ನಾನು ತೊಗರಿ

 

ಭಾರತ ದೇಶದಲ್ಲಿನ ಪ್ರಮುಖ ದ್ವಿದಳ ಧಾನ್ಯಗಳ ಬೆಳೆಯಲ್ಲಿ ನಾನು ಅಗ್ರಸ್ಥಾನದಲ್ಲಿದ್ದೇನೆ. ಜಾಗತಿಕ ಹವಾಮಾನ ಬದಲಾವಣೆ ಎದುರಿಸುತ್ತಿರವ ಪ್ರಸ್ತುತ ಪರಿಸ್ಥಿತಿಯಲ್ಲಿಯೂ ಆಹಾರ ಭದ್ರತೆಗೆ ನನ್ನ ಕೊಡುಗೆ ಪ್ರಮುಖವಾಗಿದೆ ಎಂಬುದು ಹೆಮ್ಮೆ ತಂದಿದೆ. ಜನ ಸಾಮಾನ್ಯರು ಸಂಪ್ರದಾಯಕವಾಗಿ ನನ್ನನ್ನು ತೊಗರಿ ಅಥವಾ ತೊಗರಿಬೇಳೆ ಎಂದು ಕರೆಯುತ್ತಾರೆ. ಇನ್ನೂ ಕೆಲವು ಭಾಗಗಳಲ್ಲಿ ಪಾರಿವಾಳ ಬಟಾಣಿ ಎಂದು ನನಗೆ ನಾಮಕರಣ ಮಾಡಿದ್ದಾರೆ. ಆದರೆ ನನ್ನ ವೈಜ್ಞಾನಿಕ ಹೆಸರು ಕಜಾನಸ್ ಕಜಾನ, ವಿಜ್ಞಾನ ಆಧಾರಿತವಾಗಿ ನಾನು ಫಾಬೇಶನ್ ಕುಟುಂಬಕ್ಕೆ ಸೇರಿದ್ದೇನೆ. ನಾನು ಆಹಾರ ಭದ್ರತೆಯ ಬೆಳೆಯಾಗಿ, ವಾಣಿಜ್ಯ ರಪ್ತಿನ ಬೆಳೆಯಾಗಿ ಮತ್ತು ಆದಾಯ ಉತ್ಪದಿಸುವ ಮಹತ್ವದಿಂದಾಗಿ ಪ್ರಖ್ಯಾತಿ ಹೊಂದಿದ್ದೇನೆ.

ನಿಮ್ಮ ಆಹಾರ ಪದ್ದತಿಯ ಖಾದ್ಯಗಳಲ್ಲಿ ನನ್ನ ಬಳಕೆ ಪರಿಚಿತವಾಗಿದೆ . ನಾನು ತಮ್ಮ ಪ್ರತಿನಿತ್ಯದ ಆಹಾರ ಪದ್ದತಿಯಲ್ಲಿ ವಿವಿಧ ರೀತಿಯ ರುಚಿಕರ ಖಾದ್ಯಗಳಲ್ಲಿ ಬಳಕೆಯಾಗಿ ನಿಮ್ಮ ಊಟದ ತಟ್ಟೆಯಲ್ಲಿ ಲಭ್ಯವಾಗಿ ಪ್ರತಿಯೊಂದು ಮನೆಯಲ್ಲಿ ಜನಪ್ರಿಯ ಭಕ್ಷವಾಗಿರುತ್ತೇನೆ. ಭಾರತ ದೇಶದಲ್ಲಿನ ರಾಜ್ಯಗಳಲ್ಲಿ ನನ್ನನ್ನು ವಿವಿಧ ರೀತಿಯಲ್ಲಿ ಸಂಭೋಧಿಸುತ್ತಾರೆ. ಕನ್ನಡದಲ್ಲಿ ತೊಗರಿ ಅಥವಾ ತೊಗರಿಬೇಳೆ, ತಮಿಳು ಭಾಷೆಯಲ್ಲಿ ತುರವಂ ಪರುಪ್ಪು, ಹಿಂದಿಯಲ್ಲಿ ತೂರ್, ಬಂಗಾಳಿಯಲ್ಲಿ ದಾಲ್ ಎಂದು ಪ್ರಾಂತ್ಯವಾರುಗಳಲ್ಲಿ ನನ್ನ ಹೆಸರನ್ನು ಸಂಭೋಧಿಸುವುದು ವಾಡಿಕೆಯಾಗಿದೆ.

 

ನಾನು ಕೃಷಿ ಮೌಲ್ಯದ ಕಡಿಮೆ ಫಲವತ್ತಾದ ಭೂಮಿಯ ವ್ಯಾಪ್ತಿಯಾದ ಅರೆ ಶುಷ್ಕ ವಾತಾವರಣದಲ್ಲಿನ ಏಷ್ಯಾ ಮತ್ತು ಆಫ್ರಿಕಾ ಪ್ರದೇಶಗಳಲ್ಲಿ ಬೆಳೆಯುತ್ತೇನೆ. ಆದರೆ ಸಾಕಷ್ಟು ಮಂದಿಗೆ ಕೆಲವೊಂದು ಸತ್ಯಗಳ ಬಗ್ಗೆ ತಿಳುವಳಿಕೆ ಇಲ್ಲವಾಗಿದೆ. ಅಮೇರಿಕ ದೇಶದ ಅರೆ ಶುಷ್ಕ ಪ್ರದೇಶದಲ್ಲಿ ವಾರ್ಷಿಕ 1.1 ಬಿಲಿಯನ್ ನನ್ನ ನಷ್ಟ ಸಂಭವಿಸುತ್ತದೆ. ಇದಕ್ಕೆ ಪ್ರಮುಖ ಕಾರಣ ಕೆಲವೊಮ್ಮೆ ಕೀಟ ಮತ್ತು ರೋಗ ತೊಂದರೆಯಿಂದ ಪ್ರಮುಖ ಪೌಷ್ಟಿಕಾಂಶಗಳು ಅಥವಾ ಆರೋಗ್ಯ ವಿಫಲತೆ ಉಂಟಾಗುತ್ತದೆ. ಈ ಸಮಯದಲ್ಲಿ ನಾನು ಫ್ಯಸಾರಿಯಮ್ ಮತ್ತು ಸ್ಟೆರಿಲಿಟಿ ಮೊಸಾಯಿಕ್ ರೋಗಗಳಿಗೆ ತುತ್ತಾಗಿ ಬಳಲುತ್ತೇನೆ ಜೊತೆಗೆ ಹೆಲಿಕಾವರ್ಪ, ಮುರುಕಾ ಮತ್ತು ಪಾಡ್ ಫೈ ಕೀಟಗಳು ಕೂಡ ಸಾಕಷ್ಟು ತೊಂದರೆಯನ್ನು ಕೊಡುತ್ತದೆ.

ನಾನು 1000ಕ್ರಿ.ಪೂ. ಮೂಲದ ಸರಣಿ, ಬಳಿಕ ಇತಿಹಾಸ ಪೂರ್ವ ಅವಧಿಯಲ್ಲಿನ ಶಿಲಾಯುಗದಿಂದ ದೀರ್ಘಕಾಲಿಕ ಪುರತತ್ವ ಸಂಶೋಧನೆಗಳಿಂದ ದಕ್ಷಿಣ ಭಾರತದಲ್ಲಿ ಕಾಲಕ್ರಮೇಣ ಗುರುತಿಸಲ್ಪಟ್ಟಿದ್ದೇನೆ. ಆಫ್ರಿಕಾ ದೇಶದಲ್ಲಿ ನನ್ನ ದಾರಿಯನ್ನು ಗುರುತಿಸಲ್ಪಟ್ಟು, ನನಗೆ ಕಾಗೋಫಿ (ಕಾಗೋ ಬಟಾಣಿ) ಎಂದು ಹೊಸ ಹೆಸರಿನಿಂದ ಕರೆಯಲಾಯಿತು. ನಂತರ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಸ್ಥಳೀಯ ಅಮೇರಿಕನ್ನರ ನಡುವೆ ಗುಲಾಮಗಿರಿ ಜೀತ ಪದ್ಧತಿ ಪ್ರಗತಿ ಅವಧಿಯಲ್ಲಿ ಅಲ್ಲಿಗೆ ತೆರಳಿದೆ.

ನಾನು ದೀರ್ಘಕಾಲಿಕ ಸಸ್ಯ ಎಂಬುದು ಜನ ಸಾಮಾನ್ಯರಿಗೆ ತಿಳಿಯದ ಸಾಧ್ಯತೆಯಿದೆ. ನಾನು ಪ್ರಮುಖ ದ್ವಿದಳ ಧಾನ್ಯ ಬೆಳೆಯಾಗಿ ಮಳೆ ನೀರು ಅವಲಂಬಿತ ಅರೆಶುಷ್ಕ ವಾತಾವರಣದ ಉಷ್ಣವಲಯದಲ್ಲಿ ಬೆಳೆಯುತ್ತೇನೆ. ವಿಶ್ವದ ಭಾರತೀಯ ಉಪಖಂಡ, ಪೂರ್ವ ಆಫ್ರಿಕಾ ಮತ್ತು ಮಧ್ಯ ಅಮೇರಿಕಾದ ಭೌಗೋಳಿಕ ವಲಯಗಳಲ್ಲಿ ಸಾಗುವಳಿಯಾಗುತ್ತೇನೆ.

 

ಭಾರತದಲ್ಲಿ ಮುಂಗಾರು ಹಂಗಾಮಿನಲ್ಲಿ ನನ್ನ ಬಿತ್ತನೆ ಕಾರ್ಯ, ಅದು ಜೂನ್ ಮತ್ತು ಜುಲೈ ಮಾಸಗಳಲ್ಲಿ ನನ್ನ ಕೃಷಿ ಬಿತ್ತನೆ ಕಾರ್ಯ ವಿಶೇಷವಾಗಿ ನಡೆಯುತ್ತದೆ. ಉಷ್ಣ ವಲಯದ ಹವಾಮಾನ ನನಗೆ ಅತ್ಯಂತ ಅನುಕೂಲಕರವಾಗಿರುತ್ತದೆ. ನಾನು ಬರ ಸಹಿಷ್ಣುತೆ ಬೆಳೆಯಾಗಿ ಮಣ್ಣಿನಲ್ಲಿ ಮೊನಚಾದ ಬೇರುಗಳನ್ನು ಹೊಂದಲು ಆರ್ಶಿವಾದಿತನಾಗಿದ್ದೇನೆ.

ನಾನು ಗ್ರೀಸ್ ದೇಶದ ಭೂಪ್ರದೇಶಕ್ಕಿಂತ ಕಡಿಮೆಯಿಲ್ಲದಷ್ಟು ಅಂದರೆ 46 ಲಕ್ಷ ಹೆಕ್ಟೇರ್ ಭೂಪ್ರದೇಶದಲ್ಲಿ ನನ್ನ ಉತ್ಪಾದನೆ ಮಾಡಲಾಗುತ್ತದೆ. ನನ್ನ ಉತ್ಪದಾನೆ ವಿಶ್ವದಲ್ಲಿ ಸರಿಸುಮಾರು 4.98ಮಿಲಿಯನ್ ಟನ್‍ಗಳಷ್ಟು ಎಂದು ಅಂದಾಜಿಸಲಾಗಿದೆ. ಈ ಪೈಕಿ ಸುಮಾರು ಶೇಕಡ 80% ನನ್ನ ಉತ್ಪಾದನೆ ಭಾರತದಲ್ಲಿರುವುದನ್ನು ಅಂದಾಜು ಮಾಡಲಾಗಿದೆ. ಅಂದರೆ 1.05 ಮಿಲಿಯನ್ ಟನ್ ಉತ್ಪಾದನೆಯ ಮಟ್ಟವಾಗಿದೆ.

ಆಫ್ರಿಕಾ ದೇಶ ನನ್ನ ಉತ್ಪದಾನೆಯ ದ್ವಿತೀಯ ಕೇಂದ್ರ. ವಿಶ್ವದ ಒಟ್ಟಾರೇ ಉತ್ಪದಾನೆಯ ಪೈಕಿ ಶೇಕಡ 21% ರಷ್ಟು ನನ್ನ ಕೊಡುಗೆ ಈ ದೇಶದಿಂದಲ್ಲೇ ಲಭ್ಯವಾಗುತ್ತದೆ. ವಿಶ್ವದ 25 ರಷ್ಟು ಉಷ್ಣವಲಯ ಮತ್ತು ಉಪ ಉಷ್ಣವಲಯದಲ್ಲಿ ನಾನು ಏಕ ಬೆಳೆಯಾಗಿ ಮತ್ತು ಇಂಟರ್ ಮಿಕ್ಸ್ ಬೆಳೆಯಾಗಿ ಬೆಳೆಯುತ್ತೇನೆ. ಉದಾಹರಣೆಗೆ ಹುಲ್ಲು ಜೋಳ (ದೊಡ್ಡ ರಾಗಿ), ಬಾಜ್ರ ಅಥವಾ ಮೆಕ್ಕೆ ಜೋಳ (ಜಿಯಾಮೇಜ್) ಅಥವಾ ಇತರೆ ದ್ವಿದಳ ಧಾನ್ಯಗಳಾದ ಕಡಲೆಕಾಯಿ ಬೆಳೆಗಳ ಜೊತೆಯಲ್ಲಿ ನನ್ನನು ಬೆಳೆಯಲಾಗುತ್ತದೆ. ವಿಶೇಷವಾಗಿ ನನ್ನ ಬಳಿ ಸಹಜೀವನದ ಸಾಮರ್ಥ್ಯವಿದ್ದು ಪರಸ್ಪರ ಸಂಪರ್ಕದ ಜೊತೆಯಾಗಿ ರೈಜೋಬಿಯಾ ಬ್ಯಾಕ್ಟೀರಿಯ ಉತ್ಕ್ರಷ್ಟಗೊಳಿಸಲು ಸಹಜೀವನದ ಸಾರಜನಕ ಸ್ಥಿರೀಕರಣದ ಮೂಲಕ ಮಣ್ಣಿನಲ್ಲಿ ಬೇರುಗಳನ್ನು ಸೇರುತ್ತೇನೆ. ಆದ್ದರಿಂದ ಬೆಲೆಬಾಳುವ ಸಾವಯವ ಮತ್ತು ಸೂಕ್ಮ ಪೋಷಕಾಂಶಗಳು ಮಣ್ಣಿನಲ್ಲಿ ಲಭ್ಯವಾಗುತ್ತವೆ. ಒಂದು ಹೆಕ್ಟೇರ್‍ಗೆ 90ಕೆಜಿ ಸಾರಜನಕವನ್ನು ನಾನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದೇನೆ. ನಾನು ಮೇವು ಬೆಳೆಗಳ ಪಾತ್ರದ ವ್ಯಾಪ್ತಿಯನ್ನು ನಿರ್ವಹಿಸುತ್ತೇನೆ. ಸಾಮಾನ್ಯವಾಗಿ ಸುಗ್ಗಿ ಕಾಲದಲ್ಲಿ ನನ್ನ ಕೊಯ್ಲನ್ನು ರೈತರು ಕೈಯಿಂದಲೇ ಮಾಡುತ್ತಾರೆ. ತದನಂತರ ನನ್ನನ್ನು ಅಗತ್ಯಕ್ಕೆ ಅನುಗುಣವಾಗಿ ಸೂರ್ಯನ ಶಾಖದಲ್ಲಿ ಒಣಗಿಸುತ್ತಾರೆ ಬಳಿಕ ಕಣದಲ್ಲಿ ತೂರಿ,ಧಾನ್ಯ ಹೊಟ್ಟು ಮತ್ತು ಕಡ್ಡಿಕಸವನ್ನು ಬೇರ್ಪಡಿಸುತ್ತಾರೆ.

ಭಾರತೀಯ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ನನ್ನ ಆಗಮನ ಅಕ್ಟೋಬರ್ ತಿಂಗಳಲ್ಲಿ ಆರಂಭವಾಗುತ್ತದೆ. ನನ್ನ ಹೊಸ ತಳಿ4ರಿಂದ 6 ತಿಂಗಳಲ್ಲಿ ಕೊಯ್ಲುಗೆ ಬರುವುದರಿಂದ ರೈತರಿಗೆ ವಾಣಿಜ್ಯ ಬೆಳೆಯಾಗಿ ಬೆಳೆಯಲು ಉಪಕರವಾಗಿದೆ. ನನ್ನ ಎರಡು ಹೈಬ್ರಿಡ್ ಮೂಲಕ ತಳಿಗಳಾದ ICPH 2671 ಮತ್ತು ICPH 2740 ಬೀಜಗಳು ಸಾಮಾನ್ಯ ಕೃಷಿ ಪದ್ಧತಿಯಲ್ಲಿ ರೈತರಿಗಾಗಿ ಭಾರತದಲ್ಲಿ ಬಿಡುಗಡೆಯಾಗಿದೆ.
ಭಾರತ ದೇಶದ ರಾಜ್ಯಗಳಾದ ಮಹಾರಾಷ್ಟ್ರ, ಉತ್ತರಪ್ರದೇಶ,ಕರ್ನಾಟಕ, ಮಧ್ಯಪ್ರದೇಶ, ಗುಜರಾತ್ ರಾಜಸ್ತಾನ್ ಮತ್ತು ಆಂಧ್ರ ಪ್ರದೇಶಗಳಲ್ಲಿ ನನ್ನನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ದ್ವಿದಳ ಧಾನ್ಯಗಳ ಮೇಲೆ ನಮ್ಮ ದೇಶದ ಸಾಮಾನ್ಯ ಕುಟುಂಬಗಳು ಬಹುಹಿಂದಿನಿಂದಲೂ ಅವಲಂಬಿತವಾಗಿದೆ. ಭಾರತ ನನ್ನ ಉತ್ಪಾದನೆ, ಬಳಕೆ ಮತ್ತು ಆಮದು ಕ್ಷೇತ್ರದಲ್ಲಿ ಮೊದಲನೇ ಸ್ಥಾನ ಪಡೆದಿದೆ. ನಾನು ಬಟಾಣಿ ಬಳಿಕ ಎರಡನೇ ಪ್ರಮುಖ ಬೆಳೆಯಾಗಿದ್ದೇನೆ. ವಿಶ್ವದ 25ಕ್ಕು ಹೆಚ್ಚು ದೇಶಗಳಲ್ಲಿ ನನ್ನನು ಬೆಳೆಯಾಲಾಗುತ್ತದೆ ಎಂದು ಹೇಳಲು ಹೆಮ್ಮೆಯಾಗುತ್ತದೆ.
ಭಾರತೀಯರ ಆಹಾರ ಪದ್ಧತಿಯಲ್ಲಿ ಅತೀ ಹೆಚ್ಚು ಬಳಕೆಯಾಗುತ್ತೇನೆ. ನನ್ನ ಬೇಡಿಕೆ ಹೆಚ್ಚಿರುವುದರಿಂದ ಮಯನ್ಮಾರ್, ತಾನ್ ಜೇನಿಯಾ ಗಣರಾಜ್ಯ, ಮಲಾವಿ, ಉಗಾಂಡ, ಮೊಝಾಂಭಿಕ್ ಸೇರಿದಂತೆ ಇತರೆ ರಾಷ್ಟ್ರಗಳಿಂದಲೂ ಭಾರತಕ್ಕೆ ಅಮದು ಮಾಡಿಕೊಳುತ್ತಾರೆ. ಜೊತೆಗೆ ಯು.ಎ.ಇ, ಯುಎಸ್ ಎ, ಸಿಂಗಪೂರ್ ಮತ್ತು ಸೌದಿ ಅರೇಬಿಯ ರಾಷ್ಟ್ರಗಳಿಗೆ ಭಾರತದಿಂದ ನನ್ನನ್ನು ಸಣ್ಣ ಪ್ರಮಾಣದಲ್ಲಿ ರಪ್ತು ಮಾಡುತ್ತಾರೆ.
ಭಾರತದಲ್ಲಿ ಮುಂಗಾರು ಮತ್ತು ಹಿಂಗಾರು ಬೆಳೆಗಳು ನವೆಂಬರ್ ಮಾಸದಿಂದ ಮಾರುಕಟ್ಟೆಗೆ ಬರುವ ಅವಕವಾಗುವ ಸಮಯ. ನನ್ನ ಉತ್ಪಾದನೆ ಮುಂಗಾರು ಋತುವಿನಲ್ಲಿ ಮಾತ್ರ, ಈ ಕಾರಣದಿಂದಲ್ಲೇ ದ್ವಿದಳ ಧಾನ್ಯಗಳ ಪೈಕಿ ನನ್ನ ಬೆಲೆ ಮಾತ್ರವೇ ಅತಿ ಹೆಚ್ಚಾಗಿ ಉಲ್ಬಣಿಸುತ್ತದೆ. ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ ದ್ವಿದಳ ಧಾನ್ಯಗಳ ಉತ್ಪಾದನೆ ಶೇಕಡ 70% ರಷ್ಟು. ನನ್ನ ಬೇಡಿಕೆಯು ಹಬ್ಬದ ರುತುಮಾಸಗಳಲ್ಲಿ ಹೆಚ್ಚಾಗಿರುತ್ತದೆ. ಕೃಷ್ಣ ಜನ್ಮಾಷ್ಠಮಿಯಿಂದ ದೀಪಾವಳಿ (ಆಗಸ್ಟ್ ನಿಂದ ನವೆಂಬರ್)ವರೆಗೆ ಹೆಚ್ಚು ಬೇಡಿಕೆ ಇದೆ. ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯನ್ನು ಗ್ರಾಹಕರು ಒಪ್ಪಲೇಬೇಕಾಗಿದೆ. ಆದ್ದರಿಂದ ವರ್ತಕರು ಇಂತಹ ಅವಕಾಶವನ್ನು ಬಳಸಿಕೊಳ್ಳುತ್ತಾರೆ.
ಈ ಸಮಯದ ನಡುವೆ ಮುಂಗಾರು ಬೆಳೆ ಬಗ್ಗೆ ಹುರುಳಿಲ್ಲದ ಮಾಹಿತಿ ಮತ್ತು ಧಾರಣೆಯಲ್ಲಿ ಏರಿಕೆಗಳು ಕೂಡ ಮಾರುಕಟ್ಟೆಯನ್ನು ಪ್ರವೇಶಿಸುತ್ತವವೆ. ಇದರಿಂದ ನನ್ನ ಬೆಲೆ ಹೆಚ್ಚಾಗುತ್ತದೆ. ಇತರೆ ಕಾರಣಗಳು ಒಳಗೊಂಡಂತೆ ಅನಿರ್ದಿಷ್ಟವಾದ ಮುಂಗಾರು ವೈಫಲ್ಯ, ಗ್ವೌಪ್ಯ ಸಂಗ್ರಹಣೆ ಇದಕ್ಕೆ ಕಾರಣವಾಗಿದೆ.
ನಾನು ಭಾರತದಲ್ಲಿ ಪ್ರಮುಖವಾಗಿ ವ್ಯಾಪಾರವಾಗುವ ರಾಜ್ಯಗಳೆಂದರೆ ಇಂಡೋರ್, ಭೂಪಾಲ್,ಒಡಿಶಾ, ಜಲಗಾಂವ್, ಲಾತೂರ್, ಮುಂಬೈ, ಅಕೋಲಾ ಇತ್ಯಾದಿ, ನಾನು ಕರ್ನಾಟಕದ ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ವ್ಯಾಪಾರವಾಗುತ್ತೇನೆ. ಕರ್ನಾಟಕದಲ್ಲಿ ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್‍ನ ಏಕೀಕೃತ ಮಾರುಕಟ್ಟೆ ವೇದಿಕೆಯ ಆನ್‍ಲೈನ್‍ನಲ್ಲಿ ನಾನು ವ್ಯಾಪಾರವಾಗುತ್ತೇನೆ. ರಾಷ್ಟ್ರೀಯ ಸರಕು ಮತ್ತು ಉತ್ಪನ್ನಗಳ ವಿನಿಮಯ ಲಿಮಿಟೆಡ್ ಮತ್ತು ರಾಷ್ಟ್ರೀಯ ಬಹು ಸರಕು ವಿನಿಮಯ ಇಂಡಿಯಾ ಲಿಮಿಟೆಡ್ ನಲ್ಲಿ ಕೂಡ ನಾನು ವ್ಯಾಪಾರವಾಗುತ್ತೇನೆ.
ಕೆಳಗಿನ ರೇಖಾ ಚಿತ್ರವನ್ನು ತಾವು ಗಮನಿಸಿ, ನನ್ನನು ಸಂಗ್ರಹಿಸಲು ಸರ್ಕಾರ ನೀಡಿದ ಬೆಂಬಲ ಬೆಲೆಯನ್ನು ನೋಡಬಹುದು. ಹೌದು, ನನ್ನ ರೈತರು ಈ ರೀತಿಯಲ್ಲಿ ಒಂದು ಖಾತ್ರಿ ಪಡೆಯುತ್ತಾರೆ. ಇದನ್ನು ನೋಡಿದರೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಲೆ ಲಭ್ಯವಾಗುತ್ತಿರುದನ್ನು ನೋಡಿ ಸಂತೋಷವಾಗಿದೆ.

ಸರ್ಕಾರ ಘೋಷಿಸಿದ ಬೆಂಬಲ ಬೆಲೆಗಿಂತಲೂ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ 2014 ರಿಂದ ಹೆಚ್ಚಿನ ಬೆಲೆ ದೊರೆಯುತ್ತಿರುವುದುನ್ನು ನಾನು ನೋಡುತಿದ್ದೇನೆ.

Quality Parameters of Agri Commodities Assayed

The quality of a commodity is determined based on the presence of certain set of traits inherent to the commodity or commodity group. Generally the set of parameters are common for commodities coming under cereals, pulses and oil seed group where as parameters differs for each commodity Spices or plantation crop groups. The quality of cereals like Paddy, Wheat, Maize, Bajra, Sorghum, Millets etc. is determined by the percentage of moisture present in the grain, quantum of foreign matter like dust and stones present in the lot, mixture of other commodity seeds, quantity of damaged or broken seeds and quantity of insect damaged grains in the lot.  The set of parameters tested during assaying of lots is represented below in table I:

Pic: Assayer analysing samples

Detailed explanation of various Parameters:

  • Moisture is expressed as percentage of water content in the grain. This is one of the most important factor. If moisture content is high in the produce it will not attract a good price as their will be high moisture loss it can’t be stored for longer time. Higher moisture deteriorates the shelf life of produce. Lots with lesser moisture content fetch a better price and increases the storage span of produce.

Digital Moisture Meter

  • Foreign Matter represents the existence of sand, pieces of stone, plastic particles, metals and pieces of glass etc. in the food grains. It is expressed in percentage terms. Lesser the foreign matter content in produce, higher the price it fetches to the farmer.
  • Admixture is other grains mixed up with principal grain. It is expressed as a percentage. Less admixture content fetch better price than the produce with much admixture.
  • Damaged or Broken means visually damaged, broken grains and is expressed as percentage. More quantity of damaged grains in the lot would fetch lower price and it negatively affecting their value of the grains.
  • Discoloured is change of colour in grains and no longer looks new, clean or healthy. Discoloration of grains are caused by either exposure to wet and damp conditions or a stress related biochemical reaction. It is expressed as a percentage. Higher quantity of discoloured grains in the lot affects the trade price of the produce.
  • Fungus infestation cause germination decrease, discoloration, musty or sour odours, chemical and nutritional changes. It is expressed in percentage. The deteriorative changes caused by fungus affect the price of grain and contribute to customer dissatisfaction. Immature grains are the grains which are not matured properly. It occurs when there has been a significant amount of secondary growth.  It is expressed as a percentage. Lesser immature grains content in the produce, it fetches better price.
  • Shrivelled grains are dry and smaller than regular grain. It is expressed in percentage. Less shrivelled content in the produce fetches better price.
  • Weevilled grains are those grains which are partially bored or damaged by small insects. It is expressed in percentage.  The produce containing such weevilled quantity of grains do not fetch good price.

The quantum of presence of these -parameters in the grains defines the quality of produce. Lower the reading of above mentioned parameters better is the quality of produce and vice versa.

Facilities for Bulk Buyers to Participate in Online Trading

Rashtriya eMarket Services ( ReMS ) Unified trader license enabling buyer anywhere in the state (or the country) to participate in all markets of Karnataka state. The wide reach of the electronic platform (UMP) facilitates traders across the state to bid from remote locations. Creating assaying infrastructure in the markets and disseminating the assayed results on the platform, encourages quality-based bidding.

APMC’s are established well-equipped assaying laboratories and commenced assaying services in 40 markets to cover a minimum 20% of the arrivals in the market. Assaying in the next batch of 30 markets is being taken up.

National Accreditation Board for Testing and Calibration Laboratories (NABL) accredited third party professionals are tied up for conducting assaying activity. They assay the lots and upload the quality details of the lot on the UMP.

To increase trader’s participation and encourage value addition at farmer’s end, market modernization features automatic cleaning, grading and packing equipment’s, installed at 61 markets, where the farmer’s produce will be machine cleaned and packed before sale.  Infrastructure required for auction (computer, TV etc.) and post-auction activities (electronic weighing machine) are installed in markets. Price display boards have been established and basic facilities have been enhanced in the markets. Rashtriya eMarket Services have introduced mobile apps for traders to carry out bidding remotely, price and market information app also available in google play stores.

Technology for making payments to farmers account directly has been established.  On-line payment of the sale proceeds to the bank accounts of the farmers has been carried out in 8 APMCs namely: – Titpur, Hubli, Gadag, Chamrajnagar, Nargund, Mundargi, Lakshmeshwar and Gajendragad ( Rona ), so far 703 farmers with sale proceeds of  more than Rs. 5 crores have been paid directly to their bank account. Bulk buyers such as ADM, Cargil, ITC, Metro cash & Carry, Godrej agro PepsiCo India and Reliance are buying directly from farmers.

Till now we have 47 Lakh farmers registered on the UMP. ReMS have organized many credit mela to provide credit to traders, farmers and commission agents. Now traders are moving towards formal banking arrangements where the traders are now provided with cash credit accounts.

ಕಡಲೆಕಾಳು ಉತ್ಪನ್ನದ ಗುಣವಿಶ್ಲೇಷಣೆ ಮತ್ತು ಗುಣಧರ್ಮದ ಆಧಾರದ ಮೇಲೆ ಸ್ಪರ್ಧಾತ್ಮಕ ಬೆಲೆ ನಿರ್ಧರಣೆ

ಶ್ರೀ. ಮನೋಜ್ ರಾಜನ್, ಬೆಂಗಳೂರು.

ಗುಣವಿಶ್ಲೇಷಣೆಯ ಅನುಕೂಲಗಳು ಮತ್ತು ಪ್ರಾಮುಖ್ಯತೆ ಕುರಿತು ಮಾಹಿತಿ ಕಲ್ಪಿಸುವ ಮುಂದುವರೆದ ಭಾಗವಾಗಿ ಈ ಬ್ಲಾಗ್ ಪುಟದಲ್ಲಿ ಕಡಲೆ ಉತ್ಪನ್ನದ ಗುಣವಿಶ್ಲೇಷಣೆಯ ಕಾರ್ಯವಿಧಾನ, ಗುಣಧರ್ಮಗಳು ಮತ್ತು ಗುಣಧರ್ಮಗಳ ಮೌಲ್ಯಕ್ಕೆ ಅನುಗುಣವಾಗಿ ಬೆಲೆ ನಿರ್ಧರಣೆ ಬಗ್ಗೆ ಅಂಕಿಅಂಶಗಳೊಂದಿಗೆ ಸಮಗ್ರ ವಿವರಣೆಯನ್ನು ನೀಡಲಾಗುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಕಡಲೆ ಕಾಳು ಉತ್ಪನ್ನ ಆವಕವಾಗುವ ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಾದ ಗದಗ, ಹುಬ್ಬಳ್ಳಿ, ರೋಣ, ಲಕ್ಷ್ಮೇಶ್ವರ, ಮುಂಡರಗಿ, ಬಳ್ಳಾರಿ, ನರಗುಂದ, ಬಾಗಲಕೋಟೆ, ಬೀದರ್, ಯಾದಗಿರಿ, ಶಿವಮೊಗ್ಗ ಮತ್ತು ರಾಮದುರ್ಗ ಮಾರುಕಟ್ಟೆಗಳಲ್ಲಿ ಉತ್ಪನ್ನಗಳ ಗುಣವಿಶ್ಲೇಷಣೆಗಾಗಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಈ ಪ್ರಯೋಗಾಲಯಗಳಲ್ಲಿ ಉತ್ಪನ್ನಗಳ ಗುಣವಿಶ್ಲೇಷಣೆ ಕಾರ್ಯವನ್ನು ಪರಿಣಿತಿ ಹೊಂದಿದ ನುರಿತ ತಜ್ಞರು ನಿರ್ವಹಿಸುತ್ತಿದ್ದಾರೆ.

ಕಡಲೆ ಕಾಳು ಉತ್ಪನ್ನವನ್ನು ರೈತರು ಮಾರುಕಟ್ಟೆಗೆ ರಾಶಿ/ಚೀಲಗಳಲ್ಲಿ ತರುತ್ತಾರೆ, ಇಂತಹ ಲಾಟ್‍ಗಳನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ (BIS) ಪ್ರಕಾರ ಉತ್ಪನ್ನದ ಮಾದರಿ ಸಂಗ್ರಹಣೆಯನ್ನು ಕೆಳಗಿನಂತೆ ನಡೆಸಲಾಗುತ್ತದೆ.

ಮಾದರಿ ತೆಗೆಯುವ ವಿಧಾನ:

• ಕಡಲೆ ಕಾಳು ಉತ್ಪನ್ನವನ್ನು ಮಾರಾಟಕ್ಕಾಗಿ ಮಾರುಕಟ್ಟೆಗೆ ತರುವ ಮುನ್ನ ಸರಿಯಾಗಿ ಒಣಗಿಸಿ, ಸ್ವಚ್ಚಮಾಡಿ, ಕಸಕಡ್ಡಿಯನ್ನು ತೆಗೆದು ಚೀಲದಲ್ಲಿ ಪ್ಯಾಕ್ ಮಾಡಿ ಮಾರುಕಟ್ಟೆಗೆ ರೈತರು ತರಬೇಕು.
• ರೈತರು ಮಾರಾಟಕ್ಕಾಗಿ ಮಾರುಕಟ್ಟೆಗೆ ತಂದ ಕಡಲೆ ಕಾಳು ಉತ್ಪನ್ನದಿಂದ ಮಾದರಿ ತೆಗೆಯುವುದಕ್ಕಾಗಿ (ಸ್ಯಾಂಪಲ್) ಪ್ರತಿ ಲಾಟನ್ನು ಚೀಲ ಅಥವಾ ರಾಶಿ ರೂಪದಲ್ಲಿ ಪ್ರತ್ಯೇಕವಾಗಿ ಇಡಲಾಗುತ್ತದೆ.

• ಪ್ಯಾಕ್ ಮಾಡಿದ ರೂಪದಲ್ಲಿ ಲಾಟನ್ನು ತಂದಾಗ ಲಾಟ್‍ನಲ್ಲಿನ ಪ್ರತಿ ಚೀಲದ ಮೇಲ್ಭಾಗ, ಮಧ್ಯಭಾಗ ಮತ್ತು ಕೆಳಭಾಗದಿಂದ ಸಣ್ಣ ಪ್ರಮಾಣದಲ್ಲಿ ಉತ್ಪನ್ನ ತೆಗೆದು ಸ್ಯಾಂಪಲ್ ಸಿದ್ದಪಡಿಸಲಾಗುತ್ತದೆ. ಬಳಿಕ ಹೀಗೆ ತೆಗೆದ ಸ್ಯಾಂಪಲ್ ಕಾಳುಗಳನ್ನು ಸರಿಯಾಗಿ ಮಿಶ್ರಣ ಮಾಡಿ, ಅದನ್ನು ಬಲ್ಕ್ ಸ್ಯಾಂಪಲ್ ಎಂದು ಕರೆಯುತ್ತಾರೆ.
• ಒಂದು ವೇಳೆ ಉತ್ಪನ್ನವು ರಾಶಿ ರೂಪದಲ್ಲಿದರೆ, ಅದರ ಮಾದರಿಯನ್ನು ಕನಿಷ್ಠ ಪಕ್ಷ 7 ಭಾಗಗಳಿಂದ ಅಂದರೆ ಮುಂಭಾಗ, ಹಿಂಭಾಗ, ಎಡಭಾಗ, ಬಲಭಾಗ, ರಾಶಿಯ ತುದಿ, ಮಧ್ಯ ಹಾಗೂ ತಳಭಾಗಗಳಿಂದ ಸ್ಯಾಂಪಲ್ ಸಂಗ್ರಹಿಸಿದ ನಂತರ ಮಾದರಿಯನ್ನು ಸರಿಯಾಗಿ ಮಿಶ್ರಣ ಮಾಡಿ ಬಲ್ಕ್ ಮಾದರಿಯನ್ನು ಸಂಗ್ರಹಿಸಲಾಗುತ್ತದೆ.
• ಕಾಂಪೋಸಿಟ್ ಸ್ಯಾಂಪಲ್ ಸಿದ್ದಪಡಿಸಲು ಬಲ್ಕ್ ಸ್ಯಾಂಪಲ್‍ನಿಂದ 1/2 ಕೆ.ಜಿ. ಕಡಲೆ ಕಾಳು ಉತ್ಪನ್ನವನ್ನು ತೆಗೆಯಲಾಗುತ್ತದೆ.
• ಸ್ಯಾಂಪಲ್ ಡಿವೈಡರ್‍ನಿಂದ ತಲಾ 100 ಗ್ರಾಂ ನಂತೆ 5 ಸಮಭಾಗಗಳಾಗಿ ವಿಂಗಡಿಸಲಾಗುವುದು.
• ಪ್ರತಿ ಭಾಗವನ್ನು ಪ್ರತ್ಯೇಕವಾಗಿ ಪಾರದರ್ಶಕ ಪ್ಲಾಸ್ಟಿಕ್ ಬ್ಯಾಗ್‍ಗಳಲ್ಲಿ ಪ್ಯಾಕ್ ಮಾಡಲಾಗುವುದು. ಪ್ರತಿಯೊಂದು ಪ್ಲಾಸ್ಟಿಕ್ ಚೀಲಕ್ಕೆ ಗುರುತಿನ ಚೀಟಿಯನ್ನು ಲಗತ್ತಿಸಿ ಮುದ್ರೆ ಹಾಕಲಾಗುತ್ತದೆ. ಈ ರೀತಿ ಸಂಗ್ರಹಿಸಿದ ಉತ್ಪನ್ನದ ಒಂದು ಮಾದರಿಯನ್ನು ರೈತರಿಗೆ, ಒಂದು ಪ್ಯಾಕೆಟ್ ಎಪಿಎಂಸಿಯಲ್ಲಿ ವರ್ತಕರ ಪರಿಶೀಲನೆಗಾಗಿ, ಒಂದು ಮಾದರಿಯನ್ನು ಎಪಿಎಂಸಿಯಲ್ಲಿ ವಿವಾದ ನಿರ್ಣಯಕ್ಕಾಗಿ ಕಾಯ್ದಿರಿಸಲಾಗುತ್ತದೆ. ಮತ್ತೊಂದು ಮಾದರಿಯನ್ನು ಗುಣ ವಿಶ್ಲೇಷಣೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಒಂದು ಮಾದರಿಯನ್ನು ಉತ್ಪನ್ನ ಗುಣವಿಶ್ಲೇಷಣೆ ಪ್ರಯೋಗಾಲಯದಲ್ಲಿ ದಾಖಲೆಗಾಗಿ ಸಂಗ್ರಹಿಸಲಾಗುತ್ತದೆ.

ಪರೀಕ್ಷೆ ವಿಧಾನ :

ಕಡಲೆಕಾಳು ಮಾದರಿಯನ್ನು ಪರೀಕ್ಷಿಸಿದಾಗ ಯಾವುದೇ ಜೀವವಿರುವ ಕ್ರಿಮಿಕೀಟಗಳು ಉತ್ಪನ್ನದಲ್ಲಿ ಲಭ್ಯತೆ ಬಗ್ಗೆ ಪರೀಕ್ಷೆ ವೇಳೆ ಖಾತ್ರಿಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ಜೀವವಿರುವ ಕ್ರಿಮಿಕೀಟಗಳು ಉತ್ಪನ್ನದಲ್ಲಿ ಪತ್ತೆಯಾದಲ್ಲಿ ಅಂತಹ ಲಾಟ್‍ನ್ನು ಗುಣವಿಶ್ಲೇಷಣೆ ಪ್ರಕ್ರಿಯೆಯಿಂದ ತಿರಸ್ಕರಿಸಲಾಗುತ್ತದೆ. ಕೃಷಿ ಉತ್ಪನ್ನದಲ್ಲಿ ಯಾವುದೇ ಕೃತಕ ರಾಸಾಯನಿಕ ಬಣ್ಣ ಅಥವಾ ಬೂಸ್ಟ್ ಹಿಡಿದ ಬಗ್ಗೆ ಪರೀಕ್ಷಿಸಿ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಯನ್ನು ಏಕೀಕೃತ ಮಾರುಕಟ್ಟೆ ವೇದಿಕೆಯ ಪ್ರಯೋಗಾಲಯಗಳಲ್ಲಿ ಕಲ್ಪಿಸಲಾಗಿದೆ.
ಗುಣವಿಶ್ಲೇಷಣೆ ಸಂಸ್ಥೆಯು ಉತ್ಪನ್ನದ ಗುಣಧರ್ಮಗಳ ವಿವರಗಳನ್ನು ನಮೂದಿಸಿದ ಬಳಿಕ ರೈತರಿಗೆ ಉತ್ಪನ್ನದ ಗುಣವಿಶ್ಲೇಷಣೆ ಪ್ರಮಾಣ ಪತ್ರವನ್ನು ನೀಡುವ ವ್ಯವಸ್ಥೆಯನ್ನು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಕಲ್ಪಿಸಲಾಗಿದೆ. ಉತ್ಪನ್ನದ ಗುಣವಿಶ್ಲೇಷಣೆಗೆ ಸಂಬಂಧಿಸಿದಂತೆ ಪ್ರಮಾಣ ಪತ್ರದಲ್ಲಿ ಊರ್ಜಿತವಿರುವ ಅವಧಿಯನ್ನು ನಮೂದಿಸಲಾಗುವುದು.

ಮಾದರಿ ಸಂಗ್ರಹ ಮತ್ತು ಪರೀಕ್ಷೆಯನ್ನು ಮೂರನೇ ವ್ಯಕ್ತಿ / ಸ್ವತಂತ್ರ್ಯವಾದ ಸಂಸ್ಥೆಯು ನಿರ್ವಹಿಸುತ್ತದೆ. ಮಾದರಿ ಸಂಗ್ರಹಣೆ ಮತ್ತು ಪರೀಕ್ಷೆಯನ್ನು BIS ವಿಧಾನದ ಪ್ರಕಾರ ನುರಿತ ಅಸ್ಸೆಯರ್ಸ್‍ನಿಂದ ಕೈಗೊಳ್ಳಲಾಗುತ್ತದೆ, ಪರೀಕ್ಷೆ ವರದಿಯಲ್ಲಿ ನ್ಯೂನತೆ ಮತ್ತು ಇತರೆ ತೊಂದರೆಗಳಿದ್ದರೆ ಸದರಿ ಸಂಸ್ಥೆಯೇ ಹೊಣೆಗಾರರಾಗುತ್ತಾರೆ.
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡುವ ವಿಧಾನ:
ಉತ್ಪನ್ನದ ಗುಣಮಟ್ಟ ಮತ್ತು ಗುಣಧರ್ಮಗಳ ವಿಶ್ಲೇಷಣೆ ಪರೀಕ್ಷೆ ಬಳಿಕ ಫಲಿತಾಂಶದ ವಿವರಗಳನ್ನು ಏಕೀಕೃತ ಮಾರುಕಟ್ಟೆ ವೇದಿಕೆ(ಇ-ಮಾರುಕಟ್ಟೆ)ಯಲ್ಲಿನ ಆನ್‍ಲೈನ್‍ನಲ್ಲಿ ಖರೀದಿದಾರರ/ವರ್ತಕರ ಪರೀಶಿಲನೆಗಾಗಿ ದಾಖಲು ಮಾಡಲಾಗುತ್ತದೆ.
ಗುಣವಿಶ್ಲೇಷಣಾ ವಿವಾದಗಳು, ಇನ್ನಿತರೆ ವಿಷಯಗಳು ಮತ್ತು ತೊಂದರೆಗಳ ನಿವಾರಣೆ :
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳು, 1968ರ ನಿಯಮ 91-ಪಿ(1)ರನ್ವಯ ರಚಿಸಲಾಗಿರುವ ವಿವಾದ ಪರಿಶೀಲನಾ ಸಮಿತಿಯು ನಿಯಮ 91-ಪಿ(7)ರನ್ವಯ ಕೃಷಿ ಮಾರಾಟ ನಿರ್ದೇಶಕರು ನೀಡಿರುವಂತಹ ಮಾರ್ಗದರ್ಶಿ ಸೂಚನೆಗಳನ್ವಯ ವಿವಾದಗಳನ್ನು ತೀರ್ಮಾನಿಸಲಾಗುತ್ತದೆ.
ಇದಕ್ಕಾಗಿ ಉತ್ಪನ್ನಗಳ ಮಾರಾಟಗಾರರು ಆಹಾರ ಮತ್ತು ಸುರಕ್ಷತಾ ಪ್ರಮಾಣಗಳ ಕಾಯ್ದೆ 2006 ಹಾಗೂ ಸಂಬಂಧಿಸಿದ ಇತರೆ ಕಾನೂನಿನಲ್ಲಿ ನಿಗದಿ ಪಡಿಸಿದ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಯಾವುದೇ ಆದೇಶಗಳನ್ನು ಜಾರಿಗೊಳಿಸುವಲ್ಲಿ ಉದ್ಬವಿಸಬಹುದಾದ ಯಾವುದೇ ತೊಂದರೆಗಳನ್ನು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರ ಗಮನಕ್ಕೆ ತರತಕ್ಕದ್ದು ಹಾಗೂ ಅವರು ಸೂಕ್ತವೆನಿಸುವ ಸ್ಪಷ್ಠೀಕರಣವನ್ನು ನೀಡುವರು.

ಕಡಲೆಕಾಳು ಉತ್ಪನ್ನದ ಪರಿಶೀಲಿಸುವ ನಿರ್ದಿಷ್ಟ ಗುಣಧರ್ಮಗಳು :

• ಉತ್ಪನ್ನದಲ್ಲಿ ಅನ್ಯಪದಾರ್ಥಗಳು(ಶೇಕಡವಾರು ಪ್ರಮಾಣ) : ಎಲೆ, ಕಾಂಡ, ಹುಲ್ಲು, ಸಿಪ್ಪೆ, ಧೂಳು, ಕಲ್ಲು, ಮಣ್ಣಿನ ಉಂಡೆ ಹಾಗೂ ಇತರೆ ಕಲ್ಮಶಗಳನ್ನು ಬೇರ್ಪಡಿಸಲಾಗುತ್ತದೆ.
• ಮೂಲ ಉತ್ಪನ್ನದ ಜೊತೆ ಇತರೆ ಕಾಳುಗಳ ಮಿಶ್ರಣ.
• ಒಡೆದ ಕಾಳುಗಳು, ಆಂತರಿಕವಾಗಿ ಹಾಳಾದ ಮತ್ತು ಮೂಲ ಬಣ್ಣ ಮತ್ತು ಗುಣಮಟ್ಟ ಕಳೆದುಕೊಂಡ ಕಾಳುಗಳು.
• ಉತ್ಪನ್ನದಲ್ಲಿನ ಶೇಕಡವಾರು ಪ್ರಮಾಣ ಅಪರಿಪಕ್ವ ಹಾಗೂ ಸುಕ್ಕುಗಟ್ಟಿದ ಕಾಳುಗಳ ಬಗ್ಗೆ ಮಾಹಿತಿ.

ಒಡೆದ ಕಡಲೆಕಾಳುಗಳ(ಶೇಕಡವಾರು ಪ್ರಮಾಣ) ಕಾಳುಗಳ ಮೂಲ ಸ್ವರೂಪದಲ್ಲಿ ಒಡೆದಿರುವುದು, ಪೂರ್ಣ ಮತ್ತು ಭಾಗಶಃ ಚೂರಾಗಿರುವ ಕಾಳುಗಳು, ಸುಕ್ಕುಗಟ್ಟಿದ ಹಾಗೂ ಅಪರಿಪಕ್ವ ಕಾಳುಗಳು (ಶೇಕಡವಾರು ಪ್ರಮಾಣ) ಕಾಳುಗಳು ಪೂರ್ಣ ಪ್ರಮಾಣದಲ್ಲಿ ಪಕ್ವತೆ ಇಲ್ಲದ ಕಾಳುಗಳು. ಕಡಲೆಕಾಳು ಪ್ರಮಾಣ ಶೇಕಡವಾರು ನಿರ್ದಿಷ್ಟ ಪ್ರಮಾಣದ ಕಡಲೆಕಾಳನ್ನು ಬೇರ್ಪಡಿಸಿದಾಗ ದೊರೆಯುವ ಉತ್ಪನ್ನದ ಪ್ರಮಾಣದ ಬಗ್ಗೆ ಮಾಹಿತಿ ಸಂಗ್ರಹಿಸಿ ಗುಣವಿಶ್ಲೇಷಣೆ ವರದಿಯಲ್ಲಿನ ದತ್ತಾಂಶದಲ್ಲಿ ಉಲ್ಲೇಖ ಮಾಡಲಾಗುವುದು.

ತೇವಾಂಶ (ಶೇಕಡವಾರು ಪ್ರಮಾಣ):
ಕಡಲೆ ಉತ್ಪನ್ನದ ಮಾದರಿಯಿಂದಸೂಕ್ತ ಕಾಳುಗಳನ್ನು ತೆಗೆದು, ಪ್ರತ್ಯೇಕವಾಗಿ ತೂಕ ಮಾಡಿಕೊಳ್ಳಲಾಗಿತ್ತದೆ. ಅದನ್ನು ವೈಜ್ಞಾನಿಕ ಪ್ರಯೋಗಾಲಯದಲ್ಲಿ ಬಳಕೆ ಮಾಡುವ ಓವೆನ್‍ನಲ್ಲಿ 100 ರಿಂದ 110 ಡಿಗ್ರೀ ಉಷ್ಣಾಂಶ ತಾಪಮಾನದಲ್ಲಿ ಸುಮಾರು 2 ಗಂಟೆ ಸಮಯದವರೆಗೆ ಒಣಗಿಸಲಾಗುತ್ತದೆ, ಬಳಿಕ ಒಣಗಿಸಿದ ಕಾಳುಗಳನ್ನು ತೂಕ ಮಾಡಲಾಗುತ್ತದೆ, ಒಣಗಿಸುವ ಮುನ್ನಾ ಉತ್ಪನ್ನದ ತೂಕ ಮತ್ತು ಒಣಗಿಸಿದ ಮೇಲೆ ಬರುವ ತೂಕದ ವ್ಯತ್ಯಾಸದ ಭಾಗಗಳಿಂದ ಕಡಲೆ ಕಾಳು ಉತ್ಪನ್ನದಲ್ಲಿನ ತೇವಾಂಶದ ಶೇಕಡವಾರನ್ನು ಕಂಡುಹಿಡಿಯಲಾಗುವುದು.

ಗುಣಧರ್ಮಗಳ ಪ್ರಮಾಣದ ಮೇಲೆ ಬೆಲೆ ನಿರ್ಧಾರಣೆ:
ಕಡಲೆಕಾಳು ಉತ್ಪನ್ನದಲ್ಲಿ ತೇವಾಂಶ, ಅನ್ಯಪದಾರ್ಥಗಳು, ಅಪರಿಪಕ್ವ ಹಾಗೂ ಸುಕ್ಕುಕಟ್ಟಿದ ಕಾಳುಗಳ ಪ್ರಮಾಣ ಕಡಿಮೆ ಇದ್ದಷ್ಟು ಮತ್ತು ಉತ್ಪನ್ನದಲ್ಲಿ ಬೀಜಗಳ ಗುಣಮಟ್ಟ ಲಭ್ಯತೆ ಹೆಚ್ಚಾಗಿದ್ದರೆ, ಮಾರುಕಟ್ಟೆಯಲ್ಲಿ ಉತ್ಪನ್ನದ ಮೌಲ್ಯ ಕೂಡ ಹೆಚ್ಚುತ್ತದೆ.
ಉದಾಹರಣೆಗೆ: ಕಡಲೆಕಾಳು ಉತ್ಪನ್ನದ ಗುಣಧರ್ಮಗಳ ಪ್ರಮಾಣ ಮತ್ತು ಲಾಟ್‍ಗಳಿಗೆ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ಆನ್‍ಲೈನ್ ಟೆಂಡರ್‍ನಲ್ಲಿ ದೊರೆತ ನೈಜ ಬೆಲೆ ಪಡೆದಿರುವ ಕುರಿತು ಒಂದು ವಿಶ್ಲೇಷಣೆ ವಿವರವನ್ನು ಕೆಳಗಿನ ರೇಖಾ ಚಿತ್ರಗಳಲ್ಲಿ ಗಮನಿಸಬಹುದು.

ಮೇಲಿನ ರೇಖಾ ಚಿತ್ರವನ್ನು ಉದಾಹರಣೆಗಾಗಿ ಗಮನಿಸಿ, ಗದಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆಕಾಳು ಉತ್ಪನ್ನಕ್ಕೆ ಉತ್ತಮ ಧಾರಣೆ ಪಡೆದ ಬಗ್ಗೆ ಮಾಹಿತಿಯನ್ನು ಕಲ್ಪಿಸಲಾಗಿದೆ. ರೈತರು ಕಡಲೇಕಾಳು ಉತ್ಪನ್ನವನ್ನು ಸರಿಯಾಗಿ ಒಣಗಿಸಿ, ಸ್ವಚ್ಚಮಾಡಿ ಮಾರಾಟಕ್ಕಾಗಿ ಮಾರುಕಟ್ಟೆಗೆ ತಂದ ವೇಳೆ ಗುಣವಿಶ್ಲೇಷಣೆ ಮಾಡಿಸಿ. ಕಡಲೆಕಾಳು ಉತ್ಪನ್ನದಲ್ಲಿ ಕನಿಷ್ಠ ತೇವಾಂಶವಿದ್ದ ಲಾಟ್‍ಗೆ ಗರಿಷ್ಟ ಬೆಲೆ ಲಭ್ಯವಾಗುವುದನ್ನು ರೇಖಾ ಚಿತ್ರದಲ್ಲಿ ತಾವು ಗಮನಿಸಬಹುದಾಗಿದೆ. ಶೇ.6% ರಿಂದ ಶೇ. 7%ರಷ್ಟು ತೇವಾಂಶವಿದ್ದ ಕಡಲೆಕಾಳು ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಧಾರಣೆ ದೊರೆತಿರುವುದನ್ನು ಗಮನಿಸಬಹುದಾಗಿದೆ. ಅದೇ ರೀತಿ ಶೇ.12 ರಿಂದ ಶೇ.13%ರಷ್ಟು ಹೆಚ್ಚು ತೇವಾಂಶವಿದ್ದ ಕಡಲೆಕಾಳು ಉತ್ಪನ್ನಕ್ಕೆ ಕಡಿಮೆ ಧಾರಣೆ ದೊರೆತಿರುವುದನ್ನು ಕೂಡ ಗಮನಿಸಬಹುದು. ಒಂದೇ ದಿನದ ವ್ಯಾಪಾರ ವಹಿವಾಟಿನಲ್ಲಿ ಪ್ರತ್ಯೇಕ ಲಾಟ್‍ಗಳಿಗೆ ಗುಣಮಟ್ಟ ಮತ್ತು ತೇವಾಂಶಕ್ಕೆ ಅನುಗುಣವಾಗಿ ಬೆಲೆ ಲಭ್ಯವಾಗಿರುವುದನ್ನು ನೋಡಬಹುದಾಗಿದೆ. ಖರೀದಿದಾರರು ಕಡಲೆಕಾಳು ಉತ್ಪನ್ನದಲ್ಲಿನ ತೇವಾಂಶ ಮತ್ತು ಗುಣಮಟ್ಟವನ್ನು ಗಮನಿಸಿ ಇ-ಟೆಂಡರ್‍ನಲ್ಲಿ ಉತ್ತಮ ಲಾಟ್‍ಗಳಿಗೆ ನೈಜ ಬೆಲೆಯನ್ನು ಬಿಡ್‍ನಲ್ಲಿ ನಮೂದಿಸುತ್ತಾರೆ.

ರೈತಭಾಂದವರಿಗೆ ಸಲಹೆ :
• ಕೃಷಿ ಉತ್ಪನ್ನಗಳನ್ನು ಮಾರಾಟಕ್ಕಾಗಿ ಮಾರುಕಟ್ಟೆಗೆ ತರುವ ಮುನ್ನ ಬೆಳೆಯನ್ನು ಸಕಾಲದಲ್ಲಿ ಕೊಯ್ಲು ಮಾಡಿ, ಸರಿಯಾಗಿ ಒಣಗಿಸಿ, ಅನ್ಯಪದಾರ್ಥಗಳನ್ನು ಬೇರ್ಪಡಿಸಿ, ಪ್ಯಾಕ್ ಮಾಡಿ ಏಕೀಕೃತ ಮಾರುಕಟ್ಟೆಗೆ ತರುವುದು.
• ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸ್ಥಾಪಿಸಲಾಗುತ್ತಿರುವ ವೈಜ್ಞಾನಿಕ ಪ್ರಯೋಗಾಲಯಗಳಲ್ಲಿ ಕೃಷಿ ಉತ್ಪನ್ನಗಳನ್ನು ತಪ್ಪದೇ ಗುಣವಿಶ್ಲೇಷಣೆ ಮಾಡಿಸುವುದು. ರೈತಭಾಂದವರಿಗೆ ಈ ಸೇವೆಯನ್ನು ಉಚಿತವಾಗಿ ಕಲ್ಪಿಸಲಾಗಿದೆ.
• ಗುಣವಿಶ್ಲೇಷಣೆ ಮಾಡಿದ ಉತ್ಪನ್ನಗಳ ವಿವರವಾದ ಮಾಹಿತಿಯ ದತ್ತಾಂಶವನ್ನು ಇ-ಮಾರುಕಟ್ಟೆಯ ಆನ್‍ಲೈನ್‍ನಲ್ಲಿ ಪ್ರಕಟಿಸಲಾಗುವುದು. ಏಕೀಕೃತ ಲೈಸನ್ಸ್ ಪಡೆದ ರಾಜ್ಯ ಮತ್ತು ಹೊರ ರಾಜ್ಯಗಳ ಖರೀದಿದಾರರು ಉತ್ಪನ್ನಗಳ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಪರೀಶಿಲಿಸಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ.
• ಗುಣವಿಶ್ಲೇಷಣೆ ಮಾಡಿದ ಉತ್ಪನ್ನಗಳ ಖರೀದಿಗೆ ಸ್ಪರ್ಧೆ ಹೆಚ್ಚಾಗಿ ಬೆಳೆಗೆ ಸ್ಪರ್ಧಾತ್ಮಕ ಬೆಲೆ ದೊರೆಯಲಿದೆ.

ಏಕೀಕೃತ ಮಾರುಕಟ್ಟೆ ವೇದಿಕೆ ಪ್ರಭಾವದಿಂದ ಮಾರುಕಟ್ಟೆಗಳಲ್ಲಿ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಕುರಿತು ಸಂಕ್ಷಿಪ್ತ ವಿವರ

ಏಕೀಕೃತ ಮಾರುಕಟ್ಟೆ ವೇದಿಕೆ ಪ್ರಭಾವದಿಂದ ಮಾರುಕಟ್ಟೆಗಳಲ್ಲಿ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಕುರಿತು ಸಂಕ್ಷಿಪ್ತ ವಿವರ :
ಶ್ರೀ. ಮನೋಜ್ ರಾಜನ್
ವ್ಯವಸ್ಥಾಪಕ ನಿರ್ದೇಶಕರು & ಸಿಇಒ,
ರೆಮ್ಸ್, ಬೆಂಗಳೂರು.

ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಸ್ಥಾಪನೆ ಬಳಿಕ ರೈತರ ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ಲಭ್ಯವಾಗುತ್ತದೆ.ರಾಜ್ಯದ ಸಮಸ್ತ ರೈತ ಬಾಂಧವರಿಗೆ, ವರ್ತಕರಿಗೆ ಹಾಗೂ ಮಾರುಕಟ್ಟೆಯಲ್ಲಿನ ವ್ಯಾಪಾರ ವಹಿವಾಟುಗಳಲ್ಲಿನ ಭಾಗೀದಾರರಿಗೆ ಉಪಯುಕ್ತವಾಗಲಿ ಎಂದು ಕರ್ನಾಟಕ ಸರ್ಕಾರದ “ಕೃಷಿ ಮಾರಾಟ ನೀತಿ “ಯನ್ನು ಅನುಷ್ಠಾನಗೊಳಿಸಿದೆ . ನೂತನ ನೀತಿ ಅನ್ವಯ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಸ್ಥಾಪಿಸಲಾಗಿದೆ. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟುಗಳು ಪಾರದರ್ಶಕತೆ, ದಕ್ಷತೆ ಮತ್ತು ಸರಳತೆಯಿಂದ ಕಾರ್ಯಸಾಧನೆಗೊಳಿಸಲು ಈ-ಟೆಂಡರ್ ಪದ್ದತಿಯನ್ನು ಜಾರಿಗೊಳಿಸಲಾಗಿದೆ.
ಆಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಮಾರುಕಟ್ಟೆಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಸ್ಥಾಪಿಸಲು ರಾಷ್ಟೀಯ ಈ – ಮಾರ್ಕೆಟ್ ಸರ್ವಿಸಸ್, ಕೃಷಿ ಮಾರಾಟ ಇಲಾಖೆ ಮತ್ತು ರಾಜ್ಯ ಕೃಷಿ ಮಾರಾಟ ಮಂಡಳಿ ಅವಿರತಃ ಸೇವೆಯನ್ನು ಸಲ್ಲಿಸಿವೆ. ಈ ಸಂಸ್ಥೆಗಳ ಪರಿಶ್ರಮದ ಫಲವಾಗಿ ರಾಜ್ಯದಲ್ಲಿನ ೧೬೨ ಕೃಷಿ ಉತ್ಪನ್ನ ಮಾರುಕಟ್ಟೆಗಳು ಇ-ಮಾರುಕಟ್ಟೆಗಳಾಗಿ ಕಾರ್ಯ ನಿರ್ವಹಿಸುತ್ತಿವೆ.

 

ಮಾದರಿ ಬೆಲೆ ವಿಶ್ಲೇಷಣೆ :

ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಸ್ಥಾಪನೆಯಾದ ಮೇಲೆ ಉತ್ಪನ್ನಗಳ ವಹಿವಾಟಿನಲ್ಲಿ ಮಾದರಿ ಧಾರಣೆಯಲ್ಲಿ ಗಮನಾರ್ಹ ಏರಿಕೆ ಬಗ್ಗೆ ಸಂಕ್ಷೀಪ್ತ ವರದಿಯನ್ನು ಗಮನಿಸಿ.

ತೊಗರಿ

ಪ್ರಮುಖ ಮಾರುಕಟ್ಟೆಗಳಲ್ಲಿ 2014-15ರಲ್ಲಿ ತೊಗರಿ ಉತ್ಪನ್ನದ ಸರಾಸರಿ ಮಾದರಿ ಬೆಲೆ ರೂ.4907/-. ಏಕೀಕೃತ ಮಾರುಕಟ್ಟೆ ವೇದಿಕೆ ಅಸ್ಥಿತ್ವಕ್ಕೆ ಬಂದ 2016-17ರ ಅವಧಿಯಿಂದ ರೂ. 8576/- ರಷ್ಟು ಮಾದರಿ ಬೆಲೆ ಲಭ್ಯವಾಗಿದೆ.

ಕಡಲೆ :

ಕಡಲೆ ಉತ್ಪನ್ನಕ್ಕೆ 2014-15ರಲ್ಲಿ ಸರಾಸರಿ ಮಾದರಿ ಬೆಲೆ ರೂ. 3017/-, ಅದರೆ 2016-17ಕ್ಕೆ ಮಾದರಿ ಬೆಲೆಯಲ್ಲಿ ಬಾರಿ ಬದಲಾಣೆಯಾಗಿ ರೂ.5973/-ಕ್ಕೆ ಏರಿಕೆಯಾಗಿತ್ತು.

ಉದ್ದು :

ಉದ್ದು ಉತ್ಪನ್ನದ ಮಾದರಿ ಬೆಲೆ 2014-15ರ ಅವಧಿಯಲ್ಲಿ ರೂ.5535/- ರಿಂದ 2016-17ರ ಅವಧಿಗೆ ರೂ.8090/-ಏರಿಕೆಯಾಗಿರುವುದು ಗಮನಾರ್ಹವಾಗಿದೆ. ಇ-ಟೆಂಡರ್ ಪ್ರಭಾವದಿಂದಾಗಿ ಶೇಕಡ 46%ರಷ್ಟು ಬೆಲೆಯಲ್ಲಿ ಏರಿಕೆ ಕಂಡಿದೆ.

ಕಡಲೆಕಾಯಿ/ಶೇಂಗಾ :

ಕೃಷಿ ಉತ್ಪನ್ನ ಮಾರಕಟ್ಟೆಗಳಲ್ಲಿ ಕಡಲೆಕಾಯಿ ಉತ್ಪನ್ನದ ಮಾದರಿ ಬೆಲೆಯಲ್ಲಿ ಹಲವು ಏರಿಳಿತವಾಗಿದೆ. 2014-15ರಲ್ಲಿ ಕ್ವಿಂಟಾಲ್ ಉತ್ಪನ್ನಕ್ಕೆ ರೂ.3607/- ಮಾದರಿ ಬೆಲೆಯಾಗಿತ್ತು. ಅದೇ 2016-17ರ ವೇಳೆಗೆ ಉತ್ಪನ್ನದ ಮಾದರಿ ಬೆಲೆ ರೂ.4762/-ಕ್ಕೆ ತಲುಪಿತ್ತು. ಇದು ಕಳೆದ ವರ್ಷಗಳಿಗಿಂತ ಶೇಕಡ 32%ರಷ್ಟು ಹೆಚ್ಚಾಗಿದೆ.

 

ಒಣಮೆಣಸಿನಕಾಯಿ:

ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ಒಣಮೆಣಸಿನಕಾಯಿ ವ್ಯಾಪಾರಕ್ಕೆ ಜನಪ್ರಿಯ. 2014-15 ರಿಂದ 2016-17ವರೆಗಿನ ಮಾದರಿ ಬೆಲೆ ರೂ.7027/- ರಿಂದ ರೂ.8558/- ಕ್ಕೆ ಏರಿಕೆಯಾಗಿದೆ. ಶೇಕಡ 22% ರಷ್ಟು ಮಾದರಿ ಬೆಲೆ ಏರಿಕೆಯಾಗಿದೆ.

ಹುಣಸೇಹಣ್ಣು :

ಪ್ರಮುಖ ಮಾರುಕಟ್ಟೆಗಳಲ್ಲಿ ಹುಣೆಸೇಹಣ್ಣು ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.5681, ಏಕೀಕೃತ ಮಾರುಕಟ್ಟೆ ವೇದಿಕೆಯ ಇ-ಟೆಂಡರ್ ನಿಂದಾಗಿ 2016-17ರಲ್ಲಿ ರೂ.7421 ಕ್ಕೆ ಮಾದರಿ ಬೆಲೆ ದಾಖಲಾಗಿದೆ. ಹಿಂದಿನ ವರ್ಷಗಳಿಗಿಂತ ಶೇಕಡ 31%ರಷ್ಟು ಮಾದರಿ ಬೆಲೆಯಲ್ಲಿ ಏರಿಕೆಯಾಗಿದೆ.

ಮೆಕ್ಕೆ ಜೋಳ :

ಮೆಕ್ಕೆ ಜೋಳ ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.1151/- ರಿಂದ 2016-17ಕ್ಕೆ ರೂ.1550/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 35% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ.

ಇದಲ್ಲದೆ ಹುರಳಿಕಾಳು ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.2839/- ರಿಂದ 2016-17ಕ್ಕೆ ರೂ.3123/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 10% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ ಮತ್ತು ಸಜ್ಜೆ ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.1267/- ರಿಂದ 2016-17ಕ್ಕೆ ರೂ.1657/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 31% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ.ಜೋಳದ ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.1595/- ರಿಂದ 2016-17ಕ್ಕೆ ರೂ.2280/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 43% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ. ರಾಗಿ ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.1529/- ರಿಂದ 2016-17ಕ್ಕೆ ರೂ.2036/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 33% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ ಹಾಗು ಸೂರ್ಯಕಾಂತಿ ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.3119/-ರಿಂದ 2016-17ಕ್ಕೆ ರೂ.3237/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 4% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ.

ಈ ಎಲ್ಲಾ ಸಂಖ್ಯಾ ವಿಶ್ಲೇಷಣೆ, ಮಾರುಕಟ್ಟೆಗಳಲ್ಲಿ ಆನ್‍ಲೈನ್ ಟೆಂಡರ್ ವ್ಯಾಪಾರ ವಹಿವಾಟು ಅನುಷ್ಠಾನದಿಂದಾಗಿ ರೈತರು ನೈಜ ಬೆಲೆ ಪಡೆಯುತ್ತಿರುವ ಸಾಕ್ಷಾತ್ಕಾರವನ್ನು ಸೂಚಿಸುತ್ತಿದೆ.

ಏಕೀಕೃತ ಮಾರುಕಟ್ಟೆ ಪ್ರಗತಿ

ಸನ್ಮಾನ್ಯ ಮುಖ್ಯಮಂತ್ರಿ ಅವರಿಂದ ಏಕೀಕೃತ ಮಾರುಕಟ್ಟೆ ವೇದಿಕೆ ಉದ್ಘಾಟನೆ

2014ರ ಫೆಬ್ರವರಿ 22ರಂದು ಪ್ರಾರಂಭಿಕವಾಗಿ ತುಮಕೂರು,ತಿಪಟೂರು ಹಾಗೂ ಚಾಮರಾಜನಗರದ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಉತ್ಪನ್ನಗಳ ಆನ್‍ಲೈನ್ ಟೆಂಡರ್ ಸೇವೆಗೆ ಸನ್ಮಾನ್ಯ ಮುಖ್ಯಮಂತ್ರಿಯವರು ಮತ್ತು ಸನ್ಮಾನ್ಯ ಕೃಷಿ ಮಾರುಕಟ್ಟೆ ಸಚಿವರು ಚಾಲನೆ ನೀಡಿದರು.ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಪರಿಸರ ವ್ಯವಸ್ಥೆ :

• 7ನೇ ದೊಡ್ಡ ರಾಜ್ಯ
• 62 ಮಿಲಿಯನ್ ಕರ್ನಾಟಕ ರಾಜ್ಯದ ಜನಸಂಖ್ಯೆ
• 92 ರಾಜ್ಯದಲ್ಲಿ ಸೂಚಿತ ಉತ್ಪನ್ನಗಳು
• 162 ಪ್ರಮುಖ ಮಾರುಕಟ್ಟೆಗಳು ಮತ್ತು 356 ಉಪ ಮಾರುಕಟ್ಟೆಗಳು
• 35,000 ಕೋಟಿ ರೂ. ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆಗಳ ವಾರ್ಷಿಕ ವಹಿವಾಟು
• 35,536 ಸಾವಿರ ವರ್ತಕರು
• 18146 ಸಾವಿರ ದಲ್ಲಾಲರು
• 48 ಲಕ್ಷ ರೈತರು ಏಕೀಕೃತ ಮಾರುಕಟ್ಟೆಯಲ್ಲಿ ನೋಂದಣೆ
• 160 ಪ್ರಮುಖ ಮಾರುಕಟ್ಟೆಗಳಲ್ಲಿನ ಏಕೀಕೃತ ಮಾರುಕಟ್ಟೆ ವೇದಿಕೆಗೆ ಆನ್‍ಲೈನ್ (ಇ-ಟೆಂಡರ್) ಸೇವೆ
• 40 ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಉತ್ಪನ್ನಗಳ ಗುಣವಿಶ್ಲೇಷಣೆ ಪ್ರಯೋಗಾಲಯಗಳ ಸ್ಥಾಪನೆ. ಖರೀದಿಸಿದ ಉತ್ಪನ್ನಗಳ ಸಾಗಾಟಕ್ಕೆ ಇ-ಪರ್ಮಿಟ್ ಪಡೆಯಬಹುದಾಗಿದೆ ಪ್ರಸ್ತುತ ಇ-ಮಾರುಕಟ್ಟೆಗಳಲ್ಲಿ ಆನ್‍ಲೈನ್ ಟೆಂಡರ್

ರಾಜ್ಯದ 162 ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ (ವಿದ್ಯುನ್ಮಾನ ವೇದಿಕೆ)ಯನ್ನು ವಿಸ್ತರಿಸಲಾಗಿದೆ. ರಾಜ್ಯದ ಎಲ್ಲಾ ಎಪಿಎಂಸಿಗಳಲ್ಲಿ ಖರೀದಿದಾರರು ಮೂಲಕ 110 ಲಕ್ಷಕ್ಕೂ ಹೆಚ್ಚು ಲಾಟ್‍ಗಳ ವ್ಯವಹಾರ ವಹಿವಾಟು ನಡೆದಿದ್ದು, ಇದರ ಒಟ್ಟು ಮೌಲ್ಯ ಸುಮಾರು ರೂ.90,000 ಕೋಟಿಗಳಾಗಿದೆ. ಹಂತ ಹಂತವಾಗಿ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಸ್ಥಾಪಿತವಾದ ಏಕೀಕೃತ ಮಾರುಕಟ್ಟೆಗಳಲ್ಲಿ ರೈತರ ಉತ್ಪನ್ನಗಳ ಖರೀದಿಗೆ ಆನ್‍ಲೈನ್‍ನಲ್ಲಿ ಸ್ಪರ್ಧೆ ಹೆಚ್ಚಾಗಿ, ಸ್ಪರ್ಧಾತ್ಮಕ ಬೆಲೆ ಲಭ್ಯವಾಗುತ್ತಿರುವುದು ಹರ್ಷ ತಂದಿದೆ.

40 ಏಕೀಕೃತ ಮಾರುಕಟ್ಟೆಗಳಲ್ಲಿ ಉತ್ಪನ್ನಗಳ ಗುಣವಿಶ್ಲೇಷಣೆ ಮಾಡುವ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಇನ್ನೂ ಉತ್ಪನ್ನಗಳ ಸ್ವಚ್ಚತೆ, ವರ್ಗಿಕರಣ ಮತ್ತು ಪ್ಯಾಕ್ ಮಾಡಲು ಆಧುನಿಕ ಯಂತ್ರೋಪಕರಣಗಳನ್ನು ಸ್ಥಾಪಿಸಲಾಗುತ್ತಿದೆ.

ರೈತ ಜಾಗೃತಿ ಸಭೆಗಳು :
• 157 ಏಕೀಕೃತ ಮಾರುಕಟ್ಟೆಗಳ ವ್ಯಾಪ್ತಿಯಲ್ಲಿ ರೈತ ಶಿಕ್ಷಣ ಅಭಿಯಾನ.
• 20,000 ಹಳ್ಳಿಗಳಲ್ಲಿ ರೈತರ ಭಾಗೀದಾರರ ಸಭೆಗಳನ್ನು ಆಯೋಜಿಸಿ, ನೂತನ ಮಾರುಕಟ್ಟೆ ಅನುಕೂಲಗಳ ಬಗ್ಗೆ ರೈತ ಜಾಗೃತಿ ಶಿಕ್ಷಣ ನೀಡಲಾಗಿದೆ.
• 40 ಲಕ್ಷ ರೈತ ಭಾಂದವರಿಗೆ ಏಕೀಕೃತ ಮಾರುಕಟ್ಟೆಯ ಆನ್‍ಲೈನ್ ಟೆಂಡರ್ ಕಾರ್ಯವಿಧಾನದ ಕುರಿತಾದ ಮಾಹಿತಿಯನ್ನು ನೀಡಲಾಗಿದೆ.

ಏಕೀಕೃತ ಮಾರುಕಟ್ಟೆ ಪ್ರಗತಿ :

ಸ್ಪರ್ಧೆ ಹೆಚ್ಚಳ :
• ಕರ್ನಾಟಕ ರಾಜ್ಯದ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿನ ಉತ್ಪನ್ನಗಳ ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಈ ಹಿಂದೆ ಲೈಸನ್ಸ್ ನೀಡಿಕೆಯಲ್ಲಿನ ಪದ್ದತಿಗಳನ್ನು ಸರಳೀಕರಣಗೊಳಿಸಿ, ಖರೀದಿದಾರರಿಗೆ ಏಕೀಕೃತ ಲೈಸನ್ಸ್ ನೀಡಲಾಗಿದೆ. ಇದರಿಂದ ಖರೀದಿದಾರರು ರಾಜ್ಯದ ಯಾವುದೇ ಮಾರುಕಟ್ಟೆಯಲ್ಲಿ ಬೇಕಾದರು ಆನ್‍ಲೈನ್ ಇ-ಟೆಂಡರ್ ನಲ್ಲಿ ಏಕಕಾಲದಲ್ಲಿ ಭಾಗವಹಿಸಬಹುದು.
• ಉತ್ಪನ್ನಗಳ ಖರೀದಿ ಪ್ರಕ್ರಿಯೆಯಲ್ಲಿ ಸಣ್ಣ ವರ್ತಕರಿಂದ ಹಿಡಿದು ದೊಡ್ಡ ದೊಡ್ಡ ಸಂಸ್ಥೆಗಳು ಕೂಡ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
• ಮಾರುಕಟ್ಟೆಗಳಲ್ಲಿ ಗುಣವಿಶ್ಲೇಷಣೆ ಉತ್ಪನ್ನಗಳಿಂದ ಹಿಡಿದು ಪರೀಕ್ಷೆಗೊಳಪಡಿಸಿದ ಉತ್ತಮ ಗುಣಮಟ್ಟದ ಉತ್ಪನ್ನಗಳ ಲಭ್ಯತೆ ಬಗ್ಗೆ ಖರೀದಿದಾರರ ಅನುಕೂಲಕ್ಕಾಗಿ ಆನ್‍ಲೈನ್‍ನಲ್ಲಿ ಮಾಹಿತಿ ಲಭ್ಯ.

ಪಾರದರ್ಶಕತೆ :
• ಏಕೀಕೃತ ಮಾರುಕಟ್ಟೆ ವೇದಿಕೆಯಿಂದ ಮಾರುಕಟ್ಟೆಯ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿದ ಪಾರದರ್ಶಕತೆ.
• ಎಲ್ಲಾ ಬಿಡ್‍ಗಳಿಗೂ ಸಮಾನ ಅವಕಾಶ ಏಕೀಕೃತ ಮಾರುಕಟ್ಟೆಗಳಲ್ಲಿ ಕಲ್ಪಿಸಲಾಗಿದೆ.
• ಏಕೀಕೃತ ಮಾರಕಟ್ಟೆಯಲ್ಲಿ ಗೌಪ್ಯವಾಗಿ ಉತ್ಪನ್ನಗಳಿಗೆ ಬೆಲೆ ನಿರ್ಧಾರ ಮಾಡುವ ವ್ಯವಸ್ಥೆಯೂ ಇದೆ.
• ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಉತ್ಪನ್ನಗಳಿಗೆ ವಿದ್ಯುನ್ಮಾನ ತೂಕದ ವ್ಯವಸ್ಥೆ.
• ರೈತರ ಉತ್ಪನ್ನಗಳಿಗೆ ಗಣಕೀಕೃತ ಲೆಕ್ಕ ತಿರುವಳಿ ಪಟ್ಟಿಯನ್ನು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ನೀಡಲಾಗುತ್ತಿದೆ ಮತ್ತು ಸಕಾಲದಲ್ಲಿ ಹಣ ಪಾವತಿ ವ್ಯವಸ್ಥೆ ಮಾಡಲಾಗುತ್ತಿದೆ.
• ಮಾರುಕಟ್ಟೆಯ ಎಲ್ಲಾ ಭಾಗೀದಾರರ ಪ್ರಯೋಜನಕ್ಕಾಗಿ ದಕ್ಷ ಹಾಗೂ ಪರಿಣಾಮಕಾರಿಯಾದ ಕೃಷಿ ಮಾರಾಟ ಮಾಹಿತಿ ನೀಡಲಾಗುತ್ತಿದೆ.

ಹೆಚ್ಚಿದ ಮಾರುಕಟ್ಟೆ ಸಂಪರ್ಕ :
• ವೈಜ್ಞಾನಿಕ ಉಗ್ರಾಣಗಳನ್ನು ಉಪಮಾರುಕಟ್ಟೆಗಳೆಂದು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಿಂದ ಘೋಷಣೆ.
• ರೈತರಿಗೆ ಮಾರುಕಟ್ಟೆಗಳ ಧಾರಣೆ ಮಾಹಿತಿ ಅವರವರ ಮೊಬೈಲ್‍ಗೆ ಎಸ್‍ಎಂಎಸ್ ಮತ್ತು ರೈತರಿಗಾಗಿ ಉಚಿತ ಸಹಾಯವಾಣಿ ಸಂಖ್ಯೆ : 1800-425-1552 ಮೂಲಕ ಮಾರುಕಟ್ಟೆ ಧಾರಣೆ ಮಾಹಿತಿ ಪಡೆಯಬಹುದು.
• ಉಗ್ರಾಣ ಆಧಾರಿತ ಉತ್ಪನ್ನಕ್ಕೆ ಬ್ಯಾಂಕ್‍ಗಳಿಂದ ಹಣಕಾಸಿನ ಸಾಲ ಸೌಲಭ್ಯ ಪಡೆಯುವ ಅನುಕೂಲವಿದೆ.

ಪರ್ಯಾಯ ಮಾರುಕಟ್ಟೆಗಳು :
• ವೈಜ್ಞಾನಿಕ ದಾಸ್ತಾನು ವ್ಯವಸ್ಥೆ ಇರುವ ಉಗ್ರಾಣಗಳು ಉಪ ಮಾರುಕಟ್ಟೆಗಳಾಗಿವೆ
• ಖಾಸಗಿ ಮಾರುಕಟ್ಟೆಗಳು
• ನೇರ ಖರೀದಿ ಕೇಂದ್ರಗಳು
• ಒಪ್ಪಂದ ಕೃಷಿ ವ್ಯವಸ್ಥೆಗಳು
• ಎಫ್‍ಪಿಒ ಮತ್ತು ಕೃಷಿ ಉತ್ನನ್ನ ಸಹಕಾರ ಸಂಘಗಳು

ಮನೋಜ್ ರಾಜನ್, ಐಎಫ್‍ಎಸ್.,
ಅಪರ ಕಾರ್ಯದರ್ಶಿ (ಮಾರುಕಟ್ಟೆ ಸುಧಾರಣೆ),ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ
& ವ್ಯವಸ್ಥಾಪಕ ನಿರ್ದೇಶಕರು/ ಮುಖ್ಯಕಾರ್ಯನಿರ್ವಹಣಾಧಿಕಾರಿ, ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್, ಬೆಂಗಳೂರು.

ಏಕೀಕೃತ ಮಾರುಕಟ್ಟೆ ವೇದಿಕೆ ಕಾರ್ಯವಿಧಾನ

ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಅನ್ನದಾತರ ಕೃಷಿ ಉತ್ಪನ್ನಗಳಿಗೆ ಅತ್ಯುತ್ತಮ ಬೆಲೆ ಪಡೆಯಲು ಸಹಕಾರಿಯಾಗುವಂತೆ ತೊಂದರೆ ಮುಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.  ಪ್ರಮುಖ 162 ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ (ವಿದ್ಯುನ್ಮಾನ ವೇದಿಕೆ)ಯನ್ನು ಸ್ಥಾಪಿಸಲಾಗಿದೆ.

ಈ ಮಾರುಕಟ್ಟೆ ವೇದಿಕೆಯಲ್ಲಿನ ಕಾರ್ಯವಿಧಾನದ ಕ್ರಮಗಳು ಏನು? ಈ ವ್ಯವಸ್ಥೆಯಿಂದ ರೈತರಿಗೆ, ಸ್ಥಳೀಯ ಮತ್ತು ಪ್ರಾದೇಶಿಕ ಹಾಗೂ ಹೊರರಾಜ್ಯದ ಖರೀದಿದಾರರಿಗೆ ಯಾವ ರೀತಿ ಅನುಕೂಲವಾಗುತ್ತದೆ ಎಂಬ ಎಲ್ಲಾ ಪ್ರಶ್ನೆಗಳಿಗೆ ಸಮಗ್ರ ವರದಿ ಇಲ್ಲಿದೆ.

                              ಮಾರಾಟಕ್ಕಾಗಿ ಉತ್ಪನ್ನದ ತಯಾರಿ ಹೇಗೆ ಇರಬೇಕು ?
ರೈತರು ಸಕಾಲದಲ್ಲಿ ಬೆಳೆ ಕೊಯ್ಲು ಮಾಡುವುದು ಬಹು ಮುಖ್ಯವಾದ ಅಂಶ,ಈ ವಿಧಾನದಿಂದ ಉತ್ಪನ್ನದ ಗುಣಮಟ್ಟ ಕಾಪಡಲು ಅನುಕೂಲವಾಗಲಿದೆ.

ಕೊಯ್ಲು ಮಾಡಿದ ಬೆಳೆಯನ್ನು ಅಗತ್ಯಕ್ಕೆ ಅನುಗುಣವಾಗಿ ಒಣಗಿಸುವುದು ಬಹಳ ಮುಖ್ಯ, ಸರಿಯಾಗಿ ಒಣಗಿಸಿದ ಉತ್ಪನ್ನದಲ್ಲಿನ ಕಸಕಡ್ಡಿಯನ್ನು ಸ್ವಚ್ಚ ಮಾಡಿ, ಗುಣಪ್ರಮಾಣಕ್ಕೆ ಅನುಗುಣವಾಗಿ ವಿಂಗಡಣೆ ಮಾಡಬೇಕು. ಈ ರೀತಿಯಲ್ಲಿ ಉತ್ಪನ್ನವನ್ನು ಉಸ್ತುವಾರಿ ಮಾಡುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯಬಹುದಾಗಿದೆ.

ಉತ್ಪನ್ನವನ್ನು ಸ್ವಚ್ಚ ಮಾಡಿ, ವಿಂಗಡಿಸಿ, ಗುಣ ಮಟ್ಟದ ಚೀಲಗಳಲ್ಲಿ ತುಂಬಿ(ಪ್ಯಾಕ್) ಮಾಡುವುದು. ಬೆಳೆಯನ್ನು ಮಾರಾಟಕ್ಕಾಗಿ ಮಾರುಕಟ್ಟೆಗೆ ತೆರಳಲು ರೈತರು ಸಿದ್ದ ಪಡಿಸಬೇಕಾದ ಕ್ರಮಗಳ ಬಗ್ಗೆ ಈ ಚಿತ್ರದಲ್ಲಿ ಗಮನಿಸಬಹುದು.
                                     ಮಾರುಕಟ್ಟೆಯಲ್ಲಿ ರೈತರು ಏನು ಮಾಡಬೇಕು ?
ರೈತರು ಪ್ಯಾಕ್ ಮಾಡಿದ ಉತ್ಪನ್ನವನ್ನು ಮಾರುಕಟ್ಟೆಗೆ ತಂದ ವೇಳೆ ಮಾರುಕಟ್ಟೆ ಪ್ರಾಂಗಣದ ಮುಖ್ಯ ದ್ವಾರದಲ್ಲಿ ಉತ್ಪನ್ನದ ಮಾಹಿತಿ ನೀಡಿ (ಗೇಟ್ ಎಂಟ್ರಿ) ದಾಖಲಾತಿಯೊಂದಿಗೆ, ಪ್ರವೇಶ ಪಡೆಯಬೇಕು.
ಉತ್ಪನ್ನಕ್ಕೆ ಪ್ರತ್ಯೇಕ ಲಾಟ್ ಸಂಖ್ಯೆ
ಗೇಟ್ ಎಂಟ್ರಿ ಬಳಿಕ ಮಾರುಕಟ್ಟೆ ಪ್ರಾಂಗಣದಲ್ಲಿ ಮಾರಾಟಕ್ಕೆ ಉತ್ಪನ್ನ ಸಿದ್ದಪಡಿಸಬಹುದು ಅಥವಾ ದಲ್ಲಾಲರ ಅಥವಾ ವರ್ತಕರ ಅಂಗಡಿಗಳ ಮುಂದೆ ಲಾಟ್ ಮಾಡಬಹುದು. ಒಂದು ವೇಳೆ ಗೇಟ್ ಎಂಟ್ರಿ ಮಾಡಿಸಲು ಸಾಧ್ಯವಾಗದೆ ಹೋದರೆ, ಇಲ್ಲಿ ತಮ್ಮ ಉತ್ಪನ್ನಗಳ ಲಾಟ್ ಎಂಟ್ರಿ ಮಾಡಿಸುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆಯ ಬಳಿಕ ಉತ್ಪನ್ನಗಳ ಗುಣವಿಶ್ಲೇಷಣೆ ಮಾಡಿಸಲು ಏಕೀಕೃತ ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರಯೋಗಾಲಯದ ವ್ಯವಸ್ಥೆಯೂ ಇದೆ. ಇದರ ಲಾಭವನ್ನು ರೈತರು ತಪ್ಪದೇ ಪಡೆಯಬೇಕು. ಈ ಸೇವೆ ರೈತರಿಗೆ ಉಚಿತವಾಗಿರುತ್ತದೆ. ಉತ್ಪನ್ನಗಳ ಗುಣ ವಿಶ್ಲೇಷಣೆ ಪ್ರಮಾಣ ಪತ್ರವನ್ನು ಆನ್‍ಲೈನ್‍ನಲ್ಲಿ ಪ್ರಸಾರ ಮಾಡಲಾಗುವುದು.
                                                      ಉತ್ಪನ್ನದ ಗುಣವಿಶ್ಲೇಷಣೆ
ಮಾರುಕಟ್ಟೆ ಪ್ರಾಂಗಣದಲ್ಲಿ ಮಾರಾಟಕ್ಕೆ ಸಿದ್ದಪಡಿಸಿರುವ ಉತ್ಪನ್ನಗಳನ್ನು ಸ್ಥಳೀಯ ಖರೀದಿದಾರರು ಪರಿಶೀಲಿಸುತ್ತಾರೆ. ಗುಣವಿಶ್ಲೇಷಣೆ ಮಾಡಿಸಿದ ಉತ್ಪನ್ನಕ್ಕೆ ಬೇಡಿಕೆ ಸಹಜವಾಗಿ ಹೆಚ್ಚಿರುತ್ತದೆ, ಜೊತೆಗೆ ಆನ್‍ಲೈನ್ ಉತ್ಪನ್ನಗಳ ಮಾಹಿತಿ ಸಂಗ್ರಹಿಸುವ ಹೊರಗಿನ ಖರೀದಿದಾರಿಂದಲ್ಲೂ ಬೇಡಿಕೆ ಹೆಚ್ಚಾಗಿರುತ್ತದೆ. ಉತ್ಪನ್ನಗಳ ಗುಣವಿಶ್ಲೇಷಣೆ ಮಾಡಿದ ಗಣಕೀಕೃತ ಮಾಹಿತಿಯನ್ನು ರೈತರ ಲಾಟ್‍ಗಳ ಮುಂದೆ ಪ್ರದರ್ಶನ ಮಾಡಲಾಗುವುದು. ಇದರಿಂದ ಆನ್‍ಲೈನ್ ಟೆಂಡರ್  ನಲ್ಲಿ ಗುಣವಿಶ್ಲೇಷಣೆ ಮಾಡಿದ ಉತ್ಪನ್ನಕ್ಕೆ ಸ್ಪರ್ಧೆ ಹೆಚ್ಚಾಗಿ, ಸ್ಪರ್ಧಾತ್ಮಕ ಬೆಲೆ ಪಡೆಯಲು ಸಾಧ್ಯವಾಗಿದೆ.

                                                                ಇ-ಮಾರ್ಕೆಟ್

ಮಾರುಕಟ್ಟೆಯ ಸ್ಥಳೀಯ ಖರೀದಿದಾರರು ಉತ್ಪನ್ನಗಳನ್ನು ಖುದ್ದು ಪರಿಶೀಲಿಸಿ ಆನ್‍ಲೈನ್‍ನಲ್ಲಿ ಬಿಡ್ ಮಾಡುತ್ತಾರೆ. ಹೊರ ಮಾರುಕಟ್ಟೆ ಮತ್ತು ಹೊರ ರಾಜ್ಯಗಳ ಖರೀದಿದಾರರು ಉತ್ಪನ್ನಗಳ ಗುಣಧರ್ಮಗಳನ್ನು ಆನ್‍ಲೈನ್‍ನಲ್ಲಿ ಪ್ರಸಾರ ಮಾಡಿದ ಗಣಕೀಕೃತ ಪ್ರಮಾಣ ಪತ್ರವನ್ನು ಪರಿಶೀಲಿಸಿ, ಅಗತ್ಯ ಉತ್ಪನ್ನಗಳಿಗೆ ಖರೀದಿದಾರರು ಇದ್ದ ಸ್ಥಳದಿಂದಲೇ ಆನ್‍ಲೈನ್‍ನಲ್ಲಿ ಬಿಡ್ಡಿಂಗ್ ಮಾಡುತ್ತಾರೆ.ಈ ವ್ಯವಸ್ಥೆಯಿಂದಾಗಿ ಖರೀದಿಯಲ್ಲಿ ಸ್ಪರ್ಧೆ ಹೆಚ್ಚಲಿದೆ.

                                                   ಟೆಂಡರ್ ಡಿಕ್ಲರೇಷನ್
ಏಕೀಕೃತ ಮಾರುಕಟ್ಟೆಗಳಲ್ಲಿ ಆನ್‍ಲೈನ್ ಬಿಡ್ಡಿಂಗ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮಧ್ಯಾಹ್ನ 3 ಗಂಟೆಗೆ ನಂತರ ಮಾರುಕಟ್ಟೆ ಪ್ರಾಂಗಣದ ಕಛೇರಿ ಮುಂಭಾಗದಲ್ಲಿನ ಟಿ.ವಿ. ಪರದೆಗಳಲ್ಲಿ ಬಿಡ್ ವಿಜೇತರ ಪಟ್ಟಿ ಪ್ರಕಟಿಸಿ ಅವರವರ ಉತ್ಪನ್ನಕ್ಕೆ ದೊರೆತ ಧಾರಣೆ ಮಾಹಿತಿಯನ್ನು ರೈತರ ಮೊಬೈಲ್‍ಗೆ ಎಸ್‍ಎಂಎಸ್ ಮೂಲಕ ಸಂದೇಶ ಕಳಿಸಲಾಗುತ್ತಿದೆ.ನಿಗದಿತ ಸಮಯದಲ್ಲಿ ರೈತರು ಧಾರಣೆಗೆ ಸಮ್ಮತಿ ಸೂಚಿಸಿದರೆ ಮುಂದಿನ ಪ್ರಕ್ರಿಯೆ ನಡೆಸಲಾಗುವುದು.
ರೈತರ ಉತ್ಪನ್ನಗಳ ತೂಕದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಎದುರಾಗದಂತೆ ಎಲ್ಲಾ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಎಲೆಕ್ಟ್ರಾನಿಕ್ ತೂಕ ಯಂತ್ರಗಳನ್ನು ಅಳವಡಿಸಲಾಗಿದೆ.
ಪಾರದರ್ಶಕತೆ:
ಉತ್ಪನ್ನದ ತೂಕದ ಬಳಿಕ ಗಣಕೀಕೃತ ವಿಕ್ರೀಪಟ್ಟಿಯನ್ನು ರೈತರಿಗೆ ನೀಡಲಾಗುತ್ತದೆ. ಈ ವ್ಯವಸ್ಥೆಯಿಂದಾಗಿ ಮಾರುಕಟ್ಟೆಯಲ್ಲಿ ಪಾರದರ್ಶಕತೆ ಹೆಚ್ಚಾಗಿದೆ.
ಇ-ಪರ್ಮಿಟ್:
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಪೂರ್ಣಗೊಂಡು ಉತ್ಪನ್ನಗಳ ಮೊತ್ತವನ್ನು ಸಂದಾಯ ಮಾಡಿದ ಕೂಡಲೇ ಖರೀದಿದಾರರು ಖರೀದಿಸಿದ ಉತ್ಪನ್ನವನ್ನು ಸಾಗಾಟ ಮಾಡಲು ಯಾವುದೇ ಸಮಯದಲ್ಲಿಯಾದರು, ಎಲ್ಲಿಂದಲಾದರು ಇ-ಪರ್ಮಿಟ್ ಪಡೆಯುವ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ 160 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ವ್ಯಾಪ್ತಿಯಲ್ಲಿ ಖರೀದಿಯಲ್ಲಿ ಭಾಗಿಯಾಗುವ ಖರೀದಿದಾರರು ಅವರು ಇದ್ದ ಸ್ಥಳದಿಂದಲೇ ಇ-ಪರ್ಮಿಟ್ ಪಡೆಯಬಹುದು.

ಮನೋಜ್ ರಾಜನ್, ಐಎಫ್‍ಎಸ್.,
ಅಪರ ಕಾರ್ಯದರ್ಶಿ (ಮಾರುಕಟ್ಟೆ ಸುಧಾರಣೆ),ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ
& ವ್ಯವಸ್ಥಾಪಕ ನಿರ್ದೇಶಕರು/ ಮುಖ್ಯಕಾರ್ಯನಿರ್ವಹಣಾಧಿಕಾರಿ, ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್, ಬೆಂಗಳೂರು.

Continue reading “ಏಕೀಕೃತ ಮಾರುಕಟ್ಟೆ ವೇದಿಕೆ ಕಾರ್ಯವಿಧಾನ”