ನಾನು ತೊಗರಿ

 

ಭಾರತ ದೇಶದಲ್ಲಿನ ಪ್ರಮುಖ ದ್ವಿದಳ ಧಾನ್ಯಗಳ ಬೆಳೆಯಲ್ಲಿ ನಾನು ಅಗ್ರಸ್ಥಾನದಲ್ಲಿದ್ದೇನೆ. ಜಾಗತಿಕ ಹವಾಮಾನ ಬದಲಾವಣೆ ಎದುರಿಸುತ್ತಿರವ ಪ್ರಸ್ತುತ ಪರಿಸ್ಥಿತಿಯಲ್ಲಿಯೂ ಆಹಾರ ಭದ್ರತೆಗೆ ನನ್ನ ಕೊಡುಗೆ ಪ್ರಮುಖವಾಗಿದೆ ಎಂಬುದು ಹೆಮ್ಮೆ ತಂದಿದೆ. ಜನ ಸಾಮಾನ್ಯರು ಸಂಪ್ರದಾಯಕವಾಗಿ ನನ್ನನ್ನು ತೊಗರಿ ಅಥವಾ ತೊಗರಿಬೇಳೆ ಎಂದು ಕರೆಯುತ್ತಾರೆ. ಇನ್ನೂ ಕೆಲವು ಭಾಗಗಳಲ್ಲಿ ಪಾರಿವಾಳ ಬಟಾಣಿ ಎಂದು ನನಗೆ ನಾಮಕರಣ ಮಾಡಿದ್ದಾರೆ. ಆದರೆ ನನ್ನ ವೈಜ್ಞಾನಿಕ ಹೆಸರು ಕಜಾನಸ್ ಕಜಾನ, ವಿಜ್ಞಾನ ಆಧಾರಿತವಾಗಿ ನಾನು ಫಾಬೇಶನ್ ಕುಟುಂಬಕ್ಕೆ ಸೇರಿದ್ದೇನೆ. ನಾನು ಆಹಾರ ಭದ್ರತೆಯ ಬೆಳೆಯಾಗಿ, ವಾಣಿಜ್ಯ ರಪ್ತಿನ ಬೆಳೆಯಾಗಿ ಮತ್ತು ಆದಾಯ ಉತ್ಪದಿಸುವ ಮಹತ್ವದಿಂದಾಗಿ ಪ್ರಖ್ಯಾತಿ ಹೊಂದಿದ್ದೇನೆ.

ನಿಮ್ಮ ಆಹಾರ ಪದ್ದತಿಯ ಖಾದ್ಯಗಳಲ್ಲಿ ನನ್ನ ಬಳಕೆ ಪರಿಚಿತವಾಗಿದೆ . ನಾನು ತಮ್ಮ ಪ್ರತಿನಿತ್ಯದ ಆಹಾರ ಪದ್ದತಿಯಲ್ಲಿ ವಿವಿಧ ರೀತಿಯ ರುಚಿಕರ ಖಾದ್ಯಗಳಲ್ಲಿ ಬಳಕೆಯಾಗಿ ನಿಮ್ಮ ಊಟದ ತಟ್ಟೆಯಲ್ಲಿ ಲಭ್ಯವಾಗಿ ಪ್ರತಿಯೊಂದು ಮನೆಯಲ್ಲಿ ಜನಪ್ರಿಯ ಭಕ್ಷವಾಗಿರುತ್ತೇನೆ. ಭಾರತ ದೇಶದಲ್ಲಿನ ರಾಜ್ಯಗಳಲ್ಲಿ ನನ್ನನ್ನು ವಿವಿಧ ರೀತಿಯಲ್ಲಿ ಸಂಭೋಧಿಸುತ್ತಾರೆ. ಕನ್ನಡದಲ್ಲಿ ತೊಗರಿ ಅಥವಾ ತೊಗರಿಬೇಳೆ, ತಮಿಳು ಭಾಷೆಯಲ್ಲಿ ತುರವಂ ಪರುಪ್ಪು, ಹಿಂದಿಯಲ್ಲಿ ತೂರ್, ಬಂಗಾಳಿಯಲ್ಲಿ ದಾಲ್ ಎಂದು ಪ್ರಾಂತ್ಯವಾರುಗಳಲ್ಲಿ ನನ್ನ ಹೆಸರನ್ನು ಸಂಭೋಧಿಸುವುದು ವಾಡಿಕೆಯಾಗಿದೆ.

 

ನಾನು ಕೃಷಿ ಮೌಲ್ಯದ ಕಡಿಮೆ ಫಲವತ್ತಾದ ಭೂಮಿಯ ವ್ಯಾಪ್ತಿಯಾದ ಅರೆ ಶುಷ್ಕ ವಾತಾವರಣದಲ್ಲಿನ ಏಷ್ಯಾ ಮತ್ತು ಆಫ್ರಿಕಾ ಪ್ರದೇಶಗಳಲ್ಲಿ ಬೆಳೆಯುತ್ತೇನೆ. ಆದರೆ ಸಾಕಷ್ಟು ಮಂದಿಗೆ ಕೆಲವೊಂದು ಸತ್ಯಗಳ ಬಗ್ಗೆ ತಿಳುವಳಿಕೆ ಇಲ್ಲವಾಗಿದೆ. ಅಮೇರಿಕ ದೇಶದ ಅರೆ ಶುಷ್ಕ ಪ್ರದೇಶದಲ್ಲಿ ವಾರ್ಷಿಕ 1.1 ಬಿಲಿಯನ್ ನನ್ನ ನಷ್ಟ ಸಂಭವಿಸುತ್ತದೆ. ಇದಕ್ಕೆ ಪ್ರಮುಖ ಕಾರಣ ಕೆಲವೊಮ್ಮೆ ಕೀಟ ಮತ್ತು ರೋಗ ತೊಂದರೆಯಿಂದ ಪ್ರಮುಖ ಪೌಷ್ಟಿಕಾಂಶಗಳು ಅಥವಾ ಆರೋಗ್ಯ ವಿಫಲತೆ ಉಂಟಾಗುತ್ತದೆ. ಈ ಸಮಯದಲ್ಲಿ ನಾನು ಫ್ಯಸಾರಿಯಮ್ ಮತ್ತು ಸ್ಟೆರಿಲಿಟಿ ಮೊಸಾಯಿಕ್ ರೋಗಗಳಿಗೆ ತುತ್ತಾಗಿ ಬಳಲುತ್ತೇನೆ ಜೊತೆಗೆ ಹೆಲಿಕಾವರ್ಪ, ಮುರುಕಾ ಮತ್ತು ಪಾಡ್ ಫೈ ಕೀಟಗಳು ಕೂಡ ಸಾಕಷ್ಟು ತೊಂದರೆಯನ್ನು ಕೊಡುತ್ತದೆ.

ನಾನು 1000ಕ್ರಿ.ಪೂ. ಮೂಲದ ಸರಣಿ, ಬಳಿಕ ಇತಿಹಾಸ ಪೂರ್ವ ಅವಧಿಯಲ್ಲಿನ ಶಿಲಾಯುಗದಿಂದ ದೀರ್ಘಕಾಲಿಕ ಪುರತತ್ವ ಸಂಶೋಧನೆಗಳಿಂದ ದಕ್ಷಿಣ ಭಾರತದಲ್ಲಿ ಕಾಲಕ್ರಮೇಣ ಗುರುತಿಸಲ್ಪಟ್ಟಿದ್ದೇನೆ. ಆಫ್ರಿಕಾ ದೇಶದಲ್ಲಿ ನನ್ನ ದಾರಿಯನ್ನು ಗುರುತಿಸಲ್ಪಟ್ಟು, ನನಗೆ ಕಾಗೋಫಿ (ಕಾಗೋ ಬಟಾಣಿ) ಎಂದು ಹೊಸ ಹೆಸರಿನಿಂದ ಕರೆಯಲಾಯಿತು. ನಂತರ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಸ್ಥಳೀಯ ಅಮೇರಿಕನ್ನರ ನಡುವೆ ಗುಲಾಮಗಿರಿ ಜೀತ ಪದ್ಧತಿ ಪ್ರಗತಿ ಅವಧಿಯಲ್ಲಿ ಅಲ್ಲಿಗೆ ತೆರಳಿದೆ.

ನಾನು ದೀರ್ಘಕಾಲಿಕ ಸಸ್ಯ ಎಂಬುದು ಜನ ಸಾಮಾನ್ಯರಿಗೆ ತಿಳಿಯದ ಸಾಧ್ಯತೆಯಿದೆ. ನಾನು ಪ್ರಮುಖ ದ್ವಿದಳ ಧಾನ್ಯ ಬೆಳೆಯಾಗಿ ಮಳೆ ನೀರು ಅವಲಂಬಿತ ಅರೆಶುಷ್ಕ ವಾತಾವರಣದ ಉಷ್ಣವಲಯದಲ್ಲಿ ಬೆಳೆಯುತ್ತೇನೆ. ವಿಶ್ವದ ಭಾರತೀಯ ಉಪಖಂಡ, ಪೂರ್ವ ಆಫ್ರಿಕಾ ಮತ್ತು ಮಧ್ಯ ಅಮೇರಿಕಾದ ಭೌಗೋಳಿಕ ವಲಯಗಳಲ್ಲಿ ಸಾಗುವಳಿಯಾಗುತ್ತೇನೆ.

 

ಭಾರತದಲ್ಲಿ ಮುಂಗಾರು ಹಂಗಾಮಿನಲ್ಲಿ ನನ್ನ ಬಿತ್ತನೆ ಕಾರ್ಯ, ಅದು ಜೂನ್ ಮತ್ತು ಜುಲೈ ಮಾಸಗಳಲ್ಲಿ ನನ್ನ ಕೃಷಿ ಬಿತ್ತನೆ ಕಾರ್ಯ ವಿಶೇಷವಾಗಿ ನಡೆಯುತ್ತದೆ. ಉಷ್ಣ ವಲಯದ ಹವಾಮಾನ ನನಗೆ ಅತ್ಯಂತ ಅನುಕೂಲಕರವಾಗಿರುತ್ತದೆ. ನಾನು ಬರ ಸಹಿಷ್ಣುತೆ ಬೆಳೆಯಾಗಿ ಮಣ್ಣಿನಲ್ಲಿ ಮೊನಚಾದ ಬೇರುಗಳನ್ನು ಹೊಂದಲು ಆರ್ಶಿವಾದಿತನಾಗಿದ್ದೇನೆ.

ನಾನು ಗ್ರೀಸ್ ದೇಶದ ಭೂಪ್ರದೇಶಕ್ಕಿಂತ ಕಡಿಮೆಯಿಲ್ಲದಷ್ಟು ಅಂದರೆ 46 ಲಕ್ಷ ಹೆಕ್ಟೇರ್ ಭೂಪ್ರದೇಶದಲ್ಲಿ ನನ್ನ ಉತ್ಪಾದನೆ ಮಾಡಲಾಗುತ್ತದೆ. ನನ್ನ ಉತ್ಪದಾನೆ ವಿಶ್ವದಲ್ಲಿ ಸರಿಸುಮಾರು 4.98ಮಿಲಿಯನ್ ಟನ್‍ಗಳಷ್ಟು ಎಂದು ಅಂದಾಜಿಸಲಾಗಿದೆ. ಈ ಪೈಕಿ ಸುಮಾರು ಶೇಕಡ 80% ನನ್ನ ಉತ್ಪಾದನೆ ಭಾರತದಲ್ಲಿರುವುದನ್ನು ಅಂದಾಜು ಮಾಡಲಾಗಿದೆ. ಅಂದರೆ 1.05 ಮಿಲಿಯನ್ ಟನ್ ಉತ್ಪಾದನೆಯ ಮಟ್ಟವಾಗಿದೆ.

ಆಫ್ರಿಕಾ ದೇಶ ನನ್ನ ಉತ್ಪದಾನೆಯ ದ್ವಿತೀಯ ಕೇಂದ್ರ. ವಿಶ್ವದ ಒಟ್ಟಾರೇ ಉತ್ಪದಾನೆಯ ಪೈಕಿ ಶೇಕಡ 21% ರಷ್ಟು ನನ್ನ ಕೊಡುಗೆ ಈ ದೇಶದಿಂದಲ್ಲೇ ಲಭ್ಯವಾಗುತ್ತದೆ. ವಿಶ್ವದ 25 ರಷ್ಟು ಉಷ್ಣವಲಯ ಮತ್ತು ಉಪ ಉಷ್ಣವಲಯದಲ್ಲಿ ನಾನು ಏಕ ಬೆಳೆಯಾಗಿ ಮತ್ತು ಇಂಟರ್ ಮಿಕ್ಸ್ ಬೆಳೆಯಾಗಿ ಬೆಳೆಯುತ್ತೇನೆ. ಉದಾಹರಣೆಗೆ ಹುಲ್ಲು ಜೋಳ (ದೊಡ್ಡ ರಾಗಿ), ಬಾಜ್ರ ಅಥವಾ ಮೆಕ್ಕೆ ಜೋಳ (ಜಿಯಾಮೇಜ್) ಅಥವಾ ಇತರೆ ದ್ವಿದಳ ಧಾನ್ಯಗಳಾದ ಕಡಲೆಕಾಯಿ ಬೆಳೆಗಳ ಜೊತೆಯಲ್ಲಿ ನನ್ನನು ಬೆಳೆಯಲಾಗುತ್ತದೆ. ವಿಶೇಷವಾಗಿ ನನ್ನ ಬಳಿ ಸಹಜೀವನದ ಸಾಮರ್ಥ್ಯವಿದ್ದು ಪರಸ್ಪರ ಸಂಪರ್ಕದ ಜೊತೆಯಾಗಿ ರೈಜೋಬಿಯಾ ಬ್ಯಾಕ್ಟೀರಿಯ ಉತ್ಕ್ರಷ್ಟಗೊಳಿಸಲು ಸಹಜೀವನದ ಸಾರಜನಕ ಸ್ಥಿರೀಕರಣದ ಮೂಲಕ ಮಣ್ಣಿನಲ್ಲಿ ಬೇರುಗಳನ್ನು ಸೇರುತ್ತೇನೆ. ಆದ್ದರಿಂದ ಬೆಲೆಬಾಳುವ ಸಾವಯವ ಮತ್ತು ಸೂಕ್ಮ ಪೋಷಕಾಂಶಗಳು ಮಣ್ಣಿನಲ್ಲಿ ಲಭ್ಯವಾಗುತ್ತವೆ. ಒಂದು ಹೆಕ್ಟೇರ್‍ಗೆ 90ಕೆಜಿ ಸಾರಜನಕವನ್ನು ನಾನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದೇನೆ. ನಾನು ಮೇವು ಬೆಳೆಗಳ ಪಾತ್ರದ ವ್ಯಾಪ್ತಿಯನ್ನು ನಿರ್ವಹಿಸುತ್ತೇನೆ. ಸಾಮಾನ್ಯವಾಗಿ ಸುಗ್ಗಿ ಕಾಲದಲ್ಲಿ ನನ್ನ ಕೊಯ್ಲನ್ನು ರೈತರು ಕೈಯಿಂದಲೇ ಮಾಡುತ್ತಾರೆ. ತದನಂತರ ನನ್ನನ್ನು ಅಗತ್ಯಕ್ಕೆ ಅನುಗುಣವಾಗಿ ಸೂರ್ಯನ ಶಾಖದಲ್ಲಿ ಒಣಗಿಸುತ್ತಾರೆ ಬಳಿಕ ಕಣದಲ್ಲಿ ತೂರಿ,ಧಾನ್ಯ ಹೊಟ್ಟು ಮತ್ತು ಕಡ್ಡಿಕಸವನ್ನು ಬೇರ್ಪಡಿಸುತ್ತಾರೆ.

ಭಾರತೀಯ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ನನ್ನ ಆಗಮನ ಅಕ್ಟೋಬರ್ ತಿಂಗಳಲ್ಲಿ ಆರಂಭವಾಗುತ್ತದೆ. ನನ್ನ ಹೊಸ ತಳಿ4ರಿಂದ 6 ತಿಂಗಳಲ್ಲಿ ಕೊಯ್ಲುಗೆ ಬರುವುದರಿಂದ ರೈತರಿಗೆ ವಾಣಿಜ್ಯ ಬೆಳೆಯಾಗಿ ಬೆಳೆಯಲು ಉಪಕರವಾಗಿದೆ. ನನ್ನ ಎರಡು ಹೈಬ್ರಿಡ್ ಮೂಲಕ ತಳಿಗಳಾದ ICPH 2671 ಮತ್ತು ICPH 2740 ಬೀಜಗಳು ಸಾಮಾನ್ಯ ಕೃಷಿ ಪದ್ಧತಿಯಲ್ಲಿ ರೈತರಿಗಾಗಿ ಭಾರತದಲ್ಲಿ ಬಿಡುಗಡೆಯಾಗಿದೆ.
ಭಾರತ ದೇಶದ ರಾಜ್ಯಗಳಾದ ಮಹಾರಾಷ್ಟ್ರ, ಉತ್ತರಪ್ರದೇಶ,ಕರ್ನಾಟಕ, ಮಧ್ಯಪ್ರದೇಶ, ಗುಜರಾತ್ ರಾಜಸ್ತಾನ್ ಮತ್ತು ಆಂಧ್ರ ಪ್ರದೇಶಗಳಲ್ಲಿ ನನ್ನನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ದ್ವಿದಳ ಧಾನ್ಯಗಳ ಮೇಲೆ ನಮ್ಮ ದೇಶದ ಸಾಮಾನ್ಯ ಕುಟುಂಬಗಳು ಬಹುಹಿಂದಿನಿಂದಲೂ ಅವಲಂಬಿತವಾಗಿದೆ. ಭಾರತ ನನ್ನ ಉತ್ಪಾದನೆ, ಬಳಕೆ ಮತ್ತು ಆಮದು ಕ್ಷೇತ್ರದಲ್ಲಿ ಮೊದಲನೇ ಸ್ಥಾನ ಪಡೆದಿದೆ. ನಾನು ಬಟಾಣಿ ಬಳಿಕ ಎರಡನೇ ಪ್ರಮುಖ ಬೆಳೆಯಾಗಿದ್ದೇನೆ. ವಿಶ್ವದ 25ಕ್ಕು ಹೆಚ್ಚು ದೇಶಗಳಲ್ಲಿ ನನ್ನನು ಬೆಳೆಯಾಲಾಗುತ್ತದೆ ಎಂದು ಹೇಳಲು ಹೆಮ್ಮೆಯಾಗುತ್ತದೆ.
ಭಾರತೀಯರ ಆಹಾರ ಪದ್ಧತಿಯಲ್ಲಿ ಅತೀ ಹೆಚ್ಚು ಬಳಕೆಯಾಗುತ್ತೇನೆ. ನನ್ನ ಬೇಡಿಕೆ ಹೆಚ್ಚಿರುವುದರಿಂದ ಮಯನ್ಮಾರ್, ತಾನ್ ಜೇನಿಯಾ ಗಣರಾಜ್ಯ, ಮಲಾವಿ, ಉಗಾಂಡ, ಮೊಝಾಂಭಿಕ್ ಸೇರಿದಂತೆ ಇತರೆ ರಾಷ್ಟ್ರಗಳಿಂದಲೂ ಭಾರತಕ್ಕೆ ಅಮದು ಮಾಡಿಕೊಳುತ್ತಾರೆ. ಜೊತೆಗೆ ಯು.ಎ.ಇ, ಯುಎಸ್ ಎ, ಸಿಂಗಪೂರ್ ಮತ್ತು ಸೌದಿ ಅರೇಬಿಯ ರಾಷ್ಟ್ರಗಳಿಗೆ ಭಾರತದಿಂದ ನನ್ನನ್ನು ಸಣ್ಣ ಪ್ರಮಾಣದಲ್ಲಿ ರಪ್ತು ಮಾಡುತ್ತಾರೆ.
ಭಾರತದಲ್ಲಿ ಮುಂಗಾರು ಮತ್ತು ಹಿಂಗಾರು ಬೆಳೆಗಳು ನವೆಂಬರ್ ಮಾಸದಿಂದ ಮಾರುಕಟ್ಟೆಗೆ ಬರುವ ಅವಕವಾಗುವ ಸಮಯ. ನನ್ನ ಉತ್ಪಾದನೆ ಮುಂಗಾರು ಋತುವಿನಲ್ಲಿ ಮಾತ್ರ, ಈ ಕಾರಣದಿಂದಲ್ಲೇ ದ್ವಿದಳ ಧಾನ್ಯಗಳ ಪೈಕಿ ನನ್ನ ಬೆಲೆ ಮಾತ್ರವೇ ಅತಿ ಹೆಚ್ಚಾಗಿ ಉಲ್ಬಣಿಸುತ್ತದೆ. ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ ದ್ವಿದಳ ಧಾನ್ಯಗಳ ಉತ್ಪಾದನೆ ಶೇಕಡ 70% ರಷ್ಟು. ನನ್ನ ಬೇಡಿಕೆಯು ಹಬ್ಬದ ರುತುಮಾಸಗಳಲ್ಲಿ ಹೆಚ್ಚಾಗಿರುತ್ತದೆ. ಕೃಷ್ಣ ಜನ್ಮಾಷ್ಠಮಿಯಿಂದ ದೀಪಾವಳಿ (ಆಗಸ್ಟ್ ನಿಂದ ನವೆಂಬರ್)ವರೆಗೆ ಹೆಚ್ಚು ಬೇಡಿಕೆ ಇದೆ. ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯನ್ನು ಗ್ರಾಹಕರು ಒಪ್ಪಲೇಬೇಕಾಗಿದೆ. ಆದ್ದರಿಂದ ವರ್ತಕರು ಇಂತಹ ಅವಕಾಶವನ್ನು ಬಳಸಿಕೊಳ್ಳುತ್ತಾರೆ.
ಈ ಸಮಯದ ನಡುವೆ ಮುಂಗಾರು ಬೆಳೆ ಬಗ್ಗೆ ಹುರುಳಿಲ್ಲದ ಮಾಹಿತಿ ಮತ್ತು ಧಾರಣೆಯಲ್ಲಿ ಏರಿಕೆಗಳು ಕೂಡ ಮಾರುಕಟ್ಟೆಯನ್ನು ಪ್ರವೇಶಿಸುತ್ತವವೆ. ಇದರಿಂದ ನನ್ನ ಬೆಲೆ ಹೆಚ್ಚಾಗುತ್ತದೆ. ಇತರೆ ಕಾರಣಗಳು ಒಳಗೊಂಡಂತೆ ಅನಿರ್ದಿಷ್ಟವಾದ ಮುಂಗಾರು ವೈಫಲ್ಯ, ಗ್ವೌಪ್ಯ ಸಂಗ್ರಹಣೆ ಇದಕ್ಕೆ ಕಾರಣವಾಗಿದೆ.
ನಾನು ಭಾರತದಲ್ಲಿ ಪ್ರಮುಖವಾಗಿ ವ್ಯಾಪಾರವಾಗುವ ರಾಜ್ಯಗಳೆಂದರೆ ಇಂಡೋರ್, ಭೂಪಾಲ್,ಒಡಿಶಾ, ಜಲಗಾಂವ್, ಲಾತೂರ್, ಮುಂಬೈ, ಅಕೋಲಾ ಇತ್ಯಾದಿ, ನಾನು ಕರ್ನಾಟಕದ ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ವ್ಯಾಪಾರವಾಗುತ್ತೇನೆ. ಕರ್ನಾಟಕದಲ್ಲಿ ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್‍ನ ಏಕೀಕೃತ ಮಾರುಕಟ್ಟೆ ವೇದಿಕೆಯ ಆನ್‍ಲೈನ್‍ನಲ್ಲಿ ನಾನು ವ್ಯಾಪಾರವಾಗುತ್ತೇನೆ. ರಾಷ್ಟ್ರೀಯ ಸರಕು ಮತ್ತು ಉತ್ಪನ್ನಗಳ ವಿನಿಮಯ ಲಿಮಿಟೆಡ್ ಮತ್ತು ರಾಷ್ಟ್ರೀಯ ಬಹು ಸರಕು ವಿನಿಮಯ ಇಂಡಿಯಾ ಲಿಮಿಟೆಡ್ ನಲ್ಲಿ ಕೂಡ ನಾನು ವ್ಯಾಪಾರವಾಗುತ್ತೇನೆ.
ಕೆಳಗಿನ ರೇಖಾ ಚಿತ್ರವನ್ನು ತಾವು ಗಮನಿಸಿ, ನನ್ನನು ಸಂಗ್ರಹಿಸಲು ಸರ್ಕಾರ ನೀಡಿದ ಬೆಂಬಲ ಬೆಲೆಯನ್ನು ನೋಡಬಹುದು. ಹೌದು, ನನ್ನ ರೈತರು ಈ ರೀತಿಯಲ್ಲಿ ಒಂದು ಖಾತ್ರಿ ಪಡೆಯುತ್ತಾರೆ. ಇದನ್ನು ನೋಡಿದರೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಲೆ ಲಭ್ಯವಾಗುತ್ತಿರುದನ್ನು ನೋಡಿ ಸಂತೋಷವಾಗಿದೆ.

ಸರ್ಕಾರ ಘೋಷಿಸಿದ ಬೆಂಬಲ ಬೆಲೆಗಿಂತಲೂ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ 2014 ರಿಂದ ಹೆಚ್ಚಿನ ಬೆಲೆ ದೊರೆಯುತ್ತಿರುವುದುನ್ನು ನಾನು ನೋಡುತಿದ್ದೇನೆ.

“ಒಣ ಮೆಣಸಿನಕಾಯಿ ಕಣಜ” ಬ್ಯಾಡಗಿ ಎಪಿಎಂಸಿಯಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ

“ಒಣ ಮೆಣಸಿನಕಾಯಿ ಕಣಜ” ಬ್ಯಾಡಗಿ ಎಪಿಎಂಸಿಯಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ:
ಶ್ರೀ. ಮನೋಜ್ ರಾಜನ್
ವ್ಯವಸ್ಥಾಪಕ ನಿರ್ದೇಶಕರು & ಸಿಇಒ,
ರೆಮ್ಸ್, ಬೆಂಗಳೂರು.

ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಬೈ ಸರ್ಕಾರದ ಕಂದಾಯ ಇಲಾಖೆಯ ಅಧಿಸೂಚನೆ ಅನ್ವಯ 1948ರಲ್ಲಿ ಸ್ಥಾಪನೆಯಾಗಿದೆ. ಕಾಲ ಕ್ರಮೇಣ ಕರ್ನಾಟಕ ರಾಜ್ಯ ಏಕೀಕರಣಗೊಂಡ ಬಳಿಕ ಕರ್ನಾಟಕ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ಶಾಸನ 1966 ಮತ್ತು ನಿಯಮಗಳು 1968 ರ ಕಾಯ್ದೆ ಅಡಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ರಾಜ್ಯದಲ್ಲಿ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿವೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರಮುಖವಾಗಿ ವಹಿವಾಟು ನಡೆಯುವ ಉತ್ಪನ್ನ ಒಣಮೆಣಸಿನಕಾಯಿ, ದಕ್ಷಿಣ ಭಾರತದಲ್ಲಿ ಒಣಮೆಣಸಿಕಾಯಿ ಆವಕವಾಗುವ ಮಾರುಕಟ್ಟೆಗಳ ಪೈಕಿ ಕರ್ನಾಟಕದ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ಅಗ್ರಸ್ಥಾನವನ್ನು ಪಡೆದುಕೊಂಡಿದೆ. 6 ದಶಕಕ್ಕೂ ಹೆಚ್ಚು ಅವಧಿಯಿಂದ ಬ್ಯಾಡಗಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಈ ಮಾರುಕಟ್ಟೆಗೆ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರದ ರೈತರು ಭಾಗೀದಾರರಾಗಿದ್ದಾರೆ. ಬ್ಯಾಡಗಿ ಎಪಿಎಂಸಿಯನ್ನು ಒಣಮೆಣಸಿನಕಾಯಿ ಕಣಜ ಎಂದು ಕರೆಯುವುದು ವಾಡಿಕೆಯಾಗಿದೆ. ಈ ಮಾರುಕಟ್ಟೆಯಲ್ಲಿ ಆವಕವಾಗುವ ಮೆಣಸಿನಕಾಯಿ ಉತ್ಪನ್ನಕ್ಕೆ ದೇಶ ವಿದೇಶಗಳಿಂದ ಅತೀ ಹೆಚ್ಚಿನ ಬೇಡಿಕೆ ಇದೆ, ಇಲ್ಲಿಂದಲೇ ಈ ಉತ್ಪನ್ನವನ್ನು ರಪ್ತು ಮಾಡಲಾಗುತ್ತಿದೆ.

ಇಂತಹ ಪ್ರಖ್ಯಾತಿ ಹೊಂದಿದ ಮಾರುಕಟ್ಟೆಯಲ್ಲಿ ಒಣಮೆಣಸಿನಕಾಯಿ ವ್ಯಾಪಾರ ವಹಿವಾಟು ಈ ಹಿಂದೆ ಮ್ಯಾನುಯಲ್ ಟೆಂಡರ್ ( ಸಿಬ್ಬಂದಿ ಅವಲಂಭಿತ) ಪದ್ದತಿಯಲ್ಲಿ ನಡೆಸಲಾಗುತ್ತಿತ್ತು.

ಪ್ರತಿ ಸೋಮವಾರ ಮತ್ತು ಗುರುವಾರ ಮಾರುಕಟ್ಟೆಗೆ ವಿವಿಧ ಭಾಗಗಳಿಂದ ರೈತರು ಒಣಮೆಣಸಿನಕಾಯಿ ಉತ್ಪನ್ನವನ್ನು ಮಾರಾಟಕ್ಕಾಗಿ ತರುತ್ತಿದ್ದರು. ಮಾರುಕಟ್ಟೆಯಲ್ಲಿ ಮ್ಯಾನುಯೆಲ್ ಟೆಂಡರ್ ಆಗುತ್ತಿದ್ದುದರಿಂದ ರೈತರು ಮತ್ತು ವರ್ತಕರು ಮಾರುಕಟ್ಟೆ ಪ್ರಾಂಗಣದಲ್ಲಿ ವಹಿವಾಟಿಗಾಗಿ ಹೆಚ್ಚು ಸಮಯ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಉತ್ಪನ್ನಕ್ಕೆ ಕೈಯಿಂದ ದರ ನಮೂದಿಸಿ ಟೆಂಡರ್ ಪೆಟ್ಟಿಗೆಗೆ ಖರೀದಿದಾರರು ಹಾಕುತ್ತಿದ್ದರು. ಮಾರುಕಟ್ಟೆ ಅಧಿಕಾರಿಗಳು ಲಾಟ್ ನಂಬರ್ ವಾರು ಟೆಂಡರ್ ಡಿಕ್ಲರೇಷನ್ ಸ್ಲಿಪ್ ರೈತರಿಗೆ ನೀಡಲು ಹರಸಹಾಸ ಪಡುವಂತಹ ವ್ಯವಸ್ಥೆಯನ್ನು ತಾವು ಕಂಡಿರಬಹುದು. ದರಪಟ್ಟಿ ಪೂರೈಸಿದ ನಂತರ ರೈತರ ಉತ್ಪನ್ನಗಳನ್ನು ತೂಕ ಮಾಡಿ, ರೈತರಿಗೆ ಲೆಕ್ಕತೀರುವಳಿ ಪಟ್ಟಿಯನ್ನು ಸಿದ್ದಪಡಿಸಿ, ರೈತರಿಗೆ ಹಣ ಪಾವತಿ ಮಾಡುವುದು ವರ್ತಕರು ಖರೀದಿಸಿದ ಉತ್ಪನ್ನವನ್ನು ವರ್ತಕರಿಗೆ ವಿತರಿಸುವುದು ಮತ್ತು ಅವರ ಉತ್ಪನ್ನ ಸಾಗಟ ಮಾಡಲು ಪರ್ಮಿಟ್ ನೀಡುವುದು, ಇಡೀ ಹಗಲು ರಾತ್ರಿಯ ಕಾರ್ಯ ಚಟುವಟಿಕೆಯಾಗಿತ್ತು. ಈ ರೀತಿಯ ಒತ್ತಡದ ಕಾರ್ಯದಿಂದಾಗಿ ಮಾರುಕಟ್ಟೆ ಅಧಿಕಾರಿಗಳು ಎಷ್ಟೇ ಜಾಗೃತಿ ವಹಿಸಿದರೂ ಸರ್ವೆಸಾಮಾನ್ಯವಾಗಿ ಪಾರದರ್ಶಕತೆ ಮತ್ತು ದಕ್ಷತೆ ಕಾಪಾಡಲು ಸಾಧ್ಯವಾಗುತ್ತಿರಲಿಲ್ಲಾ. ಮಾರುಕಟ್ಟೆಗಳಲ್ಲಿ ಈ ರೀತಯ ಅನಾನುಕೂಲಗಳನ್ನು ತಪ್ಪಿಸಿ, ಮಾರುಕಟ್ಟೆಯಲ್ಲಿ ಎಲ್ಲಾ ವಹಿವಾಟುಗಳನ್ನು ಪಾರದರ್ಶಕತೆ, ದಕ್ಷತೆ ಹಾಗೂ ಸರಳತೆಯಿಂದ ನಡೆಸಲು ಏಕೀಕೃತ ಮಾರುಕಟ್ಟೆ ವೇದಿಕೆಯನ್ನು ಸ್ಥಾಪಿಸಲಾಯಿತು.

ರೈತಸ್ನೇಹಿ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಆನ್‍ಲೈನ್ ಟೆಂಡರ್ (ಇ-ಟೆಂಡರ್):

ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 2014ರ ನವೆಂಬರ್ ಮಾಸದಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆಯನ್ನು ಸ್ಥಾಪಿಸಲಾಯಿತು. ಈ ವೇದಿಕೆಯಡಿ ಮಾರುಕಟ್ಟೆಗೆ ಆವಕವಾದ ಉತ್ಪನ್ನಗಳಿಗೆ ಆನ್‍ಲೈನ್ ಟೆಂಡರ್ ವ್ಯವಸ್ಥೆ ಮಾಡಲಾಗಿದೆ, ಜೊತೆಗೆ ಉತ್ಪನ್ನ ಖರೀದಿಗೆ ಸ್ಪರ್ಧೆ ಹೆಚ್ಚಿಸುವ ಉದ್ದೇಶದಿಂದ ಮಾರುಕಟ್ಟೆಯಲ್ಲಿ ಉತ್ಪನ್ನಗಳ ಗುಣವಿಶ್ಲೇಷಣೆ ಮಾಡಿದ ಪೂರ್ಣ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಅನುಕೂಲದಿಂದಾಗಿ ಏಕೀಕೃತ ಲೈಸನ್ಸ್ ಪಡೆದ ಹೊರಗಿನ ಖರೀದಿದಾರರು ಉತ್ಪನ್ನದ ಗುಣಧರ್ಮ, ಗುಣವಿಶ್ಲೇಷಣೆಯ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಪರಿಶೀಲಿಸಿ, ಆನ್‍ಲೈನ್ ಟೆಂಡರ್  ನಲ್ಲಿ ವರ್ತಕರು ಇದ್ದ ಸ್ಥಳದಿಂದಲೇ ಭಾಗವಹಿಸಲು ಅನುವು ಮಾಡಲಾಗಿದೆ.

ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಉತ್ಪನ್ನಗಳ ಖರೀದಿಗೆ ಸ್ಪರ್ಧೆ ಹೆಚ್ಚಿಸಿ, ರೈತರ ಉತ್ಪನ್ನಗಳಿಗೆ ನೈಜ ಬೆಲೆ ಕಲ್ಪಿಸುವುದೇ ಪ್ರಮುಖವಾದ ಅಂಶ. ಈ ವ್ಯವಸ್ಥೆಯಿಂದ ಹಗಲು-ರಾತ್ರಿ ರೈತರು ಮಾರುಕಟ್ಟೆಯಲ್ಲಿ ಬೆಳೆ ಮಾರಾಟ ಮಾಡಲು ಕಾಯುವಂತಹ ಸ್ಥಿತಿ ದೂರವಾಗಿದೆ. ಮಾರುಕಟ್ಟೆಯ ವ್ಯಾಪಾರ ವಹಿವಾಟಿನ ದಿನದಂದು ರೈತರು ತಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ತಂದು, ತಮಗೆ ಬೇಕೆನಿಸಿದ ವರ್ತಕರು, ದಲ್ಲಾಲರು ಅಥವಾ ಮಾರುಕಟ್ಟೆ ಪ್ರಾಂಗಣದಲ್ಲಿ ಮಾರಾಟಕ್ಕಾಗಿ ಪ್ರದರ್ಶಿಸಬಹುದು ಮಾರಾಟಕ್ಕಿಟ್ಟ ಉತ್ಪನ್ನಗಳಿಗೆ (ಹುಟ್ಟುವಳಿಗೆ) ಪ್ರತ್ಯೇಕ ಲಾಟ್ ಸಂಖ್ಯೆ ನೀಡಿ ಆವಕಪಟ್ಟಿ ಸಿದ್ದಪಡಿಸಲಾಗುತ್ತದೆ. ಈ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಲಾಗುತ್ತಿದೆ. ಸ್ಥಳೀಯ ಖರೀದಿದಾರರು ಆನ್‍ಲೈನ್ ನಲ್ಲು ಉತ್ಪನ್ನಗಳ ಮಾಹಿತಿಯನ್ನು ಪರಿಶೀಲಿಸುತ್ತಾರೆ. ಬಳಿಕ ಖರೀದಿದಾರರು ಅದೇ ದಿನದಂದು ಮಧ್ಯಾಹ್ನ 3 ಗಂಟೆಯವರೆಗೆ ಮಾರುಕಟ್ಟೆ ಸಮಿತಿಯ ಇ-ಟೆಂಡರ್ ಹಾಲ್‍ನಲ್ಲಿ ಅಥವಾ ಅಂತರ್ಜಾಲದ ಮೂಲಕ ಏಕೀಕೃತ ಮಾರುಕಟ್ಟೆ ವೇದಿಕೆಯ (ರೆಮ್ಸ್) ವೆಬ್‍ಸೈಟ್‍ನಲ್ಲಿ ಅಗತ್ಯ ಉತ್ಪನ್ನಕ್ಕೆ ದರಗಳನ್ನು ನಮೂದಿಸುತ್ತಾರೆ. ಸುಮಾರು ಮಧ್ಯಾಹ್ನ 3.30ರ ವೇಳೆಗೆ ಖರೀದಿದಾರರು ನಮೂದಿಸಿದ ಗರಿಷ್ಟ ದರದ ಪಟ್ಟ್ಟಿಯನ್ನು ಅಂತಿಮಗೊಳಿಸಿ, ಟೆಂಡರ್ ಡಿಕ್ಲರೇಶನ್ ಮಾಡಲಾಗುತ್ತಿದೆ. ಈ ಮಾಹಿತಿಯನ್ನು ರೈತರಿಗೆ  ಎಸ್ಎಂಎಸ್  ಕೂಡ ಕಳುಹಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜೊತೆಗೆ ಟೆಂಡರ್ ಡಿಕ್ಲರೇಷನ್ ಸ್ಲಿಪ್‍ಗಳನ್ನು ಖರೀದಿದಾರರಿಗೆ ಅಂತರ್ಜಾಲದ ಮೂಲಕ ಲಭ್ಯವಾಗುವಂತೆ ಮಾಡಲಾಗಿದೆ. ಮಾರುಕಟ್ಟೆ ಪ್ರಾಂಗಣದಲ್ಲಿ ಟಿ.ವಿ.ಪರದೆಯಲ್ಲಿ ಟೆಂಡರ್ ಡಿಕ್ಲರೇಷನ್ ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತಿದೆ. ಬಳಿಕ ಅಂದಿನ ದರಕ್ಕೆ ರೈತರು ಒಪ್ಪಿಗೆ ಸೂಚಿಸಿದರೆ, ಉತ್ಪನ್ನದ ತೂಕದ ಪ್ರಕ್ರಿಯೆ ನಡೆಸಿದ ಬಳಿಕ ವಿಕ್ರಿಪಟ್ಟಿ ಅಥವಾ ಅಧಿಕೃತ ಲೆಕ್ಕತೀರುವಳಿ ಪಟ್ಟಿಯನ್ನು ರೈತರಿಗೆ ನೀಡಲಾಗುವುದು. ಈ ವ್ಯವಸ್ಥೆಯಿಂದ ರೈತ ಬಾಂಧವರು ಸಂಜೆಯ ವೇಳೆಗೆ ತಮ್ಮ ತಮ್ಮ ಉತ್ಪನ್ನಕ್ಕೆ ದೊರೆತ, ಮೊತ್ತವನ್ನು ಪಡೆದು ತಮ್ಮ ಗ್ರಾಮಗಳಿಗೆ ತೆರಳಲು ಸಹಾಯಕವಾಗಿದೆ. ಏಕೀಕೃತ ಮಾರುಕಟ್ಟೆಯ ಆನ್‍ಲೈನ್ ಟೆಂಡರ್ ಪ್ರಕ್ರಿಯೆಗಳಿಂದಾಗಿ ಸಮಯ ಉಳಿತಾಯವಾಗಿದೆ ಮತ್ತು ಪಾರದರ್ಶಕತೆ ವಾತಾವರಣ ಹೆಚ್ಚಾಗಿ ಉತ್ಪನ್ನಗಳಿಗೆ ನೈಜ ಬೆಲೆ ದೊರೆಯುತ್ತಿದೆ ಎಂದು ರೈತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇನ್ನು ವರ್ತಕರಿಗೆ ಅವರ ಬೆರಳ ತುದಿಯಲ್ಲಿಯೇ ಟೆಂಡರ್ ಡಿಕ್ಲರೇಷನ್ ಮಾಹಿತಿ, ಮಾರುಕಟ್ಟೆ ದಿನದ ಉತ್ಪನ್ನ ದಾಸ್ತಾನು ಅದೇ ದಿನ ಅವರ ಖಾತೆಗೆ ಜಮಾ ಮಾಡಿದ ವಿವರ ಹಾಗು ಬಹುಮುಖ್ಯವಾಗಿ ಉತ್ಪನ್ನ ಸಾಗಾಣಿಕೆ ಮಾಡಲು ಇ-ಪರ್ಮಿಟ್ ಉತ್ಪನ್ನದ ಹಣ ಪಾವತಿ ಮಾಡಿದ ಕೂಡಲೇ ಯಾವುದೇ ಸಮಯದಲ್ಲಿ ಎಲ್ಲಿಂದಾದರು ಇ-ಪರ್ಮಿಟ್ ಪಡೆಯುವ ಖರೀದಿದಾರರಿಗೆ ಅನುಕೂಲ ಮಾಡಲಾಗಿದೆ.

ಒಟ್ಟಾರೆ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಸ್ಪರ್ಶದಿಂದ ಇ-ಟೆಂಡರ್ ವ್ಯವಸ್ಥೆ ರೈತಸ್ನೇಹಿಯಾಗಿದೆ. ತೊಂದರೆ ಮುಕ್ತ ಮಾರುಕಟ್ಟೆಯ ಅನುಕೂಲವನ್ನು ಮಾರುಕಟ್ಟೆ ಭಾಗೀದಾರರು ಮತ್ತು ರೈತರು ಪಡೆದುಕೊಂಡು, ಸರ್ಕಾರದ ರೈತಪರವಾದ ಮಹತ್ವಾಕಾಂಕ್ಷೆ ಯೋಜನೆ ಉಪಯುಕ್ತವಾಗಿರಲಿ ಎಂಬುದೇ ನಮ್ಮ ಅಪೇಕ್ಷೆ.

 

ಬ್ಯಾಡಗಿ ಎಪಿಎಂಸಿಯಲ್ಲಿ ಮ್ಯಾನುಯಲ್ ಟೆಂಡರ್ (2014-15) ಮತ್ತು ಇ-ಮಾರ್ಕೆಟ್‍ನ ಆನ್‍ಲೈನ್ ಟೆಂಡರ್(2015-16) ನಿಂದಾದ ಸಾಧನೆಯ ಕುರಿತ ಅಂಕಿಅಂಶಗಳ ವಿವರ:
ವಿವರ 2014-15 2015-16 ಬೆಳವಣಿಗೆ
ಆವಕ ( ಲಕ್ಷ ಕ್ವಿಟಾಂಲ್) 8.61 9.81 13.9
ಮಾದರಿ ಧಾರಣೆ ( ರೂ.) ಕಡ್ಡಿ 7896 8899 12.7
ಡಬ್ಬಿ 8800 9898 12.5/td>
ಗುಂಟೂರು 5279 7399 40.2/td>
ಬೆಲೆ (ರೂ.ಕೋಟಿಗಳಲ್ಲಿ) 621 860 38.5
ಮಾರುಕಟ್ಟೆ ಶುಲ್ಕ (ರೂ.ಕೋಟಿಗಳಲ್ಲಿ) 9.31 12.91 38.7
ಒಂದು ದಿನದ ವಹಿವಾಟು ಆವಕ(ಲಕ್ಷ ಚೀಲ) 1.2 2 66.7
ಲಾಟ್ಸ್ 14,000 21,083 50.6
ಬಿಡ್ಸ್ 80,000 107,621 34.5
ವರ್ತಕರು 60 195 225.0
ಸಮಯ ಮಾರಾಟದ ದಿನದ ಹಗಲು-ರಾತ್ರಿ ಮಾರಾಟದ ದಿನದ ಸಂಜೆ.6.30
ಟೆಂಡರ್ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ 50 ಜನ 10 ಜನ -80.0

 

ಅಂಕಿ ಅಂಶಗಳ ಕೃಪೆ : ಟಿ.ಎ.ಮಹೇಶ್, ಕಾರ್ಯದರ್ಶಿಗಳು, ಬ್ಯಾಡಗಿ,ಎಪಿಎಂಸಿ.

ಬ್ಯಾಡಗಿ ಎಪಿಎಂಸಿಯಲ್ಲಿ 2014-15 ಸಾಲಿನಲ್ಲಿ ಮ್ಯಾನುಯಲ್ ಟೆಂಡರ್ ಮೂಲಕ ವ್ಯಾಪಾರ ವಹಿವಾಟು ನಡೆಸಲಾಗುತ್ತಿತ್ತು. ಈ ಟೆಂಡರ್ ಪ್ರಕ್ರಿಯೆಯಲ್ಲಿ ಒಂದು ದಿನದ ವ್ಯಾಪಾರ ವಹಿವಾಟಿನ ಚಿತ್ರಣವನ್ನು ಮೇಲ್ಕಂಡ ಅಂಕಿ ಅಂಶಗಳ ಪಟ್ಟಿಯಲ್ಲಿ ಗಮನಿಸಬಹುದಾಗಿದೆ. ಒಂದು ದಿನದ ವಹಿವಾಟಿನ ವಿವರ ಹೀಗಿದೆ, 8.61 ಲಕ್ಷ ಕ್ವಿಂಟಾಲ್ ಒಣಮೆಣಸಿನಕಾಯಿ ಆವಕ, ಈ ಪೈಕಿ ಕಡ್ಡಿಗೆ 7896, ಡಬ್ಬಿ – 8800 ಮತ್ತು ಗುಂಟೂರು 5279 ಮಾದರಿ ಧಾರಣೆ ಲಭ್ಯವಾಗಿದೆ, ಅಂದಿನ ಒಟ್ಟು ವ್ಯಾಪಾರ ವಹಿವಾಟು 621 ಕೋಟಿ ರೂಪಾಯಿಗಳು. ಇದರಿಂದ ಮಾರುಕಟ್ಟೆ ಶುಲ್ಕ ರೂ. 9.31 ಕೋಟಿ ಲಭ್ಯವಾಗಿದೆ. ಅಂದಿನ ಟೆಂಡರ್ ನಲ್ಲಿ 1.2 ಲಕ್ಷ ಚೀಲಗಳ, 14,000 ಲಾಟ್ ಗಳಿಗೆ 80,000 ಬಿಡ್ ಗಳು ನಡೆದಿರುತ್ತದೆ. ಒಟ್ಟಾರೆ, ಟೆಂಡರ್ ಪ್ರಕ್ರಿಯೆಯಲ್ಲಿ 60 ಮಂದಿ ವರ್ತಕರು ಭಾಗವಹಿಸಿರುತ್ತಾರೆ. ಮ್ಯಾನುಯಲ್ ಟೆಂಡರ್ ನಿಂದಾಗಿ ವ್ಯಾಪಾರ ವಹಿವಾಟು ಹಗಲು, ರಾತ್ರಿ ನಡೆಯುತ್ತಿತ್ತು. ಈ ರೀತಿ ಟೆಂಡರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸುಮಾರು 50 ಜನ ಮಾರುಕಟ್ಟೆಯ ಸಿಬ್ಬಂದಿಗಳು ಕಾರ್ಯನಿವೃಹಿಸುತ್ತಿದ್ದರು. ರೈತರು ಖರೀದಿದಾರರಿಗೆ ಮತ್ತು ಸಿಬ್ಬಂದಿಗೆ ವಹಿವಾಟು ಸುಗಮವಾಗಿ ಮುಗಿಸಲು ಹರಸಾಹ¸ ಪಡಬೇಕಾಗಿತ್ತು.

ಆನ್ ಲೈನ್ ಟೆಂಡರ್ ವ್ಯವಸ್ಥೆಯನ್ನು ಜಾರಿಗೆ ತಂದ ನಂತರ, ಮಾರುಕಟ್ಟೆಯಲ್ಲಿ ತ್ವರಿತವಾಗಿ ವ್ಯಾಪಾರ ವಹಿವಾಟು ನಡೆಯುತ್ತಿದೆ ಹಾಗೂ ಉತ್ಪನ್ನಕ್ಕೆ ಸ್ಪರ್ಧತ್ಮಕ ಬೆಲೆ ಲಭ್ಯವಾಗಿರುವುದನ್ನು ಕೂಡ 2015-16ರ ಅಂಕಿ ಅಂಶಗಳ ಸಾಲಿನಲ್ಲಿ ಸಂಪೂರ್ಣ ಮಾಹಿತಿಯನ್ನು ಗಮನಿಸಬಹುದಾಗಿದೆ. ಏಕೀಕೃತ ಮಾರುಕಟ್ಟೆ ವೇದಿಕೆಯ ಆನ್‍ಲೈನ್ ಟೆಂಡರ್ ನಲ್ಲಿ ನಡೆದ ಒಂದು ದಿನದ ವ್ಯಾಪಾರ ವಹಿವಾಟಿನ ವಿವರ ಮೇಲಿನ ಅಂಕಿ ಅಂಶಗಳ ಪಟ್ಟಿಯಲ್ಲಿ ನೀಡಿದಂತೆ, 9.81 ಲಕ್ಷ ಕ್ವಿಂಟಾಲ್ ಒಣಮೆಣಸಿನಕಾಯಿ ಉತ್ಪನ್ನದ ಪೈಕಿ ಕಡ್ಡಿ, 8899/- ರೂ, ಡಬ್ಬಿ – 9898/- ರೂ ಮತ್ತು ಗುಂಟೂರು – 7399/- ರೂ ಉತ್ಪನ್ನದ ಗುಣಧರ್ಮಕ್ಕೆ ಅನುಗುಣವಾಗಿ ಮಾದರಿ ಧಾರಣೆ ಲಭ್ಯವಾಗಿದೆ. ಅಂದು ಮಾರುಕಟ್ಟೆಯಲ್ಲಿ ರೂ 860/- ಕೋಟಿ ವ್ಯಾಪಾರ ವಹಿವಾಟು ನಡೆದಿದೆ. 2014-15ರ ಸಾಲಿಗೆ ಹೋಲಿಸಿದರೆ ಶೇಕಡ 38.5% ರಷ್ಟು ಪ್ರಗತಿಯಾಗಿರುವುದನ್ನು ಗಮನಿಸಬಹುದಾಗಿದೆ. ಅದೇ ರೀತಿ ಮಾರುಕಟ್ಟೆ ಶುಲ್ಕ ಸಂಗ್ರಣೆಯಲ್ಲೂ ಗಣನೀಯ ಹೆಚ್ಚಳವಾಗಿದೆ ರೂ 12.91 ಕೋಟಿ ಕಳೆದ ವರ್ಷಕ್ಕಿಂತ ಶೇಕಡ 38.7 ರಷ್ಟು ಹೆಚ್ಚಳವಾಗಿದೆ.

ಒಂದು ದಿನದ ವಹಿವಾಟಿನಲ್ಲ್ಲಿ 2 ಲಕ್ಷ ಒಣಮೆಣಸಿನಕಾಯಿ ಚೀಲಗಳ 21,083 ಲಾಟುಗಳಿಂದ 1,07,621 ಬಿಡ್‍ಗಳನ್ನು ಮಾಡಲಾಗಿದೆ. ಈ ವ್ಯಾಪಾರ ವಹಿವಾಟಿನಲ್ಲಿ ಸುಮಾರು 195 ಖರೀದಿದಾರರು ಆನ್‍ಲೈನ್ ಟೆಂಡರ್ ನಲ್ಲಿ ಭಾಗವಹಿಸಿರುತ್ತಾರೆ. 2014-15ರ ಸಾಲಿಗೆ ಹೋಲಿಸಿದರೆ ಶೇಕಡ 225 % ಖರೀದಿಯಲ್ಲಿ ಸ್ಪರ್ಧೆ ಹೆಚ್ಚಾಗಿರುವುದನ್ನು ಅಂಕಿ ಅಂಶಗಳ ಪಟ್ಟಿಯಲ್ಲಿ ನೋಡಬಹುದು. ಇನ್ನೂ ಬೆಳಗ್ಗೆ 10 ಗಂಟೆಗೆ ಆನ್ ಲೈನ್ ಟೆಂಡರ್ ಪ್ರಕ್ರಿಯೆ ಆರಂಭವಾದರೆ ಸಂಜೆ 6.30 ವೇಳೆ ರೈತ ಭಾಂಧವರು ತಮ್ಮ ಉತ್ಪನ್ನಕ್ಕೆ ದೊರೆತ ಮೊತ್ತವನ್ನು ಪಡೆದು ಊರುಗಳಿಗೆ ತೆರಳುತ್ತಾರೆ. ಒಟ್ಟು ಒಂದು ದಿನದ ಇ – ಮಾರ್ಕೆಟ್ ನಲ್ಲಿನ ಆನ್ ಲೈನ್ ಟೆಂಡರ್ ಕಾರ್ಯ ವಿಧಾನವನ್ನು ಪೂರ್ಣಗೊಳಿಸಲು ಕಾರ್ಯ ನಿರ್ವಹಿಸುವ ಸಿಬ್ಬಂದಿಯ ಸಂಖ್ಯೆ ಗರಿಷ್ಟ 10 ಜನ, ಏಕೀಕೃತ ಮಾರುಕಟ್ಟೆ ವೇದಿಕೆಯಿಂದ ತೊಂದರೆ ಮುಕ್ತ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಾಗುತ್ತಿದೆ ಎಂಬುವುದು ಬಹುಮುಖ್ಯವಾದ ಅಂಶವಾಗಿದೆ.

ಬ್ಯಾಡಗಿ ಎಪಿಎಂಸಿಯಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಸ್ಥಾಪನೆಗೂ ಹಿಂದಿನ ವಹಿವಾಟು ಮತ್ತು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಒಣಮೆಣಸಿನಕಾಯಿ ಉತ್ಪನ್ನಕ್ಕೆ ಇ-ಟೆಂಡರ್ ವ್ಯವಸ್ಥೆ ಕಲ್ಪಿಸಿದ ಬಳಿಕ ವ್ಯಾಪಾರ ವಹಿವಾಟಿನಲ್ಲಿ ಕಂಡುಬಂದ ಪ್ರಗತಿಯ ತುಲನಾತ್ಮಾಕ ರೇಖಾ ಚಿತ್ರ :

ಶ್ರೀ. ಮನೋಜ್ ರಾಜನ್, ಅಪರ ಕಾರ್ಯದರ್ಶಿ (ಮಾರುಕಟ್ಟೆ ಸುಧಾರಣೆ), ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಇಒ, ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್, ಬೆಂಗಳೂರು.

ಏಕೀಕೃತ ಮಾರುಕಟ್ಟೆ ವೇದಿಕೆ ಪ್ರಭಾವದಿಂದ ಮಾರುಕಟ್ಟೆಗಳಲ್ಲಿ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಕುರಿತು ಸಂಕ್ಷಿಪ್ತ ವಿವರ

ಏಕೀಕೃತ ಮಾರುಕಟ್ಟೆ ವೇದಿಕೆ ಪ್ರಭಾವದಿಂದ ಮಾರುಕಟ್ಟೆಗಳಲ್ಲಿ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಕುರಿತು ಸಂಕ್ಷಿಪ್ತ ವಿವರ :
ಶ್ರೀ. ಮನೋಜ್ ರಾಜನ್
ವ್ಯವಸ್ಥಾಪಕ ನಿರ್ದೇಶಕರು & ಸಿಇಒ,
ರೆಮ್ಸ್, ಬೆಂಗಳೂರು.

ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಸ್ಥಾಪನೆ ಬಳಿಕ ರೈತರ ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ಲಭ್ಯವಾಗುತ್ತದೆ.ರಾಜ್ಯದ ಸಮಸ್ತ ರೈತ ಬಾಂಧವರಿಗೆ, ವರ್ತಕರಿಗೆ ಹಾಗೂ ಮಾರುಕಟ್ಟೆಯಲ್ಲಿನ ವ್ಯಾಪಾರ ವಹಿವಾಟುಗಳಲ್ಲಿನ ಭಾಗೀದಾರರಿಗೆ ಉಪಯುಕ್ತವಾಗಲಿ ಎಂದು ಕರ್ನಾಟಕ ಸರ್ಕಾರದ “ಕೃಷಿ ಮಾರಾಟ ನೀತಿ “ಯನ್ನು ಅನುಷ್ಠಾನಗೊಳಿಸಿದೆ . ನೂತನ ನೀತಿ ಅನ್ವಯ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಸ್ಥಾಪಿಸಲಾಗಿದೆ. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟುಗಳು ಪಾರದರ್ಶಕತೆ, ದಕ್ಷತೆ ಮತ್ತು ಸರಳತೆಯಿಂದ ಕಾರ್ಯಸಾಧನೆಗೊಳಿಸಲು ಈ-ಟೆಂಡರ್ ಪದ್ದತಿಯನ್ನು ಜಾರಿಗೊಳಿಸಲಾಗಿದೆ.
ಆಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಮಾರುಕಟ್ಟೆಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಸ್ಥಾಪಿಸಲು ರಾಷ್ಟೀಯ ಈ – ಮಾರ್ಕೆಟ್ ಸರ್ವಿಸಸ್, ಕೃಷಿ ಮಾರಾಟ ಇಲಾಖೆ ಮತ್ತು ರಾಜ್ಯ ಕೃಷಿ ಮಾರಾಟ ಮಂಡಳಿ ಅವಿರತಃ ಸೇವೆಯನ್ನು ಸಲ್ಲಿಸಿವೆ. ಈ ಸಂಸ್ಥೆಗಳ ಪರಿಶ್ರಮದ ಫಲವಾಗಿ ರಾಜ್ಯದಲ್ಲಿನ ೧೬೨ ಕೃಷಿ ಉತ್ಪನ್ನ ಮಾರುಕಟ್ಟೆಗಳು ಇ-ಮಾರುಕಟ್ಟೆಗಳಾಗಿ ಕಾರ್ಯ ನಿರ್ವಹಿಸುತ್ತಿವೆ.

 

ಮಾದರಿ ಬೆಲೆ ವಿಶ್ಲೇಷಣೆ :

ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಸ್ಥಾಪನೆಯಾದ ಮೇಲೆ ಉತ್ಪನ್ನಗಳ ವಹಿವಾಟಿನಲ್ಲಿ ಮಾದರಿ ಧಾರಣೆಯಲ್ಲಿ ಗಮನಾರ್ಹ ಏರಿಕೆ ಬಗ್ಗೆ ಸಂಕ್ಷೀಪ್ತ ವರದಿಯನ್ನು ಗಮನಿಸಿ.

ತೊಗರಿ

ಪ್ರಮುಖ ಮಾರುಕಟ್ಟೆಗಳಲ್ಲಿ 2014-15ರಲ್ಲಿ ತೊಗರಿ ಉತ್ಪನ್ನದ ಸರಾಸರಿ ಮಾದರಿ ಬೆಲೆ ರೂ.4907/-. ಏಕೀಕೃತ ಮಾರುಕಟ್ಟೆ ವೇದಿಕೆ ಅಸ್ಥಿತ್ವಕ್ಕೆ ಬಂದ 2016-17ರ ಅವಧಿಯಿಂದ ರೂ. 8576/- ರಷ್ಟು ಮಾದರಿ ಬೆಲೆ ಲಭ್ಯವಾಗಿದೆ.

ಕಡಲೆ :

ಕಡಲೆ ಉತ್ಪನ್ನಕ್ಕೆ 2014-15ರಲ್ಲಿ ಸರಾಸರಿ ಮಾದರಿ ಬೆಲೆ ರೂ. 3017/-, ಅದರೆ 2016-17ಕ್ಕೆ ಮಾದರಿ ಬೆಲೆಯಲ್ಲಿ ಬಾರಿ ಬದಲಾಣೆಯಾಗಿ ರೂ.5973/-ಕ್ಕೆ ಏರಿಕೆಯಾಗಿತ್ತು.

ಉದ್ದು :

ಉದ್ದು ಉತ್ಪನ್ನದ ಮಾದರಿ ಬೆಲೆ 2014-15ರ ಅವಧಿಯಲ್ಲಿ ರೂ.5535/- ರಿಂದ 2016-17ರ ಅವಧಿಗೆ ರೂ.8090/-ಏರಿಕೆಯಾಗಿರುವುದು ಗಮನಾರ್ಹವಾಗಿದೆ. ಇ-ಟೆಂಡರ್ ಪ್ರಭಾವದಿಂದಾಗಿ ಶೇಕಡ 46%ರಷ್ಟು ಬೆಲೆಯಲ್ಲಿ ಏರಿಕೆ ಕಂಡಿದೆ.

ಕಡಲೆಕಾಯಿ/ಶೇಂಗಾ :

ಕೃಷಿ ಉತ್ಪನ್ನ ಮಾರಕಟ್ಟೆಗಳಲ್ಲಿ ಕಡಲೆಕಾಯಿ ಉತ್ಪನ್ನದ ಮಾದರಿ ಬೆಲೆಯಲ್ಲಿ ಹಲವು ಏರಿಳಿತವಾಗಿದೆ. 2014-15ರಲ್ಲಿ ಕ್ವಿಂಟಾಲ್ ಉತ್ಪನ್ನಕ್ಕೆ ರೂ.3607/- ಮಾದರಿ ಬೆಲೆಯಾಗಿತ್ತು. ಅದೇ 2016-17ರ ವೇಳೆಗೆ ಉತ್ಪನ್ನದ ಮಾದರಿ ಬೆಲೆ ರೂ.4762/-ಕ್ಕೆ ತಲುಪಿತ್ತು. ಇದು ಕಳೆದ ವರ್ಷಗಳಿಗಿಂತ ಶೇಕಡ 32%ರಷ್ಟು ಹೆಚ್ಚಾಗಿದೆ.

 

ಒಣಮೆಣಸಿನಕಾಯಿ:

ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ಒಣಮೆಣಸಿನಕಾಯಿ ವ್ಯಾಪಾರಕ್ಕೆ ಜನಪ್ರಿಯ. 2014-15 ರಿಂದ 2016-17ವರೆಗಿನ ಮಾದರಿ ಬೆಲೆ ರೂ.7027/- ರಿಂದ ರೂ.8558/- ಕ್ಕೆ ಏರಿಕೆಯಾಗಿದೆ. ಶೇಕಡ 22% ರಷ್ಟು ಮಾದರಿ ಬೆಲೆ ಏರಿಕೆಯಾಗಿದೆ.

ಹುಣಸೇಹಣ್ಣು :

ಪ್ರಮುಖ ಮಾರುಕಟ್ಟೆಗಳಲ್ಲಿ ಹುಣೆಸೇಹಣ್ಣು ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.5681, ಏಕೀಕೃತ ಮಾರುಕಟ್ಟೆ ವೇದಿಕೆಯ ಇ-ಟೆಂಡರ್ ನಿಂದಾಗಿ 2016-17ರಲ್ಲಿ ರೂ.7421 ಕ್ಕೆ ಮಾದರಿ ಬೆಲೆ ದಾಖಲಾಗಿದೆ. ಹಿಂದಿನ ವರ್ಷಗಳಿಗಿಂತ ಶೇಕಡ 31%ರಷ್ಟು ಮಾದರಿ ಬೆಲೆಯಲ್ಲಿ ಏರಿಕೆಯಾಗಿದೆ.

ಮೆಕ್ಕೆ ಜೋಳ :

ಮೆಕ್ಕೆ ಜೋಳ ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.1151/- ರಿಂದ 2016-17ಕ್ಕೆ ರೂ.1550/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 35% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ.

ಇದಲ್ಲದೆ ಹುರಳಿಕಾಳು ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.2839/- ರಿಂದ 2016-17ಕ್ಕೆ ರೂ.3123/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 10% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ ಮತ್ತು ಸಜ್ಜೆ ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.1267/- ರಿಂದ 2016-17ಕ್ಕೆ ರೂ.1657/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 31% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ.ಜೋಳದ ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.1595/- ರಿಂದ 2016-17ಕ್ಕೆ ರೂ.2280/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 43% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ. ರಾಗಿ ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.1529/- ರಿಂದ 2016-17ಕ್ಕೆ ರೂ.2036/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 33% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ ಹಾಗು ಸೂರ್ಯಕಾಂತಿ ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.3119/-ರಿಂದ 2016-17ಕ್ಕೆ ರೂ.3237/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 4% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ.

ಈ ಎಲ್ಲಾ ಸಂಖ್ಯಾ ವಿಶ್ಲೇಷಣೆ, ಮಾರುಕಟ್ಟೆಗಳಲ್ಲಿ ಆನ್‍ಲೈನ್ ಟೆಂಡರ್ ವ್ಯಾಪಾರ ವಹಿವಾಟು ಅನುಷ್ಠಾನದಿಂದಾಗಿ ರೈತರು ನೈಜ ಬೆಲೆ ಪಡೆಯುತ್ತಿರುವ ಸಾಕ್ಷಾತ್ಕಾರವನ್ನು ಸೂಚಿಸುತ್ತಿದೆ.

ಏಕೀಕೃತ ಮಾರುಕಟ್ಟೆ ವೇದಿಕೆ ಪ್ರಭಾವದಿಂದ ಮಾರುಕಟ್ಟೆಗಳಲ್ಲಿ ಉತ್ಪನ್ನಗಳ ಅವಕ ಹೆಚ್ಚಳ ಕುರಿತು ಸಂಕ್ಷೀಪ್ತ ವಿವರ

ಶ್ರೀ. ಮನೋಜ್ ರಾಜನ್
ವ್ಯವಸ್ಥಾಪಕ ನಿರ್ದೇಶಕರು & ಸಿಇಒ,
ರೆಮ್ಸ್, ಬೆಂಗಳೂರು.

ಕೃಷಿ ಮಾರಾಟ ಸುಧಾರಣೆ ಜಾರಿಯಾದ ಬಳಿಕ ಮಾರುಕಟ್ಟೆಗಳಲ್ಲಿ ಉತ್ಪನ್ನಗಳ ಅವಕದಲ್ಲಿ ಸ್ಥಿರ ಏರಿಕೆ ಕಂಡುಬಂದಿದೆ. 2015-16ರಲ್ಲಿ ರಾಜ್ಯದಲ್ಲಿ ಒಣಮೆಣಸಿನಕಾಯಿ ಉತ್ಪಾದನೆ 2014-15ಕ್ಕೆ ಹೋಲಿಸಿದರೆ ಶೇಕಡ 13% ರಷ್ಟು ಕಡಿಮೆ ಉತ್ಪಾದನೆಯಾಗಿದೆ. ಆದರೆ 2015-16ರಲ್ಲಿ ಮಾರುಕಟ್ಟೆಯ ಅವಕ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಅಂದರೆ ಸುಮಾರು ಶೇಕಡ 122%ರಷ್ಟು ಅವಕ ಹೆಚ್ಚಾಗಿರುತ್ತದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇಕಡ 98%ರಷ್ಟು ಉತ್ಪನ್ನ ಮಾರುಕಟ್ಟೆ ಪ್ರವೇಶಿಸಿರುವುದು ಅಂಕಿಅಂಶಗಳಿಂದ ಕಂಡುಬಂದಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಸ್ಥಾಪನೆಯಾದ ಬಳಿಕ ವ್ಯಾಪಾರ ವಹಿವಾಟಿನಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಸರಳತೆಯಿಂದಾಗಿ ನೆರೆ ರಾಜ್ಯಗಳ ರೈತರು ಒಣಮೆಣಸಿನಕಾಯಿ ಉತ್ಪನ್ನವನ್ನು ಕರ್ನಾಟಕ ರಾಜ್ಯದ ಮಾರುಕಟ್ಟೆಗಳಿಗೆ ತಂದು ಮಾರಾಟ ಮಾಡುತ್ತಿದ್ದಾರೆ.

ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಒಣಮೆಣಸಿನಕಾಯಿ ಅವಕ 2014-15 ರಿಂದ 2016-17ರ ಅವದಿಯಲ್ಲಿ 8.62 ಲಕ್ಷ ಕ್ವಿಂಟಾಲ್‍ಗಳಿಂದ 11.88 ಲಕ್ಷ ಕ್ವಿಂಟಾಲ್‍ಗೆ ಏರಿಕೆಯಾಗಿದೆ. ಕೃಷಿ ಮಾರಾಟ ಸುಧಾರಣೆ ಅನುಷ್ಠಾನದ ಫಲವಾಗಿ ಮಾರುಕಟ್ಟೆಯಲ್ಲಿನ ಅವಕ ಶೇಕಡ 38%ರಷ್ಟು ಏರಿಕೆಯಾಗಿದೆ.

ರಾಯಚೂರು ಮಾರುಕಟ್ಟೆಯಲ್ಲಿ ಭತ್ತದ ಅವಕ 2014-15 ರಿಂದ 2016-17ರ ಅವಧಿಯಲ್ಲಿ 8.15 ಲಕ್ಷ ಕ್ವಿಂಟಾಲ್‍ಗಳಿಂದ 10.30 ಲಕ್ಷ ಕ್ವಿಂಟಾಲ್‍ಗಳಿಗೆ ಏರಿಕೆಯಾಗಿದೆ. ಇದು ಏಕೀಕೃತ ಮಾರುಕಟ್ಟೆ ವೇದಿಕೆ ಪ್ರಭಾವದಿಂದಾದ ಬದಲಾವಣೆ ಎಂಬುವುದು ಗಮನಾರ್ಹ.

ಧಾರವಾಡ ಮಾರುಕಟ್ಟೆಯಲ್ಲಿ ಹೆಸರುಕಾಳು ಉತ್ಪನ್ನದ ಅವಕ 2014-15ರಲ್ಲಿ 0.28 ಲಕ್ಷ ಕ್ವಿಂಟಾಲ್ ನಿಂದ 2016-17ರ ಅವದಿಯಲ್ಲಿ 0.55 ಲಕ್ಷ ಕ್ವಿಂಟಾಲ್‍ಗೆ ಏರಿಕೆಯಾಗಿದೆ. ಇದು ಶೇಕಡ 92%ರಷ್ಟು ಅವಕದಲ್ಲಿ ಹೆಚ್ಚಾಗಿದೆ.

ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೊಗರಿ ಉತ್ಪನ್ನ 2014-15ರಲ್ಲಿ 3.60 ಲಕ್ಷ ಕ್ವಿಂಟಾಲ್‍ಗಳಷ್ಟಿತ್ತು . ಆದರೆ 2016-17ರ ಅವದಿಗೆ 7.34 ಲಕ್ಷ ಕ್ಷಿಂಟಾಲ್ ತೊಗರಿ ಉತ್ಪನ್ನ ಅವಕವಾಗಿದೆ. ಶೇಕಡ 104% ಹೆಚ್ಚಳವಾಗಿದೆ.

ಧಾರವಾಡ ಮಾರುಕಟ್ಟೆಯಲ್ಲಿ ಉದ್ದು 2014-15ರಲ್ಲಿ 1776 ಕ್ವಿಂಟಾಲ್‍ಗಳಷ್ಟಿತ್ತು. ಏಕೀಕೃತ ಮಾರುಕಟ್ಟೆ ಸ್ಥಾಪನೆಯಾದ ಬಳಿಕ ಅಂದರೆ, 2016-17ರ ಅವದಿಯಲ್ಲಿ ಉದ್ದು ಉತ್ಪನ್ನದ ಅವಕ 10,254 ಕ್ವಿಂಟಾಲ್‍ಗಳಿಗೆ ಏರಿಕೆಯಾಗಿತ್ತು. ಆನ್‍ಲೈನ್ ಇ-ಟೆಂಡರ್ ವ್ಯವಸ್ಥೆಯಿಂದಾಗಿ ಅವಕದಲ್ಲಿ ಶೇಕಡ 477%ರಷ್ಟು ಏರಿಕೆಯಾಗಿರುವುದು ಗಮನರ್ಹ.

ನಾಗಮಂಗಲ ಮಾರುಕಟ್ಟೆಯಲ್ಲಿ ರಾಗಿ ಅವಕ 2014-15ರಲ್ಲಿ 93,441 ಕ್ವಿಂಟಾಲ್ ಗಳಷ್ಟಿತ್ತು. ಇ-ಟೆಂಡರ್ ಜಾರಿ ಬಳಿಕ ಅಂದರೆ, 2016-17ರ ಅವದಿಯಲ್ಲಿ 2.48 ಲಕ್ಷ ಕ್ವಿಂಟಾಲ್ ಅವಕ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ. ಅವಕದ ಪ್ರಮಾಣ ಶೇಕಡ 166%ರಷ್ಟು ಏರಿಕೆಯಾಗಿತ್ತು.

ರಾಣೆಬೆನ್ನೂರು ಮಾರುಕಟ್ಟೆಯಲ್ಲಿ ಮೆಕ್ಕೆಜೋಳ 2014-15ರಲ್ಲಿ 1,71,6101 ಕ್ವಿಂಟಾಲ್‍ಗಳಷ್ಟು ಅವಕವಾಗಿತ್ತು. ಆನ್‍ಲೈನ್ ಟೆಂಡರ್ ಆರಂಭದ ಬಳಿಕ 2016-17ರಲ್ಲಿ 2,26,6198 ಕ್ವಿಂಟಾಲ್ ಮೆಕ್ಕೆ ಜೋಳ ಅವಕವಾಗಿದೆ. ಶೇಕಡ 32%ರಷ್ಟು ಅವಕವಾಗಿರುವುದು ಗಮನಿಸಬಹುದು.