ಶೇಂಗಾ ಉತ್ಪನ್ನದ ಭೌತಿಕ ಗುಣವಿಶ್ಲೇಷಣೆಯ ಮಹತ್ವ

ಶೇಂಗಾ ಬೆಳೆಒಂದು ವಾಣಿಜ್ಯ ಬೆಳೆಯಾಗಿದೆ. ಶೇಂಗಾ ಬೆಳೆಯುವ ಪ್ರಮುಖ ಜಿಲ್ಲೆಗಳು ತುಮಕೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ, ಧಾರವಾಡ, ರಾಯಚೂರು, ಯಾದಗಿರಿ, ಕೊಪ್ಪಳ ಹಾಗೂ ಬಾಗಲಕೋಟೆ. ಶೇಂಗಾ ಬೆಳೆಯನ್ನು ಮುಂಗಾರು, ಹಿಂಗಾರು ಮತ್ತು ಬೇಸಿಗೆಯಲ್ಲಿ ಬೆಳೆಯಲಾಗುತ್ತದೆ. ಶೇಂಗಾ ಕೃಷಿ ಉತ್ಪನ್ನವು ಒಂದು ಅಧಿಸೂಚಿತ ಉತ್ಪನ್ನವಾಗಿದೆ, ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಶೇಂಗಾ ಉತ್ಪನ್ನವನ್ನು ಮಾರಾಟ ಮಾಡಲು ಗುಣವಿಶ್ಲೇಷಣೆಯು ಪ್ರಮುಖ ಪಾತ್ರವಹಿಸುತ್ತದೆ.
ಶೇಂಗಾ ಉತ್ಪನ್ನವನ್ನು ರೈತರು ಮಾರುಕಟ್ಟೆಗೆ ತಂದಾಗ ರಾಶಿ/ಚೀಲಗಳಲ್ಲಿ ತರುತ್ತಾರೆ, ಇಂತಹ ಲಾಟ್‍ಗಳನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್(BIS) ಪ್ರಕಾರ ಮಾದರಿ ಸಂಗ್ರಹಣೆಯನ್ನು ಈ ಕೆಳಗಿನಂತೆ ನಡೆಸಲಾಗುವುದು.
ಮಾದರಿ ತೆಗೆಯುವ ವಿಧಾನ:
• ರೈತರು ಮಾರಾಟಕ್ಕಾಗಿ ಮಾರುಕಟ್ಟೆಗೆ ತರುವ ಶೇಂಗಾ(ನೆಲಗಡಲೆ ಕಾಯಿ ಮತ್ತು ಬೀಜ)ವನ್ನು ಪ್ಯಾಕ್ ಮಾಡಿ ತಂದ ಉತ್ಪನ್ನದಿಂದ ಮಾದರಿ ತೆಗೆಯುವುದಕ್ಕಾಗಿ(ಸ್ಯಾಂಪಲ್) ಪ್ರತಿ ಲಾಟನ್ನು ಚೀಲ ಅಥವಾ ರಾಶಿ ರೂಪದಲ್ಲಿ ಪ್ರತ್ಯೇಕವಾಗಿ ಇಡುವುದು.
• ಪ್ಯಾಕ್ ಮಾಡಿದ ರೂಪದಲ್ಲಿ ಲಾಟನ್ನು ತಂದಾಗ ಲಾಟ್‍ನಲ್ಲಿನ ಪ್ರತಿ ಚೀಲದ ಮೇಲ್ಭಾಗ, ಮಧ್ಯಭಾಗ ಮತ್ತು ಕೆಳಭಾಗದಿಂದ ಸಣ್ಣ ಪ್ರಮಾಣದಲ್ಲಿ ಉತ್ಪನ್ನ ತೆಗೆದು ಸ್ಯಾಂಪಲ್ ಸಿದ್ದಪಡಿಸಲಾಗುತ್ತದೆ. ಬಳಿಕ ಶೇಂಗಾ ಉತ್ಪನ್ನವನ್ನು ಸರಿಯಾಗಿ ಮಿಶ್ರಣ ಮಾಡಿ, ಅದನ್ನು ಬಲ್ಕ್ ಸ್ಯಾಂಪಲ್ ಎಂದು ಕೆರೆಯಲಾಗುತ್ತದೆ.
• ಒಂದು ವೇಳೆ ಲಾಟನ್ನು ರಾಶಿ ರೂಪದಲ್ಲಿ ತಂದಾಗ ಮಾದರಿಯನ್ನು ಕನಿಷ್ಠ ಪಕ್ಷ 7 ಭಾಗಗಳಿಂದ ಅಂದರೆ ಮುಂಭಾಗ, ಹಿಂಭಾಗ, ಎಡಭಾಗ, ಬಲಭಾಗ, ರಾಶಿಯ ತುದಿ, ಮಧ್ಯ ಹಾಗೂ ತಳಭಾಗಗಳಿಂದ ಸ್ಯಾಂಪಲ್ ಸಂಗ್ರಹಿಸಿದ ನಂತರ ಮಾದರಿಯನ್ನು ಸರಿಯಾಗಿ ಮಿಶ್ರಣ ಮಾಡಿ ಬಲ್ಕ್ ಮಾದರಿಯನ್ನು ಸಂಗ್ರಹಿಸಲಾಗುತ್ತದೆ.
• ಕಾಂಪೋಸಿಟ್ ಸ್ಯಾಂಪಲ್ ಸಿದ್ದಪಡಿಸಲು ಬಲ್ಕ್ ಸ್ಯಾಂಪಲ್‍ನಿಂದ 1/2 ಕೆ.ಜಿ. ಶೇಂಗಾ ಉತ್ಪನ್ನವನ್ನು ತೆಗೆಯಲಾಗುವುದು.
• ಸ್ಯಾಂಪಲ್ ಡಿವೈಡರ್ ನಿಂದ ತಲಾ 100 ಗ್ರಾಂ ನಂತೆ 5 ಸಮಭಾಗಗಳಾಗಿ ವಿಂಗಡಿಸಲಾಗುವುದು.
• ಪ್ರತಿ ಭಾಗವನ್ನು ಪ್ರತ್ಯೇಕವಾಗಿ ಪಾರದರ್ಶಕ ಪ್ಲಾಸ್ಟಿಕ್ ಬ್ಯಾಗ್‍ಗಳಲ್ಲಿ ಪ್ಯಾಕ್ ಮಾಡಲಾಗುವುದು. ಪ್ರತಿಯೊಂದು ಪ್ಲಾಸ್ಟಿಕ್ ಚೀಲಕ್ಕೆ ಗುರುತಿನ ಚೀಟಿಯನ್ನು ಲಗತ್ತಿಸಿ ಮುದ್ರೆ ಹಾಕಲಾಗುತ್ತದೆ. ಈ ರೀತಿ ಸಂಗ್ರಹಿಸಿದ ಉತ್ಪನ್ನದ ಒಂದು ಮಾದರಿಯನ್ನು ರೈತರಿಗೆ, ಒಂದು ಪ್ಯಾಕೆಟ್ ಎಪಿಎಂಸಿಯಲ್ಲಿ ವರ್ತಕರ ಪರಿಶೀಲನೆಗಾಗಿ, ಒಂದು ಮಾದರಿಯನ್ನು ಎಪಿಎಂಸಿಯಲ್ಲಿ ವಿವಾದ ನಿರ್ಣಯಕ್ಕಾಗಿ ಕಾಯ್ದಿರಿಸುವುದು, ಮತ್ತೊಂದು ಮಾದರಿಯನ್ನು ಗುಣ ವಿಶ್ಲೇಷಣೆಗಾಗಿ ನೀಡುವುದು, ಒಂದು ಮಾದರಿಯನ್ನು ಗುಣ ವಿಶ್ಲೇಷಣೆ ಸಂಸ್ಥೆಯ ದಾಖಲೆಗಾಗಿ ಸಂಗ್ರಹಿಸಲಾಗುತ್ತದೆ.
ಪರೀಕ್ಷೆ ವಿಧಾನ :
ಪ್ರಥಮವಾಗಿ ಮಾದರಿಯನ್ನು ಪರೀಕ್ಷಿಸಿದಾಗ ಯಾವುದೇ ಜೀವವಿರುವ ಕ್ರಿಮಿಕೀಟಗಳ ಉತ್ಪನ್ನದಲ್ಲಿ ಲಭ್ಯತೆ ಬಗ್ಗೆ ಪರೀಕ್ಷೆ ವೇಳೆ ಖಾತ್ರಿ ಒಳಪಡಿಸಲಾಗುತ್ತದೆ. ಒಂದು ವೇಳೆ ಜೀವವಿರುವ ಕ್ರಿಮಿಕೀಟಗಳು ಉತ್ಪನ್ನದಲ್ಲಿ ಪತ್ತೆಯಾದಲ್ಲಿ ಅಂತಹ ಲಾಟ್‍ನ್ನು ಗುಣವಿಶ್ಲೇಷಣೆ ಪ್ರಕ್ರಿಯೆಯಿಂದ ತಿರಸ್ಕರಿಸಲಾಗುತ್ತದೆ. ಕೃಷಿ ಉತ್ಪನ್ನದಲ್ಲಿ ಯಾವುದೇ ಕೃತಕ ರಾಸಾಯನಿಕ ಬಣ್ಣ ಅಥವಾ ಬೂಸ್ಟ್ ಹಿಡಿದ ಬಗ್ಗೆ ಪರೀಕ್ಷಿಸಿ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಯನ್ನು ಏಕೀಕೃತ ಮಾರುಕಟ್ಟೆ ವೇದಿಕೆಯ ಪ್ರಯೋಗಾಲಯಗಳಲ್ಲಿ ಕಲ್ಪಿಸಲಾಗಿದೆ. ಗುಣವಿಶ್ಲೇಷಣೆ ಸಂಸ್ಥೆಯು ಉತ್ಪನ್ನಗಳ ಗುಣಧರ್ಮಗಳ ವಿವರಗಳನ್ನು ನಮೂದಿಸಿರಿದ ಬಳಿಕ ರೈತರಿಗೆ ಉತ್ಪನ್ನದ ಗುಣ ಪ್ರಮಾಣ ಪತ್ರವನ್ನು ನೀಡುವ ವ್ಯವಸ್ಥೆಯನ್ನು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಒದಗಿಸಲಾಗಿದೆ. ಉತ್ಪನ್ನದ ಗುಣವಿಶ್ಲೇಷಣೆಗೆ ಸಂಬಂಧಿಸಿದಂತೆ ಪ್ರಮಾಣ ಪತ್ರದಲ್ಲಿ ಊರ್ಜಿತವಿರುವ ಅವದಿಯನ್ನು ನಮೂದಿಸಲಾಗುವುದು.
ಮಾದರಿ ಸಂಗ್ರಹ ಮತ್ತು ಪರೀಕ್ಷೆಯನ್ನು ಮೂರನೇ ವ್ಯಕ್ತಿ / ಸ್ವತಂತ್ರ್ಯವಾದ ಸಂಸ್ಥೆಯು ನಿರ್ವಹಿಸುತ್ತದೆ, ಮಾದರಿ ಸಂಗ್ರಹಣ ಮತ್ತು ಪರೀಕ್ಷೆಯನ್ನು BIS ವಿಧಾನದ ಪ್ರಕಾರ ನುರಿತ ಅಸ್ಸೆಯರ್ಸ್‍ನಿಂದ ಕೈಗೊಳ್ಳಲಾಗುತ್ತದೆ, ಪರೀಕ್ಷೆ ವರದಿಯ ನ್ಯೂನತೆ ಮತ್ತು ಇತರೆ ತೊಂದರೆಗಳಿದ್ದರೆ ಸದರಿ ಸಂಸ್ಥೆಯನ್ನು ಜವಬ್ದಾರಿಯುತರನ್ನಾಗಿ ಮಾಡಲಾಗಿದೆ.
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡುವ ವಿಧಾನ:
ಉತ್ಪನ್ನದ ಗುಣಧರ್ಮಗಳ ಪರೀಕ್ಷಾ ಫಲಿತಾಂಶದ ವಿವರಗಳನ್ನು ಏಕೀಕೃತ ಮಾರುಕಟ್ಟೆ ವೇದಿಕೆ (ಇ-ಮಾರುಕಟ್ಟೆ)ಯಲ್ಲಿನ ಆನ್‍ಲೈನ್‍ನಲ್ಲಿ ಖರೀದಿದಾರರ ಪರೀಶಿಲನೆಗಾಗಿ ನಮೂದಿಸಲಾಗುತ್ತಿದೆ.
ಗುಣವಿಶ್ಲೇಷಣಾ ವಿವಾದಗಳು, ಇನ್ನಿತರೆ ವಿಷಯಗಳು ಮತ್ತು ತೊಂದರೆಗಳ ನಿವಾರಣೆ :
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳು, 1968ರ ನಿಯಮ 91-ಪಿ(1)ರನ್ವಯ ರಚಿಸಲಾಗಿರುವ ವಿವಾದ ಪರಿಶೀಲನಾ ಸಮಿತಿಯು ನಿಯಮ 91-ಪಿ(7)ರನ್ವಯ ಕೃಷಿ ಮಾರಾಟ ನಿದೇಶಕರು ನೀಡಿರುವಂತಹ ಮಾರ್ಗದರ್ಶಿ ಸೂಚನೆಗಳನ್ವಯ ವಿವಾದಗಳನ್ನು ತೀರ್ಮಾನಿಸಲಾಗುತ್ತದೆ.
ಇದಕ್ಕಾಗಿ ಉತ್ಪನ್ನಗಳ ಮಾರಾಟಗಾರರು ಆಹಾರ ಮತ್ತು ಸುರಕ್ಷತಾ ಪ್ರಮಾಣಗಳ ಕಾಯ್ದೆ 2006 ಹಾಗೂ ಸಂಭಂಧಿಸಿದ ಇತರೆ ಕಾನೂನಿನಲ್ಲಿ ನಿಗದಿ ಪಡಿಸಿದ ನಿಯಮಗಳನ್ನು ಪಾಲಿಸುವುದು ಕಡಾಯವಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಯಾವುದೇ ಆದೇಶಗಳನ್ನು ಜಾರಿಗೊಳಿಸುವಲ್ಲಿ ಉದ್ಬವಿಸಬಹುದಾದ ಯಾವುದೇ ತೊಂದರೆಗಳನ್ನು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರ ಗಮನಕ್ಕೆ ತರತಕ್ಕದ್ದು ಹಾಗೂ ಅವರು ಸೂಕ್ತವೆನಿಸುವ ಸ್ಪಷ್ಠೀಕರಣವನ್ನು ನೀಡುವರು.

 

ಒಡೆದ ಕಾಯಿಗಳು (ಶೇಕಡವಾರು ಪ್ರಮಾಣ) ಕಾಯಿಗಳು ಮೂಲ ಸ್ವರೂಪದಲ್ಲಿ ಒಡೆದಿರುವುದು, ಪೂರ್ಣ ಮತ್ತು ಭಾಗಶಃ ಚೂರಾಗಿರುವ ಕಾಯಿಗಳು,ಸುಕ್ಕುಗಟ್ಟಿದ ಹಾಗೂ ಅಪರಿಪಕ್ವ ಕಾಯಿಗಳು (ಶೇಕಡವಾರು ಪ್ರಮಾಣ) ಕಾಯಿಗಳು ಪೂರ್ಣ ಪ್ರಮಾಣದಲ್ಲಿ ಪಕ್ವತೆ ಇಲ್ಲದ ಜೊಳ್ಳಾದ ಕಾಯಿಗಳು. ಶೇಂಗಾ ಬೀಜದ ಪ್ರಮಾಣ ಶೇಕಡವಾರು ನಿರ್ದಿಷ್ಟ ಪ್ರಮಾಣದ ಶೇಂಗಾ ಕಾಯಿಗಳಿಂದ ಬೀಜ ಬೇರ್ಪಡಿಸಿದಾಗ ದೊರೆಯುವ ಬೀಜದ ಪ್ರಮಾಣ ಬಗ್ಗೆ ಮಾಹಿತಿ ಸಂಗ್ರಹಿಸಿ ಗುಣವಿಶ್ಲೇಷಣೆ ವರದಿಯಲ್ಲಿನ ದತ್ತಾಂಶದಲ್ಲಿ ಉಲ್ಲೇಖ ಮಾಡಲಾಗುವುದು.
ತೇವಾಂಶ (ಶೇಕಡವಾರು ಪ್ರಮಾಣ):
ಶೇಂಗಾ ಉತ್ಪನ್ನದ ಮಾದರಿಯಿಂದ ಸೂಕ್ತ ಕಾಯಿಗಳನ್ನು ತೆಗೆದು, ಪ್ರತ್ಯೇಕವಾಗಿ ತೂಕ ಮಾಡಿಕೊಳ್ಳಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಯೋಗಾಲಯದಲ್ಲಿ ಬಳಕೆ ಮಾಡುವ ಓವೆನ್‍ನಲ್ಲಿ 100 ರಿಂದ 110 ಡಿಗ್ರೀ ಉಷ್ಣಾಂಶ ತಾಪಮಾನದಲ್ಲಿ ಸುಮಾರು 2 ಗಂಟೆ ಸಮಯದವರೆಗೆ ಒಣಗಿಸಲಾಗುತ್ತದೆ. ಬಳಿಕ ಒಣಗಿಸಿದ ಕಾಯಿಗಳನ್ನು ತಣಿಸಿ ತೂಕ ಮಾಡಲಾಗುತ್ತದೆ. ಒಣಗಿಸುವ ಮುನ್ನಾ ಉತ್ಪನ್ನದ ತೂಕ ಮತ್ತು ಒಣಗಿಸಿದ ಮೇಲೆ ಬರುವ ತೂಕದ ವ್ಯತ್ಯಾಸದ ಭಾಗಗಳಿಂದ ಶೇಂಗಾ ಉತ್ಪನ್ನದಲ್ಲಿನ ತೇವಾಂಶದ ಶೇಕಡವಾರನ್ನು ಕಂಡುಹಿಡಿಯಾಲಾಗುವುದು.

ಶೇಂಗಾ ಉತ್ಪನ್ನದಲ್ಲಿ ತೇವಾಂಶ, ಅನ್ಯಪದಾರ್ಥಗಳು, ಅಪರಿಪಕ್ವ ಹಾಗೂ ಸುಕ್ಕುಕಟ್ಟಿದ ಕಾಯಿಗಳ ಪ್ರಮಾಣ ಕಡಿಮೆ ಇದ್ದಷ್ಟು ಮತ್ತು ಉತ್ಪನ್ನದಲ್ಲಿ ಬೀಜಗಳ ಗುಣಮಟ್ಟ ಲಭ್ಯತೆ ಹೆಚ್ಚಿಗಿದ್ದರೆ, ಮಾರುಕಟ್ಟೆಯಲ್ಲಿ ಉತ್ಪನ್ನದ ಮೌಲ್ಯ ಕೂಡ ಹೆಚ್ಚುತ್ತದೆ.
ಉದಾಹರಣೆ: ಶೇಂಗಾ ಉತ್ಪನ್ನದ ಗುಣಧರ್ಮಗಳ ಪ್ರಮಾಣ ಮತ್ತು ಲಾಟ್‍ಗಳಿಗೆ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ಆನ್‍ಲೈನ್ ಟೆಂಡರ್ ನಲ್ಲಿ ದೊರೆತ ನೈಜ ಬೆಲೆ ಪಡೆದಿರುವ ಕುರಿತು ಒಂದು ವಿಶ್ಲೇಷಣೆ ವಿವರವನ್ನು ಕೆಳಗಿನ ರೇಖಾ ಚಿತ್ರಗಳಲ್ಲಿ ಗಮನಿಸಬಹುದು.

ಮೇಲಿನ ರೇಖಾ ಚಿತ್ರವನ್ನು ಉದಾರಣೆಗಾಗಿ ಗಮನಿಸಿ, ಗಜೇಂದ್ರಗಡ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ ಉತ್ಪನ್ನಕ್ಕೆ ಉತ್ತಮ ಧಾರಣೆ ಪಡೆದ ಬಗ್ಗೆ ಮಾಹಿತಿಯನ್ನು ಕಲ್ಪಿಸಲಾಗಿದೆ. ರೈತರು ಶೇಂಗಾ ಉತ್ಪನ್ನವನ್ನು ಸರಿಯಾಗಿ ಒಣಗಿಸಿ, ಸ್ವಚ್ಚಮಾಡಿ ಮಾರಾಟಕ್ಕಾಗಿ ಮಾರುಕಟ್ಟೆಗೆ ತಂದು ಗುಣವಿಶ್ಲೇಷಣೆ ಮಾಡಿಸಿದರು. ಶೇಂಗಾ ಉತ್ಪನ್ನದಲ್ಲಿ ಕನಿಷ್ಠ ತೇವಾಂಶವಿದ್ದ ಲಾಟ್‍ಗೆ ಗರಿಷ್ಟ ಬೆಲೆ ಲಭ್ಯವಾಗುವುದನ್ನು ರೇಖಾ ಚಿತ್ರದಲ್ಲಿ ತಾವು ಗಮನಿಸಬಹುದಾಗಿದೆ. ಶೇ.4% ರಿಂದ ಶೇ. 6%ರಷ್ಟು ತೇವಾಂಶವಿದ್ದ ಶೇಂಗಾ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಧಾರಣೆ ದೊರೆತಿರುವುದನ್ನು ಗಮನಿಸಬಹುದಾಗಿದೆ. ಅದೇ ರೀತಿ ಶೇ.18 ರಿಂದ ಶೇ.20%ರಷ್ಟು ಹೆಚ್ಚು ತೇವಾಂಶವಿದ್ದ ಶೇಂಗಾ ಉತ್ಪನ್ನಕ್ಕೆ ಕಡಿಮೆ ಧಾರಣೆ ದೊರೆತಿರುವುದನ್ನು ಕೂಡ ಗಮನಿಸಬಹುದು. ಒಂದೇ ದಿನದ ವ್ಯಾಪಾರ ವಹಿವಾಟಿನಲ್ಲಿ ಪ್ರತ್ಯೇಕ ಲಾಟ್‍ಗಳಿಗೆ ಗುಣಮಟ್ಟ ಮತ್ತು ತೇವಾಂಶಕ್ಕೆ ಅನುಗುಣವಾಗಿ ಬೆಲೆ ಲಭ್ಯವಾಗಿರುವುದನ್ನು ನೋಡಬಹುದಾಗಿದೆ. ಖರೀದಿದಾರರು ಶೇಂಗಾ ಉತ್ಪನ್ನದಲ್ಲಿನ ತೇವಾಂಶ ಮತ್ತು ಗುಣಮಟ್ಟವನ್ನು ಗಮನಿಸಿ ಇ-ಟೆಂಡರ್ ನಲ್ಲಿ ಉತ್ತಮ ಲಾಟ್‍ಗಳಿಗೆ ನೈಜ ಬೆಲೆ ಬಿಡ್‍ನಲ್ಲಿ ನಮೂದಿಸುತ್ತಾರೆ.
ರೈತರಿಗೆ ಸಲಹೆ :
• ಕೃಷಿ ಉತ್ಪನ್ನಗಳನ್ನು ಮಾರಾಟಕ್ಕಾಗಿ ಮಾರುಕಟ್ಟೆಗೆ ತರುವ ಮುನ್ನ ಬೆಳೆಯನ್ನು ಸಕಾಲದಲ್ಲಿ ಕೊಯ್ಲು ಮಾಡಿ, ಸರಿಯಾಗಿ ಒಣಗಿಸಿ, ಅನ್ಯಪದಾರ್ಥಗಳನ್ನು ಬೇರ್ಪಡಿಸಿ, ಪ್ಯಾಕ್ ಮಾಡಿ ಏಕೀಕೃತ ಮಾರುಕಟ್ಟೆಗೆ ತರುವುದು.
• ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸ್ಥಾಪಿಸಲಾಗಿರುವ ವೈಜ್ಞಾನಿಕ ಪ್ರಯೋಗಾಲಯಗಳಲ್ಲಿ ಕೃಷಿ ಉತ್ಪನ್ನಗಳನ್ನು ತಪ್ಪದೇ ಗುಣವಿಶ್ಲೇಷಣೆ ಮಾಡಿಸುವುದು. ರೈತಭಾಂದವರಿಗೆ ಈ ಸೇವೆಯನ್ನು ಉಚಿತವಾಗಿ ಕಲ್ಪಿಸಲಾಗಿದೆ.
• ಗುಣವಿಶ್ಲೇಷಣೆ ಮಾಡಿದ ಉತ್ಪನ್ನಗಳ ವಿವರವಾದ ಮಾಹಿತಿಯ ದತ್ತಾಂಶವನ್ನು ಇ-ಮಾರುಕಟ್ಟೆಯ ಆನ್‍ಲೈನ್‍ನಲ್ಲಿ ಪ್ರಕಟಿಸಲಾಗುವುದು. ಏಕೀಕೃತ ಲೈಸನ್ಸ್ ಪಡೆದ ರಾಜ್ಯ ಮತ್ತು ಹೊರ ರಾಜ್ಯಗಳ ಖರೀದಿದಾರರು ಉತ್ಪನ್ನಗಳ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಪರಿಶೀಲಿಸಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ.
• ಗುಣವಿಶ್ಲೇಷಣೆ ಮಾಡಿದ ಉತ್ಪನ್ನಗಳ ಖರೀದಿಗೆ ಸ್ಪರ್ಧೆ ಹೆಚ್ಚಾಗಿ ಬೆಳೆಗೆ ಸ್ಪರ್ಧಾತ್ಮಕ ಬೆಲೆ ದೊರೆಯಲಿದೆ.

ಕಡಲೆಕಾಳು ಉತ್ಪನ್ನದ ಗುಣವಿಶ್ಲೇಷಣೆ ಮತ್ತು ಗುಣಧರ್ಮದ ಆಧಾರದ ಮೇಲೆ ಸ್ಪರ್ಧಾತ್ಮಕ ಬೆಲೆ ನಿರ್ಧರಣೆ

ಶ್ರೀ. ಮನೋಜ್ ರಾಜನ್, ಬೆಂಗಳೂರು.

ಗುಣವಿಶ್ಲೇಷಣೆಯ ಅನುಕೂಲಗಳು ಮತ್ತು ಪ್ರಾಮುಖ್ಯತೆ ಕುರಿತು ಮಾಹಿತಿ ಕಲ್ಪಿಸುವ ಮುಂದುವರೆದ ಭಾಗವಾಗಿ ಈ ಬ್ಲಾಗ್ ಪುಟದಲ್ಲಿ ಕಡಲೆ ಉತ್ಪನ್ನದ ಗುಣವಿಶ್ಲೇಷಣೆಯ ಕಾರ್ಯವಿಧಾನ, ಗುಣಧರ್ಮಗಳು ಮತ್ತು ಗುಣಧರ್ಮಗಳ ಮೌಲ್ಯಕ್ಕೆ ಅನುಗುಣವಾಗಿ ಬೆಲೆ ನಿರ್ಧರಣೆ ಬಗ್ಗೆ ಅಂಕಿಅಂಶಗಳೊಂದಿಗೆ ಸಮಗ್ರ ವಿವರಣೆಯನ್ನು ನೀಡಲಾಗುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಕಡಲೆ ಕಾಳು ಉತ್ಪನ್ನ ಆವಕವಾಗುವ ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಾದ ಗದಗ, ಹುಬ್ಬಳ್ಳಿ, ರೋಣ, ಲಕ್ಷ್ಮೇಶ್ವರ, ಮುಂಡರಗಿ, ಬಳ್ಳಾರಿ, ನರಗುಂದ, ಬಾಗಲಕೋಟೆ, ಬೀದರ್, ಯಾದಗಿರಿ, ಶಿವಮೊಗ್ಗ ಮತ್ತು ರಾಮದುರ್ಗ ಮಾರುಕಟ್ಟೆಗಳಲ್ಲಿ ಉತ್ಪನ್ನಗಳ ಗುಣವಿಶ್ಲೇಷಣೆಗಾಗಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಈ ಪ್ರಯೋಗಾಲಯಗಳಲ್ಲಿ ಉತ್ಪನ್ನಗಳ ಗುಣವಿಶ್ಲೇಷಣೆ ಕಾರ್ಯವನ್ನು ಪರಿಣಿತಿ ಹೊಂದಿದ ನುರಿತ ತಜ್ಞರು ನಿರ್ವಹಿಸುತ್ತಿದ್ದಾರೆ.

ಕಡಲೆ ಕಾಳು ಉತ್ಪನ್ನವನ್ನು ರೈತರು ಮಾರುಕಟ್ಟೆಗೆ ರಾಶಿ/ಚೀಲಗಳಲ್ಲಿ ತರುತ್ತಾರೆ, ಇಂತಹ ಲಾಟ್‍ಗಳನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ (BIS) ಪ್ರಕಾರ ಉತ್ಪನ್ನದ ಮಾದರಿ ಸಂಗ್ರಹಣೆಯನ್ನು ಕೆಳಗಿನಂತೆ ನಡೆಸಲಾಗುತ್ತದೆ.

ಮಾದರಿ ತೆಗೆಯುವ ವಿಧಾನ:

• ಕಡಲೆ ಕಾಳು ಉತ್ಪನ್ನವನ್ನು ಮಾರಾಟಕ್ಕಾಗಿ ಮಾರುಕಟ್ಟೆಗೆ ತರುವ ಮುನ್ನ ಸರಿಯಾಗಿ ಒಣಗಿಸಿ, ಸ್ವಚ್ಚಮಾಡಿ, ಕಸಕಡ್ಡಿಯನ್ನು ತೆಗೆದು ಚೀಲದಲ್ಲಿ ಪ್ಯಾಕ್ ಮಾಡಿ ಮಾರುಕಟ್ಟೆಗೆ ರೈತರು ತರಬೇಕು.
• ರೈತರು ಮಾರಾಟಕ್ಕಾಗಿ ಮಾರುಕಟ್ಟೆಗೆ ತಂದ ಕಡಲೆ ಕಾಳು ಉತ್ಪನ್ನದಿಂದ ಮಾದರಿ ತೆಗೆಯುವುದಕ್ಕಾಗಿ (ಸ್ಯಾಂಪಲ್) ಪ್ರತಿ ಲಾಟನ್ನು ಚೀಲ ಅಥವಾ ರಾಶಿ ರೂಪದಲ್ಲಿ ಪ್ರತ್ಯೇಕವಾಗಿ ಇಡಲಾಗುತ್ತದೆ.

• ಪ್ಯಾಕ್ ಮಾಡಿದ ರೂಪದಲ್ಲಿ ಲಾಟನ್ನು ತಂದಾಗ ಲಾಟ್‍ನಲ್ಲಿನ ಪ್ರತಿ ಚೀಲದ ಮೇಲ್ಭಾಗ, ಮಧ್ಯಭಾಗ ಮತ್ತು ಕೆಳಭಾಗದಿಂದ ಸಣ್ಣ ಪ್ರಮಾಣದಲ್ಲಿ ಉತ್ಪನ್ನ ತೆಗೆದು ಸ್ಯಾಂಪಲ್ ಸಿದ್ದಪಡಿಸಲಾಗುತ್ತದೆ. ಬಳಿಕ ಹೀಗೆ ತೆಗೆದ ಸ್ಯಾಂಪಲ್ ಕಾಳುಗಳನ್ನು ಸರಿಯಾಗಿ ಮಿಶ್ರಣ ಮಾಡಿ, ಅದನ್ನು ಬಲ್ಕ್ ಸ್ಯಾಂಪಲ್ ಎಂದು ಕರೆಯುತ್ತಾರೆ.
• ಒಂದು ವೇಳೆ ಉತ್ಪನ್ನವು ರಾಶಿ ರೂಪದಲ್ಲಿದರೆ, ಅದರ ಮಾದರಿಯನ್ನು ಕನಿಷ್ಠ ಪಕ್ಷ 7 ಭಾಗಗಳಿಂದ ಅಂದರೆ ಮುಂಭಾಗ, ಹಿಂಭಾಗ, ಎಡಭಾಗ, ಬಲಭಾಗ, ರಾಶಿಯ ತುದಿ, ಮಧ್ಯ ಹಾಗೂ ತಳಭಾಗಗಳಿಂದ ಸ್ಯಾಂಪಲ್ ಸಂಗ್ರಹಿಸಿದ ನಂತರ ಮಾದರಿಯನ್ನು ಸರಿಯಾಗಿ ಮಿಶ್ರಣ ಮಾಡಿ ಬಲ್ಕ್ ಮಾದರಿಯನ್ನು ಸಂಗ್ರಹಿಸಲಾಗುತ್ತದೆ.
• ಕಾಂಪೋಸಿಟ್ ಸ್ಯಾಂಪಲ್ ಸಿದ್ದಪಡಿಸಲು ಬಲ್ಕ್ ಸ್ಯಾಂಪಲ್‍ನಿಂದ 1/2 ಕೆ.ಜಿ. ಕಡಲೆ ಕಾಳು ಉತ್ಪನ್ನವನ್ನು ತೆಗೆಯಲಾಗುತ್ತದೆ.
• ಸ್ಯಾಂಪಲ್ ಡಿವೈಡರ್‍ನಿಂದ ತಲಾ 100 ಗ್ರಾಂ ನಂತೆ 5 ಸಮಭಾಗಗಳಾಗಿ ವಿಂಗಡಿಸಲಾಗುವುದು.
• ಪ್ರತಿ ಭಾಗವನ್ನು ಪ್ರತ್ಯೇಕವಾಗಿ ಪಾರದರ್ಶಕ ಪ್ಲಾಸ್ಟಿಕ್ ಬ್ಯಾಗ್‍ಗಳಲ್ಲಿ ಪ್ಯಾಕ್ ಮಾಡಲಾಗುವುದು. ಪ್ರತಿಯೊಂದು ಪ್ಲಾಸ್ಟಿಕ್ ಚೀಲಕ್ಕೆ ಗುರುತಿನ ಚೀಟಿಯನ್ನು ಲಗತ್ತಿಸಿ ಮುದ್ರೆ ಹಾಕಲಾಗುತ್ತದೆ. ಈ ರೀತಿ ಸಂಗ್ರಹಿಸಿದ ಉತ್ಪನ್ನದ ಒಂದು ಮಾದರಿಯನ್ನು ರೈತರಿಗೆ, ಒಂದು ಪ್ಯಾಕೆಟ್ ಎಪಿಎಂಸಿಯಲ್ಲಿ ವರ್ತಕರ ಪರಿಶೀಲನೆಗಾಗಿ, ಒಂದು ಮಾದರಿಯನ್ನು ಎಪಿಎಂಸಿಯಲ್ಲಿ ವಿವಾದ ನಿರ್ಣಯಕ್ಕಾಗಿ ಕಾಯ್ದಿರಿಸಲಾಗುತ್ತದೆ. ಮತ್ತೊಂದು ಮಾದರಿಯನ್ನು ಗುಣ ವಿಶ್ಲೇಷಣೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಒಂದು ಮಾದರಿಯನ್ನು ಉತ್ಪನ್ನ ಗುಣವಿಶ್ಲೇಷಣೆ ಪ್ರಯೋಗಾಲಯದಲ್ಲಿ ದಾಖಲೆಗಾಗಿ ಸಂಗ್ರಹಿಸಲಾಗುತ್ತದೆ.

ಪರೀಕ್ಷೆ ವಿಧಾನ :

ಕಡಲೆಕಾಳು ಮಾದರಿಯನ್ನು ಪರೀಕ್ಷಿಸಿದಾಗ ಯಾವುದೇ ಜೀವವಿರುವ ಕ್ರಿಮಿಕೀಟಗಳು ಉತ್ಪನ್ನದಲ್ಲಿ ಲಭ್ಯತೆ ಬಗ್ಗೆ ಪರೀಕ್ಷೆ ವೇಳೆ ಖಾತ್ರಿಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ಜೀವವಿರುವ ಕ್ರಿಮಿಕೀಟಗಳು ಉತ್ಪನ್ನದಲ್ಲಿ ಪತ್ತೆಯಾದಲ್ಲಿ ಅಂತಹ ಲಾಟ್‍ನ್ನು ಗುಣವಿಶ್ಲೇಷಣೆ ಪ್ರಕ್ರಿಯೆಯಿಂದ ತಿರಸ್ಕರಿಸಲಾಗುತ್ತದೆ. ಕೃಷಿ ಉತ್ಪನ್ನದಲ್ಲಿ ಯಾವುದೇ ಕೃತಕ ರಾಸಾಯನಿಕ ಬಣ್ಣ ಅಥವಾ ಬೂಸ್ಟ್ ಹಿಡಿದ ಬಗ್ಗೆ ಪರೀಕ್ಷಿಸಿ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಯನ್ನು ಏಕೀಕೃತ ಮಾರುಕಟ್ಟೆ ವೇದಿಕೆಯ ಪ್ರಯೋಗಾಲಯಗಳಲ್ಲಿ ಕಲ್ಪಿಸಲಾಗಿದೆ.
ಗುಣವಿಶ್ಲೇಷಣೆ ಸಂಸ್ಥೆಯು ಉತ್ಪನ್ನದ ಗುಣಧರ್ಮಗಳ ವಿವರಗಳನ್ನು ನಮೂದಿಸಿದ ಬಳಿಕ ರೈತರಿಗೆ ಉತ್ಪನ್ನದ ಗುಣವಿಶ್ಲೇಷಣೆ ಪ್ರಮಾಣ ಪತ್ರವನ್ನು ನೀಡುವ ವ್ಯವಸ್ಥೆಯನ್ನು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಕಲ್ಪಿಸಲಾಗಿದೆ. ಉತ್ಪನ್ನದ ಗುಣವಿಶ್ಲೇಷಣೆಗೆ ಸಂಬಂಧಿಸಿದಂತೆ ಪ್ರಮಾಣ ಪತ್ರದಲ್ಲಿ ಊರ್ಜಿತವಿರುವ ಅವಧಿಯನ್ನು ನಮೂದಿಸಲಾಗುವುದು.

ಮಾದರಿ ಸಂಗ್ರಹ ಮತ್ತು ಪರೀಕ್ಷೆಯನ್ನು ಮೂರನೇ ವ್ಯಕ್ತಿ / ಸ್ವತಂತ್ರ್ಯವಾದ ಸಂಸ್ಥೆಯು ನಿರ್ವಹಿಸುತ್ತದೆ. ಮಾದರಿ ಸಂಗ್ರಹಣೆ ಮತ್ತು ಪರೀಕ್ಷೆಯನ್ನು BIS ವಿಧಾನದ ಪ್ರಕಾರ ನುರಿತ ಅಸ್ಸೆಯರ್ಸ್‍ನಿಂದ ಕೈಗೊಳ್ಳಲಾಗುತ್ತದೆ, ಪರೀಕ್ಷೆ ವರದಿಯಲ್ಲಿ ನ್ಯೂನತೆ ಮತ್ತು ಇತರೆ ತೊಂದರೆಗಳಿದ್ದರೆ ಸದರಿ ಸಂಸ್ಥೆಯೇ ಹೊಣೆಗಾರರಾಗುತ್ತಾರೆ.
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡುವ ವಿಧಾನ:
ಉತ್ಪನ್ನದ ಗುಣಮಟ್ಟ ಮತ್ತು ಗುಣಧರ್ಮಗಳ ವಿಶ್ಲೇಷಣೆ ಪರೀಕ್ಷೆ ಬಳಿಕ ಫಲಿತಾಂಶದ ವಿವರಗಳನ್ನು ಏಕೀಕೃತ ಮಾರುಕಟ್ಟೆ ವೇದಿಕೆ(ಇ-ಮಾರುಕಟ್ಟೆ)ಯಲ್ಲಿನ ಆನ್‍ಲೈನ್‍ನಲ್ಲಿ ಖರೀದಿದಾರರ/ವರ್ತಕರ ಪರೀಶಿಲನೆಗಾಗಿ ದಾಖಲು ಮಾಡಲಾಗುತ್ತದೆ.
ಗುಣವಿಶ್ಲೇಷಣಾ ವಿವಾದಗಳು, ಇನ್ನಿತರೆ ವಿಷಯಗಳು ಮತ್ತು ತೊಂದರೆಗಳ ನಿವಾರಣೆ :
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳು, 1968ರ ನಿಯಮ 91-ಪಿ(1)ರನ್ವಯ ರಚಿಸಲಾಗಿರುವ ವಿವಾದ ಪರಿಶೀಲನಾ ಸಮಿತಿಯು ನಿಯಮ 91-ಪಿ(7)ರನ್ವಯ ಕೃಷಿ ಮಾರಾಟ ನಿರ್ದೇಶಕರು ನೀಡಿರುವಂತಹ ಮಾರ್ಗದರ್ಶಿ ಸೂಚನೆಗಳನ್ವಯ ವಿವಾದಗಳನ್ನು ತೀರ್ಮಾನಿಸಲಾಗುತ್ತದೆ.
ಇದಕ್ಕಾಗಿ ಉತ್ಪನ್ನಗಳ ಮಾರಾಟಗಾರರು ಆಹಾರ ಮತ್ತು ಸುರಕ್ಷತಾ ಪ್ರಮಾಣಗಳ ಕಾಯ್ದೆ 2006 ಹಾಗೂ ಸಂಬಂಧಿಸಿದ ಇತರೆ ಕಾನೂನಿನಲ್ಲಿ ನಿಗದಿ ಪಡಿಸಿದ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಯಾವುದೇ ಆದೇಶಗಳನ್ನು ಜಾರಿಗೊಳಿಸುವಲ್ಲಿ ಉದ್ಬವಿಸಬಹುದಾದ ಯಾವುದೇ ತೊಂದರೆಗಳನ್ನು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರ ಗಮನಕ್ಕೆ ತರತಕ್ಕದ್ದು ಹಾಗೂ ಅವರು ಸೂಕ್ತವೆನಿಸುವ ಸ್ಪಷ್ಠೀಕರಣವನ್ನು ನೀಡುವರು.

ಕಡಲೆಕಾಳು ಉತ್ಪನ್ನದ ಪರಿಶೀಲಿಸುವ ನಿರ್ದಿಷ್ಟ ಗುಣಧರ್ಮಗಳು :

• ಉತ್ಪನ್ನದಲ್ಲಿ ಅನ್ಯಪದಾರ್ಥಗಳು(ಶೇಕಡವಾರು ಪ್ರಮಾಣ) : ಎಲೆ, ಕಾಂಡ, ಹುಲ್ಲು, ಸಿಪ್ಪೆ, ಧೂಳು, ಕಲ್ಲು, ಮಣ್ಣಿನ ಉಂಡೆ ಹಾಗೂ ಇತರೆ ಕಲ್ಮಶಗಳನ್ನು ಬೇರ್ಪಡಿಸಲಾಗುತ್ತದೆ.
• ಮೂಲ ಉತ್ಪನ್ನದ ಜೊತೆ ಇತರೆ ಕಾಳುಗಳ ಮಿಶ್ರಣ.
• ಒಡೆದ ಕಾಳುಗಳು, ಆಂತರಿಕವಾಗಿ ಹಾಳಾದ ಮತ್ತು ಮೂಲ ಬಣ್ಣ ಮತ್ತು ಗುಣಮಟ್ಟ ಕಳೆದುಕೊಂಡ ಕಾಳುಗಳು.
• ಉತ್ಪನ್ನದಲ್ಲಿನ ಶೇಕಡವಾರು ಪ್ರಮಾಣ ಅಪರಿಪಕ್ವ ಹಾಗೂ ಸುಕ್ಕುಗಟ್ಟಿದ ಕಾಳುಗಳ ಬಗ್ಗೆ ಮಾಹಿತಿ.

ಒಡೆದ ಕಡಲೆಕಾಳುಗಳ(ಶೇಕಡವಾರು ಪ್ರಮಾಣ) ಕಾಳುಗಳ ಮೂಲ ಸ್ವರೂಪದಲ್ಲಿ ಒಡೆದಿರುವುದು, ಪೂರ್ಣ ಮತ್ತು ಭಾಗಶಃ ಚೂರಾಗಿರುವ ಕಾಳುಗಳು, ಸುಕ್ಕುಗಟ್ಟಿದ ಹಾಗೂ ಅಪರಿಪಕ್ವ ಕಾಳುಗಳು (ಶೇಕಡವಾರು ಪ್ರಮಾಣ) ಕಾಳುಗಳು ಪೂರ್ಣ ಪ್ರಮಾಣದಲ್ಲಿ ಪಕ್ವತೆ ಇಲ್ಲದ ಕಾಳುಗಳು. ಕಡಲೆಕಾಳು ಪ್ರಮಾಣ ಶೇಕಡವಾರು ನಿರ್ದಿಷ್ಟ ಪ್ರಮಾಣದ ಕಡಲೆಕಾಳನ್ನು ಬೇರ್ಪಡಿಸಿದಾಗ ದೊರೆಯುವ ಉತ್ಪನ್ನದ ಪ್ರಮಾಣದ ಬಗ್ಗೆ ಮಾಹಿತಿ ಸಂಗ್ರಹಿಸಿ ಗುಣವಿಶ್ಲೇಷಣೆ ವರದಿಯಲ್ಲಿನ ದತ್ತಾಂಶದಲ್ಲಿ ಉಲ್ಲೇಖ ಮಾಡಲಾಗುವುದು.

ತೇವಾಂಶ (ಶೇಕಡವಾರು ಪ್ರಮಾಣ):
ಕಡಲೆ ಉತ್ಪನ್ನದ ಮಾದರಿಯಿಂದಸೂಕ್ತ ಕಾಳುಗಳನ್ನು ತೆಗೆದು, ಪ್ರತ್ಯೇಕವಾಗಿ ತೂಕ ಮಾಡಿಕೊಳ್ಳಲಾಗಿತ್ತದೆ. ಅದನ್ನು ವೈಜ್ಞಾನಿಕ ಪ್ರಯೋಗಾಲಯದಲ್ಲಿ ಬಳಕೆ ಮಾಡುವ ಓವೆನ್‍ನಲ್ಲಿ 100 ರಿಂದ 110 ಡಿಗ್ರೀ ಉಷ್ಣಾಂಶ ತಾಪಮಾನದಲ್ಲಿ ಸುಮಾರು 2 ಗಂಟೆ ಸಮಯದವರೆಗೆ ಒಣಗಿಸಲಾಗುತ್ತದೆ, ಬಳಿಕ ಒಣಗಿಸಿದ ಕಾಳುಗಳನ್ನು ತೂಕ ಮಾಡಲಾಗುತ್ತದೆ, ಒಣಗಿಸುವ ಮುನ್ನಾ ಉತ್ಪನ್ನದ ತೂಕ ಮತ್ತು ಒಣಗಿಸಿದ ಮೇಲೆ ಬರುವ ತೂಕದ ವ್ಯತ್ಯಾಸದ ಭಾಗಗಳಿಂದ ಕಡಲೆ ಕಾಳು ಉತ್ಪನ್ನದಲ್ಲಿನ ತೇವಾಂಶದ ಶೇಕಡವಾರನ್ನು ಕಂಡುಹಿಡಿಯಲಾಗುವುದು.

ಗುಣಧರ್ಮಗಳ ಪ್ರಮಾಣದ ಮೇಲೆ ಬೆಲೆ ನಿರ್ಧಾರಣೆ:
ಕಡಲೆಕಾಳು ಉತ್ಪನ್ನದಲ್ಲಿ ತೇವಾಂಶ, ಅನ್ಯಪದಾರ್ಥಗಳು, ಅಪರಿಪಕ್ವ ಹಾಗೂ ಸುಕ್ಕುಕಟ್ಟಿದ ಕಾಳುಗಳ ಪ್ರಮಾಣ ಕಡಿಮೆ ಇದ್ದಷ್ಟು ಮತ್ತು ಉತ್ಪನ್ನದಲ್ಲಿ ಬೀಜಗಳ ಗುಣಮಟ್ಟ ಲಭ್ಯತೆ ಹೆಚ್ಚಾಗಿದ್ದರೆ, ಮಾರುಕಟ್ಟೆಯಲ್ಲಿ ಉತ್ಪನ್ನದ ಮೌಲ್ಯ ಕೂಡ ಹೆಚ್ಚುತ್ತದೆ.
ಉದಾಹರಣೆಗೆ: ಕಡಲೆಕಾಳು ಉತ್ಪನ್ನದ ಗುಣಧರ್ಮಗಳ ಪ್ರಮಾಣ ಮತ್ತು ಲಾಟ್‍ಗಳಿಗೆ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ಆನ್‍ಲೈನ್ ಟೆಂಡರ್‍ನಲ್ಲಿ ದೊರೆತ ನೈಜ ಬೆಲೆ ಪಡೆದಿರುವ ಕುರಿತು ಒಂದು ವಿಶ್ಲೇಷಣೆ ವಿವರವನ್ನು ಕೆಳಗಿನ ರೇಖಾ ಚಿತ್ರಗಳಲ್ಲಿ ಗಮನಿಸಬಹುದು.

ಮೇಲಿನ ರೇಖಾ ಚಿತ್ರವನ್ನು ಉದಾಹರಣೆಗಾಗಿ ಗಮನಿಸಿ, ಗದಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆಕಾಳು ಉತ್ಪನ್ನಕ್ಕೆ ಉತ್ತಮ ಧಾರಣೆ ಪಡೆದ ಬಗ್ಗೆ ಮಾಹಿತಿಯನ್ನು ಕಲ್ಪಿಸಲಾಗಿದೆ. ರೈತರು ಕಡಲೇಕಾಳು ಉತ್ಪನ್ನವನ್ನು ಸರಿಯಾಗಿ ಒಣಗಿಸಿ, ಸ್ವಚ್ಚಮಾಡಿ ಮಾರಾಟಕ್ಕಾಗಿ ಮಾರುಕಟ್ಟೆಗೆ ತಂದ ವೇಳೆ ಗುಣವಿಶ್ಲೇಷಣೆ ಮಾಡಿಸಿ. ಕಡಲೆಕಾಳು ಉತ್ಪನ್ನದಲ್ಲಿ ಕನಿಷ್ಠ ತೇವಾಂಶವಿದ್ದ ಲಾಟ್‍ಗೆ ಗರಿಷ್ಟ ಬೆಲೆ ಲಭ್ಯವಾಗುವುದನ್ನು ರೇಖಾ ಚಿತ್ರದಲ್ಲಿ ತಾವು ಗಮನಿಸಬಹುದಾಗಿದೆ. ಶೇ.6% ರಿಂದ ಶೇ. 7%ರಷ್ಟು ತೇವಾಂಶವಿದ್ದ ಕಡಲೆಕಾಳು ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಧಾರಣೆ ದೊರೆತಿರುವುದನ್ನು ಗಮನಿಸಬಹುದಾಗಿದೆ. ಅದೇ ರೀತಿ ಶೇ.12 ರಿಂದ ಶೇ.13%ರಷ್ಟು ಹೆಚ್ಚು ತೇವಾಂಶವಿದ್ದ ಕಡಲೆಕಾಳು ಉತ್ಪನ್ನಕ್ಕೆ ಕಡಿಮೆ ಧಾರಣೆ ದೊರೆತಿರುವುದನ್ನು ಕೂಡ ಗಮನಿಸಬಹುದು. ಒಂದೇ ದಿನದ ವ್ಯಾಪಾರ ವಹಿವಾಟಿನಲ್ಲಿ ಪ್ರತ್ಯೇಕ ಲಾಟ್‍ಗಳಿಗೆ ಗುಣಮಟ್ಟ ಮತ್ತು ತೇವಾಂಶಕ್ಕೆ ಅನುಗುಣವಾಗಿ ಬೆಲೆ ಲಭ್ಯವಾಗಿರುವುದನ್ನು ನೋಡಬಹುದಾಗಿದೆ. ಖರೀದಿದಾರರು ಕಡಲೆಕಾಳು ಉತ್ಪನ್ನದಲ್ಲಿನ ತೇವಾಂಶ ಮತ್ತು ಗುಣಮಟ್ಟವನ್ನು ಗಮನಿಸಿ ಇ-ಟೆಂಡರ್‍ನಲ್ಲಿ ಉತ್ತಮ ಲಾಟ್‍ಗಳಿಗೆ ನೈಜ ಬೆಲೆಯನ್ನು ಬಿಡ್‍ನಲ್ಲಿ ನಮೂದಿಸುತ್ತಾರೆ.

ರೈತಭಾಂದವರಿಗೆ ಸಲಹೆ :
• ಕೃಷಿ ಉತ್ಪನ್ನಗಳನ್ನು ಮಾರಾಟಕ್ಕಾಗಿ ಮಾರುಕಟ್ಟೆಗೆ ತರುವ ಮುನ್ನ ಬೆಳೆಯನ್ನು ಸಕಾಲದಲ್ಲಿ ಕೊಯ್ಲು ಮಾಡಿ, ಸರಿಯಾಗಿ ಒಣಗಿಸಿ, ಅನ್ಯಪದಾರ್ಥಗಳನ್ನು ಬೇರ್ಪಡಿಸಿ, ಪ್ಯಾಕ್ ಮಾಡಿ ಏಕೀಕೃತ ಮಾರುಕಟ್ಟೆಗೆ ತರುವುದು.
• ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸ್ಥಾಪಿಸಲಾಗುತ್ತಿರುವ ವೈಜ್ಞಾನಿಕ ಪ್ರಯೋಗಾಲಯಗಳಲ್ಲಿ ಕೃಷಿ ಉತ್ಪನ್ನಗಳನ್ನು ತಪ್ಪದೇ ಗುಣವಿಶ್ಲೇಷಣೆ ಮಾಡಿಸುವುದು. ರೈತಭಾಂದವರಿಗೆ ಈ ಸೇವೆಯನ್ನು ಉಚಿತವಾಗಿ ಕಲ್ಪಿಸಲಾಗಿದೆ.
• ಗುಣವಿಶ್ಲೇಷಣೆ ಮಾಡಿದ ಉತ್ಪನ್ನಗಳ ವಿವರವಾದ ಮಾಹಿತಿಯ ದತ್ತಾಂಶವನ್ನು ಇ-ಮಾರುಕಟ್ಟೆಯ ಆನ್‍ಲೈನ್‍ನಲ್ಲಿ ಪ್ರಕಟಿಸಲಾಗುವುದು. ಏಕೀಕೃತ ಲೈಸನ್ಸ್ ಪಡೆದ ರಾಜ್ಯ ಮತ್ತು ಹೊರ ರಾಜ್ಯಗಳ ಖರೀದಿದಾರರು ಉತ್ಪನ್ನಗಳ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಪರೀಶಿಲಿಸಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ.
• ಗುಣವಿಶ್ಲೇಷಣೆ ಮಾಡಿದ ಉತ್ಪನ್ನಗಳ ಖರೀದಿಗೆ ಸ್ಪರ್ಧೆ ಹೆಚ್ಚಾಗಿ ಬೆಳೆಗೆ ಸ್ಪರ್ಧಾತ್ಮಕ ಬೆಲೆ ದೊರೆಯಲಿದೆ.

Warehouse Based Sales (WBS)

It is estimated that 30 percent of the harvested produce gets sold at the farm gate itself and on most occasions considered as distress sale  due to financial stress of farmers. These types of sales are, in majority of cases carried out directly between farmer and trader on mutual negotiation of price. The transaction does not undergo the process of price discovery in a competitive environment. In these types of transactions accuracy of weighment of the produce, timely settlement of full payments and access to market information are not assured.

The warehouse based sales model is designed in such a way to address those short comings and provides linkage to buyers including processors, organised retailers and intermediaries. Also that it enhances the holding capacity of the farmer and enables to utilize the time value of his commodity. The method of keeping the agricultural produces in scientific warehouses and trading from there without transporting it to APMC markets is known as Warehouse based sales.

Warehouses are the places where commodities could be stored without quality deterioration. Farmers/ traders and any others can store goods in ware houses/ go-downs Scientifically built according to the rules of the accreditation authorities. Its specifications include parameters like height of plinth level, commodity preserving methodology etc.  The Directorate of Agricultural Marketing issues licenses for construction of scientific warehouses. The Director of Agricultural Marketing will accredit the warehouse buildings if conforms to the specifications prescribed.

There is a provision in the Karnataka Agricultural Produce Marketing (Regulation and Development) Act, 1966 to declare any accredited warehouse as Submarket yard by linking to the nearest APMC. Thereafter the warehouse would be treated as Sub-market under the said Act.

Farmer Producer Organisations, Farmers, Traders, Stockists, and associated individuals/ institutions can store their commodities in the warehouses. The warehouse service provider will take care of the commodities stored therein. Before accepting the commodities for storage, warehouses examine the quality of the commodities and accepts only if the commodity possess enough shelf life and can sustain the quality for a reasonable future period. Warehouse service provider extends assaying facility. For storing commodities beyond the expected certified shelf life, a re-validation of assaying certificate will be produced from the assaying agency.

Measures to protect the quality of commodities stored includes treatment against pests, fumigation of stored space etc. Warehouse provider would ensure insuring the commodities stored in the warehouse.

At the time when the commodity is offered for sale, it is assayed and the quality parameters are uploaded to the unified market platform (UMP). The intending licensed traders located in any place can offer bid on UMP. The highest bidder will win the trade if seller agrees for the rate quoted. The trader makes online payment to the market within the prescribed time, and thereafter warehouse hands over ownership of the commodity to the buyer. The cost of farmer’s produce at the price quoted will be transferred to his bank account through the UMP. If the buyer opts continue to store the material in the warehouse the buyer can do so and bear the cost.

The owner who deposits commodities in warehouse can avail credit facility from banks by pledging the goods.  On sale of the pledged goods, with the consent of the owner (Farmer or Trader) the loan amount and interest can be transferred to the lenders account through UMP for discharging the pledge before delivery of goods to the buyer.

Developing a WBS center involves multiple organisations/parties, Viz, Department of Agricultural Marketing, State Agricultural Marketing Board, Rashtriya e Market Services, Warehouse Service Provider, Farmer/ Farmer groups and Farmer Producer Organisations. All the institutions involved have work in coordination to institutionalise warehouse based sales.. Buyers from across the country will have to be encouraged to participate in the initiative.  Buyer / Trader who are registered with any one APMC would be valid to trade in any markets across the state. Electronic permit (e-permit) system will facilitate the buyer to transport the goods bought, to any destination smoothly.

Large FPOs can own warehouses or rent from the Central / State Warehousing Corporation (CWC / SWC) if situated in the area of operations of FPO/s. The warehouse maintenance and operations are carried out by a third party called the Warehouse Service Provider (WSP) or the FPO itself can act in this role. The FPO/ warehouse owner can submit the application to the Director of Agricultural Marketing for notifying the warehouse as a submarket. Once the warehouse gets declared as a submarket, the FPO/ WSP will get the license to operate as a Commission Agent under the Warehouse Based Sales Scheme. The entire trade operations will be carried out on Unified Market Platform of ReMS.

Once a pilot project of WBS is successfully implemented Government may consider establishing modern storage infrastructure, to minimise the transportation cost to the farmer.

ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಗುಣವಿಶ್ಲೇಷಣೆಗೊಳಪಡಿಸಿದ ಕೃಷಿ ಉತ್ಪನ್ನಕ್ಕೆ ನೈಜ ಬೆಲೆ

ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ರೈತರ ಕೃಷಿ ಉತ್ಪನ್ನಗಳಿಗೆ ಸ್ಪಧ್ಮಾತ್ಮಕ ಬೆಲೆ ಪಡೆಯಲು ಅನುಸರಿಸಬೇಕಾದ ಕ್ರಮಗಳು ಮತ್ತು ಅದರ ಅನುಕೂಲತೆಗಳ ಬಗ್ಗೆ ತಿಳಿಸುವುದೇ ಈ ಲೇಖನದ ಪ್ರಮುಖ ಉದ್ದೇಶವಾಗಿದೆ.
ರಾಮಣ್ಣ ಮತ್ತು ಶಾಮಣ್ಣ ಎಂಬ ಇಬ್ಬರು ರೈತರ ಕಾಲ್ಪನಿಕವಾದ ಎರಡು ಪಾತ್ರಗಳ ಮೂಲಕ ಬೆಳೆ ಕೊಯ್ಲಿನಿಂದ ಹಿಡಿದು ಬೆಳೆಯನ್ನು ಮಾರುಕಟ್ಟೆಗೆ ತಂದು, ಮಾರಾಟ ಪ್ರಕ್ರಿಯೆಗಳಲ್ಲಿ ಭಾಗವಹಿಸಿ, ಉತ್ಪನ್ನಗಳಿಗೆ ನೈಜ ಬೆಲೆ ಪಡೆಯುವ ಕಾರ್ಯವಿಧಾನಗಳ ಕುರಿತು ಚಿತ್ರಾದಿಗಳ ಜೊತೆ ವಿವರವಾದ ಮಾಹಿತಿ ಕಲ್ಪಿಸಲಾಗಿದೆ.

ರಾಮಣ್ಣ ಸಕಾಲದಲ್ಲಿ ಬೆಳೆಯನ್ನು ಕೊಯ್ಲು ಮಾಡಿ, ಒಣಗಿಸಿ, ಸ್ವಚ್ಚ ಮಾಡಿ, ಗುಣ ಪ್ರಮಾಣಕ್ಕೆ ಅನುಗುಣವಾಗಿ ವಿಂಗಡಿಸಿ, ಉತ್ಪನ್ನವನ್ನು ಮಾರಾಟಕ್ಕಾಗಿ ಪ್ಯಾಕಿಂಗ್ ಮಾಡುತ್ತಿರುವುದು.

ಶಾಮಣ್ಣ ಬೆಳೆಯನ್ನು ಕೊಯ್ಲು ಮಾಡಿ, ಸರಿಯಾಗಿ ಒಣಗಿಸದೆ, ಸ್ವಚ್ಚ ಮಾಡದೆ, ಗುಣ ಪ್ರಮಾಣಕ್ಕೆ ಅನುಗುಣವಾಗಿ ವಿಂಗಡಿಸದೆ ಉತ್ಪನ್ನವನ್ನು ಮಾರಾಟಕ್ಕಾಗಿ ಪ್ಯಾಕ್ ಮಾಡುತ್ತಿರುವುದು.

ರಾಮಣ್ಣ ಮತ್ತು ಶಾಮಣ್ಣ ಉತ್ಪನ್ನಗಳೊಂದಿಗೆ ಎಪಿಎಂಸಿಗೆ ಆಗಮಿಸಿ ಮಾರುಕಟ್ಟೆ ಮುಖ್ಯ ದ್ವಾರದಲ್ಲಿ ಗೇಟ್ ಎಂಟ್ರಿ ಮಾಡಿಸಿದರು. ರಾಮಣ್ಣ ಅವರ ಉತ್ಪನ್ನಕ್ಕೆ ಲಾಟ್ ನಂಬರ್-1 ಮತ್ತು ಶಾಮಣ್ಣ ಅವರ ಉತ್ಪನ್ನಕ್ಕೆ ಲಾಟ್ ನಂಬರ್-2 ಎಂಬ ಯುನಿಕ್(ವಿಶೇಷ) ಲಾಟ್ ಸಂಖ್ಯೆಯನ್ನು ಎಪಿಎಂಸಿಯಲ್ಲಿ ನೀಡಲಾಯಿತು.

ಮಾರುಕಟ್ಟೆ ಪ್ರಾಂಗಣದಲ್ಲಿ ಮಾರಾಟಕ್ಕೆ ಸಿದ್ದಪಡಿಸಿದ ಉತ್ಪನ್ನವನ್ನು ಗುಣವಿಶ್ಲೇಷಣೆ ಮಾಡಿಸಲು ರಾಮಣ್ಣ ಒಪ್ಪಿಗೆ ಸೂಚಿಸಿದರು.

ಏಕೀಕೃತ ಮಾರುಕಟ್ಟೆಯಲ್ಲಿನ ಗುಣವಿಶ್ಲೇಷಣೆ ಪ್ರಯೋಗಾಲಯದ ತಜ್ಞರಿಗೆ ಶಾಮಣ್ಣ ತನ್ನ ಉತ್ಪನ್ನವನ್ನು ಗುಣವಿಶ್ಲೇಷಣೆ ಮಾಡುವುದು ಬೇಡ ಎಂದು ನಿರಾಕರಿಸುತ್ತಿರುವುದು.

ಗುಣವಿಶ್ಲೇಷಣೆ ಪ್ರಯೋಗಾಲಯ

ರಾಮಣ್ಣ ಅವರ ಉತ್ಪನ್ನದ ಗುಣವಿಶ್ಲೇಷಣೆಯ ಫಲಿತಾಂಶದ ದತ್ತಾಂಶ ವಿವರಗಳನ್ನು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಆನ್‍ಲೈನ್‍ನಲ್ಲಿ ಪ್ರಸಾರ ಮಾಡಲಾಯಿತು.

ರಾಮಣ್ಣ ಅವರ ಲಾಟ್ ನಂಬರ್-1 ಉತ್ಪನ್ನ ಮತ್ತು ಶಾಮಣ್ಣ ಅವರ ಲಾಟ್ ನಂಬರ್-2 ಉತ್ಪನ್ನವನ್ನು ಸ್ಥಳೀಯ ಖರೀದಿದಾರರು ಪರೀಕ್ಷಿಸುತ್ತಿರುವ ದೃಶ್ಯವನ್ನು ಚಿತ್ರದಲ್ಲಿ ನೋಡಬಹುದು, ಲಾಟ್ ನಂಬರ್-1ರಲ್ಲಿ ಉತ್ಪನ್ನ ಗುಣವಿಶ್ಲೇಷಣೆ ಮಾಡಿದ ಮಾಹಿತಿ ಲಭ್ಯವಿದೆ. ಲಾಟ್ ನಂಬರ್–2 ರಲ್ಲಿ ಗುಣವಿಶ್ಲೇಷಣೆ ಮಾಡಿದ ವಿವರಗಳು ಇಲ್ಲದಿರುವುದನ್ನು ಕಾಣಬಹುದು.

ಆನ್‍ಲೈನ್ ಟೆಂಡರ್ ಪ್ರಕ್ರಿಯೆಯಲ್ಲಿ ಸ್ಥಳೀಯ, ರಾಜ್ಯದ ಹೊರ ಎಪಿಎಂಸಿ ಮಾರುಕಟ್ಟೆ ಹಾಗೂ ಹೊರ ರಾಜ್ಯಗಳಿಂದ ಏಕೀಕೃತ ಲೈಸೆನ್ಸ್ ಪಡೆದ ಖರೀದಿದಾರರು ಇ-ಟೆಂಡರ್ ನಲ್ಲಿ ಭಾಗವಹಿಸುವ ಕಾರ್ಯವಿಧಾನವನ್ನು ಮೇಲಿನ ಚಿತ್ರದಲ್ಲಿ ನೋಡಬಹುದು.

ಬೆಳೆಗೆ ಸ್ಪರ್ಧಾತ್ಮಕ ಬೆಲೆ ಪಡೆದ ರಾಮಣ್ಣ ಹರ್ಷ ವ್ಯಕ್ತಪಡಿಸುತ್ತಿರುವುದನ್ನು ಚಿತ್ರದಲ್ಲಿ ಗಮನಿಸುವುದು.

ಇ-ಟೆಂಡರ್ ನಲ್ಲಿ ರಾಮಣ್ಣ ಅವರ ಲಾಟ್ ನಂಬರ್-1ಕ್ಕೆ ಹೆಚ್ಚು ಖರೀದಿದಾರರು ಬಿಡ್ ಮಾಡಿರುತ್ತಾರೆ. ಕಾರಣ ರಾಮಣ್ಣ ತನ್ನ ಉತ್ಪನ್ನವನ್ನು ಗುಣವಿಶ್ಲೇಷಣೆ ಮಾಡಿಸಿ, ಅದರ ವಿವರವನ್ನು ಆನ್‍ಲೈನ್‍ನಲ್ಲಿ ಪ್ರಸಾರ ಮಾಡಿಸಿದ್ದರಿಂದ ಸ್ಥಳೀಯ ಖರೀದಿದಾರರಲ್ಲದೆ ರಾಜ್ಯ ವ್ಯಾಪ್ತಿಯಲ್ಲಿನ ಎಪಿಎಂಸಿಗಳಲ್ಲಿ ವ್ಯವಹರಿಸುವ ಖರೀದಿದಾರರು ಮತ್ತು ಹೊರ ರಾಜ್ಯಗಳ ವರ್ತಕರು  ಇ-ಟೆಂಡರ್ ನಲ್ಲಿ ಭಾಗವಹಿಸಿದ್ದರು, ಇದರಿಂದ ಖರೀದಿಯಲ್ಲಿ ಸ್ಪರ್ಧೆ ಹೆಚ್ಚಾಗಿ, ರಾಮಣ್ಣನವರ ಉತ್ಪನ್ನಕ್ಕೆ ನೈಜ ಬೆಲೆ ಲಭ್ಯವಾಯಿತು. ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ನೂತನ ಸೌಲಭ್ಯದಿಂದಾಗಿ ಉತ್ತಮ ಬೆಲೆ ಲಭ್ಯವಾಯಿತು.

ಅದೇ ರೀತಿ ಶಾಮಣ್ಣ ತನ್ನ ಉತ್ಪನ್ನವನ್ನು ಗುಣವಿಶ್ಲೇಷಣೆ ಮಾಡಿಸದೇ ಬೆಳೆಯನ್ನು ಮಾರಾಟ ಮಾಡಲು ಸಿದ್ದಪಡಿಸಿದ್ದರಿಂದ     ಇ-ಟೆಂಡರ್ ನಲ್ಲಿ ಕೇವಲ ಸ್ಥಳೀಯ ಖರೀದಿದಾರರು ಬಿಡ್ಡಿಂಗ್ ಮಾಡಿರುತ್ತಾರೆ. ಆದ್ದರಿಂದ ಶಾಮಣ್ಣನ ಬೆಳೆಗೆ ಉತ್ತಮ ಬೆಲೆ ಪಡೆಯಲು ಸಾಧ್ಯವಾಗಲಿಲ್ಲ.

ರಾಮಣ್ಣ ಅವರಿಂದ ರೈತ ಮಿತ್ರರಿಗೆ ಮಾರ್ಗದರ್ಶನ

ಬೆಳೆಯನ್ನು ಸಕಾಲದಲ್ಲಿ ಕೊಯ್ಲು ಮಾಡಿ, ಸರಿಯಾಗಿ ಒಣಗಿಸಿ, ಸ್ವಚ್ಛ ಮಾಡಿ, ವರ್ಗೀಕರಿಸಿ, ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಗುಣವಿಶ್ಲೇಷಣೆ ಮಾಡಿಸಿದರೆ, ಖರೀದಿಯಲ್ಲಿ ಸ್ಪರ್ಧೆ ಹೆಚ್ಚಾಗಿ ರೈತರ ಉತ್ಪನ್ನಕ್ಕೆ ಸ್ಪರ್ಧಾತ್ಮಕ ಬೆಲೆ ದೊರೆಯಲಿದೆ.

ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆಯಿಂದ ರೈತ ಬಾಂಧವರಿಗೆ ಆಗುವ ಲಾಭಗಳು:-
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿನ ಆನ್‍ಲೈನ್ ಟೆಂಡರ್‍ನಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಬರುವ ಮುನ್ನಾ ರೈತರು ಕೆಲವು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕಿದೆ. ಬೆಳೆಯನ್ನು ಸಕಾಲದಲ್ಲಿ ಕಟಾವು ಮಾಡಿ, ಉತ್ಪನ್ನಕ್ಕೆ ಅನುಗುಣವಾಗಿ ಒಣಗಿಸಿ, ಸ್ವಚ್ಚ ಮಾಡಿ, ಗುಣ ಪ್ರಮಾಣಕ್ಕೆ ಅನುಗುಣವಾಗಿ ವಿಂಗಡಿಸಿ, ಉತ್ಪನ್ನಗಳನ್ನು ಸರಿಯಾಗಿ ಪ್ಯಾಕ್ ಮಾಡಿ ಮಾರುಕಟ್ಟೆಗೆ ತರುವುದು ಅತ್ಯಗತ್ಯ. ಇದರಿಂದ ಉತ್ಪನ್ನದ ಗುಣಮಟ್ಟವನ್ನು ಮಾರುಕಟ್ಟೆಯಲ್ಲಿನ ಸ್ಥಳೀಯ ಖರೀದಿದಾರರು ಪರೀಕ್ಷಿಸಲು ಅನುಕೂಲವಾಗಲಿದೆ, ಅದೇ ರೀತಿ ಹೊರ ಮಾರುಕಟ್ಟೆ ಮತ್ತು ಹೊರ ರಾಜ್ಯಗಳ ಖರೀದಿದಾರರು ಆನ್‍ಲೈನ್‍ನಲ್ಲಿ ಉತ್ಪನ್ನಗಳ ಅವಕ ಮತ್ತು ಗುಣಧರ್ಮಗಳನ್ನು ಪರಿಶೀಲಿಸಿ ಆನ್‍ಲೈನ್ ಟೆಂಡರ್ ನಲ್ಲಿ ಭಾಗವಹಿಸುತ್ತಾರೆ. ಇದರಿಂದ ಉತ್ಪನ್ನಗಳ ಖರೀದಿಗೆ ಸ್ಪರ್ಧೆ ಏರ್ಪಟ್ಟು, ಸ್ಪರ್ಧಾತ್ಮಕ ಬೆಲೆ ದೊರೆಯಲಿದೆ.

ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಉತ್ಪನ್ನಗಳ ಗುಣವಿಶ್ಲೇಷಣೆ ಮಾಡಿಸಲು ರೈತರು ಯಾವುದೇ ರೀತಿಯ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ ಈ ಸೇವೆ ರೈತ ಬಾಂಧವರಿಗೆ ಉಚಿತವಾಗಿ ಕಲ್ಪಿಸಲಾಗಿದೆ. ಈಗಾಗಲೇ 40 ಎಪಿಎಂಸಿ ಮಾರುಕಟ್ಟೆಗಳಲ್ಲಿ ಗುಣವಿಶ್ಲೇಷಣೆ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಹಂತ ಹಂತವಾಗಿ ಎಲ್ಲಾ ಏಕೀಕೃತ ಮಾರುಕಟ್ಟೆ ವೇದಿಕೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು. ಗುಣವಿಶ್ಲೇಷಣೆ ಮಾಡಿದ ಉತ್ಪನ್ನಗಳ ಮಾಹಿತಿಯನ್ನು ಇ-ಟೆಂಡರ್ ವೇದಿಕೆಯಲ್ಲಿನ  ಅಪ್ ಲೋಡ್ ಮಾಡಲಾಗುವುದು. ಸದರಿ ಮಾಹಿತಿಯನ್ನು ಪರಿಶೀಲಿಸಿದ ದೂರದ ಖರೀದಿದಾರರು ಆನ್‍ಲೈನ್ ಬಿಡ್ಡಿಂಗ್‍ನಲ್ಲಿ ಅಗತ್ಯ ಉತ್ಪನ್ನಗಳನ್ನು ಖರೀದಿಸಲು ಅನುಕೂಲವಾಗುತ್ತದೆ.. ಈ ನೂತನ ವ್ಯವಸ್ಥೆಯ ಖರೀದಿ ಪ್ರಕ್ರಿಯೆಯಲ್ಲಿ ಸ್ಪರ್ಧೆ ಹೆಚ್ಚಾಗಿ ಉತ್ಪನ್ನಗಳಿಗೆ ನೈಜ ಬೆಲೆ ದೊರೆಯುವಂತಾಗಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸ್ಥಾಪಿಸಲಾಗುತ್ತಿರುವ ಏಕೀಕೃತ ಮಾರುಕಟ್ಟೆ ವೇದಿಕೆಗಳಲ್ಲಿ ರೈತರ ಅನುಕೂಲಕ್ಕಾಗಿ ಕಲ್ಪಿಸಿರುವ ಉತ್ಪನ್ನಗಳ ಉಚಿತ ಗುಣವಿಶ್ಲೇಷಣೆ ಸೇವೆಯ ಲಾಭವನ್ನು ರೈತ ಬಾಂಧವರು ಪಡೆದುಕೊಳ್ಳುವುದರೊಂದಿಗೆ, ರೈತರ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಈ ಮಹತ್ವಾಕಾಂಕ್ಷೆಯ ನೂತನ ಯೋಜನೆಯ ಲಾಭ ನಿಮಗೆ ದೊರೆಯಲಿ ಎಂಬುವುದೇ ನಮ್ಮ ಅಪೇಕ್ಷೆ.

ಕೃಷಿ ಉತ್ಪನ್ನಗಳ ಉಚಿತ ಗುಣವಿಶ್ಲೇಷಣಾ ಸೇವೆಗಳು ಏಕೀಕೃತ ಮಾರುಕಟ್ಟೆಯಲ್ಲಿ ಲಭ್ಯ

– ಮುಂದುವರಿದಿದೆ
ಕೃಷಿ ಉತ್ಪನ್ನಗಳ ಉಚಿತ ಗುಣವಿಶ್ಲೇಷಣಾ ಸೇವೆಗಳು ಏಕೀಕೃತ ಮಾರುಕಟ್ಟೆಯಲ್ಲಿ ಲಭ್ಯ

ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆ ಕಾರ್ಯವನ್ನು ಪರಿಣಿತಿ ಹೊಂದಿರುವ ಎನ್‍ಸಿಎಂಎಲ್ ಮತ್ತು ಸ್ಟಾರ್ -ಅಗ್ರಿ ಸಂಸ್ಥೆಗಳಿಗೆ ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್ ಸಂಸ್ಥೆ ವಹಿಸಿದೆ, ಮೇಲ್ಕಂಡ ಸಂಸ್ಥೆಗಳು ನುರಿತ ಗುಣವಿಶ್ಲೇಷಣ ತಜ್ಞರು ರೈತರ ಕೋರಿಕೆ ಮೇರೆಗೆ ಅವರು ಮಾರಾಟಕ್ಕೆ ತಂದ ಉತ್ಪನ್ನಗಳ ಲಾಟ್‍ಗಳಿಂದ ಮಾದರಿಗಳನ್ನು ತೆಗೆದು ಉತ್ಪನ್ನದ ಗುಣಧರ್ಮಗಳನ್ನು ಪರೀಕ್ಷಿಸುತ್ತಾರೆ. ಬಳಿಕ ನಿಗದಿತ ನಮೂನೆಯಲ್ಲಿ ಗುಣವಿಶ್ಲೇಷಣೆಯಿಂದ ಬಂದ ಉತ್ಪನ್ನದಲ್ಲಿನ ದತ್ತಾಂಶಗಳನ್ನು ದಾಖಲು ಮಾಡಿ, ರೈತರಿಗೆ ಗುಣವಿಶ್ಲೇಷಣೆಯ ಗಣಕೀಕೃತ ಪ್ರಮಾಣ ಪತ್ರವನ್ನು ನೀಡುತ್ತಾರೆ. ಈ ಪ್ರಮಾಣ ಪತ್ರವನ್ನು ರೈತರು ತಮ್ಮ ಉತ್ಪನ್ನದ ಲಾಟ್ ಮುಂದೆ ಪ್ರದರ್ಶಿಸಬಹುದು. ಜೊತೆಗೆ ಇದೇ ಮಾಹಿತಿಯನ್ನು ಏಕೀಕೃತ ಮಾರುಕಟ್ಟೆ ವೇದಿಕೆಯ ಆನ್‍ಲೈನ್‍ನಲ್ಲಿ ಕೂಡ ಪ್ರಸಾರ ಮಾಡಲಾಗುವುದು.

• ರೈತರ ಹೆಸರು
• ಮಾರುಕಟ್ಟೆ ಅವಕ ಮತ್ತು ಮಾರುಕಟ್ಟೆ ಹೆಸರು

• ಉತ್ಪನ್ನದ ಹೆಸರು ಮತ್ತು ಲಾಟ್ ನಂಬರ್
• ಮಾದರಿ ತೆಗೆದ ದಿನಾಂಕ
• ಮೇಲ್ವಿಚಾರಕರ ಹೆಸರು
• ಉತ್ಪನ್ನದ ಗುಣವಿಶ್ಲೇಷಣೆಯ ವಿವರಗಳು ಆನ್‍ಲೈನ್‍ನಲ್ಲಿ ಖರೀದಿದಾರರಿಗೆ ಲಭ್ಯವಿರುತ್ತದೆ.

ಏಕೀಕೃತ ಲೈಸೆನ್ಸ್ ಪಡೆದ ವರ್ತಕರು ಮತ್ತು ದಲ್ಲಾಲರಿಗೆ ನೀಡಿರುವ User ID ಮತ್ತು Password ಮೂಲಕ ಏಕೀಕೃತ ಮಾರುಕಟ್ಟೆ ವೇದಿಕೆಯ ವೆಬ್‍ಸೈಟ್‍ನ್ನು ಸಂಪರ್ಕಿಸಬಹುದು. ಒಮ್ಮೆ ವೆಬ್‍ಸೈಟ್ ಪ್ರವೇಶಿಸಿದ ಬಳಿಕ ವಿವಿಧ ಉತ್ಪನ್ನಗಳ ಗುಣಮಟ್ಟ, ಗುಣಧರ್ಮ ಮತ್ತು ಗುಣವಿಶ್ಲೇಷಣೆಯ ವಿವರಗಳನ್ನು ಪರಿಶೀಲಿಸಬಹುದು. ಈ ವ್ಯವಸ್ಥೆಯಿಂದ ಸ್ಥಳೀಯ ಮಾರುಕಟ್ಟೆ, ರಾಜ್ಯದ ಹೊರ ಮಾರುಕಟ್ಟೆ ಮತ್ತು ಹೊರರಾಜ್ಯಗಳ ವರ್ತಕರು ಅಗತ್ಯ ಉತ್ಪನ್ನಗಳ ಖರೀದಿಗೂ ಮುನ್ನಾ ಅವುಗಳ ಗುಣಧರ್ಮ ಮತ್ತು ಗುಣವಿಶ್ಲೇಷಣೆಯ ಮಾಹಿತಿಯನ್ನು ಪರಿಶೀಲಿಸಿ ಆನ್‍ಲೈನ್ ಟೆಂಡರ್ ನಲ್ಲಿ ಭಾಗವಹಿಸುತ್ತಾರೆ. ಇದೊಂದು ಪಾರದರ್ಶಕ ವ್ಯವಸ್ಥೆಯಾಗಿದ್ದು, ಇ-ಟೆಂಡರ್ ನಲ್ಲಿ ಉತ್ಪನ್ನಗಳ ಖರೀದಿಗೆ ಖರೀದಿದಾರರಿಂದ ಸ್ಪರ್ಧೆ ಹೆಚ್ಚಾಗಿ, ಈ ರೀತಿಯ ನೂತನ ಕ್ರಮಗಳಿಂದಾಗಿ ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ಲಭ್ಯವಾಗುವಂತಾಗಿದೆ.

ಮಾರುಕಟ್ಟೆಯಲ್ಲಿ ಉತ್ಪನ್ನದ ಗುಣಧರ್ಮ ಮತ್ತು ಗುಣವಿಶ್ಲೇಷಣೆ ಮಾಡಿಸಿ ಮಾರಾಟ ಮಾಡುವದರಿಂದ ಕೃಷಿ ಉತ್ಪನ್ನಗಳ ಖರೀದಿಯಲ್ಲಿ ಸ್ಪರ್ಧೆ ಹೆಚ್ಚಾಗಿ, ರೈತರು ನಿರೀಕ್ಷಿಸಿದ ಬೆಲೆ ಅವರ ಉತ್ಪನ್ನಗಳಿಗೆ ದೊರೆಯುತ್ತದೆ. ಇದು ರೈತ ಭಾಂದವರಿಗೆ ಅತ್ಯಂತ ಉಪಯುಕ್ತ ಹಾಗೂ ಲಾಭದಾಯಕ ವ್ಯವಸ್ಥೆಯಾಗಿ ಹೊರಹೊಮ್ಮಿದೆ.

ವರ್ತಕರಿಗೆ ಆಗುವ ಅನುಕೂಲಗಳು

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವಿವಿಧ ಕೃಷಿ ಉತ್ಪನ್ನಗಳ ಲಾಟ್‍ಗಳನ್ನು ಸ್ಥಳೀಯ ಖರೀದಾರರು ಖುದ್ದು ಪರಿಶೀಲಿಸಲು ಅವಕಾಶವಿದೆ. ಆದರೆ ಉತ್ಪನ್ನದ ವೈಜ್ಞಾನಿಕ ಗುಣವಿಶ್ಲೇಷಣೆ ಮಾಹಿತಿಯನ್ನು ಸಂಪೂರ್ಣವಾಗಿ ಗ್ರಹಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಬೇಕಾದ ಉತ್ಪನ್ನಗಳ ಲಾಟ್‍ಗಳಿಗೆ ಭೇಟಿ ನೀಡಿ ಪರೀಕ್ಷಿಸುವುದರಿಂದ ಸಮಯ ವ್ಯರ್ಥವಾಗಲಿದೆ. ವರ್ತಕರು ಆನ್‍ಲೈನ್‍ನಲ್ಲೇ ಉತ್ಪನ್ನಗಳ ಆವಕದ ಪ್ರಮಾಣ ಮತ್ತು ಗುಣವಿಶ್ಲೇಷಣೆ ಮಾಹಿತಿಯನ್ನು ಪರಿಶೀಲಿಸಿ ಇ-ಟೆಂಡರ್ ನಲ್ಲಿ ಭಾಗವಹಿಸಲು ಅನುಕೂಲವಾಗಿದೆ. ಖರೀದಿದಾರರು ಮತ್ತು ದಲ್ಲಾಲರು, ಸ್ಥಳೀಯರು, ಹೊರ ರಾಜ್ಯಗಳ ವರ್ತಕರು ಅಥವಾ ಏಕೀಕೃತ ಲೈಸೆನ್ಸ್ ಪಡೆದ ಖರೀದಿದಾರರು ರಾಜ್ಯದ ಯಾವುದೇ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿನ ಉತ್ಪನ್ನಗಳ ಖರೀದಿಸಲು ಇದೊಂದು ವಿಶ್ವಾಸಾರ್ಹ ವರ್ತಕ  ಸ್ನೇಹಿ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯಿಂದಾಗಿ ವರ್ತಕರು ಉತ್ಪನ್ನಗಳ ಖರೀದಿಗಾಗಿ ಒಂದು ಮಾರುಕಟ್ಟೆಯಿಂದ ಮತ್ತೊಂದು ಮಾರುಕಟ್ಟೆಗೆ ಸಂಚಾರ ಮಾಡುವ ಅಗತ್ಯವಿಲ್ಲ. ಅವರು ಇದ್ದ ಸ್ಥಳದಿಂದಲೇ ಅಗತ್ಯ ಉತ್ಪನ್ನಗಳಿಗೆ ಆನ್‍ಲೈನ್ ಟೆಂಡರ್ ನಲ್ಲಿ ಬಿಡ್ ಮಾಡಬಹುದಾಗಿದೆ.

ಉತ್ಪನ್ನದ ಗುಣವಿಶ್ಲೇಷಣೆಯಲ್ಲಿ ನೂನ್ಯತೆ ಕಂಡುಬಂದರೆ ಅದನ್ನು ಇತ್ಯರ್ಥಪಡಿಸಲು ಅನುಸರಿಸಬೇಕಾದ ವಿಧಾನ: 
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಉತ್ಪನ್ನದ ಗುಣವಿಶ್ಲೇಷಣೆ ಪ್ರಯೋಗಾಲಯದಲ್ಲಿ ಗುಣವಿಶ್ಲೇಷಣೆ ಮಾಡಿಸಿದ ಉತ್ಪನ್ನಗಳಲ್ಲಿ ಅಸಮರ್ಪಕ ಮಾಹಿತಿ ಅಥವಾ ನೂನ್ಯತೆ ಕಂಡುಬಂದರೆ ಅದನ್ನು ಇತ್ಯರ್ಥ ಪಡಿಸಲು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ & ಅಭಿವೃದ್ಧಿ)ನಿಯಮಗಳು 1968ರ ನಿಯಮ 91-ಒ ಹಾಗೂ 91-P ರನ್ವಯ ಕ್ರಮ ವಹಿಸುವುದು.

ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಉತ್ಪನ್ನಗಳ ಗುಣವಿಶ್ಲೇಷಣೆಗಾಗಿ ಮಾದರಿ ತೆಗೆಯುವಿಕೆಯಲ್ಲಿ ಅಥವಾ ಪರೀಕ್ಷೆಯ ದತ್ತಾಂಶ ವಿವರದಲ್ಲಿ ನ್ಯೂನ್ನತೆಯಾಗಿದ್ದರೆ, ಕೂಡಲೇ ರೈತರು ಅಥವಾ ಖರೀದಿದಾರರು ಸಂಬಂಧಪಟ್ಟ ಮಾರುಕಟ್ಟೆಯ ಕಾರ್ಯದರ್ಶಿ ಅವರ ಗಮನಕ್ಕೆ ತರುವುದು.

ಮಾರುಕಟ್ಟೆ ಕಾರ್ಯದರ್ಶಿ ಅವರು ದೂರುದಾರರ ಲಾಟ್‍ಗೆ ಭೇಟಿ ನೀಡಿ, ಉತ್ಪನ್ನದ ಮರು ಮಾದರಿಯನ್ನು ಸಂಗ್ರಹಿಸಿ ಮತ್ತೊಮ್ಮೆ ಗುಣವಿಶ್ಲೇಷಣೆ ಮಾಡಿಸುವ ಕ್ರಮಗಳನ್ನು ಜರುಗಿಸಲಿದ್ದಾರೆ.

ಮಾರುಕಟ್ಟೆಯಲ್ಲಿ ಗುಣವಿಶ್ಲೇಷಣೆ ಮಾಡಿದ ಉತ್ಪನ್ನ ಮಾರಾಟವಾದ ಬಳಿಕ ಅದೇ ಉತ್ಪನ್ನದ ಗುಣಮಟ್ಟ ಮತ್ತು ಗುಣವಿಶ್ಲೇಷಣೆ ಬಗ್ಗೆ ಅನುಮಾನವಿದ್ದಲ್ಲಿ ಟೆಂಡರ್ ಡಿಕ್ಲೇರ್ ಮಾಡಿದ ಎರಡು ಗಂಟೆಯೊಳಗೆ ಟೆಂಡರ್ ವಿಜೇತರು ಮಾರುಕಟ್ಟೆಯ ಕಾರ್ಯದರ್ಶಿ ಅವರ ಗಮನಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ. ಈ ರೀತಿಯ ಸಮಸ್ಯೆಗಳನ್ನು ಕೂಡಲೇ ಇತ್ಯರ್ಥ ಪಡಿಸುವ ಅಧಿಕಾರವನ್ನು ಕಾರ್ಯದರ್ಶಿ ಅವರು ಹೊಂದಿರುತ್ತಾರೆ.

ಒಂದು ವೇಳೆ ಕಾರ್ಯದರ್ಶಿ ಅವರು ಸಮಸ್ಯೆಗಳನ್ನು ಇತ್ಯರ್ಥ ಪಡಿಸಿದ ಕ್ರಮಗಳಿಗೆ ರೈತರು ಅಥವಾ ಖರೀದಿದಾರರಿಂದ ಒಪ್ಪಿಗೆ ಇಲ್ಲಾವಾದಲ್ಲಿ, ವಿವಾದ ಇತ್ಯರ್ಥ ಮಾಡಿಕೊಳ್ಳಲು ಮಾರುಕಟ್ಟೆ ಸಮಿತಿಯಲ್ಲಿನ “ಡಿಸ್ಪ್ಯೂಟ್ ರೆಸಲ್ಯೂಷನ್ ಕಮಿಟಿ”  (ವಿವಾದ ಇತ್ಯರ್ಥ ಸಮಿತಿ) ಗಮನಕ್ಕೆ ತರಲು ಅವಕಾಶ ನೀಡಲಾಗಿದೆ.

ರೈತ ಭಾಂದವರಿಗೆ ಮಾರ್ಗಸೂಚಿ :
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಲಭ್ಯವಿರುವ ಕೃಷಿಕಾರರ ಉತ್ಪನ್ನಗಳಿಗೆ ಉಚಿತ ಗುಣವಿಶ್ಲೇಷಣೆ ಸೇವೆ ಸೌಲಭ್ಯ ಪಡೆಯಲು ರೈತರು ಬೆಳೆಯನ್ನು ಸರಿಯಾದ ಸಮಯದಲ್ಲಿ ಕೊಯ್ಲು ಮಾಡಿ, ಒಣಗಿಸಿ, ಕಸಕಡ್ಡಿಯನ್ನು ಬೇರ್ಪಡಿಸಿ, ಗಾತ್ರ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ವರ್ಗೀಕರಿಸಿ ಮಾರುಕಟ್ಟೆಗೆ ತರುವುದು. ಮಾರುಕಟ್ಟೆಗೆ ತಂದ ಉತ್ಪನ್ನವನ್ನು ತಪ್ಪದೇ ಗುಣವಿಶ್ಲೇಷಣೆ ಮಾಡಿಸಿ, ತಮ್ಮ ಬೆಳೆಗೆ ನೈಜ ಬೆಲೆ ಪಡೆಯಬೇಕು ಎಂಬುದೇ ರೆಮ್ಸ್ ಸಂಸ್ಥೆಯ ಆಶಯ.

ಎಪಿಎಂಸಿಗಳಲ್ಲಿ ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆ (ಅಸ್ಸೇಯಿಂಗ್) ಸೇವೆ – ರೈತಭಾಂಧವರ ಉತ್ಪನ್ನಕ್ಕೆ ಉಚಿತ ಗುಣವಿಶ್ಲೇಷಣೆ ಸೇವೆ

ಎಪಿಎಂಸಿಗಳಲ್ಲಿ ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆ (ಅಸ್ಸೇಯಿಂಗ್) ಸೇವೆ – ರೈತಭಾಂಧವರ ಉತ್ಪನ್ನಕ್ಕೆ ಉಚಿತ ಗುಣವಿಶ್ಲೇಷಣೆ ಸೇವೆ.
– ಮನೋಜ್ ರಾಜನ್,ಬೆಂಗಳೂರು

ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿನ ಮಾರಾಟ ವ್ಯವಸ್ಥೆಯಲ್ಲಿ ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆ ಕಾರ್ಯವಿಧಾನ ಧಾರಣೆ ನಿರ್ಧರಣೆಯ ಮೇಲೆ ಬಹುಮುಖ್ಯವಾದ ಪಾತ್ರವಹಿಸುತ್ತದೆ. ಮಾರುಕಟ್ಟೆಯಲ್ಲಿ ಮಾರಾಟ ವ್ಯವಸ್ಥೆಯಲ್ಲಿ ಗುಣವಿಶ್ಲೇಷಣೆ ಮಾಡಿದ ಉತ್ಪನ್ನಕ್ಕೆ ಖರೀದಿದಾರರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿರುವುದನ್ನು ಮನಗಂಡು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆಗಾಗಿ ಪ್ರತ್ಯೇಕ ಪ್ರಯೋಗಾಲಯಗಳನ್ನು ಸ್ಥಾಪಿಸಲು ಕೃಷಿ ಮಾರಾಟ ಇಲಾಖೆ ಮತ್ತು ರೆಮ್ಸ್ ಸಂಸ್ಥೆ ನಿರ್ಧರಿಸಿತು. ಜೊತೆಗೆ ರೈತ ಭಾಂಧವರ ಉತ್ಪನ್ನಗಳ ಗುಣವಿಶ್ಲೇಷಣೆ ಸೇವೆಯನ್ನು ಉಚಿತವಾಗಿ ಕಲ್ಪಿಸುವ ಮಹತ್ವದ ನಿರ್ಣಯವನ್ನು ಕೈಗೊಂಡು ಅನುಷ್ಠಾನ ಮಾಡಲಾಗಿದೆ.

ಕೃಷಿ ಉತ್ಪನ್ನಗಳ ಭೌತಿಕ ಗುಣವಿಶ್ಲೇಷಣೆ

ಕೃಷಿ ಉತ್ಪನ್ನಗಳ ಭೌತಿಕ ಮಾನದಂಡಗಳ ಅನ್ವಯ ಪರೀಕ್ಷಿಸಿ, ಉತ್ಪನ್ನದಲ್ಲಿನ ಕಸ-ಕಡ್ಡಿ, ತೇವಾಂಶ ಮತ್ತು ಉತ್ಪನ್ನದ ಒಟ್ಟಾರೆ ಗುಣಮಟ್ಟವನ್ನು ನುರಿತ ತಜ್ಞರಿಂದ ಕಂಡುಹಿಡಿಯುವ ಕಾರ್ಯವಿಧಾನಕ್ಕೆ ಗುಣವಿಶ್ಲೇಷಣೆ ಎಂದು ಕರೆಯಲಾಗುತ್ತದೆ.

ಉತ್ಪನ್ನಗಳ ಮಾದರಿ ತೆಗೆಯುವ ಕಾರ್ಯವಿಧಾನ:

• ರೈತರು ಏಕೀಕೃತ ಮಾರುಕಟ್ಟೆ ವೇದಿಕೆಗೆ ತರುವ ಉತ್ಪನ್ನದಲ್ಲಿ ಪ್ರತಿಶತ ಶೇಕಡ 10ರಷ್ಟು ವಿವಿಧ ಭಾಗಗಳಿಂದ ಮಾದರಿಯನ್ನು ತೆಗೆದು ಗುಣವಿಶ್ಲೇಷಣೆಗೆ ಉಪಯೋಗಿಸಲಾಗುತ್ತದೆ.
• ಮಾರುಕಟ್ಟೆಗೆ ತಂದ ಉತ್ಪನ್ನವುಳ್ಳ ಚೀಲಗಳನ್ನು ಯಾದೃಚ್ಛಿಕ (random) ರೀತಿಯಲ್ಲಿ ತೆಗೆದು, ಚೀಲಗಳಲ್ಲಿರುವ ಉತ್ಪನ್ನಗಳನ್ನು ಸುರಿದು, ರಾಶಿಯ ವಿವಿಧ ಭಾಗಗಳಿಂದ, ಅಂದರೆ ರಾಶಿಯ ಮುಂಭಾಗ, ಹಿಂಭಾಗ, ಎಡಭಾಗ, ಬಲಭಾಗ, ತುದಿ, ಮಧ್ಯ ಹಾಗೂ ತಳಭಾಗಗಳಿಂದ ಮಾದರಿಯನ್ನು ಸಂಗ್ರಹಿಸಲಾಗುತ್ತದೆ.
• ಮಾರಾಟಗಾರರು ಮಾರಾಟಕ್ಕಾಗಿ ಮಾರುಕಟ್ಟೆಗೆ ತರುವ ಉತ್ಪನ್ನವನ್ನು ಪ್ಯಾಕ್ ಮಾಡಿ (ಗೋಣಿ ಚೀಲದಲ್ಲಿ) ತರಬಹುದು ಅಥವಾ ಹಾಗೆ ರಾಶಿ ರೂಪದಲ್ಲಿ ತರಬಹುದು, ಮಾದರಿ ತೆಗೆಯುವುದಕ್ಕಾಗಿ (ಸ್ಯಾಂಪಲ್) ಪ್ರತಿ ಲಾಟನ್ನು ಚೀಲ ಅಥವಾ ರಾಶಿ ರೂಪದಲ್ಲಿ ಪ್ರತ್ಯೇಕವಾಗಿ ಇಡಲಾಗುತ್ತದೆ.
• ಪ್ಯಾಕ್ ಮಾಡಿದ ರೂಪದಲ್ಲಿ ಲಾಟನ್ನು ತಂದಾಗ ಲಾಟ್‍ನಲ್ಲಿನ ಪ್ರತಿ ಚೀಲದ ಮೇಲ್ಭಾಗ, ಮಧ್ಯಭಾಗ ಮತ್ತು ಕೆಳಭಾಗದಿಂದ ಸಣ್ಣ ಪ್ರಮಾಣದಲ್ಲಿ ಉತ್ಪನ್ನ ತೆಗೆದು ಸ್ಯಾಂಪಲ್ ಸಿದ್ಧಪಡಿಸುವುದು ಮತ್ತು ಸರಿಯಾಗಿ ಮಿಶ್ರಣ ಮಾಡುವುದು. ಇದನ್ನು ‘ಬಲ್ಕ್ ಸ್ಯಾಂಪಲ್’ ಎಂದು ಕರೆಯಲಾಗುವುದು.
• ಒಂದು ವೇಳೆ ಉತ್ಪನ್ನಗಳ ಲಾಟನ್ನು ರಾಶಿ ರೂಪದಲ್ಲಿ ತಂದಾಗ ಮಾದರಿಯನ್ನು ಕನಿಷ್ಠ ಪಕ್ಷ 7 ಭಾಗಗಳಿಂದ ಅಂದರೆ ಮುಂಭಾಗ, ಹಿಂಭಾಗ, ಎಡಭಾಗ, ಬಲಭಾಗ, ರಾಶಿಯ ತುದಿ, ಮಧ್ಯ ಹಾಗೂ ತಳಭಾಗಗಳಿಂದ ಸಂಗ್ರಹಿಸಿ, ನಂತರ ಈ ಮಾದರಿಯನ್ನು ಸರಿಯಾಗಿ ಮಿಶ್ರಣ ಮಾಡಿ ಬಲ್ಕ್ ಮಾದರಿಯನ್ನು ಸಂಗ್ರಹಿಸಲಾಗುವುದು.
• ಕಾಂಪೋಸಿಟ್ ಸ್ಯಾಂಪಲ್ (ಸಂಯುಕ್ತ ಮಾದರಿ) ಸಿದ್ಧಪಡಿಸಲು ಬಲ್ಕ್ ಸ್ಯಾಂಪಲ್‍ನಿಂದ ಅಗತ್ಯವಿರುವ ಪ್ರಮಾಣದ ಉತ್ಪನ್ನ ತೆಗೆಯುವುದು.
• ಈ ರೀತಿ ಸಿದ್ಧಪಡಿಸಿದ ಸಂಯುಕ್ತ ಮಾದರಿಯ ಉತ್ಪನ್ನದಿಂದ ಸ್ಯಾಂಪಲ್ ಡಿವೈಡರ್ ಸಹಾಯದಿಂದ ಸಮನಾಗಿ ಬೇರ್ಪಡಿಸಿ, ಒಂದು ಭಾಗವನ್ನು ಭೌತಿಕ ಗುಣವಿಶ್ಲೇಷಣೆಗಾಗಿ ಉಪಯೋಗಿಸಲಾಗುತ್ತದೆ ಮತ್ತು ಉಳಿದ ಒಂದು ಭಾಗವನ್ನು ಪ್ರಯೋಗಾಲಯದಲ್ಲಿ (Reference Sample) ರೆಫರೆನ್ಸ್ ಗಾಗಿ ಇಡಲಾಗುತ್ತದೆ.
• ಪ್ರತಿ ಭಾಗವನ್ನು ಪ್ರತ್ಯೇಕವಾಗಿ ಪಾರದರ್ಶಕ ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿ ಪ್ರತಿಯೊಂದು ಚೀಲಕ್ಕೆ ಗುರುತಿನ ಚೀಟಿಯನ್ನು ಲಗತ್ತಿಸಿ ಪ್ಯಾಕ್ ಮಾಡಿ ಸಂಗ್ರಹಿಸಲಾಗುವುದು.
• ಸಂಗ್ರಹಿಸಿದ  ಉತ್ಪನ್ನದ ಮಾದರಿಯ ಸಂಪೂರ್ಣ ವಿವರಗಳನ್ನು ದಾಖಲಾತಿ ಪುಸ್ತಕದಲ್ಲಿ ನೊಂದಯಿಸಲಾಗುತ್ತದೆ.

ಗುಣವಿಶ್ಲೇಷಣೆ ಕಾರ್ಯವಿಧಾನ:

ಉತ್ಪನ್ನಗಳ ಮಾದರಿಗಳನ್ನು ಪರೀಕ್ಷಿಸಿದಾಗ ಯಾವುದೇ ಜೀವವಿರುವ ಕ್ರಿಮಿಕೀಟಗಳ ಲಭ್ಯತೆ ಬಗ್ಗೆ ಪರೀಕ್ಷಿಸಲಾಗುತ್ತದೆ. ಒಂದು ವೇಳೆ ಜೀವವಿರುವ ಕ್ರಿಮಿಕೀಟಗಳು ಉತ್ಪನ್ನದಲ್ಲಿ ಪತ್ತೆಯಾದಲ್ಲಿ ಅಂತಹ ಲಾಟ್‍ ಅನ್ನು ತಿರಸ್ಕರಿಸಲಾಗುವುದು ಹಾಗೂ ಉತ್ಪನ್ನದಲ್ಲಿ ಯಾವುದೇ ಕೃತಕ ರಾಸಾಯನಿಕ ಬಣ್ಣ ಅಥವಾ ಬೂಸ್ಟ್ ಹಿಡಿದ ಬಗ್ಗೆಯು ಕೂಡ ಪರೀಕ್ಷಿಸಲಾಗುತ್ತದೆ. ತದನಂತರ ಮಾದರಿಯನ್ನು ಗುಣಧರ್ಮಗಳ ವಿಶ್ಲೇಷಣೆಗಾಗಿ ಭೌತಿಕ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ರೀತಿಯಲ್ಲಿ ಉತ್ಪನ್ನಗಳ ಗುಣವಿಶ್ಲೇಷಣೆ ಮಾಡಿದ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಅಪ್ ಲೋಡ್ ಮಾಡುವ ವ್ಯವಸ್ಥೆಯನ್ನು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಕಲ್ಪಿಸಲಾಗಿದೆ. ಈ ಕಾರ್ಯವಿಧಾನದಿಂದಾಗಿ ದೂರದ ಖರೀದಿದಾರರು ಉತ್ಪನ್ನಗಳ ಮೇಲೆ ವಿಶ್ವಾಸವಿಟ್ಟು, ಆನ್‍ಲೈನ್‍ನಲ್ಲಿ ಲಭ್ಯವಾಗುವ ಉತ್ಪನ್ನದ ಗುಣವಿಶ್ಲೇಷಣೆ ಮಾಹಿತಿಯನ್ನು ಪರಿಶೀಲಿಸಿ, ಅಗತ್ಯ ಉತ್ಪನ್ನಗಳನ್ನು ಖರೀದಿ ಮಾಡಲು ಆನ್‍ಲೈನ್ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಒಟ್ಟಾರೆ ವಿಶ್ವಾಸಾರ್ಹ ಉತ್ಪನ್ನಗಳ ಗುಣವಿಶ್ಲೇಷಣೆ ಕ್ರಮದಿಂದಾಗಿ ಖರೀದಿ ಪ್ರಕ್ರಿಯೆಯಲ್ಲಿ ಸ್ಪರ್ಧೆ ಏರ್ಪಟ್ಟು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಮಾರಾಟವಾಗುವ ಉತ್ಪನ್ನಗಳಿಗೆ ನೈಜ ಬೆಲೆ ದೊರೆಯುವಂತಾಗಲಿದೆ.

ಗುಣವಿಶ್ಲೇಷಣಾ ಕೇಂದ್ರಗಳು

ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್ ಸಂಸ್ಥೆಯು ರಾಜ್ಯ ಕೃಷಿ ಮಾರಾಟ ಇಲಾಖೆಯ ಸಹಯೋಗದೊಂದಿಗೆ ಪ್ರಾರಂಭಿಕವಾಗಿ ಹುಬ್ಬಳ್ಳಿ, ಗದಗ, ಮುಂಡರಗಿ, ಬಳ್ಳಾರಿ, ಚಿತ್ರದುರ್ಗ, ತಿಪಟೂರು, ಕೊಪ್ಪಳ, ರೋಣ, ಲಕ್ಷ್ಮೇಶ್ವರ ಸೇರಿದಂತೆ 10 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ವೈಜ್ಞಾನಿಕ ಗುಣವಿಶ್ಲೇಷಣೆ ಪ್ರಯೋಗಾಲಯಗಳನ್ನು ಸ್ಥಾಪಿಸಿದೆ. ಈ ಕೇಂದ್ರಗಳಲ್ಲಿ ರೈತರು ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆ ಸೇವೆಯನ್ನು ಉಚಿತವಾಗಿ ಪಡೆಯಲು ಅನುಕೂಲ ಕಲ್ಪಿಸಲಾಗಿದೆ.

ಎರಡನೇ ಹಂತದಲ್ಲಿ ಬಾಗಲಕೋಟೆ, ಭದ್ರಾವತಿ, ಭೀಮಸಮುದ್ರ, ಬೀದರ್, ಬೀರೂರು, ಚಳ್ಳಕೆರೆ, ಚನ್ನಗಿರಿ, ದಾವಣಗೆರೆ, ಧಾರವಾಡ, ಗುಬ್ಬಿ, ಹರಪ್ಪನಹಳ್ಳಿ, ಹಿರಿಯೂರು, ಹೊಸದುರ್ಗ, ಹೊಸನಗರ, ಹುಳಿಯಾರು, ಕಡೂರು, ಕೊಟ್ಟೂರು, ಮೈಸೂರು, ರಾಯಚೂರು, ರಾಮದುರ್ಗ, ಸಾಗರ, ಶಿವಮೊಗ್ಗ, ಸಿದ್ದಾಪುರ, ಸಿರಾ, ಸಿರ್ಸಿ, ತೀರ್ಥಹಳ್ಳಿ, ತುಮಕೂರು, ಯಾದಗಿರಿ, ಯಲ್ಲಾಪುರ, ಅರಸೀಕೆರೆ ಸೇರಿದಂತೆ 30 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸ್ಥಾಪಿಸಲು ಉದ್ಧೇಶಿಸಲಾಗಿದೆ.

“ಒಣ ಮೆಣಸಿನಕಾಯಿ ಕಣಜ” ಬ್ಯಾಡಗಿ ಎಪಿಎಂಸಿಯಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ

“ಒಣ ಮೆಣಸಿನಕಾಯಿ ಕಣಜ” ಬ್ಯಾಡಗಿ ಎಪಿಎಂಸಿಯಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ:
ಶ್ರೀ. ಮನೋಜ್ ರಾಜನ್
ವ್ಯವಸ್ಥಾಪಕ ನಿರ್ದೇಶಕರು & ಸಿಇಒ,
ರೆಮ್ಸ್, ಬೆಂಗಳೂರು.

ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಬೈ ಸರ್ಕಾರದ ಕಂದಾಯ ಇಲಾಖೆಯ ಅಧಿಸೂಚನೆ ಅನ್ವಯ 1948ರಲ್ಲಿ ಸ್ಥಾಪನೆಯಾಗಿದೆ. ಕಾಲ ಕ್ರಮೇಣ ಕರ್ನಾಟಕ ರಾಜ್ಯ ಏಕೀಕರಣಗೊಂಡ ಬಳಿಕ ಕರ್ನಾಟಕ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ಶಾಸನ 1966 ಮತ್ತು ನಿಯಮಗಳು 1968 ರ ಕಾಯ್ದೆ ಅಡಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ರಾಜ್ಯದಲ್ಲಿ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿವೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರಮುಖವಾಗಿ ವಹಿವಾಟು ನಡೆಯುವ ಉತ್ಪನ್ನ ಒಣಮೆಣಸಿನಕಾಯಿ, ದಕ್ಷಿಣ ಭಾರತದಲ್ಲಿ ಒಣಮೆಣಸಿಕಾಯಿ ಆವಕವಾಗುವ ಮಾರುಕಟ್ಟೆಗಳ ಪೈಕಿ ಕರ್ನಾಟಕದ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ಅಗ್ರಸ್ಥಾನವನ್ನು ಪಡೆದುಕೊಂಡಿದೆ. 6 ದಶಕಕ್ಕೂ ಹೆಚ್ಚು ಅವಧಿಯಿಂದ ಬ್ಯಾಡಗಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಈ ಮಾರುಕಟ್ಟೆಗೆ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರದ ರೈತರು ಭಾಗೀದಾರರಾಗಿದ್ದಾರೆ. ಬ್ಯಾಡಗಿ ಎಪಿಎಂಸಿಯನ್ನು ಒಣಮೆಣಸಿನಕಾಯಿ ಕಣಜ ಎಂದು ಕರೆಯುವುದು ವಾಡಿಕೆಯಾಗಿದೆ. ಈ ಮಾರುಕಟ್ಟೆಯಲ್ಲಿ ಆವಕವಾಗುವ ಮೆಣಸಿನಕಾಯಿ ಉತ್ಪನ್ನಕ್ಕೆ ದೇಶ ವಿದೇಶಗಳಿಂದ ಅತೀ ಹೆಚ್ಚಿನ ಬೇಡಿಕೆ ಇದೆ, ಇಲ್ಲಿಂದಲೇ ಈ ಉತ್ಪನ್ನವನ್ನು ರಪ್ತು ಮಾಡಲಾಗುತ್ತಿದೆ.

ಇಂತಹ ಪ್ರಖ್ಯಾತಿ ಹೊಂದಿದ ಮಾರುಕಟ್ಟೆಯಲ್ಲಿ ಒಣಮೆಣಸಿನಕಾಯಿ ವ್ಯಾಪಾರ ವಹಿವಾಟು ಈ ಹಿಂದೆ ಮ್ಯಾನುಯಲ್ ಟೆಂಡರ್ ( ಸಿಬ್ಬಂದಿ ಅವಲಂಭಿತ) ಪದ್ದತಿಯಲ್ಲಿ ನಡೆಸಲಾಗುತ್ತಿತ್ತು.

ಪ್ರತಿ ಸೋಮವಾರ ಮತ್ತು ಗುರುವಾರ ಮಾರುಕಟ್ಟೆಗೆ ವಿವಿಧ ಭಾಗಗಳಿಂದ ರೈತರು ಒಣಮೆಣಸಿನಕಾಯಿ ಉತ್ಪನ್ನವನ್ನು ಮಾರಾಟಕ್ಕಾಗಿ ತರುತ್ತಿದ್ದರು. ಮಾರುಕಟ್ಟೆಯಲ್ಲಿ ಮ್ಯಾನುಯೆಲ್ ಟೆಂಡರ್ ಆಗುತ್ತಿದ್ದುದರಿಂದ ರೈತರು ಮತ್ತು ವರ್ತಕರು ಮಾರುಕಟ್ಟೆ ಪ್ರಾಂಗಣದಲ್ಲಿ ವಹಿವಾಟಿಗಾಗಿ ಹೆಚ್ಚು ಸಮಯ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಉತ್ಪನ್ನಕ್ಕೆ ಕೈಯಿಂದ ದರ ನಮೂದಿಸಿ ಟೆಂಡರ್ ಪೆಟ್ಟಿಗೆಗೆ ಖರೀದಿದಾರರು ಹಾಕುತ್ತಿದ್ದರು. ಮಾರುಕಟ್ಟೆ ಅಧಿಕಾರಿಗಳು ಲಾಟ್ ನಂಬರ್ ವಾರು ಟೆಂಡರ್ ಡಿಕ್ಲರೇಷನ್ ಸ್ಲಿಪ್ ರೈತರಿಗೆ ನೀಡಲು ಹರಸಹಾಸ ಪಡುವಂತಹ ವ್ಯವಸ್ಥೆಯನ್ನು ತಾವು ಕಂಡಿರಬಹುದು. ದರಪಟ್ಟಿ ಪೂರೈಸಿದ ನಂತರ ರೈತರ ಉತ್ಪನ್ನಗಳನ್ನು ತೂಕ ಮಾಡಿ, ರೈತರಿಗೆ ಲೆಕ್ಕತೀರುವಳಿ ಪಟ್ಟಿಯನ್ನು ಸಿದ್ದಪಡಿಸಿ, ರೈತರಿಗೆ ಹಣ ಪಾವತಿ ಮಾಡುವುದು ವರ್ತಕರು ಖರೀದಿಸಿದ ಉತ್ಪನ್ನವನ್ನು ವರ್ತಕರಿಗೆ ವಿತರಿಸುವುದು ಮತ್ತು ಅವರ ಉತ್ಪನ್ನ ಸಾಗಟ ಮಾಡಲು ಪರ್ಮಿಟ್ ನೀಡುವುದು, ಇಡೀ ಹಗಲು ರಾತ್ರಿಯ ಕಾರ್ಯ ಚಟುವಟಿಕೆಯಾಗಿತ್ತು. ಈ ರೀತಿಯ ಒತ್ತಡದ ಕಾರ್ಯದಿಂದಾಗಿ ಮಾರುಕಟ್ಟೆ ಅಧಿಕಾರಿಗಳು ಎಷ್ಟೇ ಜಾಗೃತಿ ವಹಿಸಿದರೂ ಸರ್ವೆಸಾಮಾನ್ಯವಾಗಿ ಪಾರದರ್ಶಕತೆ ಮತ್ತು ದಕ್ಷತೆ ಕಾಪಾಡಲು ಸಾಧ್ಯವಾಗುತ್ತಿರಲಿಲ್ಲಾ. ಮಾರುಕಟ್ಟೆಗಳಲ್ಲಿ ಈ ರೀತಯ ಅನಾನುಕೂಲಗಳನ್ನು ತಪ್ಪಿಸಿ, ಮಾರುಕಟ್ಟೆಯಲ್ಲಿ ಎಲ್ಲಾ ವಹಿವಾಟುಗಳನ್ನು ಪಾರದರ್ಶಕತೆ, ದಕ್ಷತೆ ಹಾಗೂ ಸರಳತೆಯಿಂದ ನಡೆಸಲು ಏಕೀಕೃತ ಮಾರುಕಟ್ಟೆ ವೇದಿಕೆಯನ್ನು ಸ್ಥಾಪಿಸಲಾಯಿತು.

ರೈತಸ್ನೇಹಿ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಆನ್‍ಲೈನ್ ಟೆಂಡರ್ (ಇ-ಟೆಂಡರ್):

ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 2014ರ ನವೆಂಬರ್ ಮಾಸದಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆಯನ್ನು ಸ್ಥಾಪಿಸಲಾಯಿತು. ಈ ವೇದಿಕೆಯಡಿ ಮಾರುಕಟ್ಟೆಗೆ ಆವಕವಾದ ಉತ್ಪನ್ನಗಳಿಗೆ ಆನ್‍ಲೈನ್ ಟೆಂಡರ್ ವ್ಯವಸ್ಥೆ ಮಾಡಲಾಗಿದೆ, ಜೊತೆಗೆ ಉತ್ಪನ್ನ ಖರೀದಿಗೆ ಸ್ಪರ್ಧೆ ಹೆಚ್ಚಿಸುವ ಉದ್ದೇಶದಿಂದ ಮಾರುಕಟ್ಟೆಯಲ್ಲಿ ಉತ್ಪನ್ನಗಳ ಗುಣವಿಶ್ಲೇಷಣೆ ಮಾಡಿದ ಪೂರ್ಣ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಅನುಕೂಲದಿಂದಾಗಿ ಏಕೀಕೃತ ಲೈಸನ್ಸ್ ಪಡೆದ ಹೊರಗಿನ ಖರೀದಿದಾರರು ಉತ್ಪನ್ನದ ಗುಣಧರ್ಮ, ಗುಣವಿಶ್ಲೇಷಣೆಯ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಪರಿಶೀಲಿಸಿ, ಆನ್‍ಲೈನ್ ಟೆಂಡರ್  ನಲ್ಲಿ ವರ್ತಕರು ಇದ್ದ ಸ್ಥಳದಿಂದಲೇ ಭಾಗವಹಿಸಲು ಅನುವು ಮಾಡಲಾಗಿದೆ.

ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಉತ್ಪನ್ನಗಳ ಖರೀದಿಗೆ ಸ್ಪರ್ಧೆ ಹೆಚ್ಚಿಸಿ, ರೈತರ ಉತ್ಪನ್ನಗಳಿಗೆ ನೈಜ ಬೆಲೆ ಕಲ್ಪಿಸುವುದೇ ಪ್ರಮುಖವಾದ ಅಂಶ. ಈ ವ್ಯವಸ್ಥೆಯಿಂದ ಹಗಲು-ರಾತ್ರಿ ರೈತರು ಮಾರುಕಟ್ಟೆಯಲ್ಲಿ ಬೆಳೆ ಮಾರಾಟ ಮಾಡಲು ಕಾಯುವಂತಹ ಸ್ಥಿತಿ ದೂರವಾಗಿದೆ. ಮಾರುಕಟ್ಟೆಯ ವ್ಯಾಪಾರ ವಹಿವಾಟಿನ ದಿನದಂದು ರೈತರು ತಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ತಂದು, ತಮಗೆ ಬೇಕೆನಿಸಿದ ವರ್ತಕರು, ದಲ್ಲಾಲರು ಅಥವಾ ಮಾರುಕಟ್ಟೆ ಪ್ರಾಂಗಣದಲ್ಲಿ ಮಾರಾಟಕ್ಕಾಗಿ ಪ್ರದರ್ಶಿಸಬಹುದು ಮಾರಾಟಕ್ಕಿಟ್ಟ ಉತ್ಪನ್ನಗಳಿಗೆ (ಹುಟ್ಟುವಳಿಗೆ) ಪ್ರತ್ಯೇಕ ಲಾಟ್ ಸಂಖ್ಯೆ ನೀಡಿ ಆವಕಪಟ್ಟಿ ಸಿದ್ದಪಡಿಸಲಾಗುತ್ತದೆ. ಈ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಲಾಗುತ್ತಿದೆ. ಸ್ಥಳೀಯ ಖರೀದಿದಾರರು ಆನ್‍ಲೈನ್ ನಲ್ಲು ಉತ್ಪನ್ನಗಳ ಮಾಹಿತಿಯನ್ನು ಪರಿಶೀಲಿಸುತ್ತಾರೆ. ಬಳಿಕ ಖರೀದಿದಾರರು ಅದೇ ದಿನದಂದು ಮಧ್ಯಾಹ್ನ 3 ಗಂಟೆಯವರೆಗೆ ಮಾರುಕಟ್ಟೆ ಸಮಿತಿಯ ಇ-ಟೆಂಡರ್ ಹಾಲ್‍ನಲ್ಲಿ ಅಥವಾ ಅಂತರ್ಜಾಲದ ಮೂಲಕ ಏಕೀಕೃತ ಮಾರುಕಟ್ಟೆ ವೇದಿಕೆಯ (ರೆಮ್ಸ್) ವೆಬ್‍ಸೈಟ್‍ನಲ್ಲಿ ಅಗತ್ಯ ಉತ್ಪನ್ನಕ್ಕೆ ದರಗಳನ್ನು ನಮೂದಿಸುತ್ತಾರೆ. ಸುಮಾರು ಮಧ್ಯಾಹ್ನ 3.30ರ ವೇಳೆಗೆ ಖರೀದಿದಾರರು ನಮೂದಿಸಿದ ಗರಿಷ್ಟ ದರದ ಪಟ್ಟ್ಟಿಯನ್ನು ಅಂತಿಮಗೊಳಿಸಿ, ಟೆಂಡರ್ ಡಿಕ್ಲರೇಶನ್ ಮಾಡಲಾಗುತ್ತಿದೆ. ಈ ಮಾಹಿತಿಯನ್ನು ರೈತರಿಗೆ  ಎಸ್ಎಂಎಸ್  ಕೂಡ ಕಳುಹಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜೊತೆಗೆ ಟೆಂಡರ್ ಡಿಕ್ಲರೇಷನ್ ಸ್ಲಿಪ್‍ಗಳನ್ನು ಖರೀದಿದಾರರಿಗೆ ಅಂತರ್ಜಾಲದ ಮೂಲಕ ಲಭ್ಯವಾಗುವಂತೆ ಮಾಡಲಾಗಿದೆ. ಮಾರುಕಟ್ಟೆ ಪ್ರಾಂಗಣದಲ್ಲಿ ಟಿ.ವಿ.ಪರದೆಯಲ್ಲಿ ಟೆಂಡರ್ ಡಿಕ್ಲರೇಷನ್ ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತಿದೆ. ಬಳಿಕ ಅಂದಿನ ದರಕ್ಕೆ ರೈತರು ಒಪ್ಪಿಗೆ ಸೂಚಿಸಿದರೆ, ಉತ್ಪನ್ನದ ತೂಕದ ಪ್ರಕ್ರಿಯೆ ನಡೆಸಿದ ಬಳಿಕ ವಿಕ್ರಿಪಟ್ಟಿ ಅಥವಾ ಅಧಿಕೃತ ಲೆಕ್ಕತೀರುವಳಿ ಪಟ್ಟಿಯನ್ನು ರೈತರಿಗೆ ನೀಡಲಾಗುವುದು. ಈ ವ್ಯವಸ್ಥೆಯಿಂದ ರೈತ ಬಾಂಧವರು ಸಂಜೆಯ ವೇಳೆಗೆ ತಮ್ಮ ತಮ್ಮ ಉತ್ಪನ್ನಕ್ಕೆ ದೊರೆತ, ಮೊತ್ತವನ್ನು ಪಡೆದು ತಮ್ಮ ಗ್ರಾಮಗಳಿಗೆ ತೆರಳಲು ಸಹಾಯಕವಾಗಿದೆ. ಏಕೀಕೃತ ಮಾರುಕಟ್ಟೆಯ ಆನ್‍ಲೈನ್ ಟೆಂಡರ್ ಪ್ರಕ್ರಿಯೆಗಳಿಂದಾಗಿ ಸಮಯ ಉಳಿತಾಯವಾಗಿದೆ ಮತ್ತು ಪಾರದರ್ಶಕತೆ ವಾತಾವರಣ ಹೆಚ್ಚಾಗಿ ಉತ್ಪನ್ನಗಳಿಗೆ ನೈಜ ಬೆಲೆ ದೊರೆಯುತ್ತಿದೆ ಎಂದು ರೈತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇನ್ನು ವರ್ತಕರಿಗೆ ಅವರ ಬೆರಳ ತುದಿಯಲ್ಲಿಯೇ ಟೆಂಡರ್ ಡಿಕ್ಲರೇಷನ್ ಮಾಹಿತಿ, ಮಾರುಕಟ್ಟೆ ದಿನದ ಉತ್ಪನ್ನ ದಾಸ್ತಾನು ಅದೇ ದಿನ ಅವರ ಖಾತೆಗೆ ಜಮಾ ಮಾಡಿದ ವಿವರ ಹಾಗು ಬಹುಮುಖ್ಯವಾಗಿ ಉತ್ಪನ್ನ ಸಾಗಾಣಿಕೆ ಮಾಡಲು ಇ-ಪರ್ಮಿಟ್ ಉತ್ಪನ್ನದ ಹಣ ಪಾವತಿ ಮಾಡಿದ ಕೂಡಲೇ ಯಾವುದೇ ಸಮಯದಲ್ಲಿ ಎಲ್ಲಿಂದಾದರು ಇ-ಪರ್ಮಿಟ್ ಪಡೆಯುವ ಖರೀದಿದಾರರಿಗೆ ಅನುಕೂಲ ಮಾಡಲಾಗಿದೆ.

ಒಟ್ಟಾರೆ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಸ್ಪರ್ಶದಿಂದ ಇ-ಟೆಂಡರ್ ವ್ಯವಸ್ಥೆ ರೈತಸ್ನೇಹಿಯಾಗಿದೆ. ತೊಂದರೆ ಮುಕ್ತ ಮಾರುಕಟ್ಟೆಯ ಅನುಕೂಲವನ್ನು ಮಾರುಕಟ್ಟೆ ಭಾಗೀದಾರರು ಮತ್ತು ರೈತರು ಪಡೆದುಕೊಂಡು, ಸರ್ಕಾರದ ರೈತಪರವಾದ ಮಹತ್ವಾಕಾಂಕ್ಷೆ ಯೋಜನೆ ಉಪಯುಕ್ತವಾಗಿರಲಿ ಎಂಬುದೇ ನಮ್ಮ ಅಪೇಕ್ಷೆ.

 

ಬ್ಯಾಡಗಿ ಎಪಿಎಂಸಿಯಲ್ಲಿ ಮ್ಯಾನುಯಲ್ ಟೆಂಡರ್ (2014-15) ಮತ್ತು ಇ-ಮಾರ್ಕೆಟ್‍ನ ಆನ್‍ಲೈನ್ ಟೆಂಡರ್(2015-16) ನಿಂದಾದ ಸಾಧನೆಯ ಕುರಿತ ಅಂಕಿಅಂಶಗಳ ವಿವರ:
ವಿವರ 2014-15 2015-16 ಬೆಳವಣಿಗೆ
ಆವಕ ( ಲಕ್ಷ ಕ್ವಿಟಾಂಲ್) 8.61 9.81 13.9
ಮಾದರಿ ಧಾರಣೆ ( ರೂ.) ಕಡ್ಡಿ 7896 8899 12.7
ಡಬ್ಬಿ 8800 9898 12.5/td>
ಗುಂಟೂರು 5279 7399 40.2/td>
ಬೆಲೆ (ರೂ.ಕೋಟಿಗಳಲ್ಲಿ) 621 860 38.5
ಮಾರುಕಟ್ಟೆ ಶುಲ್ಕ (ರೂ.ಕೋಟಿಗಳಲ್ಲಿ) 9.31 12.91 38.7
ಒಂದು ದಿನದ ವಹಿವಾಟು ಆವಕ(ಲಕ್ಷ ಚೀಲ) 1.2 2 66.7
ಲಾಟ್ಸ್ 14,000 21,083 50.6
ಬಿಡ್ಸ್ 80,000 107,621 34.5
ವರ್ತಕರು 60 195 225.0
ಸಮಯ ಮಾರಾಟದ ದಿನದ ಹಗಲು-ರಾತ್ರಿ ಮಾರಾಟದ ದಿನದ ಸಂಜೆ.6.30
ಟೆಂಡರ್ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ 50 ಜನ 10 ಜನ -80.0

 

ಅಂಕಿ ಅಂಶಗಳ ಕೃಪೆ : ಟಿ.ಎ.ಮಹೇಶ್, ಕಾರ್ಯದರ್ಶಿಗಳು, ಬ್ಯಾಡಗಿ,ಎಪಿಎಂಸಿ.

ಬ್ಯಾಡಗಿ ಎಪಿಎಂಸಿಯಲ್ಲಿ 2014-15 ಸಾಲಿನಲ್ಲಿ ಮ್ಯಾನುಯಲ್ ಟೆಂಡರ್ ಮೂಲಕ ವ್ಯಾಪಾರ ವಹಿವಾಟು ನಡೆಸಲಾಗುತ್ತಿತ್ತು. ಈ ಟೆಂಡರ್ ಪ್ರಕ್ರಿಯೆಯಲ್ಲಿ ಒಂದು ದಿನದ ವ್ಯಾಪಾರ ವಹಿವಾಟಿನ ಚಿತ್ರಣವನ್ನು ಮೇಲ್ಕಂಡ ಅಂಕಿ ಅಂಶಗಳ ಪಟ್ಟಿಯಲ್ಲಿ ಗಮನಿಸಬಹುದಾಗಿದೆ. ಒಂದು ದಿನದ ವಹಿವಾಟಿನ ವಿವರ ಹೀಗಿದೆ, 8.61 ಲಕ್ಷ ಕ್ವಿಂಟಾಲ್ ಒಣಮೆಣಸಿನಕಾಯಿ ಆವಕ, ಈ ಪೈಕಿ ಕಡ್ಡಿಗೆ 7896, ಡಬ್ಬಿ – 8800 ಮತ್ತು ಗುಂಟೂರು 5279 ಮಾದರಿ ಧಾರಣೆ ಲಭ್ಯವಾಗಿದೆ, ಅಂದಿನ ಒಟ್ಟು ವ್ಯಾಪಾರ ವಹಿವಾಟು 621 ಕೋಟಿ ರೂಪಾಯಿಗಳು. ಇದರಿಂದ ಮಾರುಕಟ್ಟೆ ಶುಲ್ಕ ರೂ. 9.31 ಕೋಟಿ ಲಭ್ಯವಾಗಿದೆ. ಅಂದಿನ ಟೆಂಡರ್ ನಲ್ಲಿ 1.2 ಲಕ್ಷ ಚೀಲಗಳ, 14,000 ಲಾಟ್ ಗಳಿಗೆ 80,000 ಬಿಡ್ ಗಳು ನಡೆದಿರುತ್ತದೆ. ಒಟ್ಟಾರೆ, ಟೆಂಡರ್ ಪ್ರಕ್ರಿಯೆಯಲ್ಲಿ 60 ಮಂದಿ ವರ್ತಕರು ಭಾಗವಹಿಸಿರುತ್ತಾರೆ. ಮ್ಯಾನುಯಲ್ ಟೆಂಡರ್ ನಿಂದಾಗಿ ವ್ಯಾಪಾರ ವಹಿವಾಟು ಹಗಲು, ರಾತ್ರಿ ನಡೆಯುತ್ತಿತ್ತು. ಈ ರೀತಿ ಟೆಂಡರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸುಮಾರು 50 ಜನ ಮಾರುಕಟ್ಟೆಯ ಸಿಬ್ಬಂದಿಗಳು ಕಾರ್ಯನಿವೃಹಿಸುತ್ತಿದ್ದರು. ರೈತರು ಖರೀದಿದಾರರಿಗೆ ಮತ್ತು ಸಿಬ್ಬಂದಿಗೆ ವಹಿವಾಟು ಸುಗಮವಾಗಿ ಮುಗಿಸಲು ಹರಸಾಹ¸ ಪಡಬೇಕಾಗಿತ್ತು.

ಆನ್ ಲೈನ್ ಟೆಂಡರ್ ವ್ಯವಸ್ಥೆಯನ್ನು ಜಾರಿಗೆ ತಂದ ನಂತರ, ಮಾರುಕಟ್ಟೆಯಲ್ಲಿ ತ್ವರಿತವಾಗಿ ವ್ಯಾಪಾರ ವಹಿವಾಟು ನಡೆಯುತ್ತಿದೆ ಹಾಗೂ ಉತ್ಪನ್ನಕ್ಕೆ ಸ್ಪರ್ಧತ್ಮಕ ಬೆಲೆ ಲಭ್ಯವಾಗಿರುವುದನ್ನು ಕೂಡ 2015-16ರ ಅಂಕಿ ಅಂಶಗಳ ಸಾಲಿನಲ್ಲಿ ಸಂಪೂರ್ಣ ಮಾಹಿತಿಯನ್ನು ಗಮನಿಸಬಹುದಾಗಿದೆ. ಏಕೀಕೃತ ಮಾರುಕಟ್ಟೆ ವೇದಿಕೆಯ ಆನ್‍ಲೈನ್ ಟೆಂಡರ್ ನಲ್ಲಿ ನಡೆದ ಒಂದು ದಿನದ ವ್ಯಾಪಾರ ವಹಿವಾಟಿನ ವಿವರ ಮೇಲಿನ ಅಂಕಿ ಅಂಶಗಳ ಪಟ್ಟಿಯಲ್ಲಿ ನೀಡಿದಂತೆ, 9.81 ಲಕ್ಷ ಕ್ವಿಂಟಾಲ್ ಒಣಮೆಣಸಿನಕಾಯಿ ಉತ್ಪನ್ನದ ಪೈಕಿ ಕಡ್ಡಿ, 8899/- ರೂ, ಡಬ್ಬಿ – 9898/- ರೂ ಮತ್ತು ಗುಂಟೂರು – 7399/- ರೂ ಉತ್ಪನ್ನದ ಗುಣಧರ್ಮಕ್ಕೆ ಅನುಗುಣವಾಗಿ ಮಾದರಿ ಧಾರಣೆ ಲಭ್ಯವಾಗಿದೆ. ಅಂದು ಮಾರುಕಟ್ಟೆಯಲ್ಲಿ ರೂ 860/- ಕೋಟಿ ವ್ಯಾಪಾರ ವಹಿವಾಟು ನಡೆದಿದೆ. 2014-15ರ ಸಾಲಿಗೆ ಹೋಲಿಸಿದರೆ ಶೇಕಡ 38.5% ರಷ್ಟು ಪ್ರಗತಿಯಾಗಿರುವುದನ್ನು ಗಮನಿಸಬಹುದಾಗಿದೆ. ಅದೇ ರೀತಿ ಮಾರುಕಟ್ಟೆ ಶುಲ್ಕ ಸಂಗ್ರಣೆಯಲ್ಲೂ ಗಣನೀಯ ಹೆಚ್ಚಳವಾಗಿದೆ ರೂ 12.91 ಕೋಟಿ ಕಳೆದ ವರ್ಷಕ್ಕಿಂತ ಶೇಕಡ 38.7 ರಷ್ಟು ಹೆಚ್ಚಳವಾಗಿದೆ.

ಒಂದು ದಿನದ ವಹಿವಾಟಿನಲ್ಲ್ಲಿ 2 ಲಕ್ಷ ಒಣಮೆಣಸಿನಕಾಯಿ ಚೀಲಗಳ 21,083 ಲಾಟುಗಳಿಂದ 1,07,621 ಬಿಡ್‍ಗಳನ್ನು ಮಾಡಲಾಗಿದೆ. ಈ ವ್ಯಾಪಾರ ವಹಿವಾಟಿನಲ್ಲಿ ಸುಮಾರು 195 ಖರೀದಿದಾರರು ಆನ್‍ಲೈನ್ ಟೆಂಡರ್ ನಲ್ಲಿ ಭಾಗವಹಿಸಿರುತ್ತಾರೆ. 2014-15ರ ಸಾಲಿಗೆ ಹೋಲಿಸಿದರೆ ಶೇಕಡ 225 % ಖರೀದಿಯಲ್ಲಿ ಸ್ಪರ್ಧೆ ಹೆಚ್ಚಾಗಿರುವುದನ್ನು ಅಂಕಿ ಅಂಶಗಳ ಪಟ್ಟಿಯಲ್ಲಿ ನೋಡಬಹುದು. ಇನ್ನೂ ಬೆಳಗ್ಗೆ 10 ಗಂಟೆಗೆ ಆನ್ ಲೈನ್ ಟೆಂಡರ್ ಪ್ರಕ್ರಿಯೆ ಆರಂಭವಾದರೆ ಸಂಜೆ 6.30 ವೇಳೆ ರೈತ ಭಾಂಧವರು ತಮ್ಮ ಉತ್ಪನ್ನಕ್ಕೆ ದೊರೆತ ಮೊತ್ತವನ್ನು ಪಡೆದು ಊರುಗಳಿಗೆ ತೆರಳುತ್ತಾರೆ. ಒಟ್ಟು ಒಂದು ದಿನದ ಇ – ಮಾರ್ಕೆಟ್ ನಲ್ಲಿನ ಆನ್ ಲೈನ್ ಟೆಂಡರ್ ಕಾರ್ಯ ವಿಧಾನವನ್ನು ಪೂರ್ಣಗೊಳಿಸಲು ಕಾರ್ಯ ನಿರ್ವಹಿಸುವ ಸಿಬ್ಬಂದಿಯ ಸಂಖ್ಯೆ ಗರಿಷ್ಟ 10 ಜನ, ಏಕೀಕೃತ ಮಾರುಕಟ್ಟೆ ವೇದಿಕೆಯಿಂದ ತೊಂದರೆ ಮುಕ್ತ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಾಗುತ್ತಿದೆ ಎಂಬುವುದು ಬಹುಮುಖ್ಯವಾದ ಅಂಶವಾಗಿದೆ.

ಬ್ಯಾಡಗಿ ಎಪಿಎಂಸಿಯಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಸ್ಥಾಪನೆಗೂ ಹಿಂದಿನ ವಹಿವಾಟು ಮತ್ತು ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಒಣಮೆಣಸಿನಕಾಯಿ ಉತ್ಪನ್ನಕ್ಕೆ ಇ-ಟೆಂಡರ್ ವ್ಯವಸ್ಥೆ ಕಲ್ಪಿಸಿದ ಬಳಿಕ ವ್ಯಾಪಾರ ವಹಿವಾಟಿನಲ್ಲಿ ಕಂಡುಬಂದ ಪ್ರಗತಿಯ ತುಲನಾತ್ಮಾಕ ರೇಖಾ ಚಿತ್ರ :

ಶ್ರೀ. ಮನೋಜ್ ರಾಜನ್, ಅಪರ ಕಾರ್ಯದರ್ಶಿ (ಮಾರುಕಟ್ಟೆ ಸುಧಾರಣೆ), ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಇಒ, ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್, ಬೆಂಗಳೂರು.

ಏಕೀಕೃತ ಮಾರುಕಟ್ಟೆ ವೇದಿಕೆ ಪ್ರಭಾವದಿಂದ ಮಾರುಕಟ್ಟೆಗಳಲ್ಲಿ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಕುರಿತು ಸಂಕ್ಷಿಪ್ತ ವಿವರ

ಏಕೀಕೃತ ಮಾರುಕಟ್ಟೆ ವೇದಿಕೆ ಪ್ರಭಾವದಿಂದ ಮಾರುಕಟ್ಟೆಗಳಲ್ಲಿ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಕುರಿತು ಸಂಕ್ಷಿಪ್ತ ವಿವರ :
ಶ್ರೀ. ಮನೋಜ್ ರಾಜನ್
ವ್ಯವಸ್ಥಾಪಕ ನಿರ್ದೇಶಕರು & ಸಿಇಒ,
ರೆಮ್ಸ್, ಬೆಂಗಳೂರು.

ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಸ್ಥಾಪನೆ ಬಳಿಕ ರೈತರ ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ಲಭ್ಯವಾಗುತ್ತದೆ.ರಾಜ್ಯದ ಸಮಸ್ತ ರೈತ ಬಾಂಧವರಿಗೆ, ವರ್ತಕರಿಗೆ ಹಾಗೂ ಮಾರುಕಟ್ಟೆಯಲ್ಲಿನ ವ್ಯಾಪಾರ ವಹಿವಾಟುಗಳಲ್ಲಿನ ಭಾಗೀದಾರರಿಗೆ ಉಪಯುಕ್ತವಾಗಲಿ ಎಂದು ಕರ್ನಾಟಕ ಸರ್ಕಾರದ “ಕೃಷಿ ಮಾರಾಟ ನೀತಿ “ಯನ್ನು ಅನುಷ್ಠಾನಗೊಳಿಸಿದೆ . ನೂತನ ನೀತಿ ಅನ್ವಯ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಸ್ಥಾಪಿಸಲಾಗಿದೆ. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟುಗಳು ಪಾರದರ್ಶಕತೆ, ದಕ್ಷತೆ ಮತ್ತು ಸರಳತೆಯಿಂದ ಕಾರ್ಯಸಾಧನೆಗೊಳಿಸಲು ಈ-ಟೆಂಡರ್ ಪದ್ದತಿಯನ್ನು ಜಾರಿಗೊಳಿಸಲಾಗಿದೆ.
ಆಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಮಾರುಕಟ್ಟೆಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಸ್ಥಾಪಿಸಲು ರಾಷ್ಟೀಯ ಈ – ಮಾರ್ಕೆಟ್ ಸರ್ವಿಸಸ್, ಕೃಷಿ ಮಾರಾಟ ಇಲಾಖೆ ಮತ್ತು ರಾಜ್ಯ ಕೃಷಿ ಮಾರಾಟ ಮಂಡಳಿ ಅವಿರತಃ ಸೇವೆಯನ್ನು ಸಲ್ಲಿಸಿವೆ. ಈ ಸಂಸ್ಥೆಗಳ ಪರಿಶ್ರಮದ ಫಲವಾಗಿ ರಾಜ್ಯದಲ್ಲಿನ ೧೬೨ ಕೃಷಿ ಉತ್ಪನ್ನ ಮಾರುಕಟ್ಟೆಗಳು ಇ-ಮಾರುಕಟ್ಟೆಗಳಾಗಿ ಕಾರ್ಯ ನಿರ್ವಹಿಸುತ್ತಿವೆ.

 

ಮಾದರಿ ಬೆಲೆ ವಿಶ್ಲೇಷಣೆ :

ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಸ್ಥಾಪನೆಯಾದ ಮೇಲೆ ಉತ್ಪನ್ನಗಳ ವಹಿವಾಟಿನಲ್ಲಿ ಮಾದರಿ ಧಾರಣೆಯಲ್ಲಿ ಗಮನಾರ್ಹ ಏರಿಕೆ ಬಗ್ಗೆ ಸಂಕ್ಷೀಪ್ತ ವರದಿಯನ್ನು ಗಮನಿಸಿ.

ತೊಗರಿ

ಪ್ರಮುಖ ಮಾರುಕಟ್ಟೆಗಳಲ್ಲಿ 2014-15ರಲ್ಲಿ ತೊಗರಿ ಉತ್ಪನ್ನದ ಸರಾಸರಿ ಮಾದರಿ ಬೆಲೆ ರೂ.4907/-. ಏಕೀಕೃತ ಮಾರುಕಟ್ಟೆ ವೇದಿಕೆ ಅಸ್ಥಿತ್ವಕ್ಕೆ ಬಂದ 2016-17ರ ಅವಧಿಯಿಂದ ರೂ. 8576/- ರಷ್ಟು ಮಾದರಿ ಬೆಲೆ ಲಭ್ಯವಾಗಿದೆ.

ಕಡಲೆ :

ಕಡಲೆ ಉತ್ಪನ್ನಕ್ಕೆ 2014-15ರಲ್ಲಿ ಸರಾಸರಿ ಮಾದರಿ ಬೆಲೆ ರೂ. 3017/-, ಅದರೆ 2016-17ಕ್ಕೆ ಮಾದರಿ ಬೆಲೆಯಲ್ಲಿ ಬಾರಿ ಬದಲಾಣೆಯಾಗಿ ರೂ.5973/-ಕ್ಕೆ ಏರಿಕೆಯಾಗಿತ್ತು.

ಉದ್ದು :

ಉದ್ದು ಉತ್ಪನ್ನದ ಮಾದರಿ ಬೆಲೆ 2014-15ರ ಅವಧಿಯಲ್ಲಿ ರೂ.5535/- ರಿಂದ 2016-17ರ ಅವಧಿಗೆ ರೂ.8090/-ಏರಿಕೆಯಾಗಿರುವುದು ಗಮನಾರ್ಹವಾಗಿದೆ. ಇ-ಟೆಂಡರ್ ಪ್ರಭಾವದಿಂದಾಗಿ ಶೇಕಡ 46%ರಷ್ಟು ಬೆಲೆಯಲ್ಲಿ ಏರಿಕೆ ಕಂಡಿದೆ.

ಕಡಲೆಕಾಯಿ/ಶೇಂಗಾ :

ಕೃಷಿ ಉತ್ಪನ್ನ ಮಾರಕಟ್ಟೆಗಳಲ್ಲಿ ಕಡಲೆಕಾಯಿ ಉತ್ಪನ್ನದ ಮಾದರಿ ಬೆಲೆಯಲ್ಲಿ ಹಲವು ಏರಿಳಿತವಾಗಿದೆ. 2014-15ರಲ್ಲಿ ಕ್ವಿಂಟಾಲ್ ಉತ್ಪನ್ನಕ್ಕೆ ರೂ.3607/- ಮಾದರಿ ಬೆಲೆಯಾಗಿತ್ತು. ಅದೇ 2016-17ರ ವೇಳೆಗೆ ಉತ್ಪನ್ನದ ಮಾದರಿ ಬೆಲೆ ರೂ.4762/-ಕ್ಕೆ ತಲುಪಿತ್ತು. ಇದು ಕಳೆದ ವರ್ಷಗಳಿಗಿಂತ ಶೇಕಡ 32%ರಷ್ಟು ಹೆಚ್ಚಾಗಿದೆ.

 

ಒಣಮೆಣಸಿನಕಾಯಿ:

ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ಒಣಮೆಣಸಿನಕಾಯಿ ವ್ಯಾಪಾರಕ್ಕೆ ಜನಪ್ರಿಯ. 2014-15 ರಿಂದ 2016-17ವರೆಗಿನ ಮಾದರಿ ಬೆಲೆ ರೂ.7027/- ರಿಂದ ರೂ.8558/- ಕ್ಕೆ ಏರಿಕೆಯಾಗಿದೆ. ಶೇಕಡ 22% ರಷ್ಟು ಮಾದರಿ ಬೆಲೆ ಏರಿಕೆಯಾಗಿದೆ.

ಹುಣಸೇಹಣ್ಣು :

ಪ್ರಮುಖ ಮಾರುಕಟ್ಟೆಗಳಲ್ಲಿ ಹುಣೆಸೇಹಣ್ಣು ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.5681, ಏಕೀಕೃತ ಮಾರುಕಟ್ಟೆ ವೇದಿಕೆಯ ಇ-ಟೆಂಡರ್ ನಿಂದಾಗಿ 2016-17ರಲ್ಲಿ ರೂ.7421 ಕ್ಕೆ ಮಾದರಿ ಬೆಲೆ ದಾಖಲಾಗಿದೆ. ಹಿಂದಿನ ವರ್ಷಗಳಿಗಿಂತ ಶೇಕಡ 31%ರಷ್ಟು ಮಾದರಿ ಬೆಲೆಯಲ್ಲಿ ಏರಿಕೆಯಾಗಿದೆ.

ಮೆಕ್ಕೆ ಜೋಳ :

ಮೆಕ್ಕೆ ಜೋಳ ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.1151/- ರಿಂದ 2016-17ಕ್ಕೆ ರೂ.1550/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 35% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ.

ಇದಲ್ಲದೆ ಹುರಳಿಕಾಳು ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.2839/- ರಿಂದ 2016-17ಕ್ಕೆ ರೂ.3123/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 10% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ ಮತ್ತು ಸಜ್ಜೆ ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.1267/- ರಿಂದ 2016-17ಕ್ಕೆ ರೂ.1657/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 31% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ.ಜೋಳದ ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.1595/- ರಿಂದ 2016-17ಕ್ಕೆ ರೂ.2280/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 43% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ. ರಾಗಿ ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.1529/- ರಿಂದ 2016-17ಕ್ಕೆ ರೂ.2036/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 33% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ ಹಾಗು ಸೂರ್ಯಕಾಂತಿ ಉತ್ಪನ್ನದ ಮಾದರಿ ಬೆಲೆ 2014-15ರಲ್ಲಿ ರೂ.3119/-ರಿಂದ 2016-17ಕ್ಕೆ ರೂ.3237/-ಕ್ಕೆ ಏರಿಕೆಯಾಗಿದೆ. ಸರಾಸರಿ ಶೇಕಡ 4% ಮಾದರಿ ಬೆಲೆಯಲ್ಲಿ ಹೆಚ್ಚಳವಾಗಿದೆ.

ಈ ಎಲ್ಲಾ ಸಂಖ್ಯಾ ವಿಶ್ಲೇಷಣೆ, ಮಾರುಕಟ್ಟೆಗಳಲ್ಲಿ ಆನ್‍ಲೈನ್ ಟೆಂಡರ್ ವ್ಯಾಪಾರ ವಹಿವಾಟು ಅನುಷ್ಠಾನದಿಂದಾಗಿ ರೈತರು ನೈಜ ಬೆಲೆ ಪಡೆಯುತ್ತಿರುವ ಸಾಕ್ಷಾತ್ಕಾರವನ್ನು ಸೂಚಿಸುತ್ತಿದೆ.