ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಮೆಕ್ಕೆಜೋಳ ಉತ್ಪನ್ನಕ್ಕೆ ನೈಜ ಬೆಲೆ ನಿರ್ಧರಣೆ

ಗುಣವಿಶ್ಲೇಷಣೆಯ ಅನುಕೂಲಗಳು ಮತ್ತು ಪ್ರಾಮುಖ್ಯತೆ ಕುರಿತು ಮಾಹಿತಿ ಕಲ್ಪಿಸುವ ಮುಂದುವರೆದ ಭಾಗವಾಗಿ ಈ ಸಂಚಿಕೆಯಲ್ಲಿ ಮೆಕ್ಕೆಜೋಳ ಉತ್ಪನ್ನದ ಗುಣವಿಶ್ಲೇಷಣೆಯ ಕಾರ್ಯವಿಧಾನದ, ಗುಣಧರ್ಮಗಳು ಮತ್ತು ಗುಣಧರ್ಮಗಳ ಮೌಲ್ಯಕ್ಕೆ ಅನುಗುಣವಾಗಿ ಬೆಲೆ ನಿರ್ಧರಣೆ ಬಗ್ಗೆ ಅಂಕಿಅಂಶಗಳೊಂದಿಗೆ ಸಮಗ್ರ ವಿವರಣೆ.
ಕರ್ನಾಟಕ ರಾಜ್ಯ ಮೆಕ್ಕೆಜೋಳ ಉತ್ಪದನೆಯಲ್ಲಿ ದೇಶದಲ್ಲಿಯೇ ಮುಂಚೂಣೆಯಲ್ಲಿದೆ. ದಾವಣಗೆರೆ, ಹಾವೇರಿ, ಚಿತ್ರದುರ್ಗ, ಬೆಳಗಾವಿ, ಬಳ್ಳಾರಿ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಚಾಮಾರಾಜನಗರ, ಮತ್ತು ಬಾಗಲಕೋಟೆ ಜಿಲ್ಲೆಗಳ ಭೂ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯನ್ನು ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಜೋಳದ ಉತ್ಪನ್ನವನ್ನು ಆಹಾರಕ್ಕಾಗಿ, ಜಾನುವಾರುಗಳಿಗೆ ಮೇವು, ಇತರೆ ಪ್ರಾಣೆಗಳ ಆಹಾರವಾಗಿ ಮತ್ತು ಕೈಗಾರಿಕೆಗಳ ಬಳಿಕೆಗಾಗಿ ಸ್ಟಾರ್ಚ್ (ಪಿಷ್ಟ) ಎಸ್ಟ್ರಾಕ್ಷನ್‍ಗಾಗಿ ವಿವಿಧ ನಮೋನೆಗಳಲ್ಲಿ ಬೇಡಿಕೆ ಇರುವ ಏಕದಳ ಧಾನ್ಯವಾಗಿದೆ. ದಾವಣಗೆರೆ, ರಾಣೇಬೆನ್ನೂರು ಮತ್ತು ಶಿಕಾರಿಪುರ ಮಾರುಕಟ್ಟೆಗಳಲ್ಲಿ ಅತಿ ಹೆಚ್ಚು ಆವಕವಾಗುವುದು ಸಾಮಾನ್ಯವಾಗಿದೆ.
ಬಾಗಲಕೋಟೆ, ಧಾರವಾಡ, ದಾವಣಗೆರೆ , ರಾಣೇಬೆನ್ನೂರು, ಚನ್ನಗಿರಿ, ಹರಪನಹಳ್ಳಿ. ಚನ್ನಗಿರಿ, ಕೊಟ್ಟೂರು, ಹೊಸದುರ್ಗ, ಶಿವಮೊಗ್ಗ ಕೃಷಿ ಮಾರುಕಟ್ಟೆಗಳಲ್ಲಿ ಮೇಕ್ಕೆಜೋಳ ಉಚಿತ ಗುಣವಿಶ್ಲೇಷಣೆಗಾಗಿ ಸೇವೆಗಾಗಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಈ ಪ್ರಯೋಗಾಲಯಗಳಲ್ಲಿ ಉತ್ಪನ್ನಗಳ ಗುಣವಿಶ್ಲೇಷಣೆ ಕಾರ್ಯವನ್ನು ಪರಣಿತಿ ಹೊಂದಿದ ನುರಿತತಜ್ಞರು ನಿರ್ವಹಿಸುತ್ತಿದ್ದಾರೆ.
ಉತ್ಪನ್ನವನ್ನು ರೈತರು ಮಾರುಕಟ್ಟೆಗೆ ರಾಶಿ/ಚೀಲಗಳಲ್ಲಿ ತರುತ್ತಾರೆ, ಇಂತಹ ಲಾಟ್‍ಗಳನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ (ಃIS) ಪ್ರಕಾರ ಉತ್ಪನ್ನದ ಮಾದರಿ ಸಂಗ್ರಹಣೆಯನ್ನು ಕೆಳೆಗಿನಂತೆ ಮಾಡಲಾಗುತ್ತದೆ.
ಮಾದರಿತೆಗೆಯುವ ವಿಧಾನ:
1. ಮಾರಾಟಗಾರರು ಮಾರಾಟಕ್ಕಾಗಿ ಮಾರುಕಟ್ಟೆಗೆತರುವ ಮೆಕ್ಕೆಜೋಳವನ್ನು ಪ್ಯಾಕ್ ಮಾಡಿ (ಗೋಣಿಚೀಲದಲ್ಲಿ) ತರಬಹುದು ಅಥವಾ ಹಾಗೆ ರಾಶಿ ರೂಪದಲ್ಲಿ ತರಬಹುದು, ಮಾದರಿ ತೆಗೆಯುವುದಕ್ಕಾಗಿ (ಸ್ಯಾಂಪಲ್) ಪ್ರತಿ ಲಾಟನ್ನು ಚೀಲ ಅಥವಾ ರಾಶಿ ರೂಪದಲ್ಲಿ ಪ್ರತ್ಯೇಕವಾಗಿ ಇಡುವುದು.
2. ಪ್ಯಾಕ್ ಮಾಡಿದರೂಪದಲ್ಲಿ ಲಾಟನ್ನು ತಂದಾಗ ಲಾಟ್‍ನಲ್ಲಿನ ಪ್ರತಿಚೀಲದÀ ಮೇಲ್ಭಾಗ, ಮಧ್ಯಭಾಗ ಮತ್ತು ಕೆಳಭಾಗದಿಂದ ಸಣ್ಣ ಪ್ರಮಾಣದಲ್ಲಿ ಉತ್ಪನ್ನ ತೆಗೆದು ಸ್ಯಾಂಪಲ್ ಸಿದ್ಧಪಡಿಸುವುದು ಮತ್ತು ಸರಿಯಾಗಿ ಮಿಶ್ರಣ ಮಾಡುವುದು. ಇದನ್ನು ಬಲ್ಕ್ ಸ್ಯಾಂಪಲ್ ಎಂದು ಕರೆಯಲಾಗುವುದು.
3. ಒಂದು ವೇಳೆ ಮೆಕ್ಕೆಜೋಳ ಲಾಟನ್ನು ರಾಶಿ ರೂಪದಲ್ಲಿತಂದಾಗ ಮಾದರಿಯನ್ನು ಕನಿಷ್ಠ ಪಕ್ಷ 7 ಭಾಗಗಳಿಂದ ಅಂದರೆ ಮುಂಭಾಗ, ಹಿಂಭಾಗ, ಎಡಭಾಗ, ಬಲಭಾಗ, ರಾಶಿಯ ತುದಿ, ಮಧ್ಯ ಹಾಗೂ ತಳಭಾಗಗಳಿಂದ ಸಂಗ್ರಹಿಸಿ, ನಂತರ ಈ ಮಾದರಿಯನ್ನು ಸರಿಯಾಗಿ ಮಿಶ್ರಣ ಮಾಡಿ ಬಲ್ಕ್ ಮಾದರಿಯನ್ನು ಸಂಗ್ರಹಿಸತಕ್ಕದ್ದು.
4. ಕಾಂಪೋಸಿಟ್ ಸ್ಯಾಂಪಲ್ ಸಿದ್ಧಪಡಿಸಲು ಬಲ್ಕ್ ಸ್ಯಾಂಪಲ್‍ನಿಂದ ಅಗತ್ಯವಿರುವ 1/2 ಕೆ.ಜಿ ಪ್ರಮಾಣದ ಉತ್ಪನ್ನ ತೆಗೆಯುವುದು.
5. ಸ್ಯಾಂಪಲ್ ಡಿವೈಡರ್‍ನಿಂದತಲಾ 100 ಗ್ರಾಂನಂತೆ 5 ಸಮಭಾಗಗಳಾಗಿ ವಿಂಗಡಿಸಲಾಗುವುದು.
6. ಒಂದು ವೇಳೆ ಸ್ಯಾಂಪಲ್ ಡಿವೈಡರ್ ಲಭ್ಯವಿಲ್ಲದಿದ್ದಲ್ಲಿ, ಕಾಂಪೋಸಿಟ್ ಮಾದರಿ ಮಿಶ್ರಣವನ್ನು 12 ಮಿ.ಮಿ. ರಿಂದ 25 ಮಿ.ಮಿ. ಗಾತ್ರದ ವೃತ್ತಾಕಾರವಾಗಿ ರಚಿಸುವುದು. ಅದರಲ್ಲಿ ವಿವಿಧ ಭಾಗಗಳಿಂದ ಅಂದರೆ ಮಧ್ಯಭಾಗ, ಎಡಭಾಗ ಮತ್ತು ಬಲಭಾಗಗಳಿಂದ ಇತರೆಯಾವುದೇ ಅನ್ಯ ಪದಾರ್ಥ ಉಳಿಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿ ತೆಗೆಯುವುದು.
7. ಪ್ರತಿ ಭಾಗವನ್ನು ಪ್ರತ್ಯೇಕವಾಗಿ ಪಾರದರ್ಶಕ ಪ್ಲಾಸ್ಟಿಕ್ ಬ್ಯಾಗ್‍ಗಳಲ್ಲಿ ಪ್ಯಾಕ್ ಮಾಡಿ ಪ್ರತಿಯೊಂದು ಬ್ಯಾಗಿಗೆ ಗುರುತಿನ ಚೀಟಿಯನ್ನು ಲಗತ್ತಿಸಿ ಸೀಲ್ ಮಾಡತಕ್ಕದ್ದು.

8. ಮಾದರಿಯನ್ನು ಸಂಗ್ರಹಿಸಿದ ವಿವರಗಳನ್ನು ದಾಖಲು ಮಾಡಲು ರಿಜಿಸ್ಟರನ್ನು ನಿರ್ವಹಿಸುವುದು.

ಗುಣ ವಿಶ್ಲೇಷಣಾ ವಿಧಾನ:
ಪ್ರಥಮವಾಗಿ ಮಾದರಿಯನ್ನು ಪರೀಕ್ಷಿಸಿದಾಗ ಯಾವುದೇಜೀವವಿರುವ ಕ್ರಿಮಿಕೀಟಗಳ ಲಭ್ಯತೆ ಬಗ್ಗೆ ಪರೀಕ್ಷೆಗೆ ಒಳಪಡಿಸಲಾಗುವುದು ಒಂದು ವೇಳೆ ಜೀವವಿರುವ ಕ್ರಿಮಿಕೀಟಗಳು ಪತ್ತೆಯಾದಲ್ಲಿಅಂತಹ ಲಾಟನ್ನು ತಿರಸ್ಕರಿಸಲಾಗುತ್ತದೆ ಹಾಗೂ ಯಾವುದೇ ಕೃತಕ ರಾಸಾಯನಿಕ ಬಣ್ಣ ಮತ್ತು ಬೂಸ್ಟ್ ಹಿಡಿದ ಬಗ್ಗೆ ಗುಣವಿಶ್ಲೇಷಣೆ ಸಂಸ್ಥೆಯು ಉತ್ಪನ್ನದ ಗುಣಧರ್ಮಗಳ ವಿವರಗಳನ್ನು ನಮೂದಿಸಿದ ಬಳಿಕ ರೈತರಿಗೆ ಉತ್ಪನ್ನದ ಗುಣವಿಶ್ಲೇಷಣೆ ಪ್ರಮಾಣ ಪತ್ರವನ್ನು ನೀಡುವ ವ್ಯವಸ್ಥೆಯನ್ನುಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಕಲ್ಪಿಸಲಾಗಿದೆ. ಉತ್ಪನ್ನದ ಗುಣವಿಶ್ಲೇಷಣೆಗೆ ಸಂಬಂಧಿಸಿದಂತೆ ಪ್ರಮಾಣ ಪತ್ರದಲ್ಲಿ ಊರ್ಜಿತವಿರುವ ಅವದಿಯನ್ನು ನಮೂದಿಸಲಾಗುವುದು.
ಮಾದರಿ ಸಂಗ್ರಹ ಮತ್ತು ಪರೀಕ್ಷೆಯನ್ನು ಮೂರನೇ ವ್ಯಕ್ತಿ / ಸ್ವತಂತ್ರ್ಯವಾದ ಸಂಸ್ಥೆಯು ನಿರ್ವಹಿಸುತ್ತದೆ, ಮಾದರಿ ಸಂಗ್ರಹಣ ಮತ್ತು ಪರೀಕ್ಷೆಯನ್ನು ಃIS ವಿಧಾನದ ಪ್ರಕಾರ ನುರಿತ ಅಸ್ಸೆಯರ್ಸ್ ನಿಂದ ಕೈಗೊಳ್ಳಲಾಗುತ್ತದೆ, ಪರೀಕ್ಷೆ ವರದಿಯ ನ್ಯೂನತೆ ಮತ್ತು ಇತರೆ ತೊಂದರೆಗಳಿದ್ದರೆ ಸದರಿ ಸಂಸ್ಥೆಯೇ ಜವಬ್ದಾರಿಯ ಹೊಣೆಗಾರಿಕೆಯನ್ನು ಹೊರಲಿದೆ.
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡುವ ವಿಧಾನ:
ಉತ್ಪನ್ನದಗುಣಮಟ್ಟ ಮತ್ತು ಗುಣಧರ್ಮಗಳ ವಿಶ್ಲೇಷಣೆ ಪರೀಕ್ಷೆ ಬಳಿಕ ಫಲಿತಾಂಶದ ವಿವರಗಳನ್ನು ಏಕೀಕೃತ ಮಾರುಕಟ್ಟೆ ವೇದಿಕೆ(ಇ-ಮಾರುಕಟ್ಟೆ)ಯಲ್ಲಿನ ಆನ್‍ಲೈನ್‍ನಲ್ಲಿ ಖರೀದಿದಾರರ/ವರ್ತಕರ ಪರೀಶಿಲನೆಗಾಗಿ ದಾಖಲು ಮಾಡಲಾಗುತ್ತದೆ.
ಗುಣವಿಶ್ಲೇಷಣಾ ವಿವಾದಗಳು, ಇನ್ನಿತರೆ ವಿಷಯಗಳು ಮತ್ತು ತೊಂದರೆಗಳ ನಿವಾರಣೆ :
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತುಅಭಿವೃದ್ಧಿ) ನಿಯಮಗಳು, 1968ರ ನಿಯಮ 91-ಪಿ(1)ರನ್ವಯ ರಚಿಸಲಾಗಿರುವ ವಿವಾದ ಪರಿಶೀಲನಾ ಸಮಿತಿಯು ನಿಯಮ 91-ಪಿ(7)ರನ್ವಯ ಕೃಷಿ ಮಾರಾಟ ನಿದೇಶಕರು ನೀಡಿರುವಂತಹ ಮಾರ್ಗದರ್ಶಿ ಸೂಚನೆಗಳನ್ವಯ ವಿವಾದಗಳನ್ನು ತೀರ್ಮಾನಿಸಲಾಗುತ್ತದೆ.
ಇದಕ್ಕಾಗಿ ಉತ್ಪನ್ನಗಳ ಮಾರಾಟಗಾರರುಆಹಾರ ಮತ್ತು ಸುರಕ್ಷತಾ ಪ್ರಮಾಣಗಳ ಕಾಯ್ದೆ 2006 ಹಾಗೂ ಸಂನಂಧಿಸಿದ ಇತರೆ ಕಾನೂನಿನಲ್ಲಿ ನಿಗದಿ ಪಡಿಸಿದ ನಿಯಮಗಳನ್ನು ಪಾಲಿಸುವುದುಕಡಾಯವಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿಯಾವುದೇ ಆದೇಶಗಳನ್ನು ಜಾರಿಗೊಳಿಸುವಲ್ಲಿ ಉದ್ಬವಿಸಬಹುದಾದ ಯಾವುದೇ ತೊಂದರೆಗಳನ್ನು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರ ಗಮನಕ್ಕೆ ತರತಕ್ಕದ್ದು ಹಾಗೂ ಅವರು ಸೂಕ್ತವೆನಿಸುವ ಸ್ಪಷ್ಠೀಕರಣವನ್ನು ನೀಡುವರು.
ಉತ್ಪನ್ನದ ಮಾದರಿ ವಿಲೇವಾರಿ :
ಏಕೀಕೃತ ಮಾರಕಟ್ಟೆ ವೇದಿಕೆಯಲ್ಲಿಉತ್ಪನ್ನ ಮಾರಾಟವಾಗಿಖರೀದಿದಾರರಿಗೆ ವಿಲೇವಾರಿ ಮಾಡಿದ ನಂತರ ಉತ್ಪನ್ನವನ್ನು ಕಾರ್ಯ ಪೂರ್ಣಗೊಳ್ಳುತ್ತದೆ. ಉತ್ಪನ್ನವನ್ನು ಖರೀದಿದಾರರಿಗೆ ವಿಲೇವಾರಿ ಮಾಡಿದ 15 ದಿನಗಳ ನಂತರ ಮಾರುಕಟ್ಟೆಯಲ್ಲಿ ವರ್ತಕರ ಪರಿಶೀಲನೆಗಾಗಿ ಸಂಗ್ರಹಿದ ಮಾದರಿ, ವ್ಯಾಜ್ಯ ನಿರ್ಣಯಕ್ಕಾಗಿ ಕಾಯ್ದಿರಿಸಿದ ಮಾದರಿ, ಗುಣವಿಶ್ಲೇಷಣೆ ಸಂಸ್ಥೆಗೆ ನೀಡಿದ ಮಾದರಿಯ ಪ್ರಮಾಣಗಳನ್ನು ಒಟ್ಟುಗೂಡಿಸಿ ವಿಲೇವಾರಿ ಮಾಡಲಾಗುವುದು.

ಮೆಕ್ಕೆಜೋಳದ ನಿರ್ದಿಷ್ಟ ಗುಣಧರ್ಮಗಳು:
1. ಅನ್ಯ ಪದಾರ್ಥಗಳು (ಶೇಕಡವಾರು ಪ್ರಮಾಣ): ಎಲೆ, ಕಾಂಡ, ಹುಲ್ಲು, ಸಿಪ್ಪೆ, ಧೂಳು, ಕಲ್ಲು, ಮಣ್ಣಿನಉಂಡೆ ಹಾಗೂ ಇತರೆ ಕಲ್ಮಶಗಳು.

2. ಇತರೆತಿನ್ನಬಹುದಾದ ಕಾಳುಗಳ ಮಿಶ್ರಣ (ಶೇಕಡವಾರು ಪ್ರಮಾಣ): ಮೂಲ ಮೆಕ್ಕೆಜೋಳದ ಇತರೆತಿನ್ನಬಹುದಾದ ಕಾಳುಗಳ ಮಿಶ್ರಣ.
3. ಹಾಳದ ಕಾಳುಗಳು (ಶೇಕಡವಾರು ಪ್ರಮಾಣ): ಕಾಳುಗಳು ಆಂತರಿಕವಾಗಿ ಹಾಳಾಗಿದ್ದು ಬಣ್ಣ ಕಳೆದುಕೊಂಡು ಗುಣಮಟ್ಟ ಹಾಳಾಗಿರುವುದು.

4. ಬಣ್ಣ ಕಳೆದುಕೊಂಡ ಮತ್ತು ಸ್ವಲ್ಟ ಹಾಳದ ಕಾಳುಗಳು (ಶೇಕಡವಾರು ಪ್ರಮಾಣ): ಕಾಳುಗಳು ಪೂರ್ಣ ಪ್ರಮಾಣದಲ್ಲಿ ನ್ಶೆಜ್ಯ ಬಣ್ಣವನ್ನು ಬಿಟ್ಟಿರುವುದು ಮತ್ತು ಸ್ವಲ್ಪ ಪ್ರಮಾಣದಲ್ಲಿ ಚೂರಾಗಿರುವುದು.
5. ಅಪರಿಪಕ್ವ ಹಾಗೂ ಸುರುಟಿದ ಕಾಳುಗಳು (ಶೇಕಡವಾರು ಪ್ರಮಾಣ): ಕಾಳುಗಳು ಪೂರ್ಣ ಪ್ರಮಾಣದಲ್ಲಿ ಪಕ್ವತೆಇಲ್ಲದ ಹಾಗೂ ಸುಕ್ಕುಗಟ್ಟಿದ ಕಾಳುಗಳ ಪ್ರಮಾಣ.

6. ಕ್ರಿಮಿಕೀಟಗಳಿಂದ ಹಾಳಾದ ಕಾಳುಗಳು (ಶೇಕಡವಾರು ಪ್ರಮಾಣ): ಕ್ರಿಮಿಕೀಟಗಳಿಂದ ಸಂಪೂರ್ಣವಾಗಿ ಮತ್ತು ಭಾಗಶಃ ಹಾನಿಗೊಳಗಾದ ಕಾಳುಗಳು.

7. ತೇವಾಂಶ:(ಶೇಕಡವಾರು ಪ್ರಮಾಣ)
ಮೆಕ್ಕೆಜೋಳ ಉತ್ಪನ್ನದ ಮಾದರಿಯಿಂದ ಸೂಕ್ತ ಕಾಳುಗಳನ್ನು ತೆಗೆದು, ಪ್ರತ್ಯೇಕವಾಗಿತೂಕ ಮಾಡಿಕೊಳ್ಳಲಾಗಿತ್ತದೆ. ಅದನ್ನು ವೈಜ್ಞಾನಿಕ ಪ್ರಯೋಗಾಲಯದಲ್ಲಿ ಬಳಕೆ ಮಾಡುವ ಓವೆನ್‍ನಲ್ಲಿ 100 ರಿಂದ 110 ಡಿಗ್ರೀ ಉಷ್ಣಾಂಶ ತಾಪಮಾನದಲ್ಲಿ ಸುಮಾರು 2 ಗಂಟೆ ಸಮಯದ ವರೆಗೆ ಒಣಗಿಸಲಾಗುತ್ತೆದೆ. ಬಳಿಕ ಒಣಗಿಸಿದ ಕಾಳುಗಳನ್ನು ತಣೆಸಿ ತೂಕ ಮಾಡಲಾಗಿತ್ತದೆ. ಒಣಗಿಸುವ ಮುನ್ನಾ ಉತ್ಪನ್ನದ ತೂಕ ಮತ್ತು ಒಣಗಿಸಿದ ಮೇಲೆ ಬರುವ ತೂಕದ ವ್ಯತ್ಯಾಸದ ಭಾಗಗಳಿಂದ ಮೆಕ್ಕೆಜೋಳ ಉತ್ಪನ್ನದಲ್ಲಿನ ತೇವಾಂಶದ ಶೇಕಡವಾರನ್ನು ಕಂಡುಹಿಡಿಯಾಲಾಗುವುದು.
ಗುಣಧರ್ಮಗಳ ಪ್ರಮಾಣದ ಮೇಲೆ ಬೆಲೆ ನಿರ್ಧಾರಣೆ:
ಮೆಕ್ಕೆಜೋಳ ಉತ್ಪನ್ನದಲ್ಲಿ ತೇವಾಂಶ, ಅನ್ಯಪದಾರ್ಥಗಳು, ಅಪರಿಪಕ್ವ ಹಾಗೂ ಸುಕ್ಕುಕಟ್ಟಿದ ಕಾಯಿಗಳ ಪ್ರಮಾಣ ಕಡಿಮೆ ಇದ್ದಷ್ಟು ಮತ್ತು ಉತ್ಪನ್ನದಲ್ಲಿ ಬೀಜಗಳ ಗುಣಮಟ್ಟ ಲಭ್ಯತೆ ಹೆಚ್ಚಿಗಿದ್ದರೆ, ಮಾರುಕಟ್ಟೆಯಲ್ಲಿ ಉತ್ಪನ್ನದ ಮೌಲ್ಯಕೂಡ ಹೆಚ್ಚುತ್ತದೆ.
ಉದಾರಣೆ : ಮೆಕ್ಕೆಜೋಳ ಉತ್ಪನ್ನದ ಗುಣಧರ್ಮಗಳ ಪ್ರಮಾಣ ಮತ್ತು ಲಾಟ್‍ಗಳಿಗೆ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ಆನ್‍ಲೈನ್ ಟೆಂಡರ್‍ನಲ್ಲಿ ದೊರೆತ ನೈಜ ಬೆಲೆ ಪಡೆದಿರುವ ಕುರಿತು ಒಂದು ವಿಶ್ಲೇಷಣೆ ವಿವರವನ್ನು ಕೆಳಗಿನ ರೇಖಾ ಚಿತ್ರಗಳಲ್ಲಿ ಗಮನಿಸಬಹುದು.

ಗದಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ಮೆಕ್ಕೆಜೋಳ ಬೆಳೆಯನ್ನು ಗುಣವಿಶ್ಲೇಷಣೆ ಮಾಡಿಸಿ ಆನ್‍ಲೈನ್‍ನಲ್ಲಿ ಮಾರಾಟ ಮಾಡಿದ್ದರಿಂದ ದೊರೆತ ನೈಜ ಬೆಲೆಯ ಕುರಿತ ಮಾಹಿತಿ :
ರೈತರು ಬೇಳೆಯನ್ನು ಸರಿಯಾಗಿ ಸ್ವಚ್ಚ ಮಾಡಿ, ಅನ್ಯಪದಾರ್ಥಗಳ ತೆಗೆದು, ಮಾರುಕಟ್ಟೆಯಲ್ಲಿ ಗುಣವಿಶ್ಲೇಷಣೆ ಮಾಡಿಸಿದ ಉತ್ಪನ್ನದ ಲಾಟ್‍ಗಳಿಗೆ ಸ್ಪರ್ಧಾತ್ಮಕ ಧಾರಣೆ ಲಭ್ಯವಾಗಿರುವ ಅಂಕಿಅಂಶಗಳನ್ನು ಮೇಲಿನ ರೇಖಾಚಿತ್ರದಲ್ಲಿ ಗಮನಿಸ ಬಹುದಾಗಿದೆ.
ರೈತ ಭಾಂದವರಿಗೆ ಸಲಹೆ :
• ಬೆಳೆಯನ್ನು ಮಾರುಕಟ್ಟೆಗೆ ಮಾರಾಟಕ್ಕೆ ತರುವ ಮುನ್ನಾ ಒಣಗಿಸಿ, ಸ್ವಚ್ಚಮಾಡಿ, ಕಸಕಡಿಯನ್ನು ವಿಂಗಡಿಸಿ ಪ್ಯಾಕ್ ಮಾಡಿ ತರುವುದು.
• ಉತ್ಪನ್ನವನ್ನು ತಪ್ಪದೇ ಗುಣವಿಶ್ಲೇಷಣೆ ಮಾಡಿಸುವುದು, ಏಕೀಕೃತ ಮಾರುಕಟ್ಟೆಯಲ್ಲಿ ಈ ಸೇವೆ ರೈತ ಭಾಂದವರಿಗೆ ಉಚಿತವಾಗಿ ನೀಡಲಾಗುತ್ತಿದೆ.
• ಉತ್ಪನ್ನದ ಗುಣವಿಶ್ಲೇಷಣೆ ವಿವರಗಳನ್ನು ಆನ್‍ಲೈನ್‍ನಲ್ಲಿ ಪ್ರಸಾರ ಮಾಡಲಾಗುವುದು, ರಾಜ್ಯದಲ್ಲಿನ ದೂರದ ಖರೀದಿದಾರರು ಮತ್ತು ಹೊರಗಿನ ಖರೀದೀದಾರರು ಆನ್‍ಲೈನ್‍ನಲ್ಲಿ ಉತ್ಪನ್ನದ ಮಾಹಿತಿಯನ್ನು ಪರೀಶಿಲಿಸಿ , ಇ-ಟೆಂಡರ್‍ನಲ್ಲಿ ಭಾಗವಹಿಸುತ್ತಾರೆ. ಈ ಮೂಲಕ ಖರೀದಿಯಲ್ಲಿ ಸ್ಪರ್ಧೆ ಹೆಚ್ಚಾಗಿ ನಿಮ್ಮ ಲಾಟ್‍ಗೆ ನೈಜ ಬೆಲೆ ದೊರೆಯಲಿದೆ.