ನೀಡುವರು.

 

ಒಡೆದ ಕಾಯಿಗಳು (ಶೇಕಡವಾರು ಪ್ರಮಾಣ) ಕಾಯಿಗಳು ಮೂಲ ಸ್ವರೂಪದಲ್ಲಿ ಒಡೆದಿರುವುದು, ಪೂರ್ಣ ಮತ್ತು ಭಾಗಶಃ ಚೂರಾಗಿರುವ ಕಾಯಿಗಳು,ಸುಕ್ಕುಗಟ್ಟಿದ ಹಾಗೂ ಅಪರಿಪಕ್ವ ಕಾಯಿಗಳು (ಶೇಕಡವಾರು ಪ್ರಮಾಣ) ಕಾಯಿಗಳು ಪೂರ್ಣ ಪ್ರಮಾಣದಲ್ಲಿ ಪಕ್ವತೆ ಇಲ್ಲದ ಜೊಳ್ಳಾದ ಕಾಯಿಗಳು. ಶೇಂಗಾ ಬೀಜದ ಪ್ರಮಾಣ ಶೇಕಡವಾರು ನಿರ್ದಿಷ್ಟ ಪ್ರಮಾಣದ ಶೇಂಗಾ ಕಾಯಿಗಳಿಂದ ಬೀಜ ಬೇರ್ಪಡಿಸಿದಾಗ ದೊರೆಯುವ ಬೀಜದ ಪ್ರಮಾಣ ಬಗ್ಗೆ ಮಾಹಿತಿ ಸಂಗ್ರಹಿಸಿ ಗುಣವಿಶ್ಲೇಷಣೆ ವರದಿಯಲ್ಲಿನ ದತ್ತಾಂಶದಲ್ಲಿ ಉಲ್ಲೇಖ ಮಾಡಲಾಗುವುದು.
ತೇವಾಂಶ (ಶೇಕಡವಾರು ಪ್ರಮಾಣ):
ಶೇಂಗಾ ಉತ್ಪನ್ನದ ಮಾದರಿಯಿಂದ ಸೂಕ್ತ ಕಾಯಿಗಳನ್ನು ತೆಗೆದು, ಪ್ರತ್ಯೇಕವಾಗಿ ತೂಕ ಮಾಡಿಕೊಳ್ಳಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಯೋಗಾಲಯದಲ್ಲಿ ಬಳಕೆ ಮಾಡುವ ಓವೆನ್‍ನಲ್ಲಿ 100 ರಿಂದ 110 ಡಿಗ್ರೀ ಉಷ್ಣಾಂಶ ತಾಪಮಾನದಲ್ಲಿ ಸುಮಾರು 2 ಗಂಟೆ ಸಮಯದವರೆಗೆ ಒಣಗಿಸಲಾಗುತ್ತದೆ. ಬಳಿಕ ಒಣಗಿಸಿದ ಕಾಯಿಗಳನ್ನು ತಣಿಸಿ ತೂಕ ಮಾಡಲಾಗುತ್ತದೆ. ಒಣಗಿಸುವ ಮುನ್ನಾ ಉತ್ಪನ್ನದ ತೂಕ ಮತ್ತು ಒಣಗಿಸಿದ ಮೇಲೆ ಬರುವ ತೂಕದ ವ್ಯತ್ಯಾಸದ ಭಾಗಗಳಿಂದ ಶೇಂಗಾ ಉತ್ಪನ್ನದಲ್ಲಿನ ತೇವಾಂಶದ ಶೇಕಡವಾರನ್ನು ಕಂಡುಹಿಡಿಯಾಲಾಗುವುದು.

ಶೇಂಗಾ ಉತ್ಪನ್ನದಲ್ಲಿ ತೇವಾಂಶ, ಅನ್ಯಪದಾರ್ಥಗಳು, ಅಪರಿಪಕ್ವ ಹಾಗೂ ಸುಕ್ಕುಕಟ್ಟಿದ ಕಾಯಿಗಳ ಪ್ರಮಾಣ ಕಡಿಮೆ ಇದ್ದಷ್ಟು ಮತ್ತು ಉತ್ಪನ್ನದಲ್ಲಿ ಬೀಜಗಳ ಗುಣಮಟ್ಟ ಲಭ್ಯತೆ ಹೆಚ್ಚಿಗಿದ್ದರೆ, ಮಾರುಕಟ್ಟೆಯಲ್ಲಿ ಉತ್ಪನ್ನದ ಮೌಲ್ಯ ಕೂಡ ಹೆಚ್ಚುತ್ತದೆ.
ಉದಾಹರಣೆ: ಶೇಂಗಾ ಉತ್ಪನ್ನದ ಗುಣಧರ್ಮಗಳ ಪ್ರಮಾಣ ಮತ್ತು ಲಾಟ್‍ಗಳಿಗೆ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ಆನ್‍ಲೈನ್ ಟೆಂಡರ್ ನಲ್ಲಿ ದೊರೆತ ನೈಜ ಬೆಲೆ ಪಡೆದಿರುವ ಕುರಿತು ಒಂದು ವಿಶ್ಲೇಷಣೆ ವಿವರವನ್ನು ಕೆಳಗಿನ ರೇಖಾ ಚಿತ್ರಗಳಲ್ಲಿ ಗಮನಿಸಬಹುದು.

ಮೇಲಿನ ರೇಖಾ ಚಿತ್ರವನ್ನು ಉದಾರಣೆಗಾಗಿ ಗಮನಿಸಿ, ಗಜೇಂದ್ರಗಡ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ ಉತ್ಪನ್ನಕ್ಕೆ ಉತ್ತಮ ಧಾರಣೆ ಪಡೆದ ಬಗ್ಗೆ ಮಾಹಿತಿಯನ್ನು ಕಲ್ಪಿಸಲಾಗಿದೆ. ರೈತರು ಶೇಂಗಾ ಉತ್ಪನ್ನವನ್ನು ಸರಿಯಾಗಿ ಒಣಗಿಸಿ, ಸ್ವಚ್ಚಮಾಡಿ ಮಾರಾಟಕ್ಕಾಗಿ ಮಾರುಕಟ್ಟೆಗೆ ತಂದು ಗುಣವಿಶ್ಲೇಷಣೆ ಮಾಡಿಸಿದರು. ಶೇಂಗಾ ಉತ್ಪನ್ನದಲ್ಲಿ ಕನಿಷ್ಠ ತೇವಾಂಶವಿದ್ದ ಲಾಟ್‍ಗೆ ಗರಿಷ್ಟ ಬೆಲೆ ಲಭ್ಯವಾಗುವುದನ್ನು ರೇಖಾ ಚಿತ್ರದಲ್ಲಿ ತಾವು ಗಮನಿಸಬಹುದಾಗಿದೆ. ಶೇ.4% ರಿಂದ ಶೇ. 6%ರಷ್ಟು ತೇವಾಂಶವಿದ್ದ ಶೇಂಗಾ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಧಾರಣೆ ದೊರೆತಿರುವುದನ್ನು ಗಮನಿಸಬಹುದಾಗಿದೆ. ಅದೇ ರೀತಿ ಶೇ.18 ರಿಂದ ಶೇ.20%ರಷ್ಟು ಹೆಚ್ಚು ತೇವಾಂಶವಿದ್ದ ಶೇಂಗಾ ಉತ್ಪನ್ನಕ್ಕೆ ಕಡಿಮೆ ಧಾರಣೆ ದೊರೆತಿರುವುದನ್ನು ಕೂಡ ಗಮನಿಸಬಹುದು. ಒಂದೇ ದಿನದ ವ್ಯಾಪಾರ ವಹಿವಾಟಿನಲ್ಲಿ ಪ್ರತ್ಯೇಕ ಲಾಟ್‍ಗಳಿಗೆ ಗುಣಮಟ್ಟ ಮತ್ತು ತೇವಾಂಶಕ್ಕೆ ಅನುಗುಣವಾಗಿ ಬೆಲೆ ಲಭ್ಯವಾಗಿರುವುದನ್ನು ನೋಡಬಹುದಾಗಿದೆ. ಖರೀದಿದಾರರು ಶೇಂಗಾ ಉತ್ಪನ್ನದಲ್ಲಿನ ತೇವಾಂಶ ಮತ್ತು ಗುಣಮಟ್ಟವನ್ನು ಗಮನಿಸಿ ಇ-ಟೆಂಡರ್ ನಲ್ಲಿ ಉತ್ತಮ ಲಾಟ್‍ಗಳಿಗೆ ನೈಜ ಬೆಲೆ ಬಿಡ್‍ನಲ್ಲಿ ನಮೂದಿಸುತ್ತಾರೆ.
ರೈತರಿಗೆ ಸಲಹೆ :
• ಕೃಷಿ ಉತ್ಪನ್ನಗಳನ್ನು ಮಾರಾಟಕ್ಕಾಗಿ ಮಾರುಕಟ್ಟೆಗೆ ತರುವ ಮುನ್ನ ಬೆಳೆಯನ್ನು ಸಕಾಲದಲ್ಲಿ ಕೊಯ್ಲು ಮಾಡಿ, ಸರಿಯಾಗಿ ಒಣಗಿಸಿ, ಅನ್ಯಪದಾರ್ಥಗಳನ್ನು ಬೇರ್ಪಡಿಸಿ, ಪ್ಯಾಕ್ ಮಾಡಿ ಏಕೀಕೃತ ಮಾರುಕಟ್ಟೆಗೆ ತರುವುದು.
• ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸ್ಥಾಪಿಸಲಾಗಿರುವ ವೈಜ್ಞಾನಿಕ ಪ್ರಯೋಗಾಲಯಗಳಲ್ಲಿ ಕೃಷಿ ಉತ್ಪನ್ನಗಳನ್ನು ತಪ್ಪದೇ ಗುಣವಿಶ್ಲೇಷಣೆ ಮಾಡಿಸುವುದು. ರೈತಭಾಂದವರಿಗೆ ಈ ಸೇವೆಯನ್ನು ಉಚಿತವಾಗಿ ಕಲ್ಪಿಸಲಾಗಿದೆ.
• ಗುಣವಿಶ್ಲೇಷಣೆ ಮಾಡಿದ ಉತ್ಪನ್ನಗಳ ವಿವರವಾದ ಮಾಹಿತಿಯ ದತ್ತಾಂಶವನ್ನು ಇ-ಮಾರುಕಟ್ಟೆಯ ಆನ್‍ಲೈನ್‍ನಲ್ಲಿ ಪ್ರಕಟಿಸಲಾಗುವುದು. ಏಕೀಕೃತ ಲೈಸನ್ಸ್ ಪಡೆದ ರಾಜ್ಯ ಮತ್ತು ಹೊರ ರಾಜ್ಯಗಳ ಖರೀದಿದಾರರು ಉತ್ಪನ್ನಗಳ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಪರಿಶೀಲಿಸಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ.
• ಗುಣವಿಶ್ಲೇಷಣೆ ಮಾಡಿದ ಉತ್ಪನ್ನಗಳ ಖರೀದಿಗೆ ಸ್ಪರ್ಧೆ ಹೆಚ್ಚಾಗಿ ಬೆಳೆಗೆ ಸ್ಪರ್ಧಾತ್ಮಕ ಬೆಲೆ ದೊರೆಯಲಿದೆ.

Quality Parameters of Agri Commodities Assayed

The quality of a commodity is determined based on the presence of certain set of traits inherent to the commodity or commodity group. Generally the set of parameters are common for commodities coming under cereals, pulses and oil seed group where as parameters differs for each commodity Spices or plantation crop groups. The quality of cereals like Paddy, Wheat, Maize, Bajra, Sorghum, Millets etc. is determined by the percentage of moisture present in the grain, quantum of foreign matter like dust and stones present in the lot, mixture of other commodity seeds, quantity of damaged or broken seeds and quantity of insect damaged grains in the lot.  The set of parameters tested during assaying of lots is represented below in table I:

Pic: Assayer analysing samples

Detailed explanation of various Parameters:

  • Moisture is expressed as percentage of water content in the grain. This is one of the most important factor. If moisture content is high in the produce it will not attract a good price as their will be high moisture loss it can’t be stored for longer time. Higher moisture deteriorates the shelf life of produce. Lots with lesser moisture content fetch a better price and increases the storage span of produce.

Digital Moisture Meter

  • Foreign Matter represents the existence of sand, pieces of stone, plastic particles, metals and pieces of glass etc. in the food grains. It is expressed in percentage terms. Lesser the foreign matter content in produce, higher the price it fetches to the farmer.
  • Admixture is other grains mixed up with principal grain. It is expressed as a percentage. Less admixture content fetch better price than the produce with much admixture.
  • Damaged or Broken means visually damaged, broken grains and is expressed as percentage. More quantity of damaged grains in the lot would fetch lower price and it negatively affecting their value of the grains.
  • Discoloured is change of colour in grains and no longer looks new, clean or healthy. Discoloration of grains are caused by either exposure to wet and damp conditions or a stress related biochemical reaction. It is expressed as a percentage. Higher quantity of discoloured grains in the lot affects the trade price of the produce.
  • Fungus infestation cause germination decrease, discoloration, musty or sour odours, chemical and nutritional changes. It is expressed in percentage. The deteriorative changes caused by fungus affect the price of grain and contribute to customer dissatisfaction. Immature grains are the grains which are not matured properly. It occurs when there has been a significant amount of secondary growth.  It is expressed as a percentage. Lesser immature grains content in the produce, it fetches better price.
  • Shrivelled grains are dry and smaller than regular grain. It is expressed in percentage. Less shrivelled content in the produce fetches better price.
  • Weevilled grains are those grains which are partially bored or damaged by small insects. It is expressed in percentage.  The produce containing such weevilled quantity of grains do not fetch good price.

The quantum of presence of these -parameters in the grains defines the quality of produce. Lower the reading of above mentioned parameters better is the quality of produce and vice versa.

ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಮೆಕ್ಕೆಜೋಳ ಉತ್ಪನ್ನಕ್ಕೆ ನೈಜ ಬೆಲೆ ನಿರ್ಧರಣೆ

ಗುಣವಿಶ್ಲೇಷಣೆಯ ಅನುಕೂಲಗಳು ಮತ್ತು ಪ್ರಾಮುಖ್ಯತೆ ಕುರಿತು ಮಾಹಿತಿ ಕಲ್ಪಿಸುವ ಮುಂದುವರೆದ ಭಾಗವಾಗಿ ಈ ಸಂಚಿಕೆಯಲ್ಲಿ ಮೆಕ್ಕೆಜೋಳ ಉತ್ಪನ್ನದ ಗುಣವಿಶ್ಲೇಷಣೆಯ ಕಾರ್ಯವಿಧಾನದ, ಗುಣಧರ್ಮಗಳು ಮತ್ತು ಗುಣಧರ್ಮಗಳ ಮೌಲ್ಯಕ್ಕೆ ಅನುಗುಣವಾಗಿ ಬೆಲೆ ನಿರ್ಧರಣೆ ಬಗ್ಗೆ ಅಂಕಿಅಂಶಗಳೊಂದಿಗೆ ಸಮಗ್ರ ವಿವರಣೆ.
ಕರ್ನಾಟಕ ರಾಜ್ಯ ಮೆಕ್ಕೆಜೋಳ ಉತ್ಪದನೆಯಲ್ಲಿ ದೇಶದಲ್ಲಿಯೇ ಮುಂಚೂಣೆಯಲ್ಲಿದೆ. ದಾವಣಗೆರೆ, ಹಾವೇರಿ, ಚಿತ್ರದುರ್ಗ, ಬೆಳಗಾವಿ, ಬಳ್ಳಾರಿ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಚಾಮಾರಾಜನಗರ, ಮತ್ತು ಬಾಗಲಕೋಟೆ ಜಿಲ್ಲೆಗಳ ಭೂ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯನ್ನು ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಜೋಳದ ಉತ್ಪನ್ನವನ್ನು ಆಹಾರಕ್ಕಾಗಿ, ಜಾನುವಾರುಗಳಿಗೆ ಮೇವು, ಇತರೆ ಪ್ರಾಣೆಗಳ ಆಹಾರವಾಗಿ ಮತ್ತು ಕೈಗಾರಿಕೆಗಳ ಬಳಿಕೆಗಾಗಿ ಸ್ಟಾರ್ಚ್ (ಪಿಷ್ಟ) ಎಸ್ಟ್ರಾಕ್ಷನ್‍ಗಾಗಿ ವಿವಿಧ ನಮೋನೆಗಳಲ್ಲಿ ಬೇಡಿಕೆ ಇರುವ ಏಕದಳ ಧಾನ್ಯವಾಗಿದೆ. ದಾವಣಗೆರೆ, ರಾಣೇಬೆನ್ನೂರು ಮತ್ತು ಶಿಕಾರಿಪುರ ಮಾರುಕಟ್ಟೆಗಳಲ್ಲಿ ಅತಿ ಹೆಚ್ಚು ಆವಕವಾಗುವುದು ಸಾಮಾನ್ಯವಾಗಿದೆ.
ಬಾಗಲಕೋಟೆ, ಧಾರವಾಡ, ದಾವಣಗೆರೆ , ರಾಣೇಬೆನ್ನೂರು, ಚನ್ನಗಿರಿ, ಹರಪನಹಳ್ಳಿ. ಚನ್ನಗಿರಿ, ಕೊಟ್ಟೂರು, ಹೊಸದುರ್ಗ, ಶಿವಮೊಗ್ಗ ಕೃಷಿ ಮಾರುಕಟ್ಟೆಗಳಲ್ಲಿ ಮೇಕ್ಕೆಜೋಳ ಉಚಿತ ಗುಣವಿಶ್ಲೇಷಣೆಗಾಗಿ ಸೇವೆಗಾಗಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಈ ಪ್ರಯೋಗಾಲಯಗಳಲ್ಲಿ ಉತ್ಪನ್ನಗಳ ಗುಣವಿಶ್ಲೇಷಣೆ ಕಾರ್ಯವನ್ನು ಪರಣಿತಿ ಹೊಂದಿದ ನುರಿತತಜ್ಞರು ನಿರ್ವಹಿಸುತ್ತಿದ್ದಾರೆ.
ಉತ್ಪನ್ನವನ್ನು ರೈತರು ಮಾರುಕಟ್ಟೆಗೆ ರಾಶಿ/ಚೀಲಗಳಲ್ಲಿ ತರುತ್ತಾರೆ, ಇಂತಹ ಲಾಟ್‍ಗಳನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ (ಃIS) ಪ್ರಕಾರ ಉತ್ಪನ್ನದ ಮಾದರಿ ಸಂಗ್ರಹಣೆಯನ್ನು ಕೆಳೆಗಿನಂತೆ ಮಾಡಲಾಗುತ್ತದೆ.
ಮಾದರಿತೆಗೆಯುವ ವಿಧಾನ:
1. ಮಾರಾಟಗಾರರು ಮಾರಾಟಕ್ಕಾಗಿ ಮಾರುಕಟ್ಟೆಗೆತರುವ ಮೆಕ್ಕೆಜೋಳವನ್ನು ಪ್ಯಾಕ್ ಮಾಡಿ (ಗೋಣಿಚೀಲದಲ್ಲಿ) ತರಬಹುದು ಅಥವಾ ಹಾಗೆ ರಾಶಿ ರೂಪದಲ್ಲಿ ತರಬಹುದು, ಮಾದರಿ ತೆಗೆಯುವುದಕ್ಕಾಗಿ (ಸ್ಯಾಂಪಲ್) ಪ್ರತಿ ಲಾಟನ್ನು ಚೀಲ ಅಥವಾ ರಾಶಿ ರೂಪದಲ್ಲಿ ಪ್ರತ್ಯೇಕವಾಗಿ ಇಡುವುದು.
2. ಪ್ಯಾಕ್ ಮಾಡಿದರೂಪದಲ್ಲಿ ಲಾಟನ್ನು ತಂದಾಗ ಲಾಟ್‍ನಲ್ಲಿನ ಪ್ರತಿಚೀಲದÀ ಮೇಲ್ಭಾಗ, ಮಧ್ಯಭಾಗ ಮತ್ತು ಕೆಳಭಾಗದಿಂದ ಸಣ್ಣ ಪ್ರಮಾಣದಲ್ಲಿ ಉತ್ಪನ್ನ ತೆಗೆದು ಸ್ಯಾಂಪಲ್ ಸಿದ್ಧಪಡಿಸುವುದು ಮತ್ತು ಸರಿಯಾಗಿ ಮಿಶ್ರಣ ಮಾಡುವುದು. ಇದನ್ನು ಬಲ್ಕ್ ಸ್ಯಾಂಪಲ್ ಎಂದು ಕರೆಯಲಾಗುವುದು.
3. ಒಂದು ವೇಳೆ ಮೆಕ್ಕೆಜೋಳ ಲಾಟನ್ನು ರಾಶಿ ರೂಪದಲ್ಲಿತಂದಾಗ ಮಾದರಿಯನ್ನು ಕನಿಷ್ಠ ಪಕ್ಷ 7 ಭಾಗಗಳಿಂದ ಅಂದರೆ ಮುಂಭಾಗ, ಹಿಂಭಾಗ, ಎಡಭಾಗ, ಬಲಭಾಗ, ರಾಶಿಯ ತುದಿ, ಮಧ್ಯ ಹಾಗೂ ತಳಭಾಗಗಳಿಂದ ಸಂಗ್ರಹಿಸಿ, ನಂತರ ಈ ಮಾದರಿಯನ್ನು ಸರಿಯಾಗಿ ಮಿಶ್ರಣ ಮಾಡಿ ಬಲ್ಕ್ ಮಾದರಿಯನ್ನು ಸಂಗ್ರಹಿಸತಕ್ಕದ್ದು.
4. ಕಾಂಪೋಸಿಟ್ ಸ್ಯಾಂಪಲ್ ಸಿದ್ಧಪಡಿಸಲು ಬಲ್ಕ್ ಸ್ಯಾಂಪಲ್‍ನಿಂದ ಅಗತ್ಯವಿರುವ 1/2 ಕೆ.ಜಿ ಪ್ರಮಾಣದ ಉತ್ಪನ್ನ ತೆಗೆಯುವುದು.
5. ಸ್ಯಾಂಪಲ್ ಡಿವೈಡರ್‍ನಿಂದತಲಾ 100 ಗ್ರಾಂನಂತೆ 5 ಸಮಭಾಗಗಳಾಗಿ ವಿಂಗಡಿಸಲಾಗುವುದು.
6. ಒಂದು ವೇಳೆ ಸ್ಯಾಂಪಲ್ ಡಿವೈಡರ್ ಲಭ್ಯವಿಲ್ಲದಿದ್ದಲ್ಲಿ, ಕಾಂಪೋಸಿಟ್ ಮಾದರಿ ಮಿಶ್ರಣವನ್ನು 12 ಮಿ.ಮಿ. ರಿಂದ 25 ಮಿ.ಮಿ. ಗಾತ್ರದ ವೃತ್ತಾಕಾರವಾಗಿ ರಚಿಸುವುದು. ಅದರಲ್ಲಿ ವಿವಿಧ ಭಾಗಗಳಿಂದ ಅಂದರೆ ಮಧ್ಯಭಾಗ, ಎಡಭಾಗ ಮತ್ತು ಬಲಭಾಗಗಳಿಂದ ಇತರೆಯಾವುದೇ ಅನ್ಯ ಪದಾರ್ಥ ಉಳಿಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿ ತೆಗೆಯುವುದು.
7. ಪ್ರತಿ ಭಾಗವನ್ನು ಪ್ರತ್ಯೇಕವಾಗಿ ಪಾರದರ್ಶಕ ಪ್ಲಾಸ್ಟಿಕ್ ಬ್ಯಾಗ್‍ಗಳಲ್ಲಿ ಪ್ಯಾಕ್ ಮಾಡಿ ಪ್ರತಿಯೊಂದು ಬ್ಯಾಗಿಗೆ ಗುರುತಿನ ಚೀಟಿಯನ್ನು ಲಗತ್ತಿಸಿ ಸೀಲ್ ಮಾಡತಕ್ಕದ್ದು.

8. ಮಾದರಿಯನ್ನು ಸಂಗ್ರಹಿಸಿದ ವಿವರಗಳನ್ನು ದಾಖಲು ಮಾಡಲು ರಿಜಿಸ್ಟರನ್ನು ನಿರ್ವಹಿಸುವುದು.

ಗುಣ ವಿಶ್ಲೇಷಣಾ ವಿಧಾನ:
ಪ್ರಥಮವಾಗಿ ಮಾದರಿಯನ್ನು ಪರೀಕ್ಷಿಸಿದಾಗ ಯಾವುದೇಜೀವವಿರುವ ಕ್ರಿಮಿಕೀಟಗಳ ಲಭ್ಯತೆ ಬಗ್ಗೆ ಪರೀಕ್ಷೆಗೆ ಒಳಪಡಿಸಲಾಗುವುದು ಒಂದು ವೇಳೆ ಜೀವವಿರುವ ಕ್ರಿಮಿಕೀಟಗಳು ಪತ್ತೆಯಾದಲ್ಲಿಅಂತಹ ಲಾಟನ್ನು ತಿರಸ್ಕರಿಸಲಾಗುತ್ತದೆ ಹಾಗೂ ಯಾವುದೇ ಕೃತಕ ರಾಸಾಯನಿಕ ಬಣ್ಣ ಮತ್ತು ಬೂಸ್ಟ್ ಹಿಡಿದ ಬಗ್ಗೆ ಗುಣವಿಶ್ಲೇಷಣೆ ಸಂಸ್ಥೆಯು ಉತ್ಪನ್ನದ ಗುಣಧರ್ಮಗಳ ವಿವರಗಳನ್ನು ನಮೂದಿಸಿದ ಬಳಿಕ ರೈತರಿಗೆ ಉತ್ಪನ್ನದ ಗುಣವಿಶ್ಲೇಷಣೆ ಪ್ರಮಾಣ ಪತ್ರವನ್ನು ನೀಡುವ ವ್ಯವಸ್ಥೆಯನ್ನುಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಕಲ್ಪಿಸಲಾಗಿದೆ. ಉತ್ಪನ್ನದ ಗುಣವಿಶ್ಲೇಷಣೆಗೆ ಸಂಬಂಧಿಸಿದಂತೆ ಪ್ರಮಾಣ ಪತ್ರದಲ್ಲಿ ಊರ್ಜಿತವಿರುವ ಅವದಿಯನ್ನು ನಮೂದಿಸಲಾಗುವುದು.
ಮಾದರಿ ಸಂಗ್ರಹ ಮತ್ತು ಪರೀಕ್ಷೆಯನ್ನು ಮೂರನೇ ವ್ಯಕ್ತಿ / ಸ್ವತಂತ್ರ್ಯವಾದ ಸಂಸ್ಥೆಯು ನಿರ್ವಹಿಸುತ್ತದೆ, ಮಾದರಿ ಸಂಗ್ರಹಣ ಮತ್ತು ಪರೀಕ್ಷೆಯನ್ನು ಃIS ವಿಧಾನದ ಪ್ರಕಾರ ನುರಿತ ಅಸ್ಸೆಯರ್ಸ್ ನಿಂದ ಕೈಗೊಳ್ಳಲಾಗುತ್ತದೆ, ಪರೀಕ್ಷೆ ವರದಿಯ ನ್ಯೂನತೆ ಮತ್ತು ಇತರೆ ತೊಂದರೆಗಳಿದ್ದರೆ ಸದರಿ ಸಂಸ್ಥೆಯೇ ಜವಬ್ದಾರಿಯ ಹೊಣೆಗಾರಿಕೆಯನ್ನು ಹೊರಲಿದೆ.
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡುವ ವಿಧಾನ:
ಉತ್ಪನ್ನದಗುಣಮಟ್ಟ ಮತ್ತು ಗುಣಧರ್ಮಗಳ ವಿಶ್ಲೇಷಣೆ ಪರೀಕ್ಷೆ ಬಳಿಕ ಫಲಿತಾಂಶದ ವಿವರಗಳನ್ನು ಏಕೀಕೃತ ಮಾರುಕಟ್ಟೆ ವೇದಿಕೆ(ಇ-ಮಾರುಕಟ್ಟೆ)ಯಲ್ಲಿನ ಆನ್‍ಲೈನ್‍ನಲ್ಲಿ ಖರೀದಿದಾರರ/ವರ್ತಕರ ಪರೀಶಿಲನೆಗಾಗಿ ದಾಖಲು ಮಾಡಲಾಗುತ್ತದೆ.
ಗುಣವಿಶ್ಲೇಷಣಾ ವಿವಾದಗಳು, ಇನ್ನಿತರೆ ವಿಷಯಗಳು ಮತ್ತು ತೊಂದರೆಗಳ ನಿವಾರಣೆ :
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತುಅಭಿವೃದ್ಧಿ) ನಿಯಮಗಳು, 1968ರ ನಿಯಮ 91-ಪಿ(1)ರನ್ವಯ ರಚಿಸಲಾಗಿರುವ ವಿವಾದ ಪರಿಶೀಲನಾ ಸಮಿತಿಯು ನಿಯಮ 91-ಪಿ(7)ರನ್ವಯ ಕೃಷಿ ಮಾರಾಟ ನಿದೇಶಕರು ನೀಡಿರುವಂತಹ ಮಾರ್ಗದರ್ಶಿ ಸೂಚನೆಗಳನ್ವಯ ವಿವಾದಗಳನ್ನು ತೀರ್ಮಾನಿಸಲಾಗುತ್ತದೆ.
ಇದಕ್ಕಾಗಿ ಉತ್ಪನ್ನಗಳ ಮಾರಾಟಗಾರರುಆಹಾರ ಮತ್ತು ಸುರಕ್ಷತಾ ಪ್ರಮಾಣಗಳ ಕಾಯ್ದೆ 2006 ಹಾಗೂ ಸಂನಂಧಿಸಿದ ಇತರೆ ಕಾನೂನಿನಲ್ಲಿ ನಿಗದಿ ಪಡಿಸಿದ ನಿಯಮಗಳನ್ನು ಪಾಲಿಸುವುದುಕಡಾಯವಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿಯಾವುದೇ ಆದೇಶಗಳನ್ನು ಜಾರಿಗೊಳಿಸುವಲ್ಲಿ ಉದ್ಬವಿಸಬಹುದಾದ ಯಾವುದೇ ತೊಂದರೆಗಳನ್ನು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರ ಗಮನಕ್ಕೆ ತರತಕ್ಕದ್ದು ಹಾಗೂ ಅವರು ಸೂಕ್ತವೆನಿಸುವ ಸ್ಪಷ್ಠೀಕರಣವನ್ನು ನೀಡುವರು.
ಉತ್ಪನ್ನದ ಮಾದರಿ ವಿಲೇವಾರಿ :
ಏಕೀಕೃತ ಮಾರಕಟ್ಟೆ ವೇದಿಕೆಯಲ್ಲಿಉತ್ಪನ್ನ ಮಾರಾಟವಾಗಿಖರೀದಿದಾರರಿಗೆ ವಿಲೇವಾರಿ ಮಾಡಿದ ನಂತರ ಉತ್ಪನ್ನವನ್ನು ಕಾರ್ಯ ಪೂರ್ಣಗೊಳ್ಳುತ್ತದೆ. ಉತ್ಪನ್ನವನ್ನು ಖರೀದಿದಾರರಿಗೆ ವಿಲೇವಾರಿ ಮಾಡಿದ 15 ದಿನಗಳ ನಂತರ ಮಾರುಕಟ್ಟೆಯಲ್ಲಿ ವರ್ತಕರ ಪರಿಶೀಲನೆಗಾಗಿ ಸಂಗ್ರಹಿದ ಮಾದರಿ, ವ್ಯಾಜ್ಯ ನಿರ್ಣಯಕ್ಕಾಗಿ ಕಾಯ್ದಿರಿಸಿದ ಮಾದರಿ, ಗುಣವಿಶ್ಲೇಷಣೆ ಸಂಸ್ಥೆಗೆ ನೀಡಿದ ಮಾದರಿಯ ಪ್ರಮಾಣಗಳನ್ನು ಒಟ್ಟುಗೂಡಿಸಿ ವಿಲೇವಾರಿ ಮಾಡಲಾಗುವುದು.

ಮೆಕ್ಕೆಜೋಳದ ನಿರ್ದಿಷ್ಟ ಗುಣಧರ್ಮಗಳು:
1. ಅನ್ಯ ಪದಾರ್ಥಗಳು (ಶೇಕಡವಾರು ಪ್ರಮಾಣ): ಎಲೆ, ಕಾಂಡ, ಹುಲ್ಲು, ಸಿಪ್ಪೆ, ಧೂಳು, ಕಲ್ಲು, ಮಣ್ಣಿನಉಂಡೆ ಹಾಗೂ ಇತರೆ ಕಲ್ಮಶಗಳು.

2. ಇತರೆತಿನ್ನಬಹುದಾದ ಕಾಳುಗಳ ಮಿಶ್ರಣ (ಶೇಕಡವಾರು ಪ್ರಮಾಣ): ಮೂಲ ಮೆಕ್ಕೆಜೋಳದ ಇತರೆತಿನ್ನಬಹುದಾದ ಕಾಳುಗಳ ಮಿಶ್ರಣ.
3. ಹಾಳದ ಕಾಳುಗಳು (ಶೇಕಡವಾರು ಪ್ರಮಾಣ): ಕಾಳುಗಳು ಆಂತರಿಕವಾಗಿ ಹಾಳಾಗಿದ್ದು ಬಣ್ಣ ಕಳೆದುಕೊಂಡು ಗುಣಮಟ್ಟ ಹಾಳಾಗಿರುವುದು.

4. ಬಣ್ಣ ಕಳೆದುಕೊಂಡ ಮತ್ತು ಸ್ವಲ್ಟ ಹಾಳದ ಕಾಳುಗಳು (ಶೇಕಡವಾರು ಪ್ರಮಾಣ): ಕಾಳುಗಳು ಪೂರ್ಣ ಪ್ರಮಾಣದಲ್ಲಿ ನ್ಶೆಜ್ಯ ಬಣ್ಣವನ್ನು ಬಿಟ್ಟಿರುವುದು ಮತ್ತು ಸ್ವಲ್ಪ ಪ್ರಮಾಣದಲ್ಲಿ ಚೂರಾಗಿರುವುದು.
5. ಅಪರಿಪಕ್ವ ಹಾಗೂ ಸುರುಟಿದ ಕಾಳುಗಳು (ಶೇಕಡವಾರು ಪ್ರಮಾಣ): ಕಾಳುಗಳು ಪೂರ್ಣ ಪ್ರಮಾಣದಲ್ಲಿ ಪಕ್ವತೆಇಲ್ಲದ ಹಾಗೂ ಸುಕ್ಕುಗಟ್ಟಿದ ಕಾಳುಗಳ ಪ್ರಮಾಣ.

6. ಕ್ರಿಮಿಕೀಟಗಳಿಂದ ಹಾಳಾದ ಕಾಳುಗಳು (ಶೇಕಡವಾರು ಪ್ರಮಾಣ): ಕ್ರಿಮಿಕೀಟಗಳಿಂದ ಸಂಪೂರ್ಣವಾಗಿ ಮತ್ತು ಭಾಗಶಃ ಹಾನಿಗೊಳಗಾದ ಕಾಳುಗಳು.

7. ತೇವಾಂಶ:(ಶೇಕಡವಾರು ಪ್ರಮಾಣ)
ಮೆಕ್ಕೆಜೋಳ ಉತ್ಪನ್ನದ ಮಾದರಿಯಿಂದ ಸೂಕ್ತ ಕಾಳುಗಳನ್ನು ತೆಗೆದು, ಪ್ರತ್ಯೇಕವಾಗಿತೂಕ ಮಾಡಿಕೊಳ್ಳಲಾಗಿತ್ತದೆ. ಅದನ್ನು ವೈಜ್ಞಾನಿಕ ಪ್ರಯೋಗಾಲಯದಲ್ಲಿ ಬಳಕೆ ಮಾಡುವ ಓವೆನ್‍ನಲ್ಲಿ 100 ರಿಂದ 110 ಡಿಗ್ರೀ ಉಷ್ಣಾಂಶ ತಾಪಮಾನದಲ್ಲಿ ಸುಮಾರು 2 ಗಂಟೆ ಸಮಯದ ವರೆಗೆ ಒಣಗಿಸಲಾಗುತ್ತೆದೆ. ಬಳಿಕ ಒಣಗಿಸಿದ ಕಾಳುಗಳನ್ನು ತಣೆಸಿ ತೂಕ ಮಾಡಲಾಗಿತ್ತದೆ. ಒಣಗಿಸುವ ಮುನ್ನಾ ಉತ್ಪನ್ನದ ತೂಕ ಮತ್ತು ಒಣಗಿಸಿದ ಮೇಲೆ ಬರುವ ತೂಕದ ವ್ಯತ್ಯಾಸದ ಭಾಗಗಳಿಂದ ಮೆಕ್ಕೆಜೋಳ ಉತ್ಪನ್ನದಲ್ಲಿನ ತೇವಾಂಶದ ಶೇಕಡವಾರನ್ನು ಕಂಡುಹಿಡಿಯಾಲಾಗುವುದು.
ಗುಣಧರ್ಮಗಳ ಪ್ರಮಾಣದ ಮೇಲೆ ಬೆಲೆ ನಿರ್ಧಾರಣೆ:
ಮೆಕ್ಕೆಜೋಳ ಉತ್ಪನ್ನದಲ್ಲಿ ತೇವಾಂಶ, ಅನ್ಯಪದಾರ್ಥಗಳು, ಅಪರಿಪಕ್ವ ಹಾಗೂ ಸುಕ್ಕುಕಟ್ಟಿದ ಕಾಯಿಗಳ ಪ್ರಮಾಣ ಕಡಿಮೆ ಇದ್ದಷ್ಟು ಮತ್ತು ಉತ್ಪನ್ನದಲ್ಲಿ ಬೀಜಗಳ ಗುಣಮಟ್ಟ ಲಭ್ಯತೆ ಹೆಚ್ಚಿಗಿದ್ದರೆ, ಮಾರುಕಟ್ಟೆಯಲ್ಲಿ ಉತ್ಪನ್ನದ ಮೌಲ್ಯಕೂಡ ಹೆಚ್ಚುತ್ತದೆ.
ಉದಾರಣೆ : ಮೆಕ್ಕೆಜೋಳ ಉತ್ಪನ್ನದ ಗುಣಧರ್ಮಗಳ ಪ್ರಮಾಣ ಮತ್ತು ಲಾಟ್‍ಗಳಿಗೆ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ಆನ್‍ಲೈನ್ ಟೆಂಡರ್‍ನಲ್ಲಿ ದೊರೆತ ನೈಜ ಬೆಲೆ ಪಡೆದಿರುವ ಕುರಿತು ಒಂದು ವಿಶ್ಲೇಷಣೆ ವಿವರವನ್ನು ಕೆಳಗಿನ ರೇಖಾ ಚಿತ್ರಗಳಲ್ಲಿ ಗಮನಿಸಬಹುದು.

ಗದಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ಮೆಕ್ಕೆಜೋಳ ಬೆಳೆಯನ್ನು ಗುಣವಿಶ್ಲೇಷಣೆ ಮಾಡಿಸಿ ಆನ್‍ಲೈನ್‍ನಲ್ಲಿ ಮಾರಾಟ ಮಾಡಿದ್ದರಿಂದ ದೊರೆತ ನೈಜ ಬೆಲೆಯ ಕುರಿತ ಮಾಹಿತಿ :
ರೈತರು ಬೇಳೆಯನ್ನು ಸರಿಯಾಗಿ ಸ್ವಚ್ಚ ಮಾಡಿ, ಅನ್ಯಪದಾರ್ಥಗಳ ತೆಗೆದು, ಮಾರುಕಟ್ಟೆಯಲ್ಲಿ ಗುಣವಿಶ್ಲೇಷಣೆ ಮಾಡಿಸಿದ ಉತ್ಪನ್ನದ ಲಾಟ್‍ಗಳಿಗೆ ಸ್ಪರ್ಧಾತ್ಮಕ ಧಾರಣೆ ಲಭ್ಯವಾಗಿರುವ ಅಂಕಿಅಂಶಗಳನ್ನು ಮೇಲಿನ ರೇಖಾಚಿತ್ರದಲ್ಲಿ ಗಮನಿಸ ಬಹುದಾಗಿದೆ.
ರೈತ ಭಾಂದವರಿಗೆ ಸಲಹೆ :
• ಬೆಳೆಯನ್ನು ಮಾರುಕಟ್ಟೆಗೆ ಮಾರಾಟಕ್ಕೆ ತರುವ ಮುನ್ನಾ ಒಣಗಿಸಿ, ಸ್ವಚ್ಚಮಾಡಿ, ಕಸಕಡಿಯನ್ನು ವಿಂಗಡಿಸಿ ಪ್ಯಾಕ್ ಮಾಡಿ ತರುವುದು.
• ಉತ್ಪನ್ನವನ್ನು ತಪ್ಪದೇ ಗುಣವಿಶ್ಲೇಷಣೆ ಮಾಡಿಸುವುದು, ಏಕೀಕೃತ ಮಾರುಕಟ್ಟೆಯಲ್ಲಿ ಈ ಸೇವೆ ರೈತ ಭಾಂದವರಿಗೆ ಉಚಿತವಾಗಿ ನೀಡಲಾಗುತ್ತಿದೆ.
• ಉತ್ಪನ್ನದ ಗುಣವಿಶ್ಲೇಷಣೆ ವಿವರಗಳನ್ನು ಆನ್‍ಲೈನ್‍ನಲ್ಲಿ ಪ್ರಸಾರ ಮಾಡಲಾಗುವುದು, ರಾಜ್ಯದಲ್ಲಿನ ದೂರದ ಖರೀದಿದಾರರು ಮತ್ತು ಹೊರಗಿನ ಖರೀದೀದಾರರು ಆನ್‍ಲೈನ್‍ನಲ್ಲಿ ಉತ್ಪನ್ನದ ಮಾಹಿತಿಯನ್ನು ಪರೀಶಿಲಿಸಿ , ಇ-ಟೆಂಡರ್‍ನಲ್ಲಿ ಭಾಗವಹಿಸುತ್ತಾರೆ. ಈ ಮೂಲಕ ಖರೀದಿಯಲ್ಲಿ ಸ್ಪರ್ಧೆ ಹೆಚ್ಚಾಗಿ ನಿಮ್ಮ ಲಾಟ್‍ಗೆ ನೈಜ ಬೆಲೆ ದೊರೆಯಲಿದೆ.

 

ಗುಣಧರ್ಮಗಳ ಆಧಾರದ ಮೇಲೆ ಹೆಸರುಕಾಳು ಉತ್ಪನ್ನದ ಬೆಲೆ ನಿರ್ಧರಣೆ ಶ್ರೀ. ಮನೋಜ್‍ರಾಜನ್, ಬೆಂಗಳೂರು.

ಗುಣವಿಶ್ಲೇಷಣೆಯ ಅನುಕೂಲಗಳು ಮತ್ತು ಪ್ರಾಮುಖ್ಯತೆ ಕುರಿತು ಮಾಹಿತಿ ಕಲ್ಪಿಸುವ ಮುಂದುವರೆದ ಭಾಗವಾಗಿ ಈ ಸಂಚಿಕೆಯಲ್ಲಿ ಹೆಸರುಕಾಳು ಉತ್ಪನ್ನದ ಗುಣವಿಶ್ಲೇಷಣೆಯ ಕಾರ್ಯವಿಧಾನದ, ಗುಣಧರ್ಮಗಳು ಮತ್ತು ಗುಣಧರ್ಮಗಳ ಮೌಲ್ಯಕ್ಕೆ ಅನುಗುಣವಾಗಿ ಬೆಲೆ ನಿರ್ಧರಣೆ ಬಗ್ಗೆ ಅಂಕಿಅಂಶಗಳೊಂದಿಗೆ ಸಮಗ್ರ ವಿವರಣೆ.

ಕರ್ನಾಟಕ ರಾಜ್ಯದಲ್ಲಿ ಹೆಸರುಕಾಳು ಉತ್ಪನ್ನ ಆವಕವಾಗುವ ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಾದ ಗದಗ, ಹುಬ್ಬಳ್ಳಿ, ರೋಣ, ಲಕ್ಷ್ಮೇಶ್ವರ, ಮುಂಡರಗಿ, ಬಳ್ಳಾರಿ, ನರಗುಂದ, ಬಾಗಲಕೋಟೆ, ಬೀದರ್, ಯಾದಗಿರಿ, ಶಿವಮೊಗ್ಗ, ಹೊಸದುರ್ಗ ಮತ್ತು ರಾಮದುರ್ಗ ಮಾರುಕಟ್ಟೆಗಳಲ್ಲಿ ಉತ್ಪನ್ನಗಳ ಗುಣವಿಶ್ಲೇಷಣೆಗಾಗಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಈ ಪ್ರಯೋಗಾಲಯಗಳಲ್ಲಿ ಉತ್ಪನ್ನಗಳ ಗುಣವಿಶ್ಲೇಷಣೆ ಕಾರ್ಯವನ್ನು ಪರಿಣಿತಿ ಹೊಂದಿದ ನುರಿತ ತಜ್ಞರು ನಿರ್ವಹಿಸುತ್ತಿದ್ದಾರೆ.

ಉತ್ಪನ್ನವನ್ನು ರೈತರು ಮಾರುಕಟ್ಟೆಗೆ ರಾಶಿ/ಚೀಲಗಳಲ್ಲಿ ತರುತ್ತಾರೆ, ಇಂತಹ ಲಾಟ್‍ಗಳನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ (BIS) ಪ್ರಕಾರ ಉತ್ಪನ್ನದ ಮಾದರಿ ಸಂಗ್ರಹಣೆಯನ್ನು ಕೆಳೆಗಿನಂತೆ ಮಾಡಲಾಗುತ್ತದೆ.

ಮಾದರಿ ತೆಗೆಯುವ ವಿಧಾನ:
• ಹೆಸರುಕಾಳು ಉತ್ಪನ್ನವನ್ನು ಮಾರಾಟಕ್ಕಾಗಿ ಮಾರುಕಟ್ಟೆಗೆ ತರುವ ಮುನ್ನ ಸರಿಯಾಗಿ ಒಣಗಿಸಿ, ಸ್ವಚ್ಚಮಾಡಿ, ಕಸಕಡ್ಡಿಯನ್ನು ತೆಗೆದು ಚೀಲದಲ್ಲಿ ಪ್ಯಾಕ್ ಮಾಡಿ ಮಾರುಕಟ್ಟೆಗೆ ರೈತರು ತರಬೇಕು.
• ರೈತರು ಮಾರಾಟಕ್ಕಾಗಿ ಮಾರುಕಟ್ಟೆಗೆ ತಂದ ಹೆಸರುಕಾಳು ಉತ್ಪನ್ನದಿಂದ ಮಾದರಿ ತೆಗೆಯುವುದಕ್ಕಾಗಿ (ಸ್ಯಾಂಪಲ್) ಪ್ರತಿ ಲಾಟನ್ನು ಚೀಲ ಅಥವಾ ರಾಶಿ ರೂಪದಲ್ಲಿ ಪ್ರತ್ಯೇಕವಾಗಿ ಇಡಬೇಕು.
• ಪ್ಯಾಕ್ ಮಾಡಿದ ರೂಪದಲ್ಲಿ ಲಾಟನ್ನು ತಂದಾಗ ಲಾಟ್‍ನಲ್ಲಿನ ಪ್ರತಿ ಚೀಲದ ಮೇಲ್ಭಾಗ, ಮಧ್ಯಭಾಗ ಮತ್ತು ಕೆಳಭಾಗದಿಂದ ಸಣ್ಣ ಪ್ರಮಾಣದಲ್ಲಿ ಉತ್ಪನ್ನ ತೆಗೆದು ಸ್ಯಾಂಪಲ್ ಸಿದ್ದಪಡಿಸಲಾಗುತ್ತದೆ. ಬಳಿಕ ಹೆಸರುಕಾಳು ಉತ್ಪನ್ನವನ್ನು ಸರಿಯಾಗಿ ಮಿಶ್ರಣ ಮಾಡಿ, ಅದನ್ನು ಬಲ್ಕ್ ಸ್ಯಾಂಪಲ್ ಎಂದು ಕೆರೆಯುತ್ತಾರೆ.
• ಒಂದು ವೇಳೆ ಉತ್ಪನ್ನವು ರಾಶಿ ರೂಪದಲ್ಲಿದರೆ, ಅದರ ಮಾದರಿಯನ್ನು ಕನಿಷ್ಠ ಪಕ್ಷ 7 ಭಾಗಗಳಿಂದ ಅಂದರೆ ಮುಂಭಾಗ, ಹಿಂಭಾಗ, ಎಡಭಾಗ, ಬಲಭಾಗ, ರಾಶಿಯ ತುದಿ, ಮಧ್ಯ ಹಾಗೂ ತಳಭಾಗಗಳಿಂದ ಸ್ಯಾಂಪಲ್ ಸಂಗ್ರಹಿಸಿದ ನಂತರ ಮಾದರಿಯನ್ನು ಸರಿಯಾಗಿ ಮಿಶ್ರಣ ಮಾಡಿ ಬಲ್ಕ್ ಮಾದರಿಯನ್ನು ಸಂಗ್ರಹಿಸಲಾಗುತ್ತದೆ.
• ಕಾಂಪೋಸಿಟ್ ಸ್ಯಾಂಪಲ್ ಸಿದ್ದಪಡಿಸಲು ಬಲ್ಕ್ ಸ್ಯಾಂಪಲ್‍ನಿಂದ 1/2 ಕೆ.ಜಿ. ಹೆಸರುಕಾಳು ಉತ್ಪನ್ನವನ್ನು ತೆಗೆಯಲಾಗುತ್ತದೆ.
• ಸ್ಯಾಂಪಲ್ ಡಿವೈಡರ್‍ನಿಂದ ತಲಾ 100 ಗ್ರಾಂ ನಂತೆ 5 ಸಮಭಾಗಗಳಾಗಿ ವಿಂಗಡಿಸಲಾಗುವುದು.
• ಪ್ರತಿ ಭಾಗವನ್ನು ಪ್ರತ್ಯೇಕವಾಗಿ ಪಾರದರ್ಶಕ ಪ್ಲಾಸ್ಟಿಕ್ ಬ್ಯಾಗ್‍ಗಳಲ್ಲಿ ಪ್ಯಾಕ್ ಮಾಡಲಾಗುವುದು. ಪ್ರತಿಯೊಂದು ಪ್ಲಾಸ್ಟಿಕ್ ಚೀಲಕ್ಕೆ ಗುರುತಿನ ಚೀಟಿಯನ್ನು ಲಗತ್ತಿಸಿ ಮುದ್ರೆ ಹಾಕಲಾಗುತ್ತದೆ. ಈ ರೀತಿ ಸಂಗ್ರಹಿಸಿದ ಉತ್ಪನ್ನದ ಒಂದು ಮಾದರಿಯನ್ನು ರೈತರಿಗೆ, ಒಂದು ಪ್ಯಾಕೆಟ್ ಎಪಿಎಂಸಿಯಲ್ಲಿ ವರ್ತಕರ ಪರಿಶೀಲನೆಗಾಗಿ, ಒಂದು ಮಾದರಿಯನ್ನು ಎಪಿಎಂಸಿಯಲ್ಲಿ ವಿವಾದ ನಿರ್ಣಯಕ್ಕಾಗಿ ಕಾಯ್ದಿರಿಸಲಾಗುತ್ತದೆ. ಮತ್ತೊಂದು ಮಾದರಿಯನ್ನು ಗುಣ ವಿಶ್ಲೇಷಣೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಒಂದು ಮಾದರಿಯನ್ನು ಉತ್ಪನ್ನ ಗುಣವಿಶ್ಲೇಷಣೆ ಪ್ರಯೋಗಾಲಯದಲ್ಲಿ ದಾಖಲೆಗಾಗಿ ಸಂಗ್ರಹಿಸಲಾಗುತ್ತದೆ.

ಪರೀಕ್ಷೆ ವಿಧಾನ :

ಹೆಸರುಕಾಳು ಮಾದರಿಯನ್ನು ಪರೀಕ್ಷಿಸಿದಾಗ ಯಾವುದೇ ಜೀವವಿರುವ ಕ್ರಿಮಿಕೀಟಗಳ ಉತ್ಪನ್ನದಲ್ಲಿ ಲಭ್ಯತೆ ಬಗ್ಗೆ ಪರೀಕ್ಷೆ ವೇಳೆ ಖಾತ್ರಿಗೆ  ಒಳಪಡಿಸಲಾಗುತ್ತದೆ. ಒಂದು ವೇಳೆ ಜೀವವಿರುವ ಕ್ರಿಮಿಕೀಟಗಳು ಉತ್ಪನ್ನದಲ್ಲಿ ಪತ್ತೆಯಾದಲ್ಲಿ ಅಂತಹ ಲಾಟ್‍ನ್ನು ಗುಣವಿಶ್ಲೇಷಣೆ ಪ್ರಕ್ರಿಯೆಯಿಂದ ತಿರಸ್ಕರಿಸಲಾಗುತ್ತದೆ. ಕೃಷಿ ಉತ್ಪನ್ನದಲ್ಲಿ ಯಾವುದೇ ಕೃತಕ ರಾಸಾಯನಿಕ ಬಣ್ಣ ಅಥವಾ ಬೂಸ್ಟ್ ಹಿಡಿದ ಬಗ್ಗೆ ಪರೀಕ್ಷಿಸಿ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಯನ್ನು ಏಕೀಕೃತ ಮಾರುಕಟ್ಟೆ ವೇದಿಕೆಯ ಪ್ರಯೋಗಾಲಯಗಳಲ್ಲಿ ಕಲ್ಪಿಸಲಾಗಿದೆ.
ಗುಣವಿಶ್ಲೇಷಣೆ ಸಂಸ್ಥೆಯು ಉತ್ಪನ್ನದ ಗುಣಧರ್ಮಗಳ ವಿವರಗಳನ್ನು ನಮೂದಿಸಿದ ಬಳಿಕ ರೈತರಿಗೆ ಉತ್ಪನ್ನದ ಗುಣವಿಶ್ಲೇಷಣೆ ಪ್ರಮಾಣ ಪತ್ರವನ್ನು ನೀಡುವ ವ್ಯವಸ್ಥೆಯನ್ನು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಕಲ್ಪಿಸಲಾಗಿದೆ. ಉತ್ಪನ್ನದ ಗುಣವಿಶ್ಲೇಷಣೆಗೆ ಸಂಬಂಧಿಸಿದಂತೆ ಪ್ರಮಾಣ ಪತ್ರದಲ್ಲಿ ಊರ್ಜಿತವಿರುವ ಅವಧಿಯನ್ನು ನಮೂದಿಸಲಾಗುವುದು.
ಮಾದರಿ ಸಂಗ್ರಹಣೆ ಮತ್ತು ಪರೀಕ್ಷೆಯನ್ನು ಮೂರನೇ ವ್ಯಕ್ತಿ / ಸ್ವತಂತ್ರ್ಯವಾದ ಸಂಸ್ಥೆಯು ನಿರ್ವಹಿಸುತ್ತದೆ, ಮಾದರಿ ಸಂಗ್ರಹಣ ಮತ್ತು ಪರೀಕ್ಷೆಯನ್ನು BIS ವಿಧಾನದ ಪ್ರಕಾರ ನುರಿತ ಅಸ್ಸೆಯರ್ಸ್‍ನಿಂದ ಕೈಗೊಳ್ಳಲಾಗುತ್ತದೆ, ಪರೀಕ್ಷೆ ವರದಿಯ ನ್ಯೂನತೆ ಮತ್ತು ಇತರೆ ತೊಂದರೆಗಳಿದ್ದರೆ ಸದರಿ ಸಂಸ್ಥೆಯೇ ಜವಾಬ್ದಾರಿಯ ಹೊಣೆಗಾರಿಕೆಯನ್ನು ಹೊರಲಿದೆ.

ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡುವ ವಿಧಾನ:
ಉತ್ಪನ್ನದ ಗುಣಮಟ್ಟ ಮತ್ತು ಗುಣಧರ್ಮಗಳ ವಿಶ್ಲೇಷಣೆ ಪರೀಕ್ಷೆ ಬಳಿಕ ಫಲಿತಾಂಶದ ವಿವರಗಳನ್ನು ಏಕೀಕೃತ ಮಾರುಕಟ್ಟೆ ವೇದಿಕೆ (ಇ-ಮಾರುಕಟ್ಟೆ)ಯಲ್ಲಿನ ಆನ್‍ಲೈನ್‍ನಲ್ಲಿ ಖರೀದಿದಾರರ/ವರ್ತಕರ ಪರಿಶೀಲನೆಗಾಗಿ ದಾಖಲು ಮಾಡಲಾಗುತ್ತದೆ.

ಗುಣವಿಶ್ಲೇಷಣಾ ವಿವಾದಗಳು, ಇನ್ನಿತರೆ ವಿಷಯಗಳು ಮತ್ತು ತೊಂದರೆಗಳ ನಿವಾರಣೆ :
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳು, 1968ರ ನಿಯಮ 91-ಪಿ (1)ರನ್ವಯ ರಚಿಸಲಾಗಿರುವ ವಿವಾದ ಪರಿಶೀಲನಾ ಸಮಿತಿಯು ನಿಯಮ 91-ಪಿ(7)ರನ್ವಯ ಕೃಷಿ ಮಾರಾಟ ನಿರ್ದೇಶಕರು ನೀಡಿರುವಂತಹ ಮಾರ್ಗದರ್ಶಿ ಸೂಚನೆಗಳನ್ವಯ ವಿವಾದಗಳನ್ನು ತೀರ್ಮಾನಿಸಲಾಗುತ್ತದೆ.
ಇದಕ್ಕಾಗಿ ಉತ್ಪನ್ನಗಳ ಮಾರಾಟಗಾರರು ಆಹಾರ ಮತ್ತು ಸುರಕ್ಷತಾ ಪ್ರಮಾಣಗಳ ಕಾಯ್ದೆ 2006 ಹಾಗೂ ಸಂಭಂಧಿಸಿದ ಇತರೆ ಕಾನೂನಿನಲ್ಲಿ ನಿಗದಿ ಪಡಿಸಿದ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಯಾವುದೇ ಆದೇಶಗಳನ್ನು ಜಾರಿಗೊಳಿಸುವಲ್ಲಿ ಉದ್ಬವಿಸಬಹುದಾದ ಯಾವುದೇ ತೊಂದರೆಗಳನ್ನು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರ ಗಮನಕ್ಕೆ ತರತಕ್ಕದ್ದು ಹಾಗೂ ಅವರು ಸೂಕ್ತವೆನಿಸುವ ಸ್ಪಷ್ಟೀಕರಣವನ್ನು ನೀಡುವರು.

ಹೆಸರುಕಾಳು ಉತ್ಪನ್ನದ ಪರಿಶೀಲಿಸುವ ನಿರ್ದಿಷ್ಟ ಗುಣಧರ್ಮಗಳು :

• ಉತ್ಪನ್ನದಲ್ಲಿ ಅನ್ಯಪದಾರ್ಥಗಳು (ಶೇಕಡವಾರು ಪ್ರಮಾಣ) : ಎಲೆ, ಕಾಂಡ, ಹುಲ್ಲು, ಸಿಪ್ಪೆ, ಧೂಳು, ಕಲ್ಲು, ಮಣ್ಣಿನ ಉಂಡೆ ಹಾಗೂ ಇತರೆ ಕಲ್ಮಶಗಳನ್ನು ಬೇರ್ಪಡಿಸಲಾಗುತ್ತದೆ.
• ಮೂಲ ಉತ್ಪನ್ನದ ಜೊತೆ ಇತರೆ ಕಾಳುಗಳ ಮಿಶ್ರಣ.
• ಒಡೆದ ಕಾಳುಗಳು, ಆಂತರಿಕವಾಗಿ ಹಾಳದ ಮತ್ತು ಮೂಲ ಬಣ್ಣ ಹಾಗೂ ಗುಣಮಟ್ಟ ಕಳೆದುಕೊಂಡ ಉತ್ಪನ್ನ.
• ಉತ್ಪನ್ನದಲ್ಲಿನ ಶೇಕಡವಾರು ಪ್ರಮಾಣ ಅಪರಿಪಕ್ವ ಹಾಗೂ ಸುಕ್ಕುಗಟ್ಟಿದ ಕಾಳುಗಳು ಬಗ್ಗೆ ಮಾಹಿತಿ.

ಒಡೆದ ಹೆಸರುಕಾಳು (ಶೇಕಡವಾರು ಪ್ರಮಾಣ), ಕಾಳುಗಳ ಮೂಲ ಸ್ವರೂಪದಲ್ಲಿ ಒಡೆದಿರುವುದು, ಪೂರ್ಣ ಮತ್ತು ಭಾಗಶಃ ಚೂರಾಗಿರುವ ಕಾಳುಗಳು, ಸುಕ್ಕುಗಟ್ಟಿದ ಹಾಗೂ ಅಪರಿಪಕ್ವ ಕಾಳುಗಳು (ಶೇಕಡವಾರು ಪ್ರಮಾಣ), ಕಾಳುಗಳು ಪೂರ್ಣ ಪ್ರಮಾಣದಲ್ಲಿ ಪಕ್ವತೆ ಇಲ್ಲದ ಕಾಳುಗಳು. ಹೆಸರುಕಾಳು ಪ್ರಮಾಣ ಶೇಕಡವಾರು ನಿರ್ದಿಷ್ಟ ಪ್ರಮಾಣದ ಹೆಸರುಕಾಳನ್ನು ಬೇರ್ಪಡಿಸಿದಾಗ ದೊರೆಯುವ ಉತ್ಪನ್ನದ ಪ್ರಮಾಣದ ಬಗ್ಗೆ ಮಾಹಿತಿ ಸಂಗ್ರಹಿಸಿ ಗುಣವಿಶ್ಲೇಷಣೆ ವರದಿಯಲ್ಲಿನ ದತ್ತಾಂಶದಲ್ಲಿ ಉಲ್ಲೇಖ ಮಾಡಲಾಗುವುದು.

 

ತೇವಾಂಶ (ಶೇಕಡವಾರು ಪ್ರಮಾಣ):
ಹೆಸರುಕಾಳು ಉತ್ಪನ್ನದ ಮಾದರಿಯಿಂದ ಸೂಕ್ತ ಕಾಳುಗಳನ್ನು ತೆಗೆದು, ಪ್ರತ್ಯೇಕವಾಗಿ ತೂಕ ಮಾಡಿಕೊಳ್ಳಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಯೋಗಾಲಯದಲ್ಲಿ ಬಳಕೆ ಮಾಡುವ ಓವೆನ್‍ನಲ್ಲಿ 100 ರಿಂದ 110 ಡಿಗ್ರೀ ಉಷ್ಣಾಂಶ ತಾಪಮಾನದಲ್ಲಿ ಸುಮಾರು 2 ಗಂಟೆ ಸಮಯದವರೆಗೆ ಒಣಗಿಸಲಾಗುತ್ತ್ತದೆ. ಬಳಿಕ ಒಣಗಿಸಿದ ಕಾಳುಗಳನ್ನು ತಣಿಸಿ ತೂಕ ಮಾಡಲಾಗುತ್ತದೆ. ಒಣಗಿಸುವ ಮುನ್ನಾ ಉತ್ಪನ್ನದ ತೂಕ ಮತ್ತು ಒಣಗಿಸಿದ ಮೇಲೆ ಬರುವ ತೂಕದ ವ್ಯತ್ಯಾಸದ ಭಾಗಗಳಿಂದ ಹೆಸರುಕಾಳು ಉತ್ಪನ್ನದಲ್ಲಿನ ಶೇಕಡವಾರು ತೇವಾಂಶವನ್ನು ಕಂಡುಹಿಡಿಯಾಲಾಗುವುದು.

ಗುಣಧರ್ಮಗಳ ಪ್ರಮಾಣದ ಮೇಲೆ ಬೆಲೆ ನಿರ್ಧಾರಣೆ:
ಹೆಸರುಕಾಳು ಉತ್ಪನ್ನದಲ್ಲಿ ತೇವಾಂಶ, ಅನ್ಯಪದಾರ್ಥಗಳು, ಅಪರಿಪಕ್ವ ಹಾಗೂ ಸುಕ್ಕುಗಟ್ಟಿದ ಕಾಯಿಗಳ ಪ್ರಮಾಣ ಕಡಿಮೆ ಇದ್ದಷ್ಟು ಮತ್ತು ಉತ್ಪನ್ನದಲ್ಲಿ ಬೀಜಗಳ ಗುಣಮಟ್ಟ ಲಭ್ಯತೆ ಹೆಚ್ಚ್ಚಾಗಿದ್ದರೆ, ಮಾರುಕಟ್ಟೆಯಲ್ಲಿ ಉತ್ಪನ್ನದ ಮೌಲ್ಯ ಕೂಡ ಹೆಚ್ಚುತ್ತದೆ.
ಉದಾಹರಣೆ: ಹೆಸರುಕಾಳು ಉತ್ಪನ್ನದ ಗುಣಧರ್ಮಗಳ ಪ್ರಮಾಣ ಮತ್ತು ಲಾಟ್‍ಗಳಿಗೆ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ಆನ್‍ಲೈನ್ ಟೆಂಡರ್‍ನಲ್ಲಿ ದೊರೆತ ನೈಜ ಬೆಲೆ ಪಡೆದಿರುವ ಕುರಿತು ಒಂದು ವಿಶ್ಲೇಷಣೆ ವಿವರವನ್ನು ಕೆಳಗಿನ ರೇಖಾ ಚಿತ್ರಗಳಲ್ಲಿ ಗಮನಿಸಬಹುದು.

 

ಮೇಲಿನ ರೇಖಾ ಚಿತ್ರಗಳನ್ನು ಉದಾಹರಣೆಗಾಗಿ ಗಮನಿಸಿ, ಗಜೇಂದ್ರಗಡ ಮತ್ತು ಗದಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹೆಸರುಕಾಳು ಉತ್ಪನ್ನಕ್ಕೆ ಉತ್ತಮ ಧಾರಣೆ ಪಡೆದ ಬಗ್ಗೆ ಮಾಹಿತಿಯನ್ನು ಕಲ್ಪಿಸಲಾಗಿದೆ. ರೈತರು ಹೆಸರುಕಾಳು ಉತ್ಪನ್ನವನ್ನು ಸರಿಯಾಗಿ ಒಣಗಿಸಿ, ಸ್ವಚ್ಚ ಮಾಡಿ ಮಾರಾಟಕ್ಕಾಗಿ ಮಾರುಕಟ್ಟೆಗೆ ತಂದ ವೇಳೆ ಗುಣವಿಶ್ಲೇಷಣೆ ಮಾಡಿಸಿದ್ದರಿಂದ. ಹೆಸರುಕಾಳು ಉತ್ಪನ್ನದಲ್ಲಿ ಕನಿಷ್ಠ ತೇವಾಂಶವಿದ್ದ ಲಾಟ್‍ಗೆ ಗರಿಷ್ಟ ಬೆಲೆ ಲಭ್ಯವಾಗುವುದನ್ನು ರೇಖಾಚಿತ್ರದಲ್ಲಿ ತಾವು ಗಮನಿಸಬಹುದಾಗಿದೆ. ಶೇ.6% ರಿಂದ ಶೇ. 8%ರಷ್ಟು ತೇವಾಂಶವಿದ್ದ ಹೆಸರುಕಾಳು ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನಧಾರಣೆ ದೊರೆತಿರುವುದನ್ನು ಗಮನಿಸಬಹುದಾಗಿದೆ ಮತ್ತು ಮಧ್ಯಮ ತೇವಾಂಶ ಶೇ.8% ರಿಂದ ಶೇ. 10%ರಷ್ಟು ವಿರುವ ಲಾಟ್‍ಗಳಿಗೆ ಮಧ್ಯಮ ಧಾರಣೆ, ಅದೇ ರೀತಿ ಶೇ.12 ರಿಂದ ಶೇ.13% ರಷ್ಟು ಹೆಚ್ಚು ತೇವಾಂಶವಿದ್ದ ಹೆಸರುಕಾಳು ಉತ್ಪನ್ನಕ್ಕೆ ಕಡಿಮೆ ಧಾರಣೆ ದೊರೆತಿರುವುದನ್ನು ಕೂಡ ಗಮನಿಸಬಹುದು. ಒಂದೇ ದಿನದ ವ್ಯಾಪಾರ ವಹಿವಾಟಿನಲ್ಲಿ ಪ್ರತ್ಯೇಕ ಲಾಟ್‍ಗಳಿಗೆ ಗುಣಮಟ್ಟ ಮತ್ತು ತೇವಾಂಶಕ್ಕೆ ಅನುಗುಣವಾಗಿ ಬೆಲೆ ಲಭ್ಯವಾಗಿರುವುದನ್ನು ನೋಡಬಹುದಾಗಿದೆ.

 

ಎರಡನೇ ರೇಖಾ ಚಿತ್ರದಲ್ಲಿ ಗಮನಿಸಬಹುದಾದ ಅಂಶವೆಂದರೆ ಹಾನಿಗೊಳಗಾದ ಕಾಳುಗಳನ್ನು ಬೇರ್ಪಡಿಸಿ ಮಾರಾಟ ಮಾಡಿದಂತಹ ಶೇ.0 ರಿಂದ ಶೇ.1% ರಷ್ಟು ಹಾನಿಗೊಳಿಗಾದ ಕಾಳುಗಳಿದ್ದ ಲಾಟ್‍ಗಳಿಗೆ, ಹೆಚ್ಚಿನ ಧಾರಣೆ ದೊರೆತಿರುವುದನ್ನು ಗಮನಿಸಬಹುದಾಗಿದೆ. ಅದೇ ರೀತಿ ಶೇ.1 ರಿಂದ ಶೇ.2%ರಷ್ಟು ಹೆಚ್ಚು ಹಾನಿಗೊಳಗಾದ ಕಾಳುಗಳ ಉತ್ಪನ್ನಕ್ಕೆ ಕಡಿಮೆ ಧಾರಣೆ ದೊರೆತಿರುವುದನ್ನು ಕೂಡ ಗಮನಿಸಬಹುದು.
ಖರೀದಿದಾರರು ಹೆಸರುಕಾಳು ಉತ್ಪನ್ನದಲ್ಲಿನ ತೇವಾಂಶ ಮತ್ತು ಗುಣಮಟ್ಟವನ್ನು ಗಮನಿಸಿ ಇ-ಟೆಂಡರನಲ್ಲಿ ಉತ್ತಮ ಲಾಟ್‍ಗಳಿಗೆ ನೈಜ ಬೆಲೆ ಬಿಡ್‍ನಲ್ಲಿ ನಮೂದಿಸುತ್ತಾರೆ.

ರೈತಭಾಂದವರಿಗೆ ಸಲಹೆ :
• ಕೃಷಿ ಉತ್ಪನ್ನಗಳನ್ನು ಮಾರಾಟಕ್ಕಾಗಿ ಮಾರುಕಟ್ಟೆಗೆ ತರುವ ಮುನ್ನ ಬೆಳೆಯನ್ನು ಸಕಾಲದಲ್ಲಿ ಕೊಯ್ಲು ಮಾಡಿ, ಸರಿಯಾಗಿ ಒಣಗಿಸಿ, ಅನ್ಯ ಪದಾರ್ಥಗಳನ್ನು ಬೇರ್ಪಡಿಸಿ, ಪ್ಯಾಕ್‍ಮಾಡಿ ಏಕೀಕೃತ ಮಾರುಕಟ್ಟೆಗೆ ತರುವುದು.
• ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸ್ಥಾಪಿಸಲಾಗಿರುವ ವೈಜ್ಞಾನಿಕ ಪ್ರಯೋಗಾಲಯಗಳಲ್ಲಿ ಕೃಷಿ ಉತ್ಪನ್ನಗಳನ್ನು ತಪ್ಪದೇ ಗುಣವಿಶ್ಲೇಷಣೆ ಮಾಡಿಸುವುದು. ರೈತಭಾಂದವರಿಗೆ ಈ ಸೇವೆಯನ್ನು ಉಚಿತವಾಗಿ ಕಲ್ಪಿಸಲಾಗಿದೆ.
• ಗುಣವಿಶ್ಲೇಷಣೆ ಮಾಡಿದ ಉತ್ಪನ್ನಗಳ ವಿವರವಾದ ಮಾಹಿತಿಯ ದತ್ತಾಂಶವನ್ನು ಇ-ಮಾರುಕಟ್ಟೆಯ ಆನ್‍ಲೈನ್‍ನಲ್ಲಿ ಪ್ರಕಟಿಸಲಾಗುವುದು. ಏಕೀಕೃತ ಲೈಸನ್ಸ್ ಪಡೆದ ರಾಜ್ಯ ಮತ್ತು ಹೊರ ರಾಜ್ಯಗಳ ಖರೀದಿದಾರರು ಉತ್ಪನ್ನಗಳ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಪರೀಶಿಲಿಸಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ.
• ಗುಣವಿಶ್ಲೇಷಣೆ ಮಾಡಿದ ಉತ್ಪನ್ನಗಳ ಖರೀದಿಗೆ ಸ್ಪರ್ಧೆ ಹೆಚ್ಚಾಗಿ ಬೆಳೆಗೆ ಸ್ಪರ್ಧಾತ್ಮಕ ಬೆಲೆ ದೊರೆಯಲಿದೆ.

ಕಡಲೆಕಾಳು ಉತ್ಪನ್ನದ ಗುಣವಿಶ್ಲೇಷಣೆ ಮತ್ತು ಗುಣಧರ್ಮದ ಆಧಾರದ ಮೇಲೆ ಸ್ಪರ್ಧಾತ್ಮಕ ಬೆಲೆ ನಿರ್ಧರಣೆ

ಶ್ರೀ. ಮನೋಜ್ ರಾಜನ್, ಬೆಂಗಳೂರು.

ಗುಣವಿಶ್ಲೇಷಣೆಯ ಅನುಕೂಲಗಳು ಮತ್ತು ಪ್ರಾಮುಖ್ಯತೆ ಕುರಿತು ಮಾಹಿತಿ ಕಲ್ಪಿಸುವ ಮುಂದುವರೆದ ಭಾಗವಾಗಿ ಈ ಬ್ಲಾಗ್ ಪುಟದಲ್ಲಿ ಕಡಲೆ ಉತ್ಪನ್ನದ ಗುಣವಿಶ್ಲೇಷಣೆಯ ಕಾರ್ಯವಿಧಾನ, ಗುಣಧರ್ಮಗಳು ಮತ್ತು ಗುಣಧರ್ಮಗಳ ಮೌಲ್ಯಕ್ಕೆ ಅನುಗುಣವಾಗಿ ಬೆಲೆ ನಿರ್ಧರಣೆ ಬಗ್ಗೆ ಅಂಕಿಅಂಶಗಳೊಂದಿಗೆ ಸಮಗ್ರ ವಿವರಣೆಯನ್ನು ನೀಡಲಾಗುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಕಡಲೆ ಕಾಳು ಉತ್ಪನ್ನ ಆವಕವಾಗುವ ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಾದ ಗದಗ, ಹುಬ್ಬಳ್ಳಿ, ರೋಣ, ಲಕ್ಷ್ಮೇಶ್ವರ, ಮುಂಡರಗಿ, ಬಳ್ಳಾರಿ, ನರಗುಂದ, ಬಾಗಲಕೋಟೆ, ಬೀದರ್, ಯಾದಗಿರಿ, ಶಿವಮೊಗ್ಗ ಮತ್ತು ರಾಮದುರ್ಗ ಮಾರುಕಟ್ಟೆಗಳಲ್ಲಿ ಉತ್ಪನ್ನಗಳ ಗುಣವಿಶ್ಲೇಷಣೆಗಾಗಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಈ ಪ್ರಯೋಗಾಲಯಗಳಲ್ಲಿ ಉತ್ಪನ್ನಗಳ ಗುಣವಿಶ್ಲೇಷಣೆ ಕಾರ್ಯವನ್ನು ಪರಿಣಿತಿ ಹೊಂದಿದ ನುರಿತ ತಜ್ಞರು ನಿರ್ವಹಿಸುತ್ತಿದ್ದಾರೆ.

ಕಡಲೆ ಕಾಳು ಉತ್ಪನ್ನವನ್ನು ರೈತರು ಮಾರುಕಟ್ಟೆಗೆ ರಾಶಿ/ಚೀಲಗಳಲ್ಲಿ ತರುತ್ತಾರೆ, ಇಂತಹ ಲಾಟ್‍ಗಳನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ (BIS) ಪ್ರಕಾರ ಉತ್ಪನ್ನದ ಮಾದರಿ ಸಂಗ್ರಹಣೆಯನ್ನು ಕೆಳಗಿನಂತೆ ನಡೆಸಲಾಗುತ್ತದೆ.

ಮಾದರಿ ತೆಗೆಯುವ ವಿಧಾನ:

• ಕಡಲೆ ಕಾಳು ಉತ್ಪನ್ನವನ್ನು ಮಾರಾಟಕ್ಕಾಗಿ ಮಾರುಕಟ್ಟೆಗೆ ತರುವ ಮುನ್ನ ಸರಿಯಾಗಿ ಒಣಗಿಸಿ, ಸ್ವಚ್ಚಮಾಡಿ, ಕಸಕಡ್ಡಿಯನ್ನು ತೆಗೆದು ಚೀಲದಲ್ಲಿ ಪ್ಯಾಕ್ ಮಾಡಿ ಮಾರುಕಟ್ಟೆಗೆ ರೈತರು ತರಬೇಕು.
• ರೈತರು ಮಾರಾಟಕ್ಕಾಗಿ ಮಾರುಕಟ್ಟೆಗೆ ತಂದ ಕಡಲೆ ಕಾಳು ಉತ್ಪನ್ನದಿಂದ ಮಾದರಿ ತೆಗೆಯುವುದಕ್ಕಾಗಿ (ಸ್ಯಾಂಪಲ್) ಪ್ರತಿ ಲಾಟನ್ನು ಚೀಲ ಅಥವಾ ರಾಶಿ ರೂಪದಲ್ಲಿ ಪ್ರತ್ಯೇಕವಾಗಿ ಇಡಲಾಗುತ್ತದೆ.

• ಪ್ಯಾಕ್ ಮಾಡಿದ ರೂಪದಲ್ಲಿ ಲಾಟನ್ನು ತಂದಾಗ ಲಾಟ್‍ನಲ್ಲಿನ ಪ್ರತಿ ಚೀಲದ ಮೇಲ್ಭಾಗ, ಮಧ್ಯಭಾಗ ಮತ್ತು ಕೆಳಭಾಗದಿಂದ ಸಣ್ಣ ಪ್ರಮಾಣದಲ್ಲಿ ಉತ್ಪನ್ನ ತೆಗೆದು ಸ್ಯಾಂಪಲ್ ಸಿದ್ದಪಡಿಸಲಾಗುತ್ತದೆ. ಬಳಿಕ ಹೀಗೆ ತೆಗೆದ ಸ್ಯಾಂಪಲ್ ಕಾಳುಗಳನ್ನು ಸರಿಯಾಗಿ ಮಿಶ್ರಣ ಮಾಡಿ, ಅದನ್ನು ಬಲ್ಕ್ ಸ್ಯಾಂಪಲ್ ಎಂದು ಕರೆಯುತ್ತಾರೆ.
• ಒಂದು ವೇಳೆ ಉತ್ಪನ್ನವು ರಾಶಿ ರೂಪದಲ್ಲಿದರೆ, ಅದರ ಮಾದರಿಯನ್ನು ಕನಿಷ್ಠ ಪಕ್ಷ 7 ಭಾಗಗಳಿಂದ ಅಂದರೆ ಮುಂಭಾಗ, ಹಿಂಭಾಗ, ಎಡಭಾಗ, ಬಲಭಾಗ, ರಾಶಿಯ ತುದಿ, ಮಧ್ಯ ಹಾಗೂ ತಳಭಾಗಗಳಿಂದ ಸ್ಯಾಂಪಲ್ ಸಂಗ್ರಹಿಸಿದ ನಂತರ ಮಾದರಿಯನ್ನು ಸರಿಯಾಗಿ ಮಿಶ್ರಣ ಮಾಡಿ ಬಲ್ಕ್ ಮಾದರಿಯನ್ನು ಸಂಗ್ರಹಿಸಲಾಗುತ್ತದೆ.
• ಕಾಂಪೋಸಿಟ್ ಸ್ಯಾಂಪಲ್ ಸಿದ್ದಪಡಿಸಲು ಬಲ್ಕ್ ಸ್ಯಾಂಪಲ್‍ನಿಂದ 1/2 ಕೆ.ಜಿ. ಕಡಲೆ ಕಾಳು ಉತ್ಪನ್ನವನ್ನು ತೆಗೆಯಲಾಗುತ್ತದೆ.
• ಸ್ಯಾಂಪಲ್ ಡಿವೈಡರ್‍ನಿಂದ ತಲಾ 100 ಗ್ರಾಂ ನಂತೆ 5 ಸಮಭಾಗಗಳಾಗಿ ವಿಂಗಡಿಸಲಾಗುವುದು.
• ಪ್ರತಿ ಭಾಗವನ್ನು ಪ್ರತ್ಯೇಕವಾಗಿ ಪಾರದರ್ಶಕ ಪ್ಲಾಸ್ಟಿಕ್ ಬ್ಯಾಗ್‍ಗಳಲ್ಲಿ ಪ್ಯಾಕ್ ಮಾಡಲಾಗುವುದು. ಪ್ರತಿಯೊಂದು ಪ್ಲಾಸ್ಟಿಕ್ ಚೀಲಕ್ಕೆ ಗುರುತಿನ ಚೀಟಿಯನ್ನು ಲಗತ್ತಿಸಿ ಮುದ್ರೆ ಹಾಕಲಾಗುತ್ತದೆ. ಈ ರೀತಿ ಸಂಗ್ರಹಿಸಿದ ಉತ್ಪನ್ನದ ಒಂದು ಮಾದರಿಯನ್ನು ರೈತರಿಗೆ, ಒಂದು ಪ್ಯಾಕೆಟ್ ಎಪಿಎಂಸಿಯಲ್ಲಿ ವರ್ತಕರ ಪರಿಶೀಲನೆಗಾಗಿ, ಒಂದು ಮಾದರಿಯನ್ನು ಎಪಿಎಂಸಿಯಲ್ಲಿ ವಿವಾದ ನಿರ್ಣಯಕ್ಕಾಗಿ ಕಾಯ್ದಿರಿಸಲಾಗುತ್ತದೆ. ಮತ್ತೊಂದು ಮಾದರಿಯನ್ನು ಗುಣ ವಿಶ್ಲೇಷಣೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಒಂದು ಮಾದರಿಯನ್ನು ಉತ್ಪನ್ನ ಗುಣವಿಶ್ಲೇಷಣೆ ಪ್ರಯೋಗಾಲಯದಲ್ಲಿ ದಾಖಲೆಗಾಗಿ ಸಂಗ್ರಹಿಸಲಾಗುತ್ತದೆ.

ಪರೀಕ್ಷೆ ವಿಧಾನ :

ಕಡಲೆಕಾಳು ಮಾದರಿಯನ್ನು ಪರೀಕ್ಷಿಸಿದಾಗ ಯಾವುದೇ ಜೀವವಿರುವ ಕ್ರಿಮಿಕೀಟಗಳು ಉತ್ಪನ್ನದಲ್ಲಿ ಲಭ್ಯತೆ ಬಗ್ಗೆ ಪರೀಕ್ಷೆ ವೇಳೆ ಖಾತ್ರಿಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ಜೀವವಿರುವ ಕ್ರಿಮಿಕೀಟಗಳು ಉತ್ಪನ್ನದಲ್ಲಿ ಪತ್ತೆಯಾದಲ್ಲಿ ಅಂತಹ ಲಾಟ್‍ನ್ನು ಗುಣವಿಶ್ಲೇಷಣೆ ಪ್ರಕ್ರಿಯೆಯಿಂದ ತಿರಸ್ಕರಿಸಲಾಗುತ್ತದೆ. ಕೃಷಿ ಉತ್ಪನ್ನದಲ್ಲಿ ಯಾವುದೇ ಕೃತಕ ರಾಸಾಯನಿಕ ಬಣ್ಣ ಅಥವಾ ಬೂಸ್ಟ್ ಹಿಡಿದ ಬಗ್ಗೆ ಪರೀಕ್ಷಿಸಿ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಯನ್ನು ಏಕೀಕೃತ ಮಾರುಕಟ್ಟೆ ವೇದಿಕೆಯ ಪ್ರಯೋಗಾಲಯಗಳಲ್ಲಿ ಕಲ್ಪಿಸಲಾಗಿದೆ.
ಗುಣವಿಶ್ಲೇಷಣೆ ಸಂಸ್ಥೆಯು ಉತ್ಪನ್ನದ ಗುಣಧರ್ಮಗಳ ವಿವರಗಳನ್ನು ನಮೂದಿಸಿದ ಬಳಿಕ ರೈತರಿಗೆ ಉತ್ಪನ್ನದ ಗುಣವಿಶ್ಲೇಷಣೆ ಪ್ರಮಾಣ ಪತ್ರವನ್ನು ನೀಡುವ ವ್ಯವಸ್ಥೆಯನ್ನು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಕಲ್ಪಿಸಲಾಗಿದೆ. ಉತ್ಪನ್ನದ ಗುಣವಿಶ್ಲೇಷಣೆಗೆ ಸಂಬಂಧಿಸಿದಂತೆ ಪ್ರಮಾಣ ಪತ್ರದಲ್ಲಿ ಊರ್ಜಿತವಿರುವ ಅವಧಿಯನ್ನು ನಮೂದಿಸಲಾಗುವುದು.

ಮಾದರಿ ಸಂಗ್ರಹ ಮತ್ತು ಪರೀಕ್ಷೆಯನ್ನು ಮೂರನೇ ವ್ಯಕ್ತಿ / ಸ್ವತಂತ್ರ್ಯವಾದ ಸಂಸ್ಥೆಯು ನಿರ್ವಹಿಸುತ್ತದೆ. ಮಾದರಿ ಸಂಗ್ರಹಣೆ ಮತ್ತು ಪರೀಕ್ಷೆಯನ್ನು BIS ವಿಧಾನದ ಪ್ರಕಾರ ನುರಿತ ಅಸ್ಸೆಯರ್ಸ್‍ನಿಂದ ಕೈಗೊಳ್ಳಲಾಗುತ್ತದೆ, ಪರೀಕ್ಷೆ ವರದಿಯಲ್ಲಿ ನ್ಯೂನತೆ ಮತ್ತು ಇತರೆ ತೊಂದರೆಗಳಿದ್ದರೆ ಸದರಿ ಸಂಸ್ಥೆಯೇ ಹೊಣೆಗಾರರಾಗುತ್ತಾರೆ.
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡುವ ವಿಧಾನ:
ಉತ್ಪನ್ನದ ಗುಣಮಟ್ಟ ಮತ್ತು ಗುಣಧರ್ಮಗಳ ವಿಶ್ಲೇಷಣೆ ಪರೀಕ್ಷೆ ಬಳಿಕ ಫಲಿತಾಂಶದ ವಿವರಗಳನ್ನು ಏಕೀಕೃತ ಮಾರುಕಟ್ಟೆ ವೇದಿಕೆ(ಇ-ಮಾರುಕಟ್ಟೆ)ಯಲ್ಲಿನ ಆನ್‍ಲೈನ್‍ನಲ್ಲಿ ಖರೀದಿದಾರರ/ವರ್ತಕರ ಪರೀಶಿಲನೆಗಾಗಿ ದಾಖಲು ಮಾಡಲಾಗುತ್ತದೆ.
ಗುಣವಿಶ್ಲೇಷಣಾ ವಿವಾದಗಳು, ಇನ್ನಿತರೆ ವಿಷಯಗಳು ಮತ್ತು ತೊಂದರೆಗಳ ನಿವಾರಣೆ :
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳು, 1968ರ ನಿಯಮ 91-ಪಿ(1)ರನ್ವಯ ರಚಿಸಲಾಗಿರುವ ವಿವಾದ ಪರಿಶೀಲನಾ ಸಮಿತಿಯು ನಿಯಮ 91-ಪಿ(7)ರನ್ವಯ ಕೃಷಿ ಮಾರಾಟ ನಿರ್ದೇಶಕರು ನೀಡಿರುವಂತಹ ಮಾರ್ಗದರ್ಶಿ ಸೂಚನೆಗಳನ್ವಯ ವಿವಾದಗಳನ್ನು ತೀರ್ಮಾನಿಸಲಾಗುತ್ತದೆ.
ಇದಕ್ಕಾಗಿ ಉತ್ಪನ್ನಗಳ ಮಾರಾಟಗಾರರು ಆಹಾರ ಮತ್ತು ಸುರಕ್ಷತಾ ಪ್ರಮಾಣಗಳ ಕಾಯ್ದೆ 2006 ಹಾಗೂ ಸಂಬಂಧಿಸಿದ ಇತರೆ ಕಾನೂನಿನಲ್ಲಿ ನಿಗದಿ ಪಡಿಸಿದ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಯಾವುದೇ ಆದೇಶಗಳನ್ನು ಜಾರಿಗೊಳಿಸುವಲ್ಲಿ ಉದ್ಬವಿಸಬಹುದಾದ ಯಾವುದೇ ತೊಂದರೆಗಳನ್ನು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರ ಗಮನಕ್ಕೆ ತರತಕ್ಕದ್ದು ಹಾಗೂ ಅವರು ಸೂಕ್ತವೆನಿಸುವ ಸ್ಪಷ್ಠೀಕರಣವನ್ನು ನೀಡುವರು.

ಕಡಲೆಕಾಳು ಉತ್ಪನ್ನದ ಪರಿಶೀಲಿಸುವ ನಿರ್ದಿಷ್ಟ ಗುಣಧರ್ಮಗಳು :

• ಉತ್ಪನ್ನದಲ್ಲಿ ಅನ್ಯಪದಾರ್ಥಗಳು(ಶೇಕಡವಾರು ಪ್ರಮಾಣ) : ಎಲೆ, ಕಾಂಡ, ಹುಲ್ಲು, ಸಿಪ್ಪೆ, ಧೂಳು, ಕಲ್ಲು, ಮಣ್ಣಿನ ಉಂಡೆ ಹಾಗೂ ಇತರೆ ಕಲ್ಮಶಗಳನ್ನು ಬೇರ್ಪಡಿಸಲಾಗುತ್ತದೆ.
• ಮೂಲ ಉತ್ಪನ್ನದ ಜೊತೆ ಇತರೆ ಕಾಳುಗಳ ಮಿಶ್ರಣ.
• ಒಡೆದ ಕಾಳುಗಳು, ಆಂತರಿಕವಾಗಿ ಹಾಳಾದ ಮತ್ತು ಮೂಲ ಬಣ್ಣ ಮತ್ತು ಗುಣಮಟ್ಟ ಕಳೆದುಕೊಂಡ ಕಾಳುಗಳು.
• ಉತ್ಪನ್ನದಲ್ಲಿನ ಶೇಕಡವಾರು ಪ್ರಮಾಣ ಅಪರಿಪಕ್ವ ಹಾಗೂ ಸುಕ್ಕುಗಟ್ಟಿದ ಕಾಳುಗಳ ಬಗ್ಗೆ ಮಾಹಿತಿ.

ಒಡೆದ ಕಡಲೆಕಾಳುಗಳ(ಶೇಕಡವಾರು ಪ್ರಮಾಣ) ಕಾಳುಗಳ ಮೂಲ ಸ್ವರೂಪದಲ್ಲಿ ಒಡೆದಿರುವುದು, ಪೂರ್ಣ ಮತ್ತು ಭಾಗಶಃ ಚೂರಾಗಿರುವ ಕಾಳುಗಳು, ಸುಕ್ಕುಗಟ್ಟಿದ ಹಾಗೂ ಅಪರಿಪಕ್ವ ಕಾಳುಗಳು (ಶೇಕಡವಾರು ಪ್ರಮಾಣ) ಕಾಳುಗಳು ಪೂರ್ಣ ಪ್ರಮಾಣದಲ್ಲಿ ಪಕ್ವತೆ ಇಲ್ಲದ ಕಾಳುಗಳು. ಕಡಲೆಕಾಳು ಪ್ರಮಾಣ ಶೇಕಡವಾರು ನಿರ್ದಿಷ್ಟ ಪ್ರಮಾಣದ ಕಡಲೆಕಾಳನ್ನು ಬೇರ್ಪಡಿಸಿದಾಗ ದೊರೆಯುವ ಉತ್ಪನ್ನದ ಪ್ರಮಾಣದ ಬಗ್ಗೆ ಮಾಹಿತಿ ಸಂಗ್ರಹಿಸಿ ಗುಣವಿಶ್ಲೇಷಣೆ ವರದಿಯಲ್ಲಿನ ದತ್ತಾಂಶದಲ್ಲಿ ಉಲ್ಲೇಖ ಮಾಡಲಾಗುವುದು.

ತೇವಾಂಶ (ಶೇಕಡವಾರು ಪ್ರಮಾಣ):
ಕಡಲೆ ಉತ್ಪನ್ನದ ಮಾದರಿಯಿಂದಸೂಕ್ತ ಕಾಳುಗಳನ್ನು ತೆಗೆದು, ಪ್ರತ್ಯೇಕವಾಗಿ ತೂಕ ಮಾಡಿಕೊಳ್ಳಲಾಗಿತ್ತದೆ. ಅದನ್ನು ವೈಜ್ಞಾನಿಕ ಪ್ರಯೋಗಾಲಯದಲ್ಲಿ ಬಳಕೆ ಮಾಡುವ ಓವೆನ್‍ನಲ್ಲಿ 100 ರಿಂದ 110 ಡಿಗ್ರೀ ಉಷ್ಣಾಂಶ ತಾಪಮಾನದಲ್ಲಿ ಸುಮಾರು 2 ಗಂಟೆ ಸಮಯದವರೆಗೆ ಒಣಗಿಸಲಾಗುತ್ತದೆ, ಬಳಿಕ ಒಣಗಿಸಿದ ಕಾಳುಗಳನ್ನು ತೂಕ ಮಾಡಲಾಗುತ್ತದೆ, ಒಣಗಿಸುವ ಮುನ್ನಾ ಉತ್ಪನ್ನದ ತೂಕ ಮತ್ತು ಒಣಗಿಸಿದ ಮೇಲೆ ಬರುವ ತೂಕದ ವ್ಯತ್ಯಾಸದ ಭಾಗಗಳಿಂದ ಕಡಲೆ ಕಾಳು ಉತ್ಪನ್ನದಲ್ಲಿನ ತೇವಾಂಶದ ಶೇಕಡವಾರನ್ನು ಕಂಡುಹಿಡಿಯಲಾಗುವುದು.

ಗುಣಧರ್ಮಗಳ ಪ್ರಮಾಣದ ಮೇಲೆ ಬೆಲೆ ನಿರ್ಧಾರಣೆ:
ಕಡಲೆಕಾಳು ಉತ್ಪನ್ನದಲ್ಲಿ ತೇವಾಂಶ, ಅನ್ಯಪದಾರ್ಥಗಳು, ಅಪರಿಪಕ್ವ ಹಾಗೂ ಸುಕ್ಕುಕಟ್ಟಿದ ಕಾಳುಗಳ ಪ್ರಮಾಣ ಕಡಿಮೆ ಇದ್ದಷ್ಟು ಮತ್ತು ಉತ್ಪನ್ನದಲ್ಲಿ ಬೀಜಗಳ ಗುಣಮಟ್ಟ ಲಭ್ಯತೆ ಹೆಚ್ಚಾಗಿದ್ದರೆ, ಮಾರುಕಟ್ಟೆಯಲ್ಲಿ ಉತ್ಪನ್ನದ ಮೌಲ್ಯ ಕೂಡ ಹೆಚ್ಚುತ್ತದೆ.
ಉದಾಹರಣೆಗೆ: ಕಡಲೆಕಾಳು ಉತ್ಪನ್ನದ ಗುಣಧರ್ಮಗಳ ಪ್ರಮಾಣ ಮತ್ತು ಲಾಟ್‍ಗಳಿಗೆ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ಆನ್‍ಲೈನ್ ಟೆಂಡರ್‍ನಲ್ಲಿ ದೊರೆತ ನೈಜ ಬೆಲೆ ಪಡೆದಿರುವ ಕುರಿತು ಒಂದು ವಿಶ್ಲೇಷಣೆ ವಿವರವನ್ನು ಕೆಳಗಿನ ರೇಖಾ ಚಿತ್ರಗಳಲ್ಲಿ ಗಮನಿಸಬಹುದು.

ಮೇಲಿನ ರೇಖಾ ಚಿತ್ರವನ್ನು ಉದಾಹರಣೆಗಾಗಿ ಗಮನಿಸಿ, ಗದಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆಕಾಳು ಉತ್ಪನ್ನಕ್ಕೆ ಉತ್ತಮ ಧಾರಣೆ ಪಡೆದ ಬಗ್ಗೆ ಮಾಹಿತಿಯನ್ನು ಕಲ್ಪಿಸಲಾಗಿದೆ. ರೈತರು ಕಡಲೇಕಾಳು ಉತ್ಪನ್ನವನ್ನು ಸರಿಯಾಗಿ ಒಣಗಿಸಿ, ಸ್ವಚ್ಚಮಾಡಿ ಮಾರಾಟಕ್ಕಾಗಿ ಮಾರುಕಟ್ಟೆಗೆ ತಂದ ವೇಳೆ ಗುಣವಿಶ್ಲೇಷಣೆ ಮಾಡಿಸಿ. ಕಡಲೆಕಾಳು ಉತ್ಪನ್ನದಲ್ಲಿ ಕನಿಷ್ಠ ತೇವಾಂಶವಿದ್ದ ಲಾಟ್‍ಗೆ ಗರಿಷ್ಟ ಬೆಲೆ ಲಭ್ಯವಾಗುವುದನ್ನು ರೇಖಾ ಚಿತ್ರದಲ್ಲಿ ತಾವು ಗಮನಿಸಬಹುದಾಗಿದೆ. ಶೇ.6% ರಿಂದ ಶೇ. 7%ರಷ್ಟು ತೇವಾಂಶವಿದ್ದ ಕಡಲೆಕಾಳು ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಧಾರಣೆ ದೊರೆತಿರುವುದನ್ನು ಗಮನಿಸಬಹುದಾಗಿದೆ. ಅದೇ ರೀತಿ ಶೇ.12 ರಿಂದ ಶೇ.13%ರಷ್ಟು ಹೆಚ್ಚು ತೇವಾಂಶವಿದ್ದ ಕಡಲೆಕಾಳು ಉತ್ಪನ್ನಕ್ಕೆ ಕಡಿಮೆ ಧಾರಣೆ ದೊರೆತಿರುವುದನ್ನು ಕೂಡ ಗಮನಿಸಬಹುದು. ಒಂದೇ ದಿನದ ವ್ಯಾಪಾರ ವಹಿವಾಟಿನಲ್ಲಿ ಪ್ರತ್ಯೇಕ ಲಾಟ್‍ಗಳಿಗೆ ಗುಣಮಟ್ಟ ಮತ್ತು ತೇವಾಂಶಕ್ಕೆ ಅನುಗುಣವಾಗಿ ಬೆಲೆ ಲಭ್ಯವಾಗಿರುವುದನ್ನು ನೋಡಬಹುದಾಗಿದೆ. ಖರೀದಿದಾರರು ಕಡಲೆಕಾಳು ಉತ್ಪನ್ನದಲ್ಲಿನ ತೇವಾಂಶ ಮತ್ತು ಗುಣಮಟ್ಟವನ್ನು ಗಮನಿಸಿ ಇ-ಟೆಂಡರ್‍ನಲ್ಲಿ ಉತ್ತಮ ಲಾಟ್‍ಗಳಿಗೆ ನೈಜ ಬೆಲೆಯನ್ನು ಬಿಡ್‍ನಲ್ಲಿ ನಮೂದಿಸುತ್ತಾರೆ.

ರೈತಭಾಂದವರಿಗೆ ಸಲಹೆ :
• ಕೃಷಿ ಉತ್ಪನ್ನಗಳನ್ನು ಮಾರಾಟಕ್ಕಾಗಿ ಮಾರುಕಟ್ಟೆಗೆ ತರುವ ಮುನ್ನ ಬೆಳೆಯನ್ನು ಸಕಾಲದಲ್ಲಿ ಕೊಯ್ಲು ಮಾಡಿ, ಸರಿಯಾಗಿ ಒಣಗಿಸಿ, ಅನ್ಯಪದಾರ್ಥಗಳನ್ನು ಬೇರ್ಪಡಿಸಿ, ಪ್ಯಾಕ್ ಮಾಡಿ ಏಕೀಕೃತ ಮಾರುಕಟ್ಟೆಗೆ ತರುವುದು.
• ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸ್ಥಾಪಿಸಲಾಗುತ್ತಿರುವ ವೈಜ್ಞಾನಿಕ ಪ್ರಯೋಗಾಲಯಗಳಲ್ಲಿ ಕೃಷಿ ಉತ್ಪನ್ನಗಳನ್ನು ತಪ್ಪದೇ ಗುಣವಿಶ್ಲೇಷಣೆ ಮಾಡಿಸುವುದು. ರೈತಭಾಂದವರಿಗೆ ಈ ಸೇವೆಯನ್ನು ಉಚಿತವಾಗಿ ಕಲ್ಪಿಸಲಾಗಿದೆ.
• ಗುಣವಿಶ್ಲೇಷಣೆ ಮಾಡಿದ ಉತ್ಪನ್ನಗಳ ವಿವರವಾದ ಮಾಹಿತಿಯ ದತ್ತಾಂಶವನ್ನು ಇ-ಮಾರುಕಟ್ಟೆಯ ಆನ್‍ಲೈನ್‍ನಲ್ಲಿ ಪ್ರಕಟಿಸಲಾಗುವುದು. ಏಕೀಕೃತ ಲೈಸನ್ಸ್ ಪಡೆದ ರಾಜ್ಯ ಮತ್ತು ಹೊರ ರಾಜ್ಯಗಳ ಖರೀದಿದಾರರು ಉತ್ಪನ್ನಗಳ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಪರೀಶಿಲಿಸಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ.
• ಗುಣವಿಶ್ಲೇಷಣೆ ಮಾಡಿದ ಉತ್ಪನ್ನಗಳ ಖರೀದಿಗೆ ಸ್ಪರ್ಧೆ ಹೆಚ್ಚಾಗಿ ಬೆಳೆಗೆ ಸ್ಪರ್ಧಾತ್ಮಕ ಬೆಲೆ ದೊರೆಯಲಿದೆ.

ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಗುಣವಿಶ್ಲೇಷಣೆಗೊಳಪಡಿಸಿದ ಕೃಷಿ ಉತ್ಪನ್ನಕ್ಕೆ ನೈಜ ಬೆಲೆ

ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ರೈತರ ಕೃಷಿ ಉತ್ಪನ್ನಗಳಿಗೆ ಸ್ಪಧ್ಮಾತ್ಮಕ ಬೆಲೆ ಪಡೆಯಲು ಅನುಸರಿಸಬೇಕಾದ ಕ್ರಮಗಳು ಮತ್ತು ಅದರ ಅನುಕೂಲತೆಗಳ ಬಗ್ಗೆ ತಿಳಿಸುವುದೇ ಈ ಲೇಖನದ ಪ್ರಮುಖ ಉದ್ದೇಶವಾಗಿದೆ.
ರಾಮಣ್ಣ ಮತ್ತು ಶಾಮಣ್ಣ ಎಂಬ ಇಬ್ಬರು ರೈತರ ಕಾಲ್ಪನಿಕವಾದ ಎರಡು ಪಾತ್ರಗಳ ಮೂಲಕ ಬೆಳೆ ಕೊಯ್ಲಿನಿಂದ ಹಿಡಿದು ಬೆಳೆಯನ್ನು ಮಾರುಕಟ್ಟೆಗೆ ತಂದು, ಮಾರಾಟ ಪ್ರಕ್ರಿಯೆಗಳಲ್ಲಿ ಭಾಗವಹಿಸಿ, ಉತ್ಪನ್ನಗಳಿಗೆ ನೈಜ ಬೆಲೆ ಪಡೆಯುವ ಕಾರ್ಯವಿಧಾನಗಳ ಕುರಿತು ಚಿತ್ರಾದಿಗಳ ಜೊತೆ ವಿವರವಾದ ಮಾಹಿತಿ ಕಲ್ಪಿಸಲಾಗಿದೆ.

ರಾಮಣ್ಣ ಸಕಾಲದಲ್ಲಿ ಬೆಳೆಯನ್ನು ಕೊಯ್ಲು ಮಾಡಿ, ಒಣಗಿಸಿ, ಸ್ವಚ್ಚ ಮಾಡಿ, ಗುಣ ಪ್ರಮಾಣಕ್ಕೆ ಅನುಗುಣವಾಗಿ ವಿಂಗಡಿಸಿ, ಉತ್ಪನ್ನವನ್ನು ಮಾರಾಟಕ್ಕಾಗಿ ಪ್ಯಾಕಿಂಗ್ ಮಾಡುತ್ತಿರುವುದು.

ಶಾಮಣ್ಣ ಬೆಳೆಯನ್ನು ಕೊಯ್ಲು ಮಾಡಿ, ಸರಿಯಾಗಿ ಒಣಗಿಸದೆ, ಸ್ವಚ್ಚ ಮಾಡದೆ, ಗುಣ ಪ್ರಮಾಣಕ್ಕೆ ಅನುಗುಣವಾಗಿ ವಿಂಗಡಿಸದೆ ಉತ್ಪನ್ನವನ್ನು ಮಾರಾಟಕ್ಕಾಗಿ ಪ್ಯಾಕ್ ಮಾಡುತ್ತಿರುವುದು.

ರಾಮಣ್ಣ ಮತ್ತು ಶಾಮಣ್ಣ ಉತ್ಪನ್ನಗಳೊಂದಿಗೆ ಎಪಿಎಂಸಿಗೆ ಆಗಮಿಸಿ ಮಾರುಕಟ್ಟೆ ಮುಖ್ಯ ದ್ವಾರದಲ್ಲಿ ಗೇಟ್ ಎಂಟ್ರಿ ಮಾಡಿಸಿದರು. ರಾಮಣ್ಣ ಅವರ ಉತ್ಪನ್ನಕ್ಕೆ ಲಾಟ್ ನಂಬರ್-1 ಮತ್ತು ಶಾಮಣ್ಣ ಅವರ ಉತ್ಪನ್ನಕ್ಕೆ ಲಾಟ್ ನಂಬರ್-2 ಎಂಬ ಯುನಿಕ್(ವಿಶೇಷ) ಲಾಟ್ ಸಂಖ್ಯೆಯನ್ನು ಎಪಿಎಂಸಿಯಲ್ಲಿ ನೀಡಲಾಯಿತು.

ಮಾರುಕಟ್ಟೆ ಪ್ರಾಂಗಣದಲ್ಲಿ ಮಾರಾಟಕ್ಕೆ ಸಿದ್ದಪಡಿಸಿದ ಉತ್ಪನ್ನವನ್ನು ಗುಣವಿಶ್ಲೇಷಣೆ ಮಾಡಿಸಲು ರಾಮಣ್ಣ ಒಪ್ಪಿಗೆ ಸೂಚಿಸಿದರು.

ಏಕೀಕೃತ ಮಾರುಕಟ್ಟೆಯಲ್ಲಿನ ಗುಣವಿಶ್ಲೇಷಣೆ ಪ್ರಯೋಗಾಲಯದ ತಜ್ಞರಿಗೆ ಶಾಮಣ್ಣ ತನ್ನ ಉತ್ಪನ್ನವನ್ನು ಗುಣವಿಶ್ಲೇಷಣೆ ಮಾಡುವುದು ಬೇಡ ಎಂದು ನಿರಾಕರಿಸುತ್ತಿರುವುದು.

ಗುಣವಿಶ್ಲೇಷಣೆ ಪ್ರಯೋಗಾಲಯ

ರಾಮಣ್ಣ ಅವರ ಉತ್ಪನ್ನದ ಗುಣವಿಶ್ಲೇಷಣೆಯ ಫಲಿತಾಂಶದ ದತ್ತಾಂಶ ವಿವರಗಳನ್ನು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಆನ್‍ಲೈನ್‍ನಲ್ಲಿ ಪ್ರಸಾರ ಮಾಡಲಾಯಿತು.

ರಾಮಣ್ಣ ಅವರ ಲಾಟ್ ನಂಬರ್-1 ಉತ್ಪನ್ನ ಮತ್ತು ಶಾಮಣ್ಣ ಅವರ ಲಾಟ್ ನಂಬರ್-2 ಉತ್ಪನ್ನವನ್ನು ಸ್ಥಳೀಯ ಖರೀದಿದಾರರು ಪರೀಕ್ಷಿಸುತ್ತಿರುವ ದೃಶ್ಯವನ್ನು ಚಿತ್ರದಲ್ಲಿ ನೋಡಬಹುದು, ಲಾಟ್ ನಂಬರ್-1ರಲ್ಲಿ ಉತ್ಪನ್ನ ಗುಣವಿಶ್ಲೇಷಣೆ ಮಾಡಿದ ಮಾಹಿತಿ ಲಭ್ಯವಿದೆ. ಲಾಟ್ ನಂಬರ್–2 ರಲ್ಲಿ ಗುಣವಿಶ್ಲೇಷಣೆ ಮಾಡಿದ ವಿವರಗಳು ಇಲ್ಲದಿರುವುದನ್ನು ಕಾಣಬಹುದು.

ಆನ್‍ಲೈನ್ ಟೆಂಡರ್ ಪ್ರಕ್ರಿಯೆಯಲ್ಲಿ ಸ್ಥಳೀಯ, ರಾಜ್ಯದ ಹೊರ ಎಪಿಎಂಸಿ ಮಾರುಕಟ್ಟೆ ಹಾಗೂ ಹೊರ ರಾಜ್ಯಗಳಿಂದ ಏಕೀಕೃತ ಲೈಸೆನ್ಸ್ ಪಡೆದ ಖರೀದಿದಾರರು ಇ-ಟೆಂಡರ್ ನಲ್ಲಿ ಭಾಗವಹಿಸುವ ಕಾರ್ಯವಿಧಾನವನ್ನು ಮೇಲಿನ ಚಿತ್ರದಲ್ಲಿ ನೋಡಬಹುದು.

ಬೆಳೆಗೆ ಸ್ಪರ್ಧಾತ್ಮಕ ಬೆಲೆ ಪಡೆದ ರಾಮಣ್ಣ ಹರ್ಷ ವ್ಯಕ್ತಪಡಿಸುತ್ತಿರುವುದನ್ನು ಚಿತ್ರದಲ್ಲಿ ಗಮನಿಸುವುದು.

ಇ-ಟೆಂಡರ್ ನಲ್ಲಿ ರಾಮಣ್ಣ ಅವರ ಲಾಟ್ ನಂಬರ್-1ಕ್ಕೆ ಹೆಚ್ಚು ಖರೀದಿದಾರರು ಬಿಡ್ ಮಾಡಿರುತ್ತಾರೆ. ಕಾರಣ ರಾಮಣ್ಣ ತನ್ನ ಉತ್ಪನ್ನವನ್ನು ಗುಣವಿಶ್ಲೇಷಣೆ ಮಾಡಿಸಿ, ಅದರ ವಿವರವನ್ನು ಆನ್‍ಲೈನ್‍ನಲ್ಲಿ ಪ್ರಸಾರ ಮಾಡಿಸಿದ್ದರಿಂದ ಸ್ಥಳೀಯ ಖರೀದಿದಾರರಲ್ಲದೆ ರಾಜ್ಯ ವ್ಯಾಪ್ತಿಯಲ್ಲಿನ ಎಪಿಎಂಸಿಗಳಲ್ಲಿ ವ್ಯವಹರಿಸುವ ಖರೀದಿದಾರರು ಮತ್ತು ಹೊರ ರಾಜ್ಯಗಳ ವರ್ತಕರು  ಇ-ಟೆಂಡರ್ ನಲ್ಲಿ ಭಾಗವಹಿಸಿದ್ದರು, ಇದರಿಂದ ಖರೀದಿಯಲ್ಲಿ ಸ್ಪರ್ಧೆ ಹೆಚ್ಚಾಗಿ, ರಾಮಣ್ಣನವರ ಉತ್ಪನ್ನಕ್ಕೆ ನೈಜ ಬೆಲೆ ಲಭ್ಯವಾಯಿತು. ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ನೂತನ ಸೌಲಭ್ಯದಿಂದಾಗಿ ಉತ್ತಮ ಬೆಲೆ ಲಭ್ಯವಾಯಿತು.

ಅದೇ ರೀತಿ ಶಾಮಣ್ಣ ತನ್ನ ಉತ್ಪನ್ನವನ್ನು ಗುಣವಿಶ್ಲೇಷಣೆ ಮಾಡಿಸದೇ ಬೆಳೆಯನ್ನು ಮಾರಾಟ ಮಾಡಲು ಸಿದ್ದಪಡಿಸಿದ್ದರಿಂದ     ಇ-ಟೆಂಡರ್ ನಲ್ಲಿ ಕೇವಲ ಸ್ಥಳೀಯ ಖರೀದಿದಾರರು ಬಿಡ್ಡಿಂಗ್ ಮಾಡಿರುತ್ತಾರೆ. ಆದ್ದರಿಂದ ಶಾಮಣ್ಣನ ಬೆಳೆಗೆ ಉತ್ತಮ ಬೆಲೆ ಪಡೆಯಲು ಸಾಧ್ಯವಾಗಲಿಲ್ಲ.

ರಾಮಣ್ಣ ಅವರಿಂದ ರೈತ ಮಿತ್ರರಿಗೆ ಮಾರ್ಗದರ್ಶನ

ಬೆಳೆಯನ್ನು ಸಕಾಲದಲ್ಲಿ ಕೊಯ್ಲು ಮಾಡಿ, ಸರಿಯಾಗಿ ಒಣಗಿಸಿ, ಸ್ವಚ್ಛ ಮಾಡಿ, ವರ್ಗೀಕರಿಸಿ, ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಗುಣವಿಶ್ಲೇಷಣೆ ಮಾಡಿಸಿದರೆ, ಖರೀದಿಯಲ್ಲಿ ಸ್ಪರ್ಧೆ ಹೆಚ್ಚಾಗಿ ರೈತರ ಉತ್ಪನ್ನಕ್ಕೆ ಸ್ಪರ್ಧಾತ್ಮಕ ಬೆಲೆ ದೊರೆಯಲಿದೆ.

ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆಯಿಂದ ರೈತ ಬಾಂಧವರಿಗೆ ಆಗುವ ಲಾಭಗಳು:-
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ಆನ್‍ಲೈನ್ ಟೆಂಡರ್‍ನಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಬರುವ ಮುನ್ನಾ ರೈತರು ಕೆಲವು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕಿದೆ. ಬೆಳೆಯನ್ನು ಸಕಾಲದಲ್ಲಿ ಕಟಾವು ಮಾಡಿ, ಉತ್ಪನ್ನಕ್ಕೆ ಅನುಗುಣವಾಗಿ ಒಣಗಿಸಿ, ಸ್ವಚ್ಚ ಮಾಡಿ, ಗುಣ ಪ್ರಮಾಣಕ್ಕೆ ಅನುಗುಣವಾಗಿ ವಿಂಗಡಿಸಿ, ಉತ್ಪನ್ನಗಳನ್ನು ಸರಿಯಾಗಿ ಪ್ಯಾಕ್ ಮಾಡಿ ಮಾರುಕಟ್ಟೆಗೆ ತರುವುದು ಅತ್ಯಗತ್ಯ. ಇದರಿಂದ ಉತ್ಪನ್ನದ ಗುಣಮಟ್ಟವನ್ನು ಮಾರುಕಟ್ಟೆಯಲ್ಲಿನ ಸ್ಥಳೀಯ ಖರೀದಿದಾರರು ಪರೀಕ್ಷಿಸಲು ಅನುಕೂಲವಾಗಲಿದೆ, ಅದೇ ರೀತಿ ಹೊರ ಮಾರುಕಟ್ಟೆ ಮತ್ತು ಹೊರ ರಾಜ್ಯಗಳ ಖರೀದಿದಾರರು ಆನ್‍ಲೈನ್‍ನಲ್ಲಿ ಉತ್ಪನ್ನಗಳ ಅವಕ ಮತ್ತು ಗುಣಧರ್ಮಗಳನ್ನು ಪರಿಶೀಲಿಸಿ ಆನ್‍ಲೈನ್ ಟೆಂಡರ್ ನಲ್ಲಿ ಭಾಗವಹಿಸುತ್ತಾರೆ. ಇದರಿಂದ ಉತ್ಪನ್ನಗಳ ಖರೀದಿಗೆ ಸ್ಪರ್ಧೆ ಏರ್ಪಟ್ಟು, ಸ್ಪರ್ಧಾತ್ಮಕ ಬೆಲೆ ದೊರೆಯಲಿದೆ.

ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಉತ್ಪನ್ನಗಳ ಗುಣವಿಶ್ಲೇಷಣೆ ಮಾಡಿಸಲು ರೈತರು ಯಾವುದೇ ರೀತಿಯ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ ಈ ಸೇವೆ ರೈತ ಬಾಂಧವರಿಗೆ ಉಚಿತವಾಗಿ ಕಲ್ಪಿಸಲಾಗಿದೆ. ಈಗಾಗಲೇ 40 ಎಪಿಎಂಸಿ ಮಾರುಕಟ್ಟೆಗಳಲ್ಲಿ ಗುಣವಿಶ್ಲೇಷಣೆ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಹಂತ ಹಂತವಾಗಿ ಎಲ್ಲಾ ಏಕೀಕೃತ ಮಾರುಕಟ್ಟೆ ವೇದಿಕೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು. ಗುಣವಿಶ್ಲೇಷಣೆ ಮಾಡಿದ ಉತ್ಪನ್ನಗಳ ಮಾಹಿತಿಯನ್ನು ಇ-ಟೆಂಡರ್ ವೇದಿಕೆಯಲ್ಲಿನ  ಅಪ್ ಲೋಡ್ ಮಾಡಲಾಗುವುದು. ಸದರಿ ಮಾಹಿತಿಯನ್ನು ಪರಿಶೀಲಿಸಿದ ದೂರದ ಖರೀದಿದಾರರು ಆನ್‍ಲೈನ್ ಬಿಡ್ಡಿಂಗ್‍ನಲ್ಲಿ ಅಗತ್ಯ ಉತ್ಪನ್ನಗಳನ್ನು ಖರೀದಿಸಲು ಅನುಕೂಲವಾಗುತ್ತದೆ.. ಈ ನೂತನ ವ್ಯವಸ್ಥೆಯ ಖರೀದಿ ಪ್ರಕ್ರಿಯೆಯಲ್ಲಿ ಸ್ಪರ್ಧೆ ಹೆಚ್ಚಾಗಿ ಉತ್ಪನ್ನಗಳಿಗೆ ನೈಜ ಬೆಲೆ ದೊರೆಯುವಂತಾಗಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸ್ಥಾಪಿಸಲಾಗುತ್ತಿರುವ ಏಕೀಕೃತ ಮಾರುಕಟ್ಟೆ ವೇದಿಕೆಗಳಲ್ಲಿ ರೈತರ ಅನುಕೂಲಕ್ಕಾಗಿ ಕಲ್ಪಿಸಿರುವ ಉತ್ಪನ್ನಗಳ ಉಚಿತ ಗುಣವಿಶ್ಲೇಷಣೆ ಸೇವೆಯ ಲಾಭವನ್ನು ರೈತ ಬಾಂಧವರು ಪಡೆದುಕೊಳ್ಳುವುದರೊಂದಿಗೆ, ರೈತರ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಈ ಮಹತ್ವಾಕಾಂಕ್ಷೆಯ ನೂತನ ಯೋಜನೆಯ ಲಾಭ ನಿಮಗೆ ದೊರೆಯಲಿ ಎಂಬುವುದೇ ನಮ್ಮ ಅಪೇಕ್ಷೆ.

ಕೃಷಿ ಉತ್ಪನ್ನಗಳ ಉಚಿತ ಗುಣವಿಶ್ಲೇಷಣಾ ಸೇವೆಗಳು ಏಕೀಕೃತ ಮಾರುಕಟ್ಟೆಯಲ್ಲಿ ಲಭ್ಯ

– ಮುಂದುವರಿದಿದೆ
ಕೃಷಿ ಉತ್ಪನ್ನಗಳ ಉಚಿತ ಗುಣವಿಶ್ಲೇಷಣಾ ಸೇವೆಗಳು ಏಕೀಕೃತ ಮಾರುಕಟ್ಟೆಯಲ್ಲಿ ಲಭ್ಯ

ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆ ಕಾರ್ಯವನ್ನು ಪರಿಣಿತಿ ಹೊಂದಿರುವ ಎನ್‍ಸಿಎಂಎಲ್ ಮತ್ತು ಸ್ಟಾರ್ -ಅಗ್ರಿ ಸಂಸ್ಥೆಗಳಿಗೆ ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್ ಸಂಸ್ಥೆ ವಹಿಸಿದೆ, ಮೇಲ್ಕಂಡ ಸಂಸ್ಥೆಗಳು ನುರಿತ ಗುಣವಿಶ್ಲೇಷಣ ತಜ್ಞರು ರೈತರ ಕೋರಿಕೆ ಮೇರೆಗೆ ಅವರು ಮಾರಾಟಕ್ಕೆ ತಂದ ಉತ್ಪನ್ನಗಳ ಲಾಟ್‍ಗಳಿಂದ ಮಾದರಿಗಳನ್ನು ತೆಗೆದು ಉತ್ಪನ್ನದ ಗುಣಧರ್ಮಗಳನ್ನು ಪರೀಕ್ಷಿಸುತ್ತಾರೆ. ಬಳಿಕ ನಿಗದಿತ ನಮೂನೆಯಲ್ಲಿ ಗುಣವಿಶ್ಲೇಷಣೆಯಿಂದ ಬಂದ ಉತ್ಪನ್ನದಲ್ಲಿನ ದತ್ತಾಂಶಗಳನ್ನು ದಾಖಲು ಮಾಡಿ, ರೈತರಿಗೆ ಗುಣವಿಶ್ಲೇಷಣೆಯ ಗಣಕೀಕೃತ ಪ್ರಮಾಣ ಪತ್ರವನ್ನು ನೀಡುತ್ತಾರೆ. ಈ ಪ್ರಮಾಣ ಪತ್ರವನ್ನು ರೈತರು ತಮ್ಮ ಉತ್ಪನ್ನದ ಲಾಟ್ ಮುಂದೆ ಪ್ರದರ್ಶಿಸಬಹುದು. ಜೊತೆಗೆ ಇದೇ ಮಾಹಿತಿಯನ್ನು ಏಕೀಕೃತ ಮಾರುಕಟ್ಟೆ ವೇದಿಕೆಯ ಆನ್‍ಲೈನ್‍ನಲ್ಲಿ ಕೂಡ ಪ್ರಸಾರ ಮಾಡಲಾಗುವುದು.

• ರೈತರ ಹೆಸರು
• ಮಾರುಕಟ್ಟೆ ಅವಕ ಮತ್ತು ಮಾರುಕಟ್ಟೆ ಹೆಸರು

• ಉತ್ಪನ್ನದ ಹೆಸರು ಮತ್ತು ಲಾಟ್ ನಂಬರ್
• ಮಾದರಿ ತೆಗೆದ ದಿನಾಂಕ
• ಮೇಲ್ವಿಚಾರಕರ ಹೆಸರು
• ಉತ್ಪನ್ನದ ಗುಣವಿಶ್ಲೇಷಣೆಯ ವಿವರಗಳು ಆನ್‍ಲೈನ್‍ನಲ್ಲಿ ಖರೀದಿದಾರರಿಗೆ ಲಭ್ಯವಿರುತ್ತದೆ.

ಏಕೀಕೃತ ಲೈಸೆನ್ಸ್ ಪಡೆದ ವರ್ತಕರು ಮತ್ತು ದಲ್ಲಾಲರಿಗೆ ನೀಡಿರುವ User ID ಮತ್ತು Password ಮೂಲಕ ಏಕೀಕೃತ ಮಾರುಕಟ್ಟೆ ವೇದಿಕೆಯ ವೆಬ್‍ಸೈಟ್‍ನ್ನು ಸಂಪರ್ಕಿಸಬಹುದು. ಒಮ್ಮೆ ವೆಬ್‍ಸೈಟ್ ಪ್ರವೇಶಿಸಿದ ಬಳಿಕ ವಿವಿಧ ಉತ್ಪನ್ನಗಳ ಗುಣಮಟ್ಟ, ಗುಣಧರ್ಮ ಮತ್ತು ಗುಣವಿಶ್ಲೇಷಣೆಯ ವಿವರಗಳನ್ನು ಪರಿಶೀಲಿಸಬಹುದು. ಈ ವ್ಯವಸ್ಥೆಯಿಂದ ಸ್ಥಳೀಯ ಮಾರುಕಟ್ಟೆ, ರಾಜ್ಯದ ಹೊರ ಮಾರುಕಟ್ಟೆ ಮತ್ತು ಹೊರರಾಜ್ಯಗಳ ವರ್ತಕರು ಅಗತ್ಯ ಉತ್ಪನ್ನಗಳ ಖರೀದಿಗೂ ಮುನ್ನಾ ಅವುಗಳ ಗುಣಧರ್ಮ ಮತ್ತು ಗುಣವಿಶ್ಲೇಷಣೆಯ ಮಾಹಿತಿಯನ್ನು ಪರಿಶೀಲಿಸಿ ಆನ್‍ಲೈನ್ ಟೆಂಡರ್ ನಲ್ಲಿ ಭಾಗವಹಿಸುತ್ತಾರೆ. ಇದೊಂದು ಪಾರದರ್ಶಕ ವ್ಯವಸ್ಥೆಯಾಗಿದ್ದು, ಇ-ಟೆಂಡರ್ ನಲ್ಲಿ ಉತ್ಪನ್ನಗಳ ಖರೀದಿಗೆ ಖರೀದಿದಾರರಿಂದ ಸ್ಪರ್ಧೆ ಹೆಚ್ಚಾಗಿ, ಈ ರೀತಿಯ ನೂತನ ಕ್ರಮಗಳಿಂದಾಗಿ ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ಲಭ್ಯವಾಗುವಂತಾಗಿದೆ.

ಮಾರುಕಟ್ಟೆಯಲ್ಲಿ ಉತ್ಪನ್ನದ ಗುಣಧರ್ಮ ಮತ್ತು ಗುಣವಿಶ್ಲೇಷಣೆ ಮಾಡಿಸಿ ಮಾರಾಟ ಮಾಡುವದರಿಂದ ಕೃಷಿ ಉತ್ಪನ್ನಗಳ ಖರೀದಿಯಲ್ಲಿ ಸ್ಪರ್ಧೆ ಹೆಚ್ಚಾಗಿ, ರೈತರು ನಿರೀಕ್ಷಿಸಿದ ಬೆಲೆ ಅವರ ಉತ್ಪನ್ನಗಳಿಗೆ ದೊರೆಯುತ್ತದೆ. ಇದು ರೈತ ಭಾಂದವರಿಗೆ ಅತ್ಯಂತ ಉಪಯುಕ್ತ ಹಾಗೂ ಲಾಭದಾಯಕ ವ್ಯವಸ್ಥೆಯಾಗಿ ಹೊರಹೊಮ್ಮಿದೆ.

ವರ್ತಕರಿಗೆ ಆಗುವ ಅನುಕೂಲಗಳು

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವಿವಿಧ ಕೃಷಿ ಉತ್ಪನ್ನಗಳ ಲಾಟ್‍ಗಳನ್ನು ಸ್ಥಳೀಯ ಖರೀದಾರರು ಖುದ್ದು ಪರಿಶೀಲಿಸಲು ಅವಕಾಶವಿದೆ. ಆದರೆ ಉತ್ಪನ್ನದ ವೈಜ್ಞಾನಿಕ ಗುಣವಿಶ್ಲೇಷಣೆ ಮಾಹಿತಿಯನ್ನು ಸಂಪೂರ್ಣವಾಗಿ ಗ್ರಹಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಬೇಕಾದ ಉತ್ಪನ್ನಗಳ ಲಾಟ್‍ಗಳಿಗೆ ಭೇಟಿ ನೀಡಿ ಪರೀಕ್ಷಿಸುವುದರಿಂದ ಸಮಯ ವ್ಯರ್ಥವಾಗಲಿದೆ. ವರ್ತಕರು ಆನ್‍ಲೈನ್‍ನಲ್ಲೇ ಉತ್ಪನ್ನಗಳ ಆವಕದ ಪ್ರಮಾಣ ಮತ್ತು ಗುಣವಿಶ್ಲೇಷಣೆ ಮಾಹಿತಿಯನ್ನು ಪರಿಶೀಲಿಸಿ ಇ-ಟೆಂಡರ್ ನಲ್ಲಿ ಭಾಗವಹಿಸಲು ಅನುಕೂಲವಾಗಿದೆ. ಖರೀದಿದಾರರು ಮತ್ತು ದಲ್ಲಾಲರು, ಸ್ಥಳೀಯರು, ಹೊರ ರಾಜ್ಯಗಳ ವರ್ತಕರು ಅಥವಾ ಏಕೀಕೃತ ಲೈಸೆನ್ಸ್ ಪಡೆದ ಖರೀದಿದಾರರು ರಾಜ್ಯದ ಯಾವುದೇ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿನ ಉತ್ಪನ್ನಗಳ ಖರೀದಿಸಲು ಇದೊಂದು ವಿಶ್ವಾಸಾರ್ಹ ವರ್ತಕ  ಸ್ನೇಹಿ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯಿಂದಾಗಿ ವರ್ತಕರು ಉತ್ಪನ್ನಗಳ ಖರೀದಿಗಾಗಿ ಒಂದು ಮಾರುಕಟ್ಟೆಯಿಂದ ಮತ್ತೊಂದು ಮಾರುಕಟ್ಟೆಗೆ ಸಂಚಾರ ಮಾಡುವ ಅಗತ್ಯವಿಲ್ಲ. ಅವರು ಇದ್ದ ಸ್ಥಳದಿಂದಲೇ ಅಗತ್ಯ ಉತ್ಪನ್ನಗಳಿಗೆ ಆನ್‍ಲೈನ್ ಟೆಂಡರ್ ನಲ್ಲಿ ಬಿಡ್ ಮಾಡಬಹುದಾಗಿದೆ.

ಉತ್ಪನ್ನದ ಗುಣವಿಶ್ಲೇಷಣೆಯಲ್ಲಿ ನೂನ್ಯತೆ ಕಂಡುಬಂದರೆ ಅದನ್ನು ಇತ್ಯರ್ಥಪಡಿಸಲು ಅನುಸರಿಸಬೇಕಾದ ವಿಧಾನ: 
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಉತ್ಪನ್ನದ ಗುಣವಿಶ್ಲೇಷಣೆ ಪ್ರಯೋಗಾಲಯದಲ್ಲಿ ಗುಣವಿಶ್ಲೇಷಣೆ ಮಾಡಿಸಿದ ಉತ್ಪನ್ನಗಳಲ್ಲಿ ಅಸಮರ್ಪಕ ಮಾಹಿತಿ ಅಥವಾ ನೂನ್ಯತೆ ಕಂಡುಬಂದರೆ ಅದನ್ನು ಇತ್ಯರ್ಥ ಪಡಿಸಲು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ & ಅಭಿವೃದ್ಧಿ)ನಿಯಮಗಳು 1968ರ ನಿಯಮ 91-ಒ ಹಾಗೂ 91-P ರನ್ವಯ ಕ್ರಮ ವಹಿಸುವುದು.

ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಉತ್ಪನ್ನಗಳ ಗುಣವಿಶ್ಲೇಷಣೆಗಾಗಿ ಮಾದರಿ ತೆಗೆಯುವಿಕೆಯಲ್ಲಿ ಅಥವಾ ಪರೀಕ್ಷೆಯ ದತ್ತಾಂಶ ವಿವರದಲ್ಲಿ ನ್ಯೂನ್ನತೆಯಾಗಿದ್ದರೆ, ಕೂಡಲೇ ರೈತರು ಅಥವಾ ಖರೀದಿದಾರರು ಸಂಬಂಧಪಟ್ಟ ಮಾರುಕಟ್ಟೆಯ ಕಾರ್ಯದರ್ಶಿ ಅವರ ಗಮನಕ್ಕೆ ತರುವುದು.

ಮಾರುಕಟ್ಟೆ ಕಾರ್ಯದರ್ಶಿ ಅವರು ದೂರುದಾರರ ಲಾಟ್‍ಗೆ ಭೇಟಿ ನೀಡಿ, ಉತ್ಪನ್ನದ ಮರು ಮಾದರಿಯನ್ನು ಸಂಗ್ರಹಿಸಿ ಮತ್ತೊಮ್ಮೆ ಗುಣವಿಶ್ಲೇಷಣೆ ಮಾಡಿಸುವ ಕ್ರಮಗಳನ್ನು ಜರುಗಿಸಲಿದ್ದಾರೆ.

ಮಾರುಕಟ್ಟೆಯಲ್ಲಿ ಗುಣವಿಶ್ಲೇಷಣೆ ಮಾಡಿದ ಉತ್ಪನ್ನ ಮಾರಾಟವಾದ ಬಳಿಕ ಅದೇ ಉತ್ಪನ್ನದ ಗುಣಮಟ್ಟ ಮತ್ತು ಗುಣವಿಶ್ಲೇಷಣೆ ಬಗ್ಗೆ ಅನುಮಾನವಿದ್ದಲ್ಲಿ ಟೆಂಡರ್ ಡಿಕ್ಲೇರ್ ಮಾಡಿದ ಎರಡು ಗಂಟೆಯೊಳಗೆ ಟೆಂಡರ್ ವಿಜೇತರು ಮಾರುಕಟ್ಟೆಯ ಕಾರ್ಯದರ್ಶಿ ಅವರ ಗಮನಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ. ಈ ರೀತಿಯ ಸಮಸ್ಯೆಗಳನ್ನು ಕೂಡಲೇ ಇತ್ಯರ್ಥ ಪಡಿಸುವ ಅಧಿಕಾರವನ್ನು ಕಾರ್ಯದರ್ಶಿ ಅವರು ಹೊಂದಿರುತ್ತಾರೆ.

ಒಂದು ವೇಳೆ ಕಾರ್ಯದರ್ಶಿ ಅವರು ಸಮಸ್ಯೆಗಳನ್ನು ಇತ್ಯರ್ಥ ಪಡಿಸಿದ ಕ್ರಮಗಳಿಗೆ ರೈತರು ಅಥವಾ ಖರೀದಿದಾರರಿಂದ ಒಪ್ಪಿಗೆ ಇಲ್ಲಾವಾದಲ್ಲಿ, ವಿವಾದ ಇತ್ಯರ್ಥ ಮಾಡಿಕೊಳ್ಳಲು ಮಾರುಕಟ್ಟೆ ಸಮಿತಿಯಲ್ಲಿನ “ಡಿಸ್ಪ್ಯೂಟ್ ರೆಸಲ್ಯೂಷನ್ ಕಮಿಟಿ”  (ವಿವಾದ ಇತ್ಯರ್ಥ ಸಮಿತಿ) ಗಮನಕ್ಕೆ ತರಲು ಅವಕಾಶ ನೀಡಲಾಗಿದೆ.

ರೈತ ಭಾಂದವರಿಗೆ ಮಾರ್ಗಸೂಚಿ :
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಲಭ್ಯವಿರುವ ಕೃಷಿಕಾರರ ಉತ್ಪನ್ನಗಳಿಗೆ ಉಚಿತ ಗುಣವಿಶ್ಲೇಷಣೆ ಸೇವೆ ಸೌಲಭ್ಯ ಪಡೆಯಲು ರೈತರು ಬೆಳೆಯನ್ನು ಸರಿಯಾದ ಸಮಯದಲ್ಲಿ ಕೊಯ್ಲು ಮಾಡಿ, ಒಣಗಿಸಿ, ಕಸಕಡ್ಡಿಯನ್ನು ಬೇರ್ಪಡಿಸಿ, ಗಾತ್ರ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ವರ್ಗೀಕರಿಸಿ ಮಾರುಕಟ್ಟೆಗೆ ತರುವುದು. ಮಾರುಕಟ್ಟೆಗೆ ತಂದ ಉತ್ಪನ್ನವನ್ನು ತಪ್ಪದೇ ಗುಣವಿಶ್ಲೇಷಣೆ ಮಾಡಿಸಿ, ತಮ್ಮ ಬೆಳೆಗೆ ನೈಜ ಬೆಲೆ ಪಡೆಯಬೇಕು ಎಂಬುದೇ ರೆಮ್ಸ್ ಸಂಸ್ಥೆಯ ಆಶಯ.

ಎಪಿಎಂಸಿಗಳಲ್ಲಿ ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆ (ಅಸ್ಸೇಯಿಂಗ್) ಸೇವೆ – ರೈತಭಾಂಧವರ ಉತ್ಪನ್ನಕ್ಕೆ ಉಚಿತ ಗುಣವಿಶ್ಲೇಷಣೆ ಸೇವೆ

ಎಪಿಎಂಸಿಗಳಲ್ಲಿ ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆ (ಅಸ್ಸೇಯಿಂಗ್) ಸೇವೆ – ರೈತಭಾಂಧವರ ಉತ್ಪನ್ನಕ್ಕೆ ಉಚಿತ ಗುಣವಿಶ್ಲೇಷಣೆ ಸೇವೆ.
– ಮನೋಜ್ ರಾಜನ್,ಬೆಂಗಳೂರು

ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿನ ಮಾರಾಟ ವ್ಯವಸ್ಥೆಯಲ್ಲಿ ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆ ಕಾರ್ಯವಿಧಾನ ಧಾರಣೆ ನಿರ್ಧರಣೆಯ ಮೇಲೆ ಬಹುಮುಖ್ಯವಾದ ಪಾತ್ರವಹಿಸುತ್ತದೆ. ಮಾರುಕಟ್ಟೆಯಲ್ಲಿ ಮಾರಾಟ ವ್ಯವಸ್ಥೆಯಲ್ಲಿ ಗುಣವಿಶ್ಲೇಷಣೆ ಮಾಡಿದ ಉತ್ಪನ್ನಕ್ಕೆ ಖರೀದಿದಾರರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿರುವುದನ್ನು ಮನಗಂಡು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆಗಾಗಿ ಪ್ರತ್ಯೇಕ ಪ್ರಯೋಗಾಲಯಗಳನ್ನು ಸ್ಥಾಪಿಸಲು ಕೃಷಿ ಮಾರಾಟ ಇಲಾಖೆ ಮತ್ತು ರೆಮ್ಸ್ ಸಂಸ್ಥೆ ನಿರ್ಧರಿಸಿತು. ಜೊತೆಗೆ ರೈತ ಭಾಂಧವರ ಉತ್ಪನ್ನಗಳ ಗುಣವಿಶ್ಲೇಷಣೆ ಸೇವೆಯನ್ನು ಉಚಿತವಾಗಿ ಕಲ್ಪಿಸುವ ಮಹತ್ವದ ನಿರ್ಣಯವನ್ನು ಕೈಗೊಂಡು ಅನುಷ್ಠಾನ ಮಾಡಲಾಗಿದೆ.

ಕೃಷಿ ಉತ್ಪನ್ನಗಳ ಭೌತಿಕ ಗುಣವಿಶ್ಲೇಷಣೆ

ಕೃಷಿ ಉತ್ಪನ್ನಗಳ ಭೌತಿಕ ಮಾನದಂಡಗಳ ಅನ್ವಯ ಪರೀಕ್ಷಿಸಿ, ಉತ್ಪನ್ನದಲ್ಲಿನ ಕಸ-ಕಡ್ಡಿ, ತೇವಾಂಶ ಮತ್ತು ಉತ್ಪನ್ನದ ಒಟ್ಟಾರೆ ಗುಣಮಟ್ಟವನ್ನು ನುರಿತ ತಜ್ಞರಿಂದ ಕಂಡುಹಿಡಿಯುವ ಕಾರ್ಯವಿಧಾನಕ್ಕೆ ಗುಣವಿಶ್ಲೇಷಣೆ ಎಂದು ಕರೆಯಲಾಗುತ್ತದೆ.

ಉತ್ಪನ್ನಗಳ ಮಾದರಿ ತೆಗೆಯುವ ಕಾರ್ಯವಿಧಾನ:

• ರೈತರು ಏಕೀಕೃತ ಮಾರುಕಟ್ಟೆ ವೇದಿಕೆಗೆ ತರುವ ಉತ್ಪನ್ನದಲ್ಲಿ ಪ್ರತಿಶತ ಶೇಕಡ 10ರಷ್ಟು ವಿವಿಧ ಭಾಗಗಳಿಂದ ಮಾದರಿಯನ್ನು ತೆಗೆದು ಗುಣವಿಶ್ಲೇಷಣೆಗೆ ಉಪಯೋಗಿಸಲಾಗುತ್ತದೆ.
• ಮಾರುಕಟ್ಟೆಗೆ ತಂದ ಉತ್ಪನ್ನವುಳ್ಳ ಚೀಲಗಳನ್ನು ಯಾದೃಚ್ಛಿಕ (random) ರೀತಿಯಲ್ಲಿ ತೆಗೆದು, ಚೀಲಗಳಲ್ಲಿರುವ ಉತ್ಪನ್ನಗಳನ್ನು ಸುರಿದು, ರಾಶಿಯ ವಿವಿಧ ಭಾಗಗಳಿಂದ, ಅಂದರೆ ರಾಶಿಯ ಮುಂಭಾಗ, ಹಿಂಭಾಗ, ಎಡಭಾಗ, ಬಲಭಾಗ, ತುದಿ, ಮಧ್ಯ ಹಾಗೂ ತಳಭಾಗಗಳಿಂದ ಮಾದರಿಯನ್ನು ಸಂಗ್ರಹಿಸಲಾಗುತ್ತದೆ.
• ಮಾರಾಟಗಾರರು ಮಾರಾಟಕ್ಕಾಗಿ ಮಾರುಕಟ್ಟೆಗೆ ತರುವ ಉತ್ಪನ್ನವನ್ನು ಪ್ಯಾಕ್ ಮಾಡಿ (ಗೋಣಿ ಚೀಲದಲ್ಲಿ) ತರಬಹುದು ಅಥವಾ ಹಾಗೆ ರಾಶಿ ರೂಪದಲ್ಲಿ ತರಬಹುದು, ಮಾದರಿ ತೆಗೆಯುವುದಕ್ಕಾಗಿ (ಸ್ಯಾಂಪಲ್) ಪ್ರತಿ ಲಾಟನ್ನು ಚೀಲ ಅಥವಾ ರಾಶಿ ರೂಪದಲ್ಲಿ ಪ್ರತ್ಯೇಕವಾಗಿ ಇಡಲಾಗುತ್ತದೆ.
• ಪ್ಯಾಕ್ ಮಾಡಿದ ರೂಪದಲ್ಲಿ ಲಾಟನ್ನು ತಂದಾಗ ಲಾಟ್‍ನಲ್ಲಿನ ಪ್ರತಿ ಚೀಲದ ಮೇಲ್ಭಾಗ, ಮಧ್ಯಭಾಗ ಮತ್ತು ಕೆಳಭಾಗದಿಂದ ಸಣ್ಣ ಪ್ರಮಾಣದಲ್ಲಿ ಉತ್ಪನ್ನ ತೆಗೆದು ಸ್ಯಾಂಪಲ್ ಸಿದ್ಧಪಡಿಸುವುದು ಮತ್ತು ಸರಿಯಾಗಿ ಮಿಶ್ರಣ ಮಾಡುವುದು. ಇದನ್ನು ‘ಬಲ್ಕ್ ಸ್ಯಾಂಪಲ್’ ಎಂದು ಕರೆಯಲಾಗುವುದು.
• ಒಂದು ವೇಳೆ ಉತ್ಪನ್ನಗಳ ಲಾಟನ್ನು ರಾಶಿ ರೂಪದಲ್ಲಿ ತಂದಾಗ ಮಾದರಿಯನ್ನು ಕನಿಷ್ಠ ಪಕ್ಷ 7 ಭಾಗಗಳಿಂದ ಅಂದರೆ ಮುಂಭಾಗ, ಹಿಂಭಾಗ, ಎಡಭಾಗ, ಬಲಭಾಗ, ರಾಶಿಯ ತುದಿ, ಮಧ್ಯ ಹಾಗೂ ತಳಭಾಗಗಳಿಂದ ಸಂಗ್ರಹಿಸಿ, ನಂತರ ಈ ಮಾದರಿಯನ್ನು ಸರಿಯಾಗಿ ಮಿಶ್ರಣ ಮಾಡಿ ಬಲ್ಕ್ ಮಾದರಿಯನ್ನು ಸಂಗ್ರಹಿಸಲಾಗುವುದು.
• ಕಾಂಪೋಸಿಟ್ ಸ್ಯಾಂಪಲ್ (ಸಂಯುಕ್ತ ಮಾದರಿ) ಸಿದ್ಧಪಡಿಸಲು ಬಲ್ಕ್ ಸ್ಯಾಂಪಲ್‍ನಿಂದ ಅಗತ್ಯವಿರುವ ಪ್ರಮಾಣದ ಉತ್ಪನ್ನ ತೆಗೆಯುವುದು.
• ಈ ರೀತಿ ಸಿದ್ಧಪಡಿಸಿದ ಸಂಯುಕ್ತ ಮಾದರಿಯ ಉತ್ಪನ್ನದಿಂದ ಸ್ಯಾಂಪಲ್ ಡಿವೈಡರ್ ಸಹಾಯದಿಂದ ಸಮನಾಗಿ ಬೇರ್ಪಡಿಸಿ, ಒಂದು ಭಾಗವನ್ನು ಭೌತಿಕ ಗುಣವಿಶ್ಲೇಷಣೆಗಾಗಿ ಉಪಯೋಗಿಸಲಾಗುತ್ತದೆ ಮತ್ತು ಉಳಿದ ಒಂದು ಭಾಗವನ್ನು ಪ್ರಯೋಗಾಲಯದಲ್ಲಿ (Reference Sample) ರೆಫರೆನ್ಸ್ ಗಾಗಿ ಇಡಲಾಗುತ್ತದೆ.
• ಪ್ರತಿ ಭಾಗವನ್ನು ಪ್ರತ್ಯೇಕವಾಗಿ ಪಾರದರ್ಶಕ ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿ ಪ್ರತಿಯೊಂದು ಚೀಲಕ್ಕೆ ಗುರುತಿನ ಚೀಟಿಯನ್ನು ಲಗತ್ತಿಸಿ ಪ್ಯಾಕ್ ಮಾಡಿ ಸಂಗ್ರಹಿಸಲಾಗುವುದು.
• ಸಂಗ್ರಹಿಸಿದ  ಉತ್ಪನ್ನದ ಮಾದರಿಯ ಸಂಪೂರ್ಣ ವಿವರಗಳನ್ನು ದಾಖಲಾತಿ ಪುಸ್ತಕದಲ್ಲಿ ನೊಂದಯಿಸಲಾಗುತ್ತದೆ.

ಗುಣವಿಶ್ಲೇಷಣೆ ಕಾರ್ಯವಿಧಾನ:

ಉತ್ಪನ್ನಗಳ ಮಾದರಿಗಳನ್ನು ಪರೀಕ್ಷಿಸಿದಾಗ ಯಾವುದೇ ಜೀವವಿರುವ ಕ್ರಿಮಿಕೀಟಗಳ ಲಭ್ಯತೆ ಬಗ್ಗೆ ಪರೀಕ್ಷಿಸಲಾಗುತ್ತದೆ. ಒಂದು ವೇಳೆ ಜೀವವಿರುವ ಕ್ರಿಮಿಕೀಟಗಳು ಉತ್ಪನ್ನದಲ್ಲಿ ಪತ್ತೆಯಾದಲ್ಲಿ ಅಂತಹ ಲಾಟ್‍ ಅನ್ನು ತಿರಸ್ಕರಿಸಲಾಗುವುದು ಹಾಗೂ ಉತ್ಪನ್ನದಲ್ಲಿ ಯಾವುದೇ ಕೃತಕ ರಾಸಾಯನಿಕ ಬಣ್ಣ ಅಥವಾ ಬೂಸ್ಟ್ ಹಿಡಿದ ಬಗ್ಗೆಯು ಕೂಡ ಪರೀಕ್ಷಿಸಲಾಗುತ್ತದೆ. ತದನಂತರ ಮಾದರಿಯನ್ನು ಗುಣಧರ್ಮಗಳ ವಿಶ್ಲೇಷಣೆಗಾಗಿ ಭೌತಿಕ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ರೀತಿಯಲ್ಲಿ ಉತ್ಪನ್ನಗಳ ಗುಣವಿಶ್ಲೇಷಣೆ ಮಾಡಿದ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಅಪ್ ಲೋಡ್ ಮಾಡುವ ವ್ಯವಸ್ಥೆಯನ್ನು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಕಲ್ಪಿಸಲಾಗಿದೆ. ಈ ಕಾರ್ಯವಿಧಾನದಿಂದಾಗಿ ದೂರದ ಖರೀದಿದಾರರು ಉತ್ಪನ್ನಗಳ ಮೇಲೆ ವಿಶ್ವಾಸವಿಟ್ಟು, ಆನ್‍ಲೈನ್‍ನಲ್ಲಿ ಲಭ್ಯವಾಗುವ ಉತ್ಪನ್ನದ ಗುಣವಿಶ್ಲೇಷಣೆ ಮಾಹಿತಿಯನ್ನು ಪರಿಶೀಲಿಸಿ, ಅಗತ್ಯ ಉತ್ಪನ್ನಗಳನ್ನು ಖರೀದಿ ಮಾಡಲು ಆನ್‍ಲೈನ್ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಒಟ್ಟಾರೆ ವಿಶ್ವಾಸಾರ್ಹ ಉತ್ಪನ್ನಗಳ ಗುಣವಿಶ್ಲೇಷಣೆ ಕ್ರಮದಿಂದಾಗಿ ಖರೀದಿ ಪ್ರಕ್ರಿಯೆಯಲ್ಲಿ ಸ್ಪರ್ಧೆ ಏರ್ಪಟ್ಟು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಮಾರಾಟವಾಗುವ ಉತ್ಪನ್ನಗಳಿಗೆ ನೈಜ ಬೆಲೆ ದೊರೆಯುವಂತಾಗಲಿದೆ.

ಗುಣವಿಶ್ಲೇಷಣಾ ಕೇಂದ್ರಗಳು

ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್ ಸಂಸ್ಥೆಯು ರಾಜ್ಯ ಕೃಷಿ ಮಾರಾಟ ಇಲಾಖೆಯ ಸಹಯೋಗದೊಂದಿಗೆ ಪ್ರಾರಂಭಿಕವಾಗಿ ಹುಬ್ಬಳ್ಳಿ, ಗದಗ, ಮುಂಡರಗಿ, ಬಳ್ಳಾರಿ, ಚಿತ್ರದುರ್ಗ, ತಿಪಟೂರು, ಕೊಪ್ಪಳ, ರೋಣ, ಲಕ್ಷ್ಮೇಶ್ವರ ಸೇರಿದಂತೆ 10 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ವೈಜ್ಞಾನಿಕ ಗುಣವಿಶ್ಲೇಷಣೆ ಪ್ರಯೋಗಾಲಯಗಳನ್ನು ಸ್ಥಾಪಿಸಿದೆ. ಈ ಕೇಂದ್ರಗಳಲ್ಲಿ ರೈತರು ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆ ಸೇವೆಯನ್ನು ಉಚಿತವಾಗಿ ಪಡೆಯಲು ಅನುಕೂಲ ಕಲ್ಪಿಸಲಾಗಿದೆ.

ಎರಡನೇ ಹಂತದಲ್ಲಿ ಬಾಗಲಕೋಟೆ, ಭದ್ರಾವತಿ, ಭೀಮಸಮುದ್ರ, ಬೀದರ್, ಬೀರೂರು, ಚಳ್ಳಕೆರೆ, ಚನ್ನಗಿರಿ, ದಾವಣಗೆರೆ, ಧಾರವಾಡ, ಗುಬ್ಬಿ, ಹರಪ್ಪನಹಳ್ಳಿ, ಹಿರಿಯೂರು, ಹೊಸದುರ್ಗ, ಹೊಸನಗರ, ಹುಳಿಯಾರು, ಕಡೂರು, ಕೊಟ್ಟೂರು, ಮೈಸೂರು, ರಾಯಚೂರು, ರಾಮದುರ್ಗ, ಸಾಗರ, ಶಿವಮೊಗ್ಗ, ಸಿದ್ದಾಪುರ, ಸಿರಾ, ಸಿರ್ಸಿ, ತೀರ್ಥಹಳ್ಳಿ, ತುಮಕೂರು, ಯಾದಗಿರಿ, ಯಲ್ಲಾಪುರ, ಅರಸೀಕೆರೆ ಸೇರಿದಂತೆ 30 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸ್ಥಾಪಿಸಲು ಉದ್ಧೇಶಿಸಲಾಗಿದೆ.